About Us       Contact

 

ಮುಂಬಯಿ, ಡಿ.24: ವಿರಾರ್‍ನ ಓಂ ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್ ಮತ್ತು ಸ್ಥಾನೀಯ ವಿವಿಧ ಟ್ರಸ್ಟ್‍ಗಳ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸಂಯೋಜನೆಯಲ್ಲಿ ಏಳನೇ ವಾರ್ಷಿಕ ಶ್ರೀನಿವಾಸ ಮಂಗಲ ಮಹೋತ್ಸವ ಇಂದಿಲ್ಲಿ ಶನಿವಾರ ನಲ್ಲಸೋಫರಾ ಪಶ್ಚಿಮದ ಅಲ್ಕಾಪುರಿ ಇಲ್ಲಿನ ಯಶವಂತ್ ವಿವಾ ಟೌನ್‍ಶಿಪ್ ಮೈದಾನದಲ್ಲಿ ರೂಪಿತ ವೇದಿಕೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಇದರ ವಿದ್ವಾನ್ ಆನಂದ ತೀರ್ಥಚಾರ್ಯ ಮತ್ತು ವಿದ್ವಾಂಸರ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲ್ಪಟ್ಟಿತು.

ವಸಾಯಿ-ನಲಾಸೋಪಾರ ಪ್ರದೇಶದ ಜನಮಾನ್ಯ ಧುರೀಣ ಜಯೇಂದ್ರ ವಿಷ್ಣು ಠಾಕೂರ್ (ಭಾಯ್ ಠಾಕೂರ್) ಅವರ ನೇತೃತ್ವ ಹಾಗೂ ನಗರದ ಉದ್ಯಮಿ, ಸಮಾಜ ಸೇವಕ, ಧಾರ್ಮಿಕ ಚಿಂತಕ ಡಾ| ವಿರಾರ್ ಶಂಕರ್ ಬಿ.ಶೆಟ್ಟಿ ಮತ್ತು ಬಳಗದ ಮುಂದಾಳತ್ವ, ಮಹಾರಾಷ್ಟ್ರ ರಾಜ್ಯದ (ವಸಾಯಿ-ವಿರಾರ್) ಶಾಸಕ, ಬಹುಜನ್ ವಿಕಾಸ್ ಆಘಾಡಿ ಮತ್ತು ಓಂ ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್ ವಿರಾರ್ ಅಧ್ಯಕ್ಷ ಹಿತೇಂದ್ರ ಠಾಕೂರ್, ನಲ್ಲಸೋಪಾರ ಕ್ಷೇತ್ರದ ಶಾಸಕ ಕ್ಷಿತಿಜ್ ಹೆಚ್.ಠಾಕೂರ್, ಬೋಯಿಸರ್ ಕ್ಷೇತ್ರದ ಶಾಸಕ ರಾಜೇಶ್ ಪಾಟೀಲ್, ಮಾಜಿ ಮಹಾಪೌರ ರಾಜೀವ್ ಪಾಟೀಲ್, ಮಾಜಿ ಉಪ ಮಹಾಪೌರ ಉಮೇಶ್ ನಾೈಕ್ ಮತ್ತಿತರ ಗಣ್ಯರ ಪ್ರಧಾನ ಉಪಸ್ಥಿತಿ ಹಾಗೂ ಭಕ್ತಗಣದಿಂದ ಜರುಗಿಸಲ್ಪಟ್ಟ ಶ್ರೀ ವೆಂಕಟೇಶ್ವರ ಕಲ್ಯಾಣಂ ಕಾರ್ಯಕ್ರಮದಿಂದ ನಲಾಸೋಫರಾದಲ್ಲಿ ತಿರುಪತಿ ತಿರುಮಲವೇ ಸೃಷ್ಠಿಯಾದಂತ್ತಿತ್ತು.

ಆ ಪ್ರಯುಕ್ತ ನಾಲಾಸೋಫರಾದ ಯಶವಂತ್ ವಿವಾಟೌನ್‍ಶಿಪ್ ಮೈದಾನದಲ್ಲಿ ರಚಿಸಿದ ಭವ್ಯ ವೇದಿಕೆಯಲ್ಲಿ ಸರ್ವಜ್ಞ ವಿದ್ಯಾಪೀಠ ವಿರಾರ್ ಇದರ ವಿದ್ವಾನ್ ಪ್ರಹ್ಲದಾಚಾರ್ಯ ನಾಗರಹಳ್ಳಿ ಈ ಧಾರ್ಮಿಕ ಶಾಸ್ತ್ರದ ಅಗತ್ಯ ತಿಳಿಸಿದ್ದು, ವಿದ್ವಾನ್ ಗೋಪಾಲ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಸುಪ್ರಭಾತಂ, ತೋಮಾಲ ಸೇವಾ, ಕುಂಕುಮಾರ್ಚನೆ, ವಿಷ್ಣು ಸಹಸ್ರ ನಾಮಾರ್ಚನಂ, ತುಲಾಭಾರ ಸೇವೆ ನೆರವೇರಿಸಲ್ಪಟ್ಟವು. ಪೂರ್ವಾಹ್ನ ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ತನ್ನ ಪೌರೋಹಿತ್ಯದಲಿ ಶ್ರೀ ದೇವರಿಗೆ ಸ್ವಸ್ತಿ ಪುಣ್ಯಾಹ ವಾಚನ, ವಾಸ್ತು ರಕ್ಷೆ, ಮಹಾಗಣಪತಿ ಹೋಮ ಮುಂತಾದ ಪೂಜೆಗಳನ್ನು ನೆರವೇರಿಸಿ ನೆರೆದ ಸದ್ಭಕ್ತರನ್ನು ಹರಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಅಪರಾಹ್ನ ತುಲಿಂಜ್ ಇಲ್ಲಿನ ವೇದಾಂತ ಟವರ್‍ನಿಂದ ಕರ್ನಾಟಕ ಕರಾವಳಿಯ ತುಳುನಾಡ ಸಂಸ್ಕಾರ, ಸಂಸ್ಕøತಿ ಧಾರ್ಮಿಕ ಪರಂಪರೆ, ಹಿನ್ನೆಲೆಗಳನ್ನು ಭಿತ್ತರಿಸುವ ವೇಷಭೂಷಣ, ಚೆಂಡೆ ವಾದ್ಯ, ಬ್ಯಾಂಡ್, ಕೊಂಬು ಕಹಳೆ, ಮಹಾರಾಷ್ಟ್ರದ ಜನತೆಯ ಪರಂಪರೆ ವೈಶಿಷ್ಟ್ಯತೆ ಸಾರುವ ಡೋಲು ವಾದ್ಯ ವಾದನಗಳ ನೀನಾದÀ, ಸಾಂಸ್ಕøತಿಕ ವೈಭವಗಳ ಪ್ರಾತ್ಯಕ್ಷಿಕೆ, ವಿವಿಧ ರಾಜ್ಯಗಳ ಭಾರತೀಯ ಶೈಲಿಯ ಜಾನಪದ ನೃತ್ಯಗಳ ಪ್ರಾತ್ಯಕ್ಷಿಕೆಗಳ ಮೇಳೈಕೆ, ಸುಡುಮದ್ದುಗಳ ಅಬ್ಬರ, ಸಾಂಪ್ರ್ರದಾಯಿಕ ಉಡುಪು ಧರಿಸಿದ ಭಕ್ತಸಾಗರದ ಶಿಸ್ತಿನ ನಡೆಯ ಮಧ್ಯೆ ಶ್ರೀಫಲದೊಂದಿಗೆ ಕಲಶ ಹೊತ್ತ ಸುವಾಸಿನಿಯರ ಸ್ವಾಗತದ ವೈವಿಧ್ಯತೆಯೊಂದಿಗೆ ವೈಭವದ ಉತ್ಸವದ ಸಡಗರದಲ್ಲಿ ಪುಷ್ಪಾಲಂಕೃತ ಅಶ್ವಥ ರಥದಲ್ಲಿ ಶ್ರೀ ದೇವಿ, ಭೂದೇವಿಯರ ಮೂರ್ತಿಗಳೊಂದಿಗೆ ವೈಭವೋಪೇತ ಮೆರವಣಿಗೆ (ಭವ್ಯ ಶೋಭಾಯಾತ್ರೆಯಲ್ಲಿ) ಮಹೋತ್ಸವದ ಪುಣ್ಯಧಿ ಕಲ್ಯಾಣ ಮಂಟಪಕ್ಕೆ ಬರಮಾಡಿ ಕೊಳ್ಳಲಾಯಿತು.

ಬಳಿಕ ತಿರುಮಂಜನ ಪುಷ್ಪಯಜ್ಞ ಇತ್ಯಾದಿಗಳೊಂದಿಗೆ ಗೋದೂಲಿ ಲಗ್ನದಲ್ಲಿ (ಸಂಜೆ) ವಿದ್ವಾನ್ ಆನಂದ ತೀರ್ಥಾಚಾರ್ಯ ಇವರ ನೇತೃತ್ವದ ದಾಸಸಾಹಿತ್ಯ, ಭಜನೆ, ಸಂಕೀರ್ತನೆಯೊಂದಿಗೆ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಇದರ ವಿದ್ವಾನ್ ಆನಂದ ತೀರ್ಥಚಾರ್ಯರು ತಮ್ಮ ಪ್ರಧಾನ ಪೌರೋಹಿತ್ಯದಲ್ಲಿ ಸಹ ವಿದ್ವಾಂಸ ಬಳಗವು ಶಾಸ್ತ್ರೋಕ್ತವಾಗಿ ಪಾವಿತ್ರ್ಯತೆಯ ಶ್ರೀನಿವಾಸ ಮಂಗಳ ಉತ್ಸವ ನೆರವೇರಿಸಿ ನೆರೆದ ಸದ್ಭಕ್ತರಿಗೆ ಶ್ರೀ ವೆಂಕಟೇಶ್ವರನ ದರ್ಶನ ಪ್ರಾಪ್ತಿಸಿ ಪ್ರಸಾದ ರೂಪದಲ್ಲಿ ತಿರುಪತಿ ಲಡ್ಡು ವಿತರಿಸಿ ಅನುಗ್ರಹಿಸಿದರು. ಬಳಿಕ ಮಹಾ ಅನ್ನಸಂತರ್ಪಣೆ ನಡೆಸಲ್ಪಟ್ಟಿತು.

ಧಾರ್ಮಿಕ ಮುಂದಾಳುಗಳಾದ ಶೇಖರ್ ನಾೈಕ್, ಮೋಹನ್ ಭಾಯ್, ಶ್ರೀನಿವಾಸ ನಾಯ್ಡು, ಸುನಂದ ಉಪಾಧ್ಯಾಯ ಮತ್ತಿತರರ ಸಹಭಾಗಿತ್ವ ಸಂಘಟಕ ಹರೀಶ್ ಶೆಟ್ಟಿ ಗುರ್ಮೆ ಸೇರಿದಂತೆ ಹಲವಾರು ಸಂಸ್ಥೆಗಳ ಪದಾಧಿಕಾರಿಗಳ, ಸಾವಿರಾರು ಭಕ್ತಾಧಿಗಳ ಪಾಲ್ಗೊಳ್ಳುವಿಕೆಯಲ್ಲಿ ಮಂಗಲ ಮಹೋತ್ಸವ ಜರುಗಿತು.

ವಿೂರಾರೋಡ್‍ನಿಂದ ಡಹಾಣು ವರೆಗಿನ ಸರ್ವ ತುಳು ಕನ್ನಡಿಗರು ಮತ್ತು ಮುಂಬಯಿ ಮಹಾನಗರ ಮತ್ತು ಉಪನಗರಗಳ ವಿವಿಧ ಸಂಘಗಳ ಪದಾಧಿಕಾರಿಗಳು, ಸದಸ್ಯರ ಸ್ವಯಂ ಸೇವಕತ್ವ, ಸೇವೆಗಳೊಂದಿಗೆ, ಭಕ್ತ ಜನಸ್ತೋಮದೊಂದಿಗೆ ವಾರ್ಷಿಕ ಮಂಗಲೋತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿತು. ಇವೆಲ್ಲಕ್ಕೂ ಮಂಗಳೂರು ಮಲ್ಲಿಗೆ ಮತ್ತು ತುಳುನಾಡ ಸಂಪಿಗೆ ಪುಷ್ಪಗಳು ಮತ್ತಷ್ಟು ಪರಿಮಳವನ್ನಿತ್ತವು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal