About Us       Contact

 

ಮೂವತ್ತರ ಮುನ್ನಡೆಯಲ್ಲಿ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ  ಬಂಟ ಸಾಧಕರಿಗೆ ಸಾಧನಾಶೀಲ ಪುರಸ್ಕಾರ ಪ್ರದಾನ-ಉದ್ಯಮಗಳ ಪ್ರದರ್ಶನ

ಮುಂಬಯಿ, ಫೆ.11: ಮೂರು ದಶಕಗಳ ದಕ್ಷ ಸೇವೆ, ಸಾಧನೆಗಳ ಫಲಪ್ರದ ಮುನ್ನಡೆಯಲ್ಲಿನ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಸಂಸ್ಥೆ ಇದೀಗ ಬಂಟ ಸಾಧಕರಿಗೆ `ಐಬಿಸಿಸಿಐ ಬಂಟ್ಸ್ ಸ್ಟಾರ್ ಸಾಧಕ ಪುರಸ್ಕಾರ 2020' ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ಇದೇ 2020ರ ಮಾರ್ಚ್, 01ನೇ ಭಾನುವಾರ ಸಂಜೆ 4.30 ಗಂಟೆಗೆ ಸಾಂತಾಕ್ರೂಜ್ ಪೂರ್ವದ ಏರ್ಪೋಟ್ ಇಲ್ಲಿನ ಸಹರಾ ಸ್ಟಾರ್ ಪಂಚತಾರಾ ಹೊಟೇಲು ಸಭಾಗೃಹದಲ್ಲಿ ಭವ್ಯ ಪುರಸ್ಕಾರ ಪ್ರದಾನ ಸಮಾರಂಭ ಆಯೋಜಿಸಿದೆ.

ಸಮಾರಂಭಕ್ಕೆ ಅತಿಥಿ ಅಭ್ಯಾಗತರುಗಳಾಗಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ, ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಖಾತೆ ಸಚಿವ ನಿತಿನ್ ಗಡ್ಕರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜ್‍ಕಿರಣ್ ರೈ ಆಗಮಿಸಲಿದ್ದಾರೆ.

ಸಮಾರಂಭದಲ್ಲಿ ಈ ಬಾರಿ ಪ್ರಮುಖವಾಗಿ ಸಾಧಕ ಬಂಟ ಉದ್ಯಮಿಗಳ  ಹಾಗೂ ಇತರ ವ್ಯವಸಾಯಿಕ ತಜ್ಞರನ್ನು ಗುರುತಿಸಿ `ಐಬಿಸಿಸಿಐ ಬಂಟ್ಸ್ ಸ್ಟಾರ್ ಸಾಧಕ ಪುರಸ್ಕಾರ 2020' ಪ್ರದಾನಿಸಿ ಗೌರವಿಸಲಾಗುವುದು. ಆ ಪೈಕಿ ವ್ಯವಹಾರ ಶ್ರೇಷ್ಠತಾ ಉದ್ಯಮಿ , ವೃತ್ತಿಪರ ಶ್ರೇಷ್ಠತಾ ವ್ಯಕ್ತಿ , ಶ್ರೇಷ್ಠ ಭವಿಷ್ಯ ಪ್ರಾರಂಭಿಕ ಉದ್ಯಮಿ , ಆತಿಥೇಯ (ಹೊಟೇಲು ಕ್ಷೇತ್ರದ) ತಾರಾ ಉದ್ಯಮಿ, ವಿಭಾಗಗಳನ್ನಾಗಿಸಿ ಸಾಧಕ ಬಂಟರನ್ನು ಗೌರವಿಸಲಿದೆ. ಬಂಟ ಸಮಾಜದ ದಿಗ್ಗಜ ಉದ್ಯಮಿಗಳು ಹಾಗೂ ಬಂಟರೇತರ ಉದ್ಯಮಿಗಳೂ ವಿಶೇಷ ಆಹ್ವಾನಿತರಾಗಿ ಆಗಮಿಸಿ ತಮ್ಮ ಉದ್ಯಮಗಳ ಬಗ್ಗೆ ಪ್ರದರ್ಶನ ನೀಡಿ ಸಮಾರಂಭಕ್ಕೆ ಮೆರುಗು ನೀಡಲಿದ್ದಾರೆ.

