About Us       Contact

 


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.19: ಧಾರ್ಮಿಕ ಹಿನ್ನಲೆಯಿರುವ ಅರಸಿನ ಕುಂಕುಮ ಕಾರ್ಯಕ್ರಮ ಒಂದು ಕಾಲದಲ್ಲಿ ಮಹಿಳೆಯರ ಮನೆ ಮನೆಗೆ ಹೋಗಿ ನಡೆಸುವ ಪದ್ಧತಿಯಿತ್ತು. ಆದರೆ ಈಗ ಸಮಯದ ಅಭಾವವಿದ್ದ ಕಾರಣ ಒಂದೇ ಜಾಗದಲ್ಲಿ ಮಹಿಳೆಯರನ್ನು ಒಗ್ಗೂಡಿಸಿ ಆಚರಿಸುವ ಈ ಸಂಭ್ರಮ ಜೀವಕಳೆಹೊಂದಿದೆ. ಇಲ್ಲಿ ಬಹುಸಂಖ್ಯೆಯಲ್ಲಿದ್ದು ಪರಸ್ಪರ ಕುಶಲೋಪರಿ ವಿಚಾರಿಸಿ ಸುಖದುಃಖಗಳಲ್ಲೂ ಭಾಗಿಯಾಗುವ ಅವಕಾಶವೂ ಆಗುತ್ತದೆ. ಇಂತೆಲ್ಲಾ ಕಾರ್ಯಕ್ರಮಗಳಿಂದಾದರೂ ಮಹಿಳೆಯರು ತಮ್ಮ ಮನಸ್ಸನ್ನು ಚಟುವಟಿಕೆಯಲ್ಲಿ ಇರಿಸಬೇಕು. ಯೌವ್ವನದ್ದಾಗಲೀ, ವಿಶ್ರಾಂತಿ ಜೀವನದ್ದಾಗಲೀ ನಮ್ಮ ಬಾಲ್ಯವನ್ನು ಮರುಕಳಿಸಿ ಕೊಂಡಾಗ ನಾವು ಸ್ವತಃ ಸಂಸ್ಕಾರಯುತ, ಸಂಸ್ಕೃತಿವುಳ್ಳರಾಗುತ್ತೇವೆ. ಯಾವುದೇ ಕಾರ್ಯಕ್ರಮ ಯಶಸ್ಸಿನ ಮೂಲವೇ ಮನಸ್ಸು ಆಗಿದ್ದುದೆ. ಮಹಿಳೆಯರು ಮೂಲ ಮನಸ್ಸುವುಳ್ಳವರಾಗಬೇಕು. ಮನಸ್ಸು ಚಟುವಟಿಕೆಗಳಿಂದ ಕೂಡಿದಾಗ ಮನಷ್ಯನು ಆರೋಗ್ಯವಂತನಾಗಿ ನೆಮ್ಮದಿವುಳ್ಳವನಾಗುತ್ತಾನೆ ಎಂದು ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಇದರ ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್ ತಿಳಿಸಿದರು.

ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮ ಇಂದಿಲ್ಲಿ ಮಂಗಳವಾರ ಸಂಜೆ ಸಾಂತಕ್ರೂಜ್ ವಕೋಲಾ ಇಲ್ಲಿನ ಬಾಂದ್ರಾ ಹಿಂದು ಅಸೋಸಿಯೇಶನ್‍ನ ಸಭಾಗೃಹದಲ್ಲಿ ನೆರವೇರಿಸಿದ್ದು, ಮುಖ್ಯ ಅತಿಥಿಯಾಗಿದ್ದು ಪ್ರೇಮಾ ರಾವ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ಎಲ್.ವಿ ಅವಿೂನ್ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಚಿಣ್ಣರ ಬಿಂಬದ ಪ್ರಧಾನ ನಿರ್ದೇಶಕಿ ರೇಣುಕಾ ಪ್ರಕಾಶ್ ಭಂಡಾರಿ, ಬಂಟ್ಸ್ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಇತರ ಪದಾಧಿಕಾರಿಗಳಾದ ಮನೋರಮಾ ಎನ್.ಬಿ ಶೆಟ್ಟಿ, ಲತಾ ಪ್ರಭಾಕರ್ ಶೆಟ್ಟಿ, ರತ್ನಾ ಪಿ.ಶೆಟ್ಟಿ, ಪ್ರಮೋದಾ ಎಸ್.ಶೆಟ್ಟಿ ಅತಿಥಿüಗಳಾಗಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ನಾಡಿನ ಸಮಸ್ತ ವನಿತೆಯರಿಗೆ ಶುಭಕಾಮನೆ ಸಲ್ಲಿಸಿದರು.

ಮನುಕುಲದ ಸಂಸ್ಕಾರಯುತ ಬಾಳಿಗೆÉ ಧಾರ್ಮಿಕ ಆಚರಣೆಗಳು ಪೂರಕವಾಗಿದೆ. ಧಾರ್ಮಿಕ ಭಾವನೆಗಳು ಬಲಗೊಂಡಾಗ ಆರೋಗ್ಯಪೂರ್ಣ, ನೆಮ್ಮದಿಯ ಜೀವನ ಫಲಪ್ರದವಾಗಿ ಮನುಕುಲದ ಬಲವರ್ಧನೆ ಸಾಧ್ಯವಾಗುವುದು. ನಮ್ಮ ಪೂರ್ವಜರು ಮನುಕುಲದ ಹಿತವನ್ನೇ ಬಯಸಿ ಒಂದಷ್ಟು ಕಟ್ಟುಪಾಡುಗಳನ್ನು ರೂಢಿಸಿ ಸಂಸ್ಕಾರಯುತ ಬದುಕನ್ನು ಅರ್ಥಪೂರ್ಣವಾಗಿಸಲು ಪ್ರೇರಕರಾಗಿದ್ದಾರೆ. ಇದನ್ನು ನಾವೂ ಆಚರಿಸಿ ನಮ್ಮ ಮುಂದಿನ ಜನಾಂಗಕ್ಕೂ ಪಸರಿಸುವ ಉದ್ದೇಶ ಮತ್ತು ಮಹಿಳೆಯರ ಸಮಾನತೆ, ಶ್ರೇಯೋನ್ನತಿಗೆ ಪ್ರೇರಕವಾಗುವ ಉದ್ದೇಶದಿಂದ ಸಂಘವು ಈ ಕಾರ್ಯಕ್ರಮ ಆಯೋಜಿಸುತ್ತಿದೆ. ನಾಡಿನ ಸಮಗ್ರ ಸುವಾಸಿನಿಯ ರ ಬಾಳು ಬಂಗಾರವಗಲಿ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಎಲ್.ವಿ ಅವಿೂನ್ ಹಾರೈಸಿದರು ಹಾಗೂ ಬರುವ ಫೆಬ್ರವರಿ.08ನೇ ಶನಿವಾರ ನಡೆಯಲಿರುವ ಸಂಘದ 62ನೇ ವಾರ್ಷಿಕೋತ್ಸವಕ್ಕೆ ಸರ್ವರನ್ನೂ ಆಮಂತ್ರಿಸಿದರು.

ಈ ಸಂದರ್ಭದಲ್ಲಿ ಗೌ| ಪ್ರ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ.ಆರ್ ಬಂಗೇರಾ, ಶಿವರಾಮ ಎಂ.ಕೋಟ್ಯಾನ್, ಸುಮಾ ಎಂ.ಪೂಜಾರಿ, ಶಾಲಿನಿ ಎಸ್.ಶೆಟ್ಟಿ, ವಿಜಯಕುಮಾರ್ ಕೆ. ಕೋಟ್ಯಾನ್, ಲಿಂಗಪ್ಪ ಬಿ.ಅವಿೂನ್, ಉಷಾ ವಿ.ಶೆಟ್ಟಿ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್, ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ, ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು, ಸ್ಥಾನೀಯ ಮಹಿಳೆಯರು ಉಪಸ್ಥಿತರಿದ್ದರು.

ಮಹಿಳಾವೃಂದದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂಡಾ ಸ್ವಾಗತಿಸಿದರು. ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್. ಶೆಟ್ಟಿ ಪ್ರಸ್ತಾವನೆಗೈದ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ಪ್ರೆಶ್ನೋತ್ತರಗಳನ್ನು ನಡೆಸಿ ರಂಜಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಶೈಲಿನಿ ರಾವ್, ಡಾ| ಸಹನಾ ಪೊತಿ ಮತ್ತಿತರ ಗಣ್ಯ ಮಹಿಳೆಯರು ಉಪಸ್ಥಿತ ರಿದ್ದು ಧಾರ್ಮಿಕ ವಿಧಿಯನುಸಾರ ಉಪಸ್ಥಿತ ಮಹಿಳೆಯರಿಗೆ ಪುಷ್ಫ ನೀಡಿ, ಹಣೆಗೆ ಕುಂಕುಮ ತಿಲಕವನ್ನಿತ್ತು, ಬಳೆ, ಎಳ್ಳು-ಬೆಲ್ಲ ಬಾಗಿನವನ್ನಿತ್ತು ಹಳದಿ ಕುಂಕುಮ ಕಾರ್ಯಕ್ರಮ ನೆರವೇರಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal