About Us       Contact


ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ,ಫೆ.15: ಮುದ್ದಣರ ಇತಿಹಾಸವೇ ರೋಮಾಂಚನವಾದದ್ದು. ಇಂತಹ ಓರ್ವ ವ್ಯಕ್ತಿಯ ಬಾಳಿನ 150 ವರ್ಷಗಳ ಬಳಿಕವು ನೆನಪಿಸಿ ಕಾಲ ಪುರುಷನಾಗಿರುವುದೇ ಮುದ್ದಣರ ಜೀವನ ವೈಶಿಷ್ಟ್ಯತೆಯಾಗಿದೆ. ಕಿತ್ತು ತಿನ್ನುವ ಬಡತನದಲ್ಲೂ ಸ್ವಾಭಿಮಾನದಿಂದ ಬಾಳಿ ಕಾವ್ಯ ಲೋಕದ ಮೇರು ವ್ಯಕ್ತಿಯಾಗಿದ್ದ ಮುದ್ದಣ ಆಧುನಿಕ ಜಗತ್ತಿಗೆ ಆದರ್ಶಪ್ರಾಯರು. ರಾಮಚಂದ್ರ ಉಚ್ಚಿಲರ ಶತಮಾನದ ಪರ್ವಕಾಲದಲ್ಲಿ ಮುದ್ದಣರ 150ರ ಜನ್ಮೋತ್ಸವ ಸಂಭ್ರಮ ಪುನರ್ಜನ್ಮ ಆದಂತಾಗಿದೆ ಎಂದು ಮುದ್ದಣ ಅಧ್ಯಯನ ಕೇಂದ್ರ ನಂದಳಿಕೆ ಇದರ ಅಧ್ಯಕ್ಷ ನಂದಳಿಕೆ ಬಾಲಚಂದ್ರ ರಾವ್ ತಿಳಿಸಿದರು. <br

/>ಇಂದಿಲ್ಲಿ ಶನಿವಾರ ಸಾಂತಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಇಲ್ಲಿನ ಡಬ್ಲೂ ್ಯಆರ್‍ಐಸಿ ಸಭಾ ಭವನದಲ್ಲಿ ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನೆರವೇರಿದ ಮುದ್ದಣ 150ನೆಯ ವರ್ಷಾಚರಣೆ, ಚಿತ್ರಕಲಾ ಪ್ರದರ್ಶನ, ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಮುದ್ದಣ 150 ಜಯಂತಿ ವರ್ಷಾಚರಣೆ ನಿಮಿತ್ತ ಭಾರತ ಅಂಚೆ ಇಲಾಖೆ ಪ್ರಕಟಿಸಿದ ವಿಶೇಷ ಅಂಚೆ ಲಕೋಟೆಯನ್ನು ಬಾಲಚಂದ್ರ ರಾವ್ ಅನಾವರಣ ಗೊಳಿಸಿ ಕವಿನಮನಗೈದ ಸಾಹಿತಾಸಕ್ತರನ್ನು ಉದ್ದೇಶಿಸಿ ಬಾಲಚಂದ್ರ ರಾವ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಚಿತ್ರಕಲಾವಿದ ದಿವಾಕರ್ ಶೆಟ್ಟಿ ಚಾರ್ಕೋಪ್ ತಮ್ಮ ಅತ್ಯಾಮೂಲ್ಯ ಚಿತ್ರಗಳನ್ನು ಪ್ರದರ್ಶಿಸಿ ಸಂವಾದ ನಡೆಸಿದರು ಹಾಗೂ ಅರವಿಂದ ಹೆಬ್ಬಾರ್ ರಚಿತ ಕಿತ್ತೂರು ಚೆನ್ನಮ್ಮ ಕೃತಿ ಬಿಡುಗಡೆ ಗೊಳಿಸಿದರು. ಮುಂಬಯಿ ವಿಶ್ವವಿದ್ಯಾಲಯ ಕನ್ನಡದ ವಿಭಾಗ ಅತಿಥಿ ಉಪನ್ಯಾಸಕ ಡಾ| ವಿಶ್ವನಾಥ್ ಕಾರ್ನಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶಶಿಕಲಾ ಹೆಗಡೆ ಕೃತಿ ಪರಿಚಯಿಸಿದರು. ಹೆಸರಾಂತ ಚಿತ್ರಕಲಾವಿದ ಜಯ್ ಸಿ.ಸಾಲ್ಯಾನ್, ಬಹುಮುಖ ಪ್ರತಿಭೆ ಕೃತಿ ಚಡಗ ಸಂವಾದದಲ್ಲಿ ಪಾಲ್ಗೊಂಡರು.

ನನ್ನ ಚಿತ್ರಕಲಾ ಪ್ರದರ್ಶನ, ಅನಾವರಣಕ್ಕೆ ಪ್ರಥಮ ಅವಕಾಶ ಇದಾಗಿದೆ. ಇದು ನನ್ನಲಿನ್ಲ ಕಲಾನ್ವೇಷಣೆಗೆ ಪ್ರೊತ್ಸಾಹ ಅಂದು ಕೊಂಡಿದ್ದೇನೆ ಎಂದು ಕೃತಿ ಚಡಗ ತಿಳಿಸಿದರು.

ಸಪ್ತಕಲೆಗಳೆಂದರೆ ಏಳು ಚಕ್ರಗಳ ಕಲಾಮಾಲಿಕೆಯಾಗಿದೆ. ಕಲಾವಿದನಿಗೆ ಇದರ ಅರಿವು ಅತ್ಯವಶ್ಯಕ. ಕರ್ಮಾನುಸಾರವೇ ಮಾನವ ಜೀವನ ಆಗಿದೆ. ಆದರೆ ನಾವು ಈಗ ಮಾಡಿದ ಒಳಿತಿನಿಂದ ಸ್ವಫಲಾನುಭವ, ಸಮಾಧಾನ ಮತ್ತು ಜೀವನ ಒಳಿತಾಗುವುದು. ಬದುಕು ಒಂದು ಲೆಕ್ಕಾಚಾರವಾಗಿದ್ದು ಆ ಮೂಲಕವೇ ಜನ್ಮ ಸಾರ್ಥಕಗುವುದು ಎಂದು ದಿವಾಕರ್ ಶೆಟ್ಟಿ ತಿಳಿಸಿದರು.

ಕನ್ನಡ ವಿಭಾಗದ ಐದು ತರಗತಿಗಳ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ಇದೀಗ ಕನ್ನಡದಲ್ಲಿ ಮೆಳೈಸುತ್ತಿವೆ. ಮುಂಬಯಿ ಬರೇ ವಾಣಿಜ್ಯನಗರಿಯಲ್ಲಿ ಸಾಂಸ್ಕೃತಿಕ ನಗರಿಯಾಗಿದೆ. ಮುಂಬಯಿಗೂ ಮುದ್ದಣರಿಗೂ ಅವಿನಾಭಾವ ನಂಟುಯಿದ್ದು ಕನ್ನಡದ ಸಂಸ್ಕೃತಿ, ಸಾಹಿತ್ಯ, ಕಾವ್ಯ ಲೋಕಕ್ಕೆ ಬಲವರ್ಧನೆಗೆ ಶ್ರಮಿಸಿದ ಮಹಾನ್ ಚೇತನ ಅವರಾಗಿದ್ದರು. ಕನ್ನಡ ಕಾವ್ಯ ಲೋಕಕ್ಕೆ ಶ್ರಮಿಸಿದ ಕ್ರಾಂತಿಕಾರಿ ಕವಿ ಆದ್ದರಿಂದಲೇ ಮುದ್ದಣ ಇಂದಿಗೂ ಮನುಕುಲದ ಭಾವಕೋಶದಲ್ಲಿ ಸೇರಿದ್ದಾರೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಜಿ.ಎನ್ ಉಪಾಧ್ಯ ನುಡಿದರು.

ಮುಂಬಯಿ ವಿವಿ ಕನ್ನಡದ ವಿಭಾಗದ ಅತಿಥಿ ಉಪನ್ಯಾಸಕಿ ಡಾ| ಶ್ಯಾಮಲಾ ಪ್ರಕಾಶ್ ಅವರು ಮುದ್ದಣ ಕಾವ್ಯ ವಾಚನಗೈದರು. ಕನ್ನಡದ ವಿಭಾಗದ ಎಂಎ ವಿದ್ಯಾರ್ಥಿಗಳು ವೈವಿಧ್ಯಮಯ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಎಸ್.ಕೆ ಸುಂದರ್, ಭಾಗ್ಯಲಕ್ಷ್ಮೀ ಚಡಗ, ವಿನೋಧಿನಿ ಪಿಲಿಂಜೆ, ಚಂದ್ರಶೇಖರ ಪಾಲೆತ್ತಾಡಿ, ಮೋಹನ್ ಮಾರ್ನಾಡ್, ವೈ.ಮಧುಸೂದನ ರಾವ್, ಸುಶೀಲಾ ಎಸ್.ದೇವಾಡಿಗ, ಕೊಲ್ಯಾರು ರಾಜು ಶೆಟ್ಟಿ, ಯಜ್ಞ ನಾರಾಯಣ ಮತ್ತಿತರರು ಉಪಸ್ಥಿತರಿದ್ದು, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಕುಮುದಾ ಆಳ್ವ ಉಪಕಾರ ಸ್ಮರಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal