About Us       Contact

 

 (ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಂಬಯಿ, ಜ.26: ಸಂವಿಧಾನಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ದೂರದೃಷ್ಠಿತ್ವವನ್ನು ಹೊಂದಿ ತನ್ನದೇ ಆದ ಸಂಪುಟ ರಚಿಸಿ ತನ್ನ ಬುನಾದಿಯ ಪುಸ್ತಕವನ್ನೇ ಬರೆಯುವಾಗಲೇ ಈ ರಾಷ್ಟ್ರ ಹೇಗೆ ಮುನ್ನಡೆಯಬೇಕು ಎಂದು ಯೋಚಿಸಿದ್ದರು. ಜಾತ್ಯಾತೀಯ ದೇಶದ ಕನಸು ಕಂಡಿದ್ದರು. ಆದರೆ ಈಗ ರಾಜಕಾರಣದ ಜಾತಿಅತೀತ ವಾದದಿಂದ ಡಾ| ಅಂಬೇಡ್ಕರ್ ಅವರ ಕನಸುಗಳು ದೂರಸಾಗುತ್ತಿವೆ. ಆದರೂ ರಾಷ್ಟ್ರ ಕಂಡ ಪ್ರಸ್ತುತ ಪ್ರಧಾನಮಂತ್ರಿಯ ಚಿಂತನೆಯೂ ಅದೇ ಆಗಿದ್ದು ರಾಷ್ಟ್ರದ ಶ್ರೇಯೋಭಿವೃದ್ಧಿಗಾಗಿ ಪೌರತ್ವ ತಿದ್ದುಪಡಿ ಮಸೂದೆ ಕಾಯ್ದೆ ಜಾರಿ ತರುವಂತಿದ್ದರೆ ಇದೊಂದು ಧಾರ್ಮಿಕ ಕಿರುಕುಳಕೊಳಗಾಗಿರುವುದು ಚರ್ಚಾರ್ಹ. ಅಲ್ಲದೆ ವಿವಾದಾತ್ಮಕ ಕಾಯ್ದೆಯಾಗಿ ಬದಲಾಗಿ ಗೊಂದಲ ಸೃಷ್ಠಿಸಿರುವುದು ದುರದೃಷ್ಟ. ಈ ಬಗ್ಗೆ ಕೂಲಂಕುಷ ಚರ್ಚೆಯ ಅವಶ್ಯವಿದೆ. ನಾವೆಲ್ಲರೂ ಸಾಮರಸ್ಯದ ಬಾಳಿಗೆ ಪ್ರೇರಕರಾಗಿ ಸಮಾಜ ಕಟ್ಟಬೇಕು. ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಬಾಳುತ್ತಾ ರಾಷ್ಟ್ರಪ್ರೇಮಿಗಳಾಗೋಣ ಎಂದು ಕನ್ನಡ ಸಂಘ ಸಾಂತಾಕ್ರೂಜ್ ಇದರ ಅಧ್ಯಕ್ಷ ಎಲ್.ವಿ ಅವಿೂನ್ ಕರೆಯಿತ್ತರು.

ಕನ್ನಡ ಸಂಘವು ವಾರ್ಷಿಕವಾಗಿ ಸಂಭ್ರಮಿಸುವಂತೆ ಈ ಬಾರಿ 71ನೇ ಗಣರಾಜ್ಯೋತ್ಸ ಸಂಭ್ರಮಿಸಿದ್ದು, ಅಧ್ಯಕ್ಷ ಎಲ್.ವಿ ಅವಿೂನ್ ಧ್ವಜಾರೋಹನಗೈದು ರಾಷ್ಟ್ರ ಗೌರವಗೈದು ದೇಶಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಘದ ಗೌ| ಪ್ರ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ಕಾರ್ಯಕಾರಿ ಸದಸ್ಯರಾದ ಜಿ.ಆರ್ ಬಂಗೇರಾ, ಶಿವರಾಮ ಎಂ.ಕೋಟ್ಯಾನ್, ವಿಜಯಕುಮಾರ್ ಕೆ.ಕೋಟ್ಯಾನ್, ಚಂದಯ್ಯ ಪೂಜಾರಿ, ಲಿಂಗಪ್ಪ ಬಿ.ಅವಿೂನ್, ಯಾದವ ಶೆಟ್ಟಿ, ಶೋಭಾ ಶೆಟ್ಟಿ, ಜೋತ್ಸಾ ್ನ ಶೆಟ್ಟಿ, ದಿವ್ಯಾ ಶೆಟ್ಟಿ, ಗಿರೀಶ್ ಶೆಟ್ಟಿ ಮತ್ತಿತರ ಸದಸ್ಯರು, ಮಕ್ಕಳು ಉಪಸ್ಥಿತರಿದ್ದರು. ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂಡಾ ವಂದಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal