About Us       Contact

 

ಮುಂಬಯಿ, ಫೆ.18: ಕಳೆದ ಭಾನುವಾರ ಗುಜರಾತ್ ರಾಜ್ಯದ ಸೂರತ್ ಮಹಾನಗರದಲ್ಲಿ ಸೂರತ್ ತುಳು ಸಂಘದ ಕರ್ನಾಟಕ ಫ್ರೆಂಡ್ಸ್ ಕ್ರಿಕೆಟರ್ಸ್ ಸೂರತ್ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟ-2020 ಸ್ಪರ್ಧೆಯಲ್ಲಿ ಶಶಿ ಹಂಟರ್ಸ್ ಬರೋಡ ತಂಡವು ವಿಜೇತಗೊಂಡ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್‍ಶಿಪ್ ತನ್ನ ಮುಡಿಗೇರಿಸಿತು.

ಸೂರತ್‍ನ ಸರ್ದಾರ್ ಸೇತುವೆ ಸನಿಹದ ಸರಿತಾ ಸಾಗರ್ ಸಂಕುಲದ ಮೈದಾನದಲ್ಲಿ ಏರ್ಪಡಿಸಿದ್ದ ಪಂದ್ಯಾಟಕ್ಕೆ ಸೂರತ್‍ನ ಹಿರಿಯ ಹೊಟೇಲು ಉದ್ಯಮಿ ರಾಧಾಕೃಷ್ಣ ಶೆಟ್ಟಿ, ಪ್ರಾಯೋಜಕರಾದ ಶಿವರಾಮ ಬಿ.ಶೆಟ್ಟಿ, ಹರೀಶ್ ವಿ.ಶೆಟ್ಟಿ ಉಪಸ್ಥಿತರಿದ್ದು ಚಾಲನೆಯನ್ನಿತ್ತರು. ಪಂದ್ಯಾಟದಲ್ಲಿ 8 ತಂಡಗಳು ಭಾಗವಸಿದ್ದು, ಶಶಿ ಹಂಟರ್ಸ್ ಬರೋಡ ಮತ್ತು ಸೂರತ್ ಕೆಎಫ್‍ಸಿ ತಂಡಗಳು ಅಂತಿಮ ಸ್ಪರ್ಧೆಯಲ್ಲಿ ಆಟವನ್ನಾಡಿದ್ದು ಶಶಿ ಹಂಟರ್ ತಂಡವು ಗೆದ್ದು ಪ್ರಥಮನ ಸ್ಥಾನವನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.

ಸೂರತ್ ತುಳು ಸಂಘದ ಸಮರ್ಥ ವ್ಯವಸ್ಥೆಗಳೊಂದಿಗೆ ಬೆಳಗ್ಗಿನಿಂದ ಸಂಜೆ ವರೆಗೆ ನಡೆಸಲ್ಪಟ್ಟ ಪಂದ್ಯಾಟದ ಕೊನೆಯಲ್ಲಿ ಪ್ರಾಯೋಜರಾದ ರಾಮಚಂದ್ರ ಶೆಟ್ಟಿ (ಗೀತಾ ಕ್ಯಾಟರರ್ಸ್), ಪ್ರತೀನ್ ಶೆಟ್ಟಿ (ಉಡುಪಿ ರೆಸ್ಟೋರೆಂಟ್), ಬಾಲಕೃಷ್ಣ ಶೆಟ್ಟಿ(ಶಿಲ್ಪಾ ಹಾಸ್ಪಿಟಲಿ ಸರ್ವಿಸಸ್), ಜಯಂತ್ ಶೆಟ್ಟಿ (ಪ್ಯಾಪಿಲೊನ್ ಇಂಡಸ್ಟ್ರೀಸ್ ಕ್ಯಾಂಟೀನ್), ನಾಗರಾಜ್ ಶೆಟ್ಟಿ (ಶಿವ ಕ್ಯಾಟರರ್ಸ್), ಶ್ರೀನಿವಾಸ್ ಬಿದರಿ(ಇನ್‍ಕಮ್ ಟ್ಯಾಕ್ಸ್ ಕಮಿಶನರ್), ರವೀಂದ್ರ ಪೂಜಾರಿ(ಜೇಡಿ ರೆಸ್ಟೋರೆಂಟ್), ಸಾಧು ಪೂಜಾರಿ (ಅಕ್ಷರ್ ಪಾಬ್‍ಬಾಜಿ), ಅರುಣ್ ಶೆಟ್ಟಿ (ರೂಪಾ ಹೋಟೆಲ್), ಡಾ| ಶರತ್ ಡೆಂಟಲ್ ಕ್ಲಿನಿಕ್, ಗಣೇಶ್ ಶೆಟ್ಟಿ(ಸಿಎ), ಪ್ರಕಾಶ್ ಶೆಟ್ಟೀ (ಸಾಯಿನಾಥ ಹೋಟೆಲ್), ಜಯಂತ್ ಶೆಟ್ಟಿ (ಮಾರ್ಕೆಟ್), ಮನೋಜ್ ಸಿ.ಪೂಜಾರಿ(ಅಧ್ಯಕ್ಷರು ಬಿಲ್ಲವ ಸಂಘ ಸೂರತ್) ವಿಶ್ವನಾಥ ಪೂಜಾರಿ (ಗೌರವಾಧ್ಯಕ್ಷರು, ಬಿಲ್ಲವ ಸಂಘ ಸೂರತ್), ಸುರೇಶ್ ಕೆ.ಪೂಜಾರಿ(ಬಿಗ್‍ಬಿ ಸ್ಸಾಂಡ್‍ವಿಜ್), ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ದಿನೇಶ್ ಬಿ.ಶೆಟ್ಟಿ, ಗೌ| ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ, ಪಂದ್ಯಾಟದ ಪ್ರಧಾನ ವ್ಯವಸ್ಥಾಪಕ ಜಗದೀಶ್ ರೈ, ಪ್ರದೀಪ್ ಗೌಡ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು ಶಶಿ ಹಂಟರ್ ತಂಡದ ನಾಯಕ ವಿಶಾಲ್ ಶಾಂತ, ಮದನ್‍ಕುಮಾರ್ ಬರೋಡ ಇವರಿಗೆ ವಿನ್ನರ್ ಹಾಗೂ ಸೂರತ್ ಕೆಎಫ್‍ಸಿ ತಂಡದ ನಾಯಕ ಸುರೇಶ್ ಪೂಜಾರಿ ಇವರಿಗೆ ರನ್ನರ್ ಟ್ರೋಫಿ ಪ್ರದಾನಿಸಿ ಅಭಿನಂದಿಸಿದರು.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal