About Us       Contact

 


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.17: ಹೇರ್ ಸ್ಟೈಲೋ ಮೂಲಕ ಅಂತರಾಷ್ಟ್ರೀಯ ಹಿರಿಮೆಗೆ ಪ್ರಸಿದ್ಧಿ ಪಡೆದ ಬೃಹನ್ಮುಂಬಯಿ ಅಲ್ಲಿನ ಹೆಸರಾಂತ ತುಳು-ಕನ್ನಡಿಗ ಕೇಶ ವಿನ್ಯಾಸಕಾರ, ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಅವರ `ಸ್ಟೈಲಿಂಗ್ ಅಟ್ ದ ಟಾಪ್' ಮರಾಠಿ ಕೃತಿಯನ್ನು ಶಿವಸೇನಾ ಪಕ್ಷದ ವರಿಷ್ಠ ನೇತಾರ, ಮಹಾ ವಿಕಾಸ್ ಅಘಡಿ ಸರಕಾರದ ಮುಖ್ಯಮಂತ್ರಿ ಉದ್ಧಾವ್ ಠಾಕ್ರೆ ಸಾರಥ್ಯದ ಮೈತ್ರಿ ಸರಕಾರದ ಪ್ರವಾಸೋದ್ಯಮ, ಪರಿಸರ ಮತ್ತು ಶಿಷ್ಟಾಚಾರ ಖಾತೆ ಸಚಿವ, ಶಿವಸೇನಾ ಪಕ್ಷದ ಯುವಸೇನಾ ರಾಷ್ಟ್ರೀಯ ಅಧ್ಯಕ್ಷ ಆದಿತ್ಯ ಠಾಕ್ರೆ ಅನಾವರಣ ಗೊಳಿಸಿದರು.

ಇಂದಿಲ್ಲಿ ಸಂಜೆ ಬೃಹನ್ಮುಂಬಯಿನ ನಾರಿಮಾನ್ ಪಾಯಿಂಟ್ ಇಲ್ಲಿನ ಮಹಾರಾಷ್ಟ್ರ ರಾಜ್ಯ ಸರಕಾರದ ಶಾಸನದ ಅಧಿಕೃತ ಕೇಂದ್ರಸ್ಥಾನ ಮಂತ್ರಾಲಯದ ಸಚಿವರ ಕಚೇರಿಯಲ್ಲಿ `ಸ್ಟೈಲಿಂಗ್ ಅಟ್ ದ ಟಾಪ್' ಮರಾಠಿ ಕೃತಿ ಬಿಡುಗಡೆ ಗೊಳಿಸಿ ಮಾತನಾಡಿ ಪರಿಶ್ರಮವೇ ಶಿವಾ ಅವರ ಪರಿಚಯವಾಗಿದ್ದು, ಸದ್ಯ ಶಿವಾ ಅವರು ಬಹುಭಾಷಿಗರ ಆಸ್ತಿ ಆಗಿದ್ದಾರೆ. ಇವರಿಗೆ ನೂರಾರು ಸೆಲೆಬ್ರೆಟಿಗಳ ಒಡನಾಟವಿದ್ದರೂ ಓರ್ವ ಸಜ್ಜನ ವ್ಯಕ್ತಿಯಾಗಿ ಯುವ ಜನತೆಗೆ ಮೇರುಪಂಕ್ತಿ ಆಗಿರುವರು. ಅವರ ಸಾಧನಾ ಹೆಜ್ಜೆಗಳು ಗುರುತರವಾಗಿದ್ದು ಅದು ಈಗ ಕೃತಿರೂಪವಾಗಿ ರೂಪುಗೊಂಡಿದೆ. ಇಂತಹ ಕೃತಿಗಳು ಓದುಗರಿಗೆ ಪ್ರೇರಣಾಶಕ್ತಿಯಾಗಬೇಕು. ನಾವೂ ಬದುಕಿನಲ್ಲಿ ಎಷ್ಟೂ ಎತ್ತರಕ್ಕೆ ಬೆಳೆದರೂ ವಿಧೇಯತರಾಗಿ ಮುನ್ನಡೆಯಬೇಕು ಅನ್ನುವುದಕ್ಕೆ ಶಿವಾ ಮಾದರಿ. ಇವರ ಸಾಧನಾ ಕೀರ್ತಿ ಶಿಖರಕ್ಕೇರಿದರೂ ನೆಲಮಟ್ಟದಲ್ಲಿದ್ದು ಇಂತಹ ಶಿವಾ ಭಾವೀ ಜನಾಂಗಕ್ಕೆ ಓರ್ವ ಆದರ್ಶವ್ಯಕ್ತಿಯಾಗಿದ್ದಾರೆ ಎಂದು ಶುಭಾರೈಸಿದರು.

 

 

 

 

 

 

 

 

 

 

 

ಶಿವರಾಮ ಕೃಷ್ಣ ಭಂಡಾರಿ ಅವರು ನಿರಂತರ ಸುಮಾರು ಎರಡು ದಶಕಗಳಿಂದ ಶಿವಸೇನಾ ಪಕ್ಷದ ವರಿಷ್ಠ ಧುರೀಣ ಬಾಳಸಾಹೇಬ್ ಠಾಕ್ರೆ ಪರಿವಾರದ ಕ್ಷೌರಿಕ ಕಾಯಕದಲ್ಲಿ ತೊಡಗಿಸಿ ಕೊಂಡಿದ್ದು, ಸದ್ಯ ಉದ್ಧಾವ್ ಠಾಕ್ರೆ, ರಶ್ಮೀ ಠಾಕ್ರೆ, ಆದಿತ್ಯ ಠಾಕ್ರೆ ಅವರ ಕೇಶವಿನ್ಯಾಸವನ್ನೂ ನಿರ್ವಹಿಸುತ್ತಿದ್ದಾರೆ. ಶಿವಾ ಕೀ ಕೈಂಚೀ ಬೋಲ್ತಿ ಹೈ ಎಂದು ಬಾಳಸಾಹೇಬ್ ಠಾಕ್ರೆ ಅವರು ಸ್ವತಃ ಪಕ್ಷದ ಮುಖವಾಣಿ ಸಾಮ್ನಾ ಮರಾಠಿ ದೈನಿಕದಲ್ಲೇ ಪ್ರಶಂಸಿಸಿ ಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಈ ಸಂದರ್ಭದಲ್ಲಿ ಅನುಶ್ರೀ ಶಿವರಾಮ ಭಂಡಾರಿ, ಕೃತಿಕರ್ತೆ ಜಯಶ್ರೀ ಜಿ.ಶೆಟ್ಟಿ, ಏಕ್ತಾ ಜೈನ್, ದೀಪಕ್ ರುಯಾ, ಗೋಪಾಲ ಶೆಟ್ಟಿ, ಪದ್ಮವತಿ ಲಿಂಗಾಡೆ, ರಾಘವ ವಿ.ಭಂಡಾರಿ ಮತ್ತಿತರರು ಉಪಸ್ಥಿತರಿದ್ದು ಶಿವರಾಮ ಭಂಡಾರಿ ಅವರು ಬಾಳಸಾಹೇಬ್ ಠಾಕ್ರೆ ಅವರನ್ನು ಸ್ಮರಿಸಿ ಅವಕಾಶಕ್ಕಾಗಿ ವಂದಿಸಿದರು. ಹಾಗೂ ಆದಿತ್ಯ ಠಾಕ್ರೆ ಅವರನ್ನು ಶಾಲು ಹೊದಿಸಿ ಗೌರವಿಸಿದರು.

ಹೆಸರಾಂತ ಲೇಖಕಿ ಜಯಶ್ರೀ ಜಿ.ಶೆಟ್ಟಿ ಇವರು ರಚಿತ (ಮೂಲ ಕೃತಿಯನ್ನಾಗಿ) ಇಂಗ್ಲೀಷ್ ಕೃತಿಯನ್ನು ಬಾಲಿವುಡ್‍ನ ಮೇರುನಟ ಅಮಿತಾಭ್ ಬಚ್ಚನ್, ಕನ್ನಡ ಕೃತಿಯನ್ನು ಡಾ| ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆ ಗೊಳಿಸಿದ್ದರು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರೂ ಸಾಂದರ್ಭಿಕವಾಗಿ ಈ ಕೃತಿಯನ್ನು ಅನಾವರಣ ಗೊಳಿಸಿದ್ದರು. ಇದೀಗಲೇ ಗುಜರಾತಿ, ಹಿಂದಿ ಭಾಷೆಗಳಲ್ಲಿ ಮುದ್ರಣದಲ್ಲಿರುವ ಈ ಕೃತಿ ಶೀಘ್ರದಲ್ಲೇ ಬಹುಭಾಷೆಗಳಲ್ಲಿ ಓದುಗರ ಕೈಸೇರಲಿದೆ. ಅಮೆಜ್ಹಾನ್, ಫ್ಲಿಪ್‍ಕಾರ್ಡ್ ಅಂತಹ ಆನ್‍ಲೈನ್ ಇ-ಬಿಸ್ನೆಸ್‍ಗಳಲ್ಲೂ ಭಾರೀ ಪ್ರಮಾಣದಲ್ಲಿ ಮಾರಾಟವಾಗಿ ದಾಖಲೆ ಸೃಷ್ಠಿಸಿದ ಕೃತಿ ಕನ್ನಡಿಗರ ಹೆಮ್ಮೆಯಾಗಿದೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal