About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಜ.15: ರಾಷ್ಟ್ರದ ಸಹಕಾರಿ ವ್ಯವಸ್ಥೆಯ ಏರುಪೇರುಗಳ ಸ್ಥಿತಿಗತಿ ಬಗ್ಗೆ ಬ್ಯಾಂಕ್ ಖಾತೆದಾರು ಕಳವಳ ಪಡುವ ಅಗತ್ಯವಿಲ್ಲ. ಇತ್ತೀಚೆಗೆ ಒಂದು ಬ್ಯಾಂಕ್‍ನ ಘಟನೆಯಿಂದ ಗಾಬರಿಗೊಂಡ ಗ್ರಾಹಕರಲ್ಲಿ ಸ್ಥೈರ್ಯ ತುಂಬುವುದು ಬ್ಯಾಂಕ್ ಮಂಡಳಿಯ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಈ ನಮ್ಮ ಬ್ಯಾಂಕ್‍ನ ಗ್ರಾಹಕರ ಸಮಾವೇಶ ಹಮ್ಮಿಕೊಂಡಿದ್ದೇವೆ. ನಮ್ಮದು 103ರ ಸೇವೆಯಲ್ಲಿದ್ದರೂ ಕಿರಿಯ ಬ್ಯಾಂಕ್‍ಗಳಲ್ಲಿ ಒಂದಾಗಿದ್ದು, ಪ್ರಸ್ತುತ ಹಣಕಾಸು ವ್ಯವಹಾರದಲ್ಲಿ ಸದೃಢವಾಗಿ ಉತ್ತಮವಾಗಿ ಕಾರ್ಯನಿರ್ವಾಹಿಸುತ್ತಿದೆ. ಆ ಮೂಲಕ ವರ್ಷಂಪ್ರತಿ ಲಾಭಾಂಶ ಗಳಿಕೆಯಲ್ಲೂ ಬಲಶಾಲಿಯಾಗಿದೆ ಎಂದು ಮೊಡೇಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿಸೋಜಾ ತಿಳಿಸಿದರು.

ಇಂದಿಲ್ಲಿ ಬುಧವಾರ ಸಂಜೆ ಅಂಧೇರಿ ಪೂರ್ವದ ಕೊಹಿನೂರ್ ಕಾಂಟಿನೆಂಟಲ್ ಸಭಾಗೃಹದಲ್ಲಿ ಮೊಡೇಲ್ ಬ್ಯಾಂಕ್ ತನ್ನ ಗ್ರಾಹಕರ ಪ್ರಥಮ ಸಮಾವೇಶ ಆಯೋಜಿಸಿದ್ದು, ಸಮಾವೇಶ ಉದ್ಘಾಟಿಸಿ ನಂತರ ಅಧ್ಯಕ್ಷತೆ ವಹಿಸಿ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಿಸೋಜಾ ನೆರೆದ ಗ್ರಾಹಕರನ್ನುದ್ದೇಶಿಸಿ ಮಾತನಾಡಿದರು.

ನಮ್ಮ ಆಯಾ ಪ್ರಾದೇಶಿಕ ಗ್ರಾಹಕರಲ್ಲಿ ಪ್ರಸ್ತುತ ಆಥಿರ್sಕ ಸ್ಥಿತಿಗತಿ, ಸಹಕಾರಿ ವಲಯದ ಪ್ರಾಬಲ್ಯತೆ ಬಗ್ಗೆ ಮಾಹಿತಿ ನೀಡುವ ಉದ್ದೇಶ ನಮ್ಮದಾಗಿದೆ. ಮೋಡಲ್ ಬ್ಯಾಂಕ್‍ನಲ್ಲಿ ಸದ್ಯ ಉಳಿತಾಯ ಮತ್ತು ಠೇವಣಿ ಹೂಡಿಕೆಯಲ್ಲಿ ನಿತ್ಯ ನಿರಂತರ ಹೆಚ್ಚುವರಿಕೆ ಆಗುತ್ತಿದೆ. ಒಂದು ಬ್ಯಾಂಕ್ ಇನ್ನೊಂದು ಬ್ಯಾಂಕ್‍ನೊಡನೆ ತಲ್ಲೀನವಾದಗ (ಮರ್ಜ್) ಗ್ರಾಹಕರು ಅತಂಕ ಪಡವುದು ಸಹಜ. ಆದರೆ ನಮ್ಮಲ್ಲಿನ ಆರ್‍ಬಿಐ ಮತ್ತು ಸಹಕಾರಿ (ಕೋ.ಅಪರೇಟಿವ್) ಕ್ಷೇತ್ರವು ಕಟ್ಟುನಿಟ್ಟಾಗಿ ಬ್ಯಾಂಕುಗಳ ನಿರ್ವಾಹಣೆ ಮಾಡುತ್ತಿರುವ ಕಾರಣ ಎಲ್ಲಾ ಸಹಕಾರಿ ಬ್ಯಾಂಕುಗಳು ಸುರಕ್ಷಿತವಾಗಿವೆ. ಆದ್ದರಿಂದ ಕೋ.ಅಪರೇಟಿವ್ ಬ್ಯಾಂಕುಗಳಲ್ಲಿನ ವಿಶ್ವಾಸ ಕಳಕೊಳ್ಳದಿರಿ ಎಂದೂ ಆಲ್ಬರ್ಟ್ ಡಿಸೋಜಾ ಮನವರಿಸಿದರು.

ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿಸಿಲ್ವಾ ಮಾತನಾಡಿ ಬ್ಯಾಂಕ್‍ನ ಉಗಮವನ್ನು ಸ್ಥಾಲವಾಗಿ ತಿಳಿಸಿದರು. ಒಂದು ಕಾಲದಲ್ಲಿ ಸಮೂದಾಯದೊಳಗಿದ್ದು ಕಾರ್ಯನಿರತ ಸಹಕಾರಿ ಬ್ಯಾಂಕುಗಳು ಈಗ ಸಾರ್ವಜನಿಕ ಸೇವೆಗೆ ಮೀಸಲ್ಪಟ್ಟ ಕಾರಣ ವ್ಯವಹಾರಿಕವಾಗಿ ವ್ಯಪಿಸಲ್ಪಟ್ಟವು. ಆದ್ದರಿಂದ ಜನಸಾಮಾನ್ಯರೂ ಬ್ಯಾಂಕ್‍ಗಳ ಲಾಭ ಸುಲಭವಾಗಿ, ಅನುಕೂಲಕರವಾಗಿ ಪಡೆಯುವಂತಾಯಿತು. ಈಗಾಗಿ ಬ್ಯಾಂಕುಗಳೆಂದರೆ ಮನುಕುಲದ ಜೀವನದ ಒಂದು ಅಂಗವಾಗಿ ಪರಿಣಮಿಸಲ್ಪಟ್ಟಿವೆ. ಜನಜೀವನದ ಮೂಲಭೂತ ಸೇವೆಯಾಗಿಯೂ ಪರಿವರ್ತನೆಗೊಂಡಿದೆ. ಮೊಡೇಲ್ ಬ್ಯಾಂಕ್ ಶಿಸ್ತುಬದ್ಧವಾಗಿ ಹಂತ ಹಂತವಾಗಿ ಅಭಿವೃದ್ಧಿಯತ್ತ ಸಾಗುತ್ತಿದ್ದ ಕಾರಣ ಕನಿಷ್ಟಾವಧಿಯಲ್ಲಿ ಗರಿಷ್ಠ ಸಾಧನೆ ಗೈಯುವಲ್ಲಿ ಯಶಕಂಡಿದೆ ಎಂದರು.

ಸದ್ಯ ಸಹಕಾರಿ ರಂಗದಲ್ಲಿನ ಅನುಮಾನಗಳು ಗ್ರಾಹಕರಲ್ಲಿ ಶಂಕೆ ಸೃಷ್ಟಿಸಿದೆ. ಆದರೆ ಮೊಡೇಲ್ ಬ್ಯಾಂಕ್‍ನ ಯಾವನೇ ಗ್ರಾಹಕರಲ್ಲಿ ತಮ್ಮ ಹಣದ ಬಗ್ಗೆ ಇಂತಹ ಸಂಶಯ ಹುಟ್ಟಿಲ್ಲ. ಕಾರಣ ಇದೊಂದು ಕುಟುಂಬದ, ಮನೆಮಂದಿಯ ಬ್ಯಾಂಕ್‍ನಂತಿದೆ. ಇನ್ನೂ ಕೂಡಾ ಗ್ರಾಹಕರಲ್ಲಿನ ಭರವಸೆಯಲ್ಲಿ ಸಂದೇಹ ಹುಟ್ಟದಂತೆ ಪ್ರಾಮಾಣಿಕ, ನಿಷ್ಠೆಯೊಂದಿಗೆ ಬ್ಯಾಂಕ್ ವ್ಯವಹರಿಸಲಿದೆ ಎಂದು ಗ್ರಾಹಕರ ಹಣಕಾಸು ಭದ್ರತೆಯ ಬಗ್ಗೆ ಬ್ಯಾಂಕ್‍ನ ಮಾಜಿ ಉಪ ಕಾರ್ಯಾಧ್ಯಕ್ಷ, ಹಾಲಿ ನಿರ್ದೇಶಕ ವಿನ್ಸೆಂಟ್ ಮಥಾಯಸ್ ಮಾಹಿತಿಯನ್ನಿತ್ತರು.

ಸಿಸಿಸಿಐ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ, ಮಾಜಿ ಕಾರ್ಯಾಧ್ಯಕ್ಷ ಹೆನ್ರಿ ಲೋಬೊ, ಕ್ಯಾ| ನಿಶಾಂತ್ ಜೈನ್, ಫ್ರಾಂಕ್ ಡಿಸೋಜಾ, ರಿಚಾರ್ಡ್ ಕೊರೆಯಾ, ಅಲೆಕ್ಸ್ ಕ್ರಾಸ್ತಾ, ಪಿ.ಯು ಥೋಮಸ್, ಹೆನ್ರಿ ಡಿಸೋಜಾ, ರಾಲ್ಫ್ ಪಿರೇರಾ, ಡಿ.ಜೆ.ಎನ್ ಡಿಸಿಲ್ವಾ, ಐಡಾ ರೋಚ್, ಆಲಿನಾ ಫೆರ್ನಾಂಡಿಸ್, ಮೋಹನ್ ಅಗರ್ವಾಲ್ ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಬ್ಯಾಂಕ್‍ನ ಶ್ರೆಯೋನ್ನತಿಗೆ ಯಶ ಕೋರಿದರು.

ಕಾರ್ಯಕ್ರಮದಲ್ಲಿ ಇನ್ಫೆಂಟ್ ಜೀಸಸ್ ಚರ್ಚ್ ಪಂತ್‍ನಗರ್ ಇದರ ಧರ್ಮಗುರು ರೆ| ಫಾ| ನೆಲ್ಸನ್ ಸಲ್ಡಾನ್ಹಾ, ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ನಿರ್ದೇಶಕರುಗಳಾದ ಸಿಎ| ಪೌಲ್ ನಝರೆತ್, ಅಬ್ರಹಾಂ ಕ್ಲೇಮೆಂಟ್ ಲೊಬೋ, ಲಾರೇನ್ಸ್ ಡಿಸೋಜಾ, ನ್ಯಾಯವಾದಿ ಪಿಯುಸ್ ವಾಸ್, ಮರಿಟಾ ಡಿಮೆಲ್ಲೋ, ಜೆರಾಲ್ಡ್ ಕರ್ಡೋಜಾ, ಸಂಜಯ್ ಶಿಂಧೆ ಉಪಸ್ಥಿತರಿದ್ದು ಶುಭಾರೈಸಿದರು. ಕಾರ್ಯಾಧ್ಯಕ್ಷ ಆಲ್ಬರ್ಟ್ ಡಿಸೋಜಾ ಮತ್ತು ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್.ಡಿಸೋಜಾ ಗ್ರಾಹಕರ ಪ್ರೆಶ್ನೆಗಳಿಗೆ ಸಮರ್ಥ ಉತ್ತರಗಳನ್ನಿತ್ತರು.

ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ಹಿರಿಯ ಪ್ರಬಂಧಕಿ (ಹೆಚ್‍ಆರ್) ಬಿಯೆಟಾ ಕಾರ್ವಾಲೋ, ಎಡ್ವರ್ಡ್ ರಾಸ್ಕಿನ್ಹಾ, ರೋನಾಲ್ಡ್ ಡಿಸೋಜಾ, ಜೋಸ್ ಜೋರ್ಜೆ, ಸಬಿತಾ ಪೌಲ್, ತೋಮಸ್ ಕಾರ್ವಾಲೋ, ಮೆಲ್‍ರೋಜ್ ಡಿಸೋಜಾ, ರೈನಾ ಫೆರ್ನಾಂಡಿಸ್ ಸೇರಿದಂತೆ ಅಪಾರ ಸಂಖ್ಯೆಯ ಗ್ರಾಹಕರು ಉಪಸ್ಥಿತರಿದ್ದರು. ಉಪ ಪ್ರಧಾನ ಪ್ರಬಂಧಕ ಝೆನೊನ್ ಡಿಕ್ರೂಜ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಲಿಯಂ ಸಿಕ್ವೇರಾ ವಂದಿಸಿದರು.

 

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal