Print


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.08: ಮುಂಬಯಿ ಉಪನಗರದ ಖಾರ್ ಪೂರ್ವದಲ್ಲಿ ತುಳು ಕನ್ನಡಿಗರ ಸಂಚಾಲಕತ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ರಿ.) ಸಂಚಾಲಕತ್ವದ ಶ್ರೀ ಶನಿಮಹಾತ್ಮ ಮಂದಿರದಲ್ಲಿ ಸಮಿತಿಯು ಇಂದಿಲ್ಲಿ ಶನಿವಾರ 53ನೇ ವಾರ್ಷಿಕ ಶನೀಶ್ವರ ಮಹಾಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿತು. ಖಾರ್ ಪೂರ್ವದ ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‍ನಗರ್‍ನ ಸಾಯಿಧಾಮ್ ಬಿಲ್ಡಿಂಗ್‍ನಲ್ಲಿ ಪ್ರತಿಷ್ಠಾಪಿತ ಶ್ರೀ ಶನಿಮಹಾತ್ಮ ಮಂದಿರದಲ್ಲಿ ಮುಂಜಾನೆ ಗಣಹೋಮ, ಬೆಳಿಗ್ಗೆ ಶ್ರೀಸತ್ಯನಾರಾಯಣ ಮಹಾಪೂಜೆ ನಡೆಸಲಾಗಿದ್ದು ವೈಧಿಕ ತಂತ್ರಿಗಳಾದ ಸಂತೋಷ್ ಭಟ್ ಹಾಗೂ ರಮೇಶ್ ಭಟ್ ಚಾರ್ಕೋಪ್ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.

 

 

 

 

 

 

 

 

 

ಮಧ್ಯಾಹ್ನ ಕಲಶ ಪ್ರತಿಷ್ಠಾ, ಭಜನೆ, ಅಪರಾಹ್ನ ಶನೀಶ್ವರ ಗ್ರಂಥ ಪಾರಾಯಣ, ಸಂಜೆ ಮಂಗಳಾರತಿ, ರಾತ್ರಿ ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಲಾಗಿದ್ದು ಮಂದಿರದ ಯೊಗೇಶ್ ಕೆ.ಹೆಜ್ಮಾಡಿ ಕಲಶ ಮಹೂರ್ತ ನೆರವೇರಿಸಿ ಮಂಗಳಾರತಿಯೊಂದಿಗೆ ಭಕ್ತರಿಗೆ ಪ್ರಸಾದ ನೀಡಿ ಅನುಗ್ರಹಿಸಿದರು. ನಿಖಿತಾ ಭಾವಿತ್ ಆರ್.ಪೂಜಾರಿ ಮತ್ತು ವಿಮಲಾ ಜಯರಾಮ ಶೆಟ್ಟಿ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಈ ಶುಭಾವಸರದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ, ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ ಜೆ.ಪೂಜಾರಿ, ಸಮಿತಿ ಗೌರವಾಧ್ಯಕ್ಷ ಶ್ರೀಧರ್ ಜೆ.ಪೂಜಾರಿ, ಕಾರ್ಯಧ್ಯಕ್ಷ ಆರ್.ಡಿ ಕೋಟ್ಯಾನ್, ಉಪ ಕಾರ್ಯಧ್ಯಕ್ಷ ಜಯರಾಮ ಶೆಟ್ಟಿ, ಅಧ್ಯಕ್ಷ ಶಂಕರ್ ಕೆ.ಸುವರ್ಣ, ಉಪಾಧ್ಯಕ್ಷರುಗಳಾದ ದೇವೆಂದ್ರ ವಿ.ಬಂಗೇರ ಮತ್ತು ಭೋಜ ಸಿ.ಪೂಜಾರಿ ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಹೆಜ್ಮಾಡಿ, ಜತೆ ಕಾರ್ಯದರ್ಶಿ ರಮೇಶ್ ಎನ್.ಪೂಜಾರಿ, ಜತೆ ಸಹಾಯಕ ಕಾರ್ಯದರ್ಶಿಗಳಾದ ಹರೀಶ್ ಕೋಟ್ಯಾನ್ ಕಾಪು, ಜನಾರ್ದನ ಎನ್.ಸಾಲ್ಯಾನ್, ಜತೆ ಕೋಶಾಧಿಕಾರಿ ವಿನೋದ್ ವೈ.ಹೆಜ್ಮಾಡಿ, ಮಹಿಳಾ ಸಮಿತಿ ಮುಖ್ಯಸ್ಥೆ ಕಾರ್ಯಾಧಕ್ಷೆ ಕೇಸರಿ ಬಿ.ಅಮೀನ್, ಜೊತೆ ಕಾರ್ಯಾಧಕ್ಷೆಯರಾದ ಶೋಭ ವಿ.ಕೋಟ್ಯಾನ್ ಮತ್ತು ಸರಸ್ವತಿ ಬಿ.ಪೂಜಾರಿ, ಕಾರ್ಯದರ್ಶಿ ರೇವತಿ ಕೆ.ಶೆಟ್ಟಿ, ಯುವ ವಿಭಾಗÀಧ್ಯಕ್ಷ ವಿಜಯ್ ಎನ್.ಸಾಲ್ಯಾನ್, ಸಾಂಸ್ಕೃತಿಕ-ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ಹರೀಶ್ಚಂದ್ರ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಮೂಡಬಿದ್ರಿ, ವೈದ್ಯಕೀಯ ಮತ್ತು ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ್ ಕರ್ನಿರೆ, ಆರ್ಚಕರಾದ ಗಿರೀಶ್ ಪೂಜಾರಿ, ರವೀಂದ್ರ ಕೋಟ್ಯಾನ್, ಸಲಹಾದಾರರಾದ ನ್ಯಾ| ಸೋಮನಾಥ್ ಬಿ.ಅವೀನ್, ಸಿಎ| ಪ್ರಕಾಶ್ ಶೆಟ್ಟಿ, ಕಮಲಾಕ್ಷ ಬಿ.ಸುವರ್ಣ, ವಾಸು ಎಸ್.ಕೋಟ್ಯಾನ್, ವಾಸ್ತವ್ಯ ವ್ಯವಸ್ಥಾಪಕರಾದ ಅಶೋಕ್ ಶೆಟ್ಟಿ, ನಾರಾಯಣ ಜಿ.ಕೋಟ್ಯಾನ್, ರವಿ ನಾೈಕ್, ನರಸಿಂಹ ಸಾಲ್ಯಾನ್, ವಿಶ್ವಸ್ಥ ಸದಸ್ಯರು, ಸದಸ್ಯರನೇಕರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡ ಶ್ರೀ ಶನಿದೇವರ ಕೃಪೆಗೆ ಪಾತ್ರರಾದರು.

ಇದೇ ಫೆ.16ನೇ ಭಾನುವಾರ ಸಂಜೆ 4.30 ಗಂಟೆಗೆ ಜವಹಾರ್‍ನಗರ್‍ನ ಸಾಯಿಧಾಮ್ ಬಿಲ್ಡಿಂಗ್‍ನ ಆವರಣ ದಲ್ಲಿ ಶ್ರೀ ಧನಂಜಯ ಶಾಂತಿ ಅವರು `ಸತ್ಯ ಹರಿಶ್ಚಂದ್ರ' ಹರಿಕಥೆ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲೂ ಭಕ್ತರು, ಸಮಿತಿಯ ಸರ್ವ ಸದಸ್ಯರು ಆಗಮಿಸುವಂತೆ ಸಮಿತಿ ಪರವಾಗಿ ಸಮಿತಿಯ ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಹೆಜ್ಮಾಡಿ ಈ ಮೂಲಕ ತಿಳಿಸಿದ್ದಾರೆ.