ಈ ಸಮಾರಂಭದಲ್ಲಿ ತಮ್ಮ ಉದ್ಯಮಗಳ ಬಗ್ಗೆ ಮಾಹಿತಿ, ಪ್ರದರ್ಶನ ನೀಡಲಿಚ್ಛಿಸುವ ಉದ್ಯಮಿಗಳು ಐಬಿಸಿಸಿಐ ಕಾರ್ಯಕಾರಿ ಸಮಿತಿಯನ್ನು ಸಂಪರ್ಕಿಸಬಹುದು. ಸಮಾರಂಭದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಅತಿಥಿsಗಳು ಪ್ರವೇಶ ಪತ್ರಗಳನ್ನು ಮುಂಚಿತವಾಗಿ ಸ್ವತಃ ಅಥವಾ ವೆಬ್‍ಸೈಟ್ ಮುಖೇನ ಪಡೆದು ಕೊಳ್ಳುವಂತೆ ಕೋರಲಾಗಿದೆ. ಈ ಸಮಾರಂಭದಲ್ಲಿ ಸಂಸ್ಥೆಯ ಎಲ್ಲಾ ಸದಸ್ಯರು ಹಾಗೂ ಆಮಂತ್ರ್ರಿತರು ಪಾಲ್ಗೊಂಡು ಸಮಾರಂಭದ ಶ್ರೇಯಸ್ಸಿಗೆ ಸಹಕರಿಸುವಂತೆ ಐಬಿಸಿಸಿಐ ಇದರ ಕಾರ್ಯಕಾರಿ ಸಮಿತಿ ಈ ಮೂಲಕ ವಿನಂತಿಸಿದೆ.

ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ:
ರಾಷ್ಟ್ರದ ಆರ್ಥಿಕ ರಾಜಧಾನಿ ಸೇರಿದಂತೆ ರಾಷ್ಟ್ರದಾದ್ಯಂತ ಹೊಟೇಲ್ ಉದ್ಯಮದಲ್ಲಿ ಯಶಸ್ವಿಗಳಾಗಿದ್ದ ಬಂಟರು, ಕಳೆದ ಸುಮಾರು ಮೂರು ದಶಕಗಳಿಂದ ವಿವಿಧ ಪ್ರಕಾರದ ಔದ್ಯೋಗಿಕ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಉದ್ಯಮಶೀಲತ್ವದತ್ತ ಸಾಗುತ್ತಿದ್ದಾರೆ. ಈ ಮೂಲಕ ಲಕ್ಷಾಂತರ ಜನರಿಗೆ ನೌಕರಿಯ ಸೌಭಾಗ್ಯ, ಸೌಲಭ್ಯ ಒದಗಿಸಿ ಮನುಕುಲದ ಬಾಳಿಗೆ ಪ್ರೇರಕರಾಗಿದ್ದಾರೆ. ಕೆಲವು ಉದ್ಯಮಿಗಳು ಕ್ರಾಂತಿಕಾರಿ ಪ್ರಗತಿಯೊಂದಿಗೆ ಯಶಸ್ವಿನ ಶಿಖರವನ್ನೇರಿ ಸಾಧನಾಶೀಲ ಉದ್ಯಮಿಗಳಾಗಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಮನವರಿಸಿ ಸಮಾನ ಮನಸ್ಕ ಬಂಟ ಉದ್ಯಮಿಗಳು, ಧುರೀಣರು 1990ರಲ್ಲಿ ಪ್ರಥಮತಃ ಮುಂಬಯಿಯ ಉದ್ಯಮಿಗಳನ್ನು ಹಾಗೂ ಇತರ ವ್ಯವಸಾಯಗಳಲ್ಲಿ ತೊಡಗಿಸಿ ಕೊಂಡವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತಾ `ಮೌಲ್ಯಗಳೊಂದಿಗೆ ಸಂಪರ್ಕ ಸಾಧನೆ' ಧ್ಯೇಯನ್ನಿರಿಸಿ ಆಸ್ತಿತ್ವಕ್ಕೆ ತರಲಾದ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ (ಬಿಸಿಸಿಐ) ಸಂಸ್ಥೆ ಇದೀಗ ಮೂವತ್ತರ ಮುನ್ನಡೆಯಲ್ಲಿದೆ.

ಎಸ್‍ಎಂ ಗ್ರೂಪ್ ಆಫ್ ಇಂಡಿಯಾ ಇದರ ಆಡಳಿತ ನಿರ್ದೇಶಕ ಎಸ್.ಎಂ ಶೆಟ್ಟಿ ಇವರು ಮೊದಲಾಗಿ ಬಿಸಿಸಿಐ ಇದರ ಸಾರಥ್ಯ ವಹಿಸಿ ಸ್ಥಾಪಕ ಅಧ್ಯಕ್ಷರಾಗಿ ಸೇವೆಯನ್ನಿತ್ತರು. ಬಳಿಕ ವಿ.ಕೆ ಗ್ರೂಪ್‍ನ ವಿ.ಕೆ ಶೆಟ್ಟಿ (ಸ್ವರ್ಗಸ್ಥರು) ಅಧ್ಯಕ್ಷರಾಗಿ ತಮ್ಮ ನೇತೃತ್ವದಲ್ಲಿ 3 ವರ್ಷಗಳ ಕಾಲಾವಧಿಯಲ್ಲಿ ಸಂಸ್ಥೆಯನ್ನು ಯೋಗ್ಯ ರೀತಿಯಲ್ಲಿ ಮುಂದುವರಿಸಿದರು. ನಂತರ ಯುನಿಟಾಪ್ ಸಮೂಹದ ಬಾರ್ಕೂರು ಧರ್ಮರಾಜ್ ಶೆಟ್ಟಿ (ಬಿ.ಡಿ ಶೆಟ್ಟಿ) 12 ವರ್ಷಗಳ ತನಕ ಅಧ್ಯಕ್ಷರಾಗಿದ್ದು ಸಂಸ್ಥೆಯನ್ನು ಸಕಾರಾತ್ಮಕವಾಗಿ ಮುನ್ನಡೆಸಿ ಬಿಸಿಸಿಐ ಇದನ್ನು ಜನಮಾನ್ಯ ಸಂಸ್ಥೆಯನ್ನಾಗಿಸಿ ಬೆಳೆಸಿ ತನ್ನ ಕಾಲಾವಧಿಯಲ್ಲಿ ಹಲವಾರು ಬಂಟದಾನಿಗಳ ಧನ ಸಹಾಯದಿಂದ ಸಂಸ್ಥೆಗೆ ಸ್ವಂತಃದ ಕಚೇರಿಯನ್ನು ರೂಪಿಸಿದರು. ಜೊತೆಗೆ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುವ ಇರಾದೆಯೊಂದಿಗೆ ದೇಶವ್ಯಾಪಿಯಾಗಿ ಪಸರಿಸುವ ನಿಟ್ಟಿನಲ್ಲಿ ಬಿ.ಡಿ ಶೆಟ್ಟಿ ಅವರು ದೂರದೃಷ್ಠಿ ಇರಿಸಿ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಎಂದು ಮರು ನಾಮಕರಣಗೊಳಿಸಿ ಸರಕಾರದ ಮಾನ್ಯತೆಯೊಂದಿಗೆ ನೋಂದಾವಣಿ ಗೊಳಿಸಿ ರಾಷ್ಟ್ರ ಮಟ್ಟದ ಸಂಸ್ಥೆಯಾಗಿ ರೂಪಿಸಿದರು. ನಂತರ 3 ವರ್ಷಗಳ ಕಾಲ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು ಅಧ್ಯಕ್ಷರಾಗಿ ಕಾರ್ಯಪ್ರಪ್ತರಾಗಿ ತನ್ನ ಕಾಲಾವಧಿಯಲ್ಲಿ ವಿವಿಧ ಜೌದ್ಯೋಗಿಕ ತರಬೇತಿ ಶಿಬಿರ, ಉದ್ಯಮ ಪ್ರವಾಸಗಳನ್ನು ಆಯೋಜಿಸಿ ಸಂಸ್ಥೆಗೆ ಹೊಸದಿಶೆಯನ್ನು ಪ್ರಾಪ್ತಿಸಿದರು. 2018ರ ಜನವರಿ 25ರಂದು ಜರುಗಿದ ಮಹಾಸಭೆಯಲ್ಲಿ ಉದ್ಯಮಿ, ಲ್ಯೂಮೇನ್ಸ್ ಗ್ರೂಫ್ ಆಫ್ ಇಂಡಿಯಾ ಇದರ ಕುತ್ಪಾಡಿ ಚಂದ್ರ ಶೆಟ್ಟಿ (ಕೆ.ಸಿ ಶೆಟ್ಟಿ) ಇವರನ್ನು ಐಬಿಸಿಸಿಐ ಸಂಸ್ಥೆಯ ನೂತನ ಅಧ್ಯಕ್ಷರನ್ನಾಗಿ ಮಹಾಸಭೆ ಸರ್ವಾನುಮತದಿಂದ ಆಯ್ಕೆ ಗೊಳಿಸಿದ್ದು ಸದ್ಯ ಕಾರ್ಯನಿರತ ಕೆ.ಸಿ ಶೆಟ್ಟಿ ಅವರು ತಮ್ಮದೇ ಆದ ಕಾರ್ಯವೈಖರಿಯಲ್ಲಿ ಸಂಸ್ಥೆ ಮುನ್ನಡೆಸುತ್ತಿದ್ದು, ಬಂಟ ಸಾಧಕರಿಗೆ ಸಾಧನಾಶೀಲ ಪುರಸ್ಕಾರ ಯೋಜನೆಯನ್ನು ಹಮ್ಮಿಕೊಂಡು ಇನ್ನಷ್ಟು ಬಂಟ ಉದ್ಯಮಿಗಳನ್ನು ಪೆÇ್ರತ್ಸಹಿಸಿ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಸೇವಾ ನಿರತರಾಗಿದ್ದರೆ.

ಐಬಿಸಿಸಿಐ ಸಂಸ್ಥೆ ಭಾರೀ ಸಂಖ್ಯೆಯ ಸದಸ್ಯರನ್ನೊಳಗೊಂಡಿದ್ದು, ತನ್ನ ವೆಬ್‍ಸೈಟ್‍ನ್ನು ತುಂಬಾ ಪರಿಣಾಮಕಾರಿ ಆಗಿಸಿ ಬಳಸಿಕೊಳ್ಳುತ್ತಿದೆ. ಈ ಮೂಲಕ ಬಂಟ ಯುವಕರು ತಮ್ಮ ನೌಕರಿ, ಉದ್ಯಮಕ್ಕಾಗಿ ನೊಂದಯಿಸಲು ಅವಕಾಶವಿದೆ. ಎಲ್ಲಾ ಸದಸ್ಯರ ಪರಿಚಯ ಹಾಗೂ ವ್ಯವಸಾಯಗಳ ಅರಿವು ಈ ವೆಬ್‍ಸೈಟ್ ಮೂಲಕ ಪಡೆಯಲೂ ಸಾಧ್ಯವಿದೆ. ಪೇಮೆಂಟ್ ಗೇಟ್‍ವೇ ಸಹಾಯದಿಂದ ಹೊಸ ಸದಸ್ಯರು ಅಥವಾ ದಾನಿಗಳು ತಮ್ಮ ಹಣವನ್ನು ಸಂಸ್ಥೆಗೆ ತಲುಪಿಸಲು ಅವಕಾಶವಿದೆ. ಸಂಸ್ಥೆಯ ಪ್ರಗತಿಯ ಪಕ್ಷಿನೋಟವನ್ನು ಎಲ್ಲಾ ಸದಸ್ಯರು ಸುಲಭವಾಗಿ ವೀಕ್ಷಿಸಬಹುದು. 2018ರ ಜುಲೈನಲ್ಲಿ ನಡೆಸಿದ ಸಂತೋಷ್ ನಾಯರ್ ಶಿಬಿರದಲ್ಲಿ ಬಂಟ ಇನ್ನಿತರ ವ್ಯಕ್ತಿಗಳು ಪಾಲ್ಗೊಂಡು ತಮ್ಮ ಔದ್ಯೋಗಿಕ ಜ್ಞಾನವೃದ್ಧಿಸಿ ಫಲಾನುಭವ ಪಡೆದಿರುವರು.

ಜನವರಿ 2019ರಲ್ಲಿ ನಡೆದ ಔದ್ಯೋಗಿಕ ಪ್ರವಾಸದಲ್ಲಿ 42 ಸದಸ್ಯರು ಹಿಮಾಚಲ ಪ್ರದೇಶದ ಬದ್ದಿ ಎಂಬ ಔದ್ಯೋಗಿಕ ಸಂಕುಲಕ್ಕೆ ಭೇಟಿ ನೀಡಿದ್ದು ಹಲವಾರು ಹೆಸರಾಂತ ಉದ್ಯಮಿಗಳ ಕಾರ್ಖಾನೆಗಳ ಅಧ್ಯಯನ ಮಾಡಿಕೊಳ್ಳುವಂತಾಗಿತ್ತು. ಪ್ರಸ್ತುತ್ ಕೆ.ಸಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಸೇವಾ ನಿರತ ಐಬಿಸಿಸಿಐ ಸಂಸ್ಥೆಯಲ್ಲಿ ಎಸ್.ಬಿ ಶೆಟ್ಟಿ (ಉಪಾಧ್ಯಕ್ಷ) ಕೆ.ಜಯ ಸೂಡಾ (ಕಾರ್ಯದರ್ಶಿ) ದುರ್ಗಾಪ್ರಸಾದ್ ಬಿ.ರೈ (ಕೋಶಾಧಿಕಾರಿ) ಪ್ರಭಾಕರ ಕೆ.ಶೆಟ್ಟಿ (ಜತೆ ಕಾರ್ಯದರ್ಶಿ), ಪ್ರಸಾದ್ ಬಿ.ಶೆಟ್ಟಿ (ಜತೆ ಕೋಶಾಧಿಕಾರಿ) ಮತ್ತು ಕಾರ್ಯಕಾರಿ ಸಮಿತಿ 19 ಸದಸ್ಯರು ಸೇವಾ ನಿರತರಾಗಿದ್ದಾರೆ.

 

ಮಾಹಿತಿ: ರೋನ್ಸ್ ಬಂಟ್ವಾಳ್
*************************************************************************

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal