About Us       Contact

 

(ವರದಿ / ಚಿತ್ರ: ರೋನ್ಸ್ ಬಂಟ್ವಾಳ್)


ಮುಂಬಯಿ, ಜ.14: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗವು ಇಂದಿಲ್ಲಿ ಮಂಗಳವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ವಾರ್ಷಿಕ ಮಕರ ಸಂಕ್ರಮಣ ಸಂಭ್ರಮ ಸಂಭ್ರಮಿಸಿದ್ದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿತು.

ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ಸಾರಥ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಜ್ಯೋತಿ ದೀಪಕ್ ದೇಸಾಯಿ ಮುಖ್ಯ ಅತಿಥಿsಯಾಗಿ ಚೆಂಬೂರು ಕರ್ನಾಟಕದ ಫ್ರೌಢ ಶಾಲಾ ಅಧ್ಯಾಪಕಿ, ನೃತ್ಯ ಸಂಯೋಜಕಿ ವಿಜೇತ ಮಹೇಶ್ ಸುವರ್ಣ, ಸಮಾಜ ಸೇವಕಿಯರಾದ ಗೀತಾ ನಾರಾಯಣ ಸಾಲ್ಯಾನ್, ಕೃಪಾ ಭೋಜರಾಜ್ ಕುಳಾಯಿ, ಸುಧಾ ಎಲ್.ವಿ ಅಮೀನ್, ಜಯಲಕ್ಷ್ಮೀ ಚಂದ್ರಶೇಖರ್ ಪೂಜಾರಿ, ಸವಿತಾ ಗಂಗಾಧರ್ ಪೂಜಾರಿ ಮತ್ತು ವೀಣಾ ದಯಾನಂದ್ ಪೂಜಾರಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು, ದೀಪ ಬೆಳಗಿಸಿ ಸಂಕ್ರಾತಿ ಹಬ್ಬ ಮತ್ತು ಅರಸಿನ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.

ಜಯಂತಿ ವಿ.ಉಳ್ಳಾಲ್ ಮಾತನಾಡಿ ಮಹಿಳೆಯರು ಬರೇ ಅಡುಗೆ ಮಾಡಲು, ಉಡುಗೆ ಧರಿಸಿ ಶೃಂಗಾರಮಯವಾಗಿರಲು ಮಾತ್ರ ಮೀಸಲಾಗಬಾರದು. ತಮ್ಮಲ್ಲಿನ ಅಪ್ರತಿಮ ಪ್ರತಿಭೆಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಾನ್ವಿತರಾಗಿ ಬೆಳಾಗುವಂತಾಗಬೇಕು ಎಂದರು.

ಪುರುಷ ಪ್ರಧಾನ ಸಮಾಜದಲ್ಲಿ ಈಗ ಮಹಿಳೆಯರೂ ಸಮಾನತೆಯನ್ನು ಸಾಧಿಸುವಲ್ಲಿ ಸಫಲರಾಗಿದ್ದಾರೆ. ಸ್ತ್ರೀಯರ ಸಹಯೋಗದಿಂದಲ್ಲೇ ಸಂಸ್ಕೃತಿಯುತ ಸಮಾಜ ನಿರ್ಮಾಣ ಸಾಧ್ಯವಾಗುವುದು ಎಂದು ಚಂದ್ರಶೇಖರ್ ಪೂಜಾರಿ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶ್ರೀನಿವಾಸ ಆರ್.ಕರ್ಕೇರ, ಗೌ| ಜೊತೆ ಕಾರ್ಯದರ್ಶಿ ಕೇಶವ ಕೆ.ಕೋಟ್ಯಾನ್, ರವೀಂದ್ರ ಎ.ಶಾಂತಿ, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ ಪ್ರಸ್ತಾವನೆಗೈದರು. ಜಯಂತಿ ವಿ.ಉಳ್ಳಾಲ್ ಸ್ವಾಗತಿಸಿದರು. ಯಶೋಧಾ ಎನ್.ಪೂಜಾರಿ, ಪೂಜಾ ಪುರುಷೋತ್ತಮ್ ಕೋಟ್ಯಾನ್ ಮತ್ತು ಶಾಂತ ಪೂಜಾರಿ ಪ್ರಾರ್ಥನೆಯನ್ನಾಡಿದರು. ರೇಖಾ ಸದಾನಂದ ಅತಿಥಿಗಳನ್ನು ಪರಿಚಯಿಸಿದರು. ಮಹಿಳಾ ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್.ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಜಯಂತಿ ಎಸ್. ಕೋಟ್ಯಾನ್ ಕೃತಜ್ಞತೆ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಉಪ ಕಾರ್ಯಧ್ಯಕ್ಷೆಯರಾದ ಪ್ರಭಾ ಕೆ.ಬಂಗೇರ ಮತ್ತು ಗಿರಿಜಾ ಚಂದ್ರಶೇಖರ್, ಜೊತೆ ಕಾರ್ಯದರ್ಶಿ ಕುಸುಮಾ ಅವಿೂನ್, ಕಾರ್ಯಕಾರಿ ಸಮಿತಿ ಸದಸ್ಯೆಯರು, ವಿಶೇಷ ಆಮಂತ್ರಿತ ಸದಸ್ಯೆಯರು, ಅಸೋಸಿಯೇಶನ್‍ನ ಸ್ಥಳೀಯ ಸಮಿತಿಗಳ ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಮಹಿಳಾ ಪದಾಧಿಕಾರಿಗಳು ಬಳೆ, ವೀಳೆದೆಲೆ, ತಂಬೂಲ, ಎಳ್ಳುಂಡೆ ನೀಡಿ ಹಣೆಗೆ ಹಳದಿ ಕುಂಕುಮ ಹಚ್ಚಿ ಮಕರ ಸಂಕ್ರಮಣ ಸಂಭ್ರಮಿಸಿದರು.

ಕೇಂದ್ರ ಕಛೇರಿಯ ಮಹಿಳಾ ಸದಸ್ಯೆಯರು ಫ್ಯಾಶನ್ ಶೋ ನಡೆಸಿದರು. ಅಸೋಸಿಯೇಶನ್‍ನ ವಿವಿಧ ಸ್ಥಳೀಯ ಕಛೇರಿಯ ಮಹಿಳಾ ಸದಸ್ಯೆಯರು ವಿವಿಧ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿ ರಂಜಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal