About Us       Contact

 

ಮುಂಬಯಿ, ಫೆ.11: ವಾಪಿ ಕನ್ನಡ ಸಂಘದ 40ನೇ, ವಾರ್ಷಿಕೋತ್ಸವ ಸಮಾರಂಭವನ್ನು ಗುಜರಾತ್ ವಾಪಿ ಇಲ್ಲಿನ ಸಂಘದ ವಿವಿದೊದ್ದೇಶ ಭವನದಲ್ಲಿ ಕಳೆದ ಶನಿವಾರ ಅದ್ದೂರಿಯಾಗಿ ಸಂಭ್ರಮಿಸಿತು. ವಾಪಿ ಕನ್ನಡ ಸಂಘದ ಅಧ್ಯಕ್ಷೆ ನಿಶಾ ನಾರಾಯಣ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ, ಮುಂಬಯಿ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ಹಾಗೂ ವಾರ್ಷಿಕೋತ್ಸವ ಸಮಿತಿ ಸಂಚಾಲಕ ನಾಗರಾಜ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಪ್ರಯಾಗ, ಕೋಶಾಧಿಕಾರಿ ರಾಜೀವ ಶೆಟ್ಟಿ, ಮಹಿಳಾ ವಿಭಾಗದ ಮುಖ್ಯಸ್ಥೆ ವಾಣಿ ಭಟ್, ವಿಶ್ವಸ್ಥರಾದ ಎನ್.ಪಿ ಕಾಂಚನ್, ನಾರಾಯಣ ಎಂ.ಶೆಟ್ಟಿ, ಸಂಜಯ್ ಮಾರ್ಭಲಿ, ಪಿ.ಎಸ್‍ಕಾರಂತ್, ಉದ್ಯಮಿ ಸುಭಾಶ್ಚದ್ರ ಸನೋಯಿ ಉಪಸ್ಥಿತರಿದ್ದು ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿ ಅತಿಥಿ ಅಭ್ಯಾಗತರುಗಳಾಗಿ ಅಂತಾರಾಷ್ಟ್ರೀಯ ಜಾದೂಗಾರ ಪ್ರಕಾಶ ಹೆಮ್ಮಾಡಿ (ಕುಂದಾಪುರ) ಇವರನ್ನು ಸನ್ಮಾನಿಸಿ ಗೌರವಿಸಿದರು.

ಸುರೇಂದ್ರ ಕುಮಾರ್ ಮಾತನಾಡಿ ಕಲಾವಿದ ವಿಶ್ವದ ಯಾವ ಮೂಲೆಯಲ್ಲಿ ಅಡಗಿಕೊಂಡರೂ ಅವರನ್ನು ಕಂಡು ಹಿಡಿಯಲು ಬಹಳ ಸುಲಭ. ಕಲಾವಿದ ಪ್ರತಿಯೊಂದೂ ವ್ಯಕ್ತಿಯ ಮನದೊಳಗೆ ಸ್ಥಾನ ಪಡೆಯುತ್ತಾನೆ. ಒಂದು ಮಹಿಳೆ ಸಂಸ್ಥೆಯ ಅಧ್ಯಕ್ಷ ಸ್ಥಾನದಲ್ಲಿ ಅಲಂಕರಿಸಿದ್ದಲ್ಲಿ ಸಂಘಟನೆ ಪರಿವಾರವಾಗಿ ಮುನ್ನಡೆಯುವಲ್ಲಿ ಎರಡು ಮಾತಿಲ್ಲ. ಇಲ್ಲಿಯೂ ಮಹಿಳಾಶಕ್ತಿ ದೊಡ್ಡ ಪ್ರಮಾಣದಲ್ಲಿದೆ. ಈ ಸಂಘವು ಭವ್ಯ ಭವಿಷ್ಯ ಹೊಂದಲಿದೆ ಎಂದು ಆಶಯ ವ್ಯಕ್ತಪಡಿಸಿದರು.

 

 

ತುಳುನಾಡ ಐಸಿರಿ ಇದರ ಉಪಾಧ್ಯಕ್ಷ ನವೀನ್ ಎಸ್.ಶೆಟ್ಟಿ, ಕನ್ನಡ ಸಂಘದ ವಿಶ್ವಸ್ಥರು ಮತ್ತು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದ ಸಂಚಾಲಕರು ನಾಗರಾಜ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಾಣಿ ಭಟ್ ಉಪಸ್ಥಿತರಿದ್ದು ಗಣ್ಯರನ್ನು ಸನ್ಮಾನಿಸಿದರು.

ನಿಶಾ ಶೆಟ್ಟಿ ಅಧ್ಯಕ್ಷೀಯ ಭಾಷಣಗೈದು ನಮ್ಮ ಸಂಘದ ಸಮಿತಿ ಸದಸ್ಯರು, ವಿಶ್ವಸ್ಥ ಮಂಡಳಿಯ ಸಹಕಾರದಿಂದ ನಾನು ಒಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳಲು ಸಾಧ್ಯವಾಯಿತು. ಮುಂದೆ ನಿಮ್ಮ ಸಹಕಾರ ಸದಾ ಇರಲಿ, ನನ್ನೊಂದಿಗೆ ಸಹಕರಿಸಿದ ಸರ್ವರಿಗೂ ವಂದಿಸುವೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದೇನೆ ಎಂದರು

ವಸಂತಿ ಭಟ್ ಮತ್ತು ಅನಘ ಜಕಾತಿ ಅವರ ಪ್ರಾಥನೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಗೌರವ ಕಾರ್ಯದರ್ಶಿ ಪ್ರತಿಭಾ ಪ್ರಯಾಗ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಕೋಶಾಧಿಕಾರಿ ರಾಜೀವ ಶೆಟ್ಟಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವಿಶ್ವಸ್ಥ ಸದಸ್ಯ ಪಿ.ಎಸ್ ಕಾರಂತ ಮತ್ತು ಪ್ರಫುಲ ನಾಗರಾಜ್ ಶೆಟ್ಟಿ ಅತಿಥಿ ಪರಿಚಯಗೈದರು. ಸಂಜಯ್ ಮಾರ್ಬಲಿ ಹಾಗೂ ಮಲ್ಹರಾ ಹಿಂಬರ್ಗಿ ಸನ್ಮಾನ ಪತ್ರ ವಾಚಿಸಿದರು. ಪ್ರತಿಭಾ ಪ್ರಯಾಗ ವಾರ್ಷಿಕ ವರದಿ ಮತ್ತು ಪರಮೇಶ್ವರ್ ಬೆಳ್ಗೆ ಪ್ರತಿಭಾವಂತರ ಯಾದಿ ವಾಚಿಸಿದರು. ರಾಜು ಶೇರೆಗಾರ್, ಶಶಿಧರ್ ಜೋಷಿ, ಸತೀಶ್ ಕುಂದರ್ ಸಾಂಸ್ಕೃತಿಕ ನಿರ್ವಹಿಸಿದರು ತುಳುನಾಡ ಐಸಿರಿ ವಾಪಿ ಇದರ ಗೌ| ಪ್ರ| ಕಾರ್ಯದರ್ಶಿ ಉದಯ ಬಿ.ಶೆಟ್ಟಿ ಸ್ಪರ್ಧಿಗಳ ಯಾದಿ ವಾಚಿಸಿದರು. ಮಮತಾ ಮಲ್ಹರಾ ಹಾಗೂ ಟಿ.ಕೆ ವಿನಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪರಮೇಶ್ವರ್ ಬೆಲ್ಮಗಿ ವಂದಿಸಿದರು.

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal