About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.26: ತುಳುನಾಡಿನ ಅಂದಿನ ತಾಯಂದಿರು ಇಪ್ಪತ್ತೆಂಟು ಹೆತ್ತವರಿದ್ದರು. ಆ ಕಷ್ಟಕಾಲದಲ್ಲಿ ಕಣ್ಣೀರು ಒರೆಸಿಕೊಂಡು ಹದಿನಾದಿನಾಲ್ಕರ ಹರೆಯದಲ್ಲೇ ಮಕ್ಕಳನ್ನು ಹೊಟೇಲು ಕೆಲಸಕ್ಕೆ ಕಳುಹಿಸಿ ಕೊಡುವಾಗ ಮಾತೆಯಂದಿರ ಆ ಹೊಟ್ಟೆಯ ನೋವನ್ನುಂಡು ತುಳಸೀಕಟ್ಟೆಯ ಮುಂದೆ ಬಂದು ತಿಳಿಹೇಳುತ್ತಿದ್ದರು. ಅಂದು ಈಗೀನನಂತಹ ಟೆರೇಸ್ ಕಟ್ಟಡಗಳಲ್ಲಿ ದೇವರನ್ನು ಪ್ರತಿಷ್ಠಾಪಿಸಿಕೊಳ್ಳುವ ಕ್ರಮ ಬಿಲ್ಲವರಲ್ಲಿರಲಿಲ್ಲ. ಬರೇ ದೈವದೇವರುಗಳಿಗೆ ಮಕ್ಕಳ ಜವಾಬ್ದಾರಿ ವಹಿಸಿ ಪರವೂರಿಗೆ ಕಳುಹಿಸಿ ಕೊಡುತ್ತಿದ್ದರು. ಅಲ್ಲಲ್ಲಿ ಸೇರಿದ ಮಕ್ಕಳು ಕೈಸೇರಿದ ನಯಾಪೈಸೆಯನ್ನೂ ಹೆತ್ತತಾಯಿಗೆ ಕಳುಸಿಕೊಟ್ಟು ಧನ್ಯರೆಣಿಸುತ್ತಿದ್ದರು. ಇಂದು ಬದಲಾದ ಕಾಲಘಟ್ಟದಲ್ಲಿ ಹದಿನೆಂಟು ವರ್ಷದಲ್ಲೂ ಒಂದೇ ಮಗು. ಎರಡನ್ನೇ ಹೆತ್ತಲು ಈಗೀನ ಹೆಣ್ಮಕ್ಕಳು ಕೇಳುತ್ತಿಲ್ಲ ಪರಿಸ್ಥಿತಿ ಹಾಗಾಗಿದೆ. ಹೆತ್ತ ಒಂದನ್ನೇ ಕೆಜಿಗೆ ಸೇರಿಸಲು ಮೂರು ಲಕ್ಷ, ಆಸ್ಪತ್ರೆಯಲ್ಲಿ ಹೆರಿಗೆಗೆ ಹೇಗೂ ಒಂದುವರೆ ಲಕ್ಷ ಖರ್ಚಾಗುತ್ತದೆ. ಹಾಗಾಗಿ ನಾವು ಸಂಧಿಗ್ಧ ಕಾಲದಲ್ಲಿದ್ದೇವೆ. ವೈಭವೋಪೇತ ಜೀವನಕ್ಕಾಗಿ ಮಾನವ ಬದುಕು ಬದಲಾವಣೆ ಮಾಡಿ ಕೊಂಡಾಗಿದೆ. ಅಂದು ನನ್ನ ಜನನಿದಾತೆ ಕಿವಿಯ ಬೆಂಡೋಲೆಯನ್ನು ಅಡವಿಟ್ಟು ನನ್ನನ್ನು ಎಸ್‍ಎಸ್‍ಸಿ ಕಲಿಸಿದ್ದು ಇಂದು ಡಾಕ್ಟರೇಟ್ ಮಾನ್ಯತಾ ಗಣ್ಯರೊಂದಿಗೆ ಕೂಡಿ ಬಾಳುವ ಮೇಧಾವಿತ್ವಕ್ಕೆ ಕಾರಣವಾಯಿತು. ಇವೆಲ್ಲವುಗಳ ಫಲವಾಗಿ ಜಯ ಸುವರ್ಣರ ಹಿರಿತನದಲ್ಲಿ ಕೊಡಮಾಡುವ ಈ ಪ್ರಶಸ್ತಿ ನನ್ನ ಪಾಲಿಗೆ ಸರ್ವೋತ್ಕೃಷ್ಟ ಗೌರವವಾಗಿ ಪ್ರಾಪ್ತಿಯಾಗಿದ್ದು ನನ್ನ ಹಿರಿಮೆಯಾಗಿದೆ ಎಂದು ನಾಡಿನ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ನುಡಿದರು.

ಬಿಲ್ಲವ ಅಸೋಸಿಯೇಶನ್ ಮುಂಬಯಿ ಗೋರೆಗಾಂವ್ ಸ್ಥಳೀಯ ಕಚೇರಿಯು ತನ್ನ 17ನೇ ವಾರ್ಷಿಕೋತ್ಸವ ಇಂದಿಲ್ಲಿ ಭಾನುವಾರ ಗೋರೆಗಾಂವ್ ಪೂರ್ವದ ಬ್ರಿಜ್‍ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ನಿರ್ಮಿತ ಸ್ವರ್ಗೀಯ ರಾಧಾ ಸುಂದರ್ ಕೆ.ಶೆಟ್ಟಿ ವೇದಿಕೆಯಲ್ಲಿ ಅದ್ದೂರಿಯಾಗಿ ಸಂಭ್ರಮಿಸಿದ್ದು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಖವಾಣಿ ಅಕ್ಷಯ ಮಾಸಿಕದ ಗೌರವ ಸಂಪಾದಕ ಎಂ.ಬಿ ಕುಕ್ಯಾನ್ ಪ್ರಾಯೋಜಕತ್ವದ ಅಸೋಸಿಯೇಶನ್‍ನ ಕೊಡಮಾಡುವ ವಾರ್ಷಿಕ ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ 2019 ಪ್ರಶಸ್ತಿ ಮುಡಿಗೇರಿ ಬಾಬು ಅಮೀನ್ ಮಾತನಾಡಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭವನ್ನು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿ ಅಭ್ಯಾಗತರುಗಳಾಗಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್, ಮುಂಬಯಿ ಪ್ರದೇಶ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷದ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ ್ಮಣ ಸಿ.ಪೂಜಾರಿ ಚಿತ್ರಾಪು, ಭಾರತ್ ಬ್ಯಾಂಕ್‍ನ ನಿರ್ದೇಶಕ ಭಾಸ್ಕರ್ ಎಂ.ಸಾಲ್ಯಾನ್, ನಗರದ ಉದ್ಯಮಿಗಳಾದ ರಮಾನಾಥ್ ಎಂ.ಕೋಟ್ಯಾನ್, ರೇಷ್ಮಾ ರವಿರಾಜ್, ಅಸೋಸಿಯೇಶನ್ ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ದಯಾನಂದ್ ಆರ್.ಪೂಜಾರಿ, ಗೌ| ಪ್ರ| ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ ಗಿರಿಜಾ ಚಂದ್ರಶೇಖರ್, ಅಸೋಸಿಯೇಶನ್‍ನ ನಿಕಟಪೂರ್ವಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೋರೆಗಾಂವ್ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಜಗನ್ನಾಥ್ ವಿ.ಕೋಟ್ಯಾನ್, ಕಾರ್ಯಾಧ್ಯಕ್ಷ ಸಚ್ಚೀಂದ್ರ ಕೆ.ಕೋಟ್ಯಾನ್, ಉಪ ಕಾರ್ಯಾಧ್ಯಕ್ಷರಾದ ರಮೇಶ್ ಎಸ್.ಸುವರ್ಣ ಮತ್ತು ಮೋಹನ್‍ದಾಸ್ ಹೆಜ್ಮಾಡಿ ವೇದಿಕೆಯಲ್ಲಿದ್ದು ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮಾ| ಗಗನ್ ಕೆ.ಅಮೀನ್ ಮತ್ತು ಭಾರತ್ ಬ್ಯಾಂಕ್‍ನ ನಿರ್ದೇಶಕ ನ್ಯಾ| ಎಸ್.ಬಿ ಅವಿೂನ್ ಮತ್ತಿತರರನ್ನು ಸತ್ಕರಿಸಿ ಗೌರವಿಸಲಾಯಿತು. ಕೇಂದ್ರ ಕಚೇರಿ ಪ್ರತಿನಿಧಿಗಳಾದ ಮೋಹನ್‍ದಾಸ್ ಟಿ.ಪೂಜಾರಿ, ವಿಶ್ವನಾಥ್ ತೋನ್ಸೆ, ಕಾರ್ಯದರ್ಶಿ ಶಶಿಧರ್ ಆರ್.ಬಂಗೇರ ಕೋಶಾಧಿಕಾರಿ ಮೋಹನ್ ಬಿ.ಅಮೀನ್, ಜತೆ ಕಾರ್ಯದರ್ಶಿ ಟಿ.ಎ ಪೂಜಾರಿ, ಜತೆ ಕೋಶಾಧಿಕಾರಿ ದಿನೇಶ್ ಎ.ಪೂಜಾರಿ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು, ಅಕ್ಷಯ ಮಾಸಿಕದ ಪ್ರಧಾನ ಸಂಪಾದಕ ಡಾ| ಈಶ್ವರ ಅಲೆವೂರು, ಡಾ| ವಿಶ್ವನಾ ಥ್ ಕಾರ್ನಾಡ್, ಬನ್ನಂಜೆ ರವೀಂದ್ರ ಅವಿೂನ್, ಜಯಲಕ್ಷ್ಮೀ ಚಂದ್ರಶೇಖರ್ ಪೂಜಾರಿ, ಅಸೋಸಿಯೇಶನ್‍ನ ಯುವಾಭ್ಯುಧ್ಯಕ್ಷ ನಾಗೇಶ್ ಎಂ. ಕೋಟ್ಯಾನ್, ಮಾಜಿ ಯುವಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕರಾವಳಿಯ ಅವಳಿ ಜಿಲ್ಲೆಯಲ್ಲಿ ಬಿಲ್ಲವರ ಸಂಖ್ಯೆ ಪ್ರಬಲವಾಗಿದೆ. ಆದರೆ ನಾವು ಭಜನೆಗೆ ಮಾತ್ರ ಮುಡಿಪಾಗಿರ ಬಾರದು. ಕುಂದಾಪುರದಿಂದ ಪುತ್ತೂರು ತನಕ ನಮ್ಮಲ್ಲಿನ ಅನೇಕರು ಸಂಸದರು, ಸಚಿವರಾದರು ಅವರವಿಗೆ ಮಾತ್ರ ಹೆಸರು ಮಾಡಿಕೊಂಡರು ಆದರೆ ಬಿಲ್ಲವ ಸಮಾಜಕ್ಕೆ ಏನನ್ನು ಮಾಡಿದರು ಅನ್ನುವ ಜಿಜ್ಞಾಸೆ ನನ್ನಲಿದೆ. ಆದ್ದರಿಂದ ಹಳೆ ತಲೆಮಾರು ಯುವ ತಲೆಮಾರು, ಜನತೆಯನ್ನು ಪ್ರೊತ್ಸಹಿಸಿ, ಬೆಂಬಲಿಸಿ ಮುನ್ನಡೆಸಬೇಕು. ಬಿಲ್ಲವರು ಕೋರಿರೊಟ್ಟಿಯಂತಿದ್ದಾರೆ. ಕೋರಿ ಬಂಟ್ಸ್ ಆದರೆ ರೊಟ್ಟಿ ಪೂಜಾರಿ ಇದ್ದಂತೆ ಎಂದು ರಮಾನಾಥ್ ಕೋಟ್ಯಾನ್ ಅಭಿಪ್ರಾಯ ಪಟ್ಟರು.
ಸಮಾಜದ ಧುರೀಣರು ಒಂದದಾಗ ತೊಂದರೆ, ವಿಚಾರಗಳು ಬರುವುದು ಸರ್ವೇ ಸಾಮಾನ್ಯ. ವ್ಯತ್ಯಾಸಗಳೂ ಬರುವುದು. ಜಯ ಸುವರ್ಣರ ದಕ್ಷ ನೇತೃತ್ವದಲ್ಲಿ15 ಎಕ್ರೆ ಜಾಗ ಪಡುಬೆಳ್ಳೆಯಲ್ಲಿ ಮಾಡಿ ವಿದ್ಯಾಲಯ ರೂಪಿಸಿ ಜಾತಿಮತವಿಲ್ಲದೆ ನೂರಾರು ಮಕ್ಕಳಿಗೆ ಧರ್ಮಾರ್ಥ ಶಿಕ್ಷಣ ಕೊಡುತ್ತಿದ್ದೇವೆ. ಪದವೀಧರ ಕಾಲೇಜ್‍ನ ಕನಸು ಶೀಘ್ರವೇ ನನಸಾಗಲಿದೆ. ನಾವು ಬರೇ ವಿದ್ಯಾರ್ಜನೆಗಾಗಿ ವಾರ್ಷಿಕವಾಗಿ ಸುಮಾರು ಎರಡು ಕೋಟಿ ರೂಪಾಯಿ ವ್ಯಯಿಸುತ್ತಿದ್ದೇವೆ. ಸಮಾಜ ಸೇವೆಯಲ್ಲಿ ಬಿಲ್ಲವರ ಸೇವೆ ಮಹತ್ತರ ಮತ್ತು ಬಹಳಷ್ಟಿದೆ ಆದರೆ ತೋರ್ಪಡಿಸುತ್ತಿಲ್ಲ. ನಾವು ಇನ್ನೂ ಸೇವೆಯೊಂದಿಗೆ ನೆಮ್ಮದಿಯ ಬಾಳನ್ನು ಹರಸೋಣ ಆ ಮೂಲಕ ಬಿಲ್ಲವರು ಒಂದಾಗೋಣ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಚಂದ್ರಶೇಖರ್ ಪೂಜಾರಿ ಕರೆಯಿತ್ತರು.

ಇದೇ ಶುಭಾವಸರದಲ್ಲಿ ಅಸೋಸಿಯೇಶನ್‍ನ ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಉಪಸ್ಥಿತರಿದ್ದು ಮಹಿಳಾ ವಿಭಾಗದ ಸದಸ್ಯೆಯರು ಸಂಕ್ರಾಂತಿ ಸಂಭ್ರಮಿಸಿ ಅರಸಿನ, ಕುಂಕುಮ, ಎಳ್ಳುಂಡೆ, ಬಾಗಿನವನ್ನಿತ್ತು ಹಳದಿ ಕುಂಕುಮ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ನೆರವೇರಿಸಿದರು.

ಕಾರ್ಯಕ್ರಮದ ಅಂಗವಾಗಿ ಗೋರೆಗಾಂವ್ ಸ್ಥಳೀಯ ಕಚೇರಿ ಸದಸ್ಯರು, ಮಕ್ಕಳಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ `ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶಿಸಿದರು.

ಮಮತಾ ಪೂಜಾರಿ ಮತ್ತು ಬಳಗವು ಪ್ರಾರ್ಥನೆಯನ್ನಾಡಿದರು. ಸಚ್ಚೀಂದ್ರ ಕೆ.ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ ಪುರಸ್ಕೃತರಿಗೆ ಅಭಿನಂದನೆಗಳನ್ನಾಡಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಬಬಿತಾ ಜನಾರ್ದನ್ ಕೋಟ್ಯಾನ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆಗೈದರು.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal