About Us       Contact

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.06: ನೂತನ 2020ನೇ ಸಂವತ್ಸರದ ಶುಭಾವಸರದಲ್ಲಿ ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯು ಬಂಟ ಬಾಂಧವರು ಮತ್ತು ನಾಡಿನ ಸಮಸ್ತ ಜನತೆಯ ಕಲ್ಯಾಣಾರ್ಥವಾಗಿ ಇಂದಿಲ್ಲಿ ಸೋಮವಾರ ವೈಕುಂಠ ಏಕಾದಶಿಯ ಪವಿತ್ರ ದಿನದ ಪರ್ವಕಾಲದಲ್ಲಿ ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿಸಿತು.

ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಸಾರಥ್ಯ ಮತ್ತು ಪದಾಧಿಕಾರಿಗಳ ಸಹಕಾರದೊಂದಿಗೆ ನಡೆಸಲ್ಪಟ್ಟ ಧಾರ್ಮಿಕ ಕಾರ್ಯಕ್ರಮಕ್ಕೆ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಚಾಲನೆಯನ್ನೀಡಿದರು.

ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಭಜನೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿದ್ದು ಬಳಿಕ ಸಂಘದ ಆವರಣದಲ್ಲಿನ ಶ್ರೀ ಮಹಾವಿಷ್ಣು ಮಂದಿರದಲ್ಲಿ ಜ್ಞಾನ ಮಂದಿರದಲ್ಲಿ ಸಾಂಪ್ರದಾಯಿಕ ಪೂಜೆ ನಡೆಸಿ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಅಣಿಗೊಳಿಸಲಾಯಿತು. ದೇವಸ್ಥಾನದ ಪ್ರಧಾನ ಆರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ಮಹಾಪೂಜೆ, ಮಂಗಳಾರತಿ ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಬಳಿಕ ಭವ್ಯ ಮೆರವಣಿಗೆಯಲ್ಲಿ ಪುಷ್ಪಾಲಂಕೃತ ಸಪ್ತಗಿರೀಶ ಶ್ರೀ ವೆಂಕಟೇಶ್ವರ ದೇವರ ಕಲ್ಯಾಣ ಮಾಂಗಲ್ಯವನ್ನು ಚೆಂಡೆವಾದ್ಯಗಳ ನಿನಾದದೊಂದಿಗೆ ವೈಭವೋಪೇತ ಮೆರವಣಿಗೆಯಲ್ಲಿ ಪೂಜಾ ವೇದಿಕೆಗೆ ಬರಮಾಡಿ ಕೊಳ್ಳಲಾಯಿತು.

ಸರ್ವೈಕಾದಶಿ ಪುತ್ರದ ವೈಕುಂಠ ಏಕಾದಶಿಯ ಗೋದೂಲಿ ಲಗ್ನದಲ್ಲಿ (ಸಂಜೆ) ದಾಸರ ಸಾಹಿತ್ಯ, ಹರಿನಾಮ ಸಂಕೀರ್ತನೆಗಳಲ್ಲಿ ಶ್ರೀ ಶ್ರೀವಾರಿ ಫೌಂಡೇಶನ್ ಬೆಂಗಳೂರು ಇದರ ವಿದ್ವಾನ್ ಡಾ| ವೆಂಕಟೇಶ ಮೂರ್ತಿ ಮತ್ತು ಪುರೋಹಿತ ವರ್ಗವು ಶಾಸ್ತ್ರೋಕ್ತವಾಗಿ ಪಾವಿತ್ರ್ಯತೆಯ ಶ್ರೀನಿವಾಸ ಕಲ್ಯಾಣ ಧಾರ್ಮಿಕ ಮಂಗಳ ಉತ್ಸವ ನೆರವೇರಿಸಿ ನೆರೆದ ಸಮಸ್ತ ಭಕ್ತಾದಿಗಳಿಗೆ ಶ್ರೀದೇವರ ದರ್ಶನ ಪ್ರಾಪ್ತಿಸಿ ಮಹಾ ಪ್ರಸಾದವನ್ನಿತ್ತು ಹರಸಿದರು.

ಈ ಶುಭಾವಸರದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಹರೀಶ್ ಶೆಟ್ಟಿ, ಗೌರವ ಅತಿಥಿsಗಳಾಗಿ ಹೊಟೇಲ್ ಶಾರದಾ ದಾದರ್ ಇದರ ಅಶೋಕ್ ಎನ್.ಶೆಟ್ಟಿ ಮತ್ತು ಅನಿತಾ ಎ.ಶೆಟ್ಟಿ, ಬಂಟರ ಸಂಘದ ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ, ಮಾಜಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಸಮಾಜ ಸೇವಕರಾದ ರಘುರಾಮ ಕೆ.ಶೆಟ್ಟಿ ಬೋಳ, ಅಪ್ಪಣ್ಣ ಎಂ.ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಉಳ್ತೂರು ಮೋಹನದಾಸ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಜಗನ್ನಾಥ ಎನ್.ರೈ, ಕರುಣಾಕರ ಎಂ. ಶೆಟ್ಟಿ, ಪಾಂಡುರಂಗ ಎಸ್.ಶೆಟ್ಟಿ, ಬಂಟ್ಸ್ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ.ಶೆಟ್ಟಿ ಪ್ರಮುಖರಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಂಟರ ಸಂಘದ ಪಶ್ಚಿಮ ವಲಯ ಸಂಚಾಲಕ ಡಾ| ಪ್ರಭಾಕರ್ ಶೆಟ್ಟಿ ಬೋಳ, ಡಾ| ಆರ್.ಕೆ ಶೆಟ್ಟಿ ಮತ್ತು ಆನಿತಾ ಆರ್.ಕೆ ಶೆಟ್ಟಿ ಪೂಜಾಧಿಗಳು ಭಾಗವಹಿಸಿದ್ದು, ಅಂಧೇರಿ ಬಾಂದ್ರಾ ಸಮಿತಿ ಸಂಚಾಲಕ ಡಿ.ಕೆ ಶೆಟ್ಟಿ ಪೊವಾಯಿ, ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್.ಜಿ ಶೆಟ್ಟಿ, ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ, ಕೋಶಾಧಿಕಾರಿ ಕರುಣಾಕರ್ ವಿ.ಶೆಟ್ಟಿ, ಜತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರು, ಜೊತೆ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂ ಡಾ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿಷೇಕ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ನಾನಯರ ಗರಡಿ, ನಿಧಿ ಸಂಗ್ರಹ ಸಮಿತಿ ಕಾರ್ಯಾಧ್ಯಕ್ಷ ಯಶವಂತ ಶೆಟ್ಟಿ, ಸದಸ್ಯತ್ವ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಲಕ್ಷ ್ಮಣ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಸವಿತಾ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ, ವೈವಾಹಿಕ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ, ದತ್ತು ಸ್ವೀಕಾರ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಉದ್ಯೋಗ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಳ್ವ, ವೈದ್ಯಕೀಯ ಸಮಿತಿ ಕಾರ್ಯಾಧ್ಯಕ್ಷ ಆನಂದ್ ಶೆಟ್ಟಿ, ಕಾರ್ಯದರ್ಶಿ ವಜ್ರಾ ಪೂಂಜ ಕೋಶಾಧಿಕಾರಿ ಪ್ರೇಮಾ ಶೆಟ್ಟಿ, ಜತೆ ಕಾರ್ಯದರ್ಶಿ ಜ್ಯೋತಿ ಆರ್.ಶೆಟ್ಟಿ, ಜತೆ ಕೋಶಾಧಿಕಾರಿ ಉಷಾ ವಿ.ಶೆಟ್ಟಿ, ಅಂಧೇರಿ ಬಾಂದ್ರಾ ಸಮಿತಿಯ ಸದಸ್ಯರನೇಕರು ಸೇರಿದಂತೆ ಬಾರೀ ಸಂಖ್ಯೆಯ ಭಗವದ್ಭಕ್ತರು ಪಾಲ್ಗೊಂಡು ಶ್ರೀ ವೆಂಕಟೇಶ್ವರ ದೇವರ ಕೃಪೆಗೆ ಪಾತ್ರರಾದರು.

ಶ್ರೀ ವೆಂಕಟೇಶ್ವರನ ಭಕ್ತಿ ಆರಾಧನೆಯೊಂದಿಗೆ ನಮ್ಮ ಭಾವೀ ಜನಾಂಗವು ಧರ್ಮ ರಕ್ಷಣೆಯಲ್ಲಿ ತೊಡಗಿಸಲು ಮತ್ತು ಹಿಂದೂ ಸನಾತನ ಧರ್ಮವನ್ನು ಸಂರಕ್ಷಿಸುವಲ್ಲಿ ಯುವಪೀಳಿಗೆಯನ್ನು ಉತ್ತೇಜಿಸಿ ಧರ್ಮನಿಷ್ಠೆ, ಆಧ್ಯಾತ್ಮಿಕತೆ ಪುನಶ್ಚೇತನ ಗೊಳಿಸುವ ಉದ್ದೇಶವೇ ಈ ಧಾರ್ಮಿಕ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಮೂಲಕ ಅಖಂಡ ರಾಷ್ಟ್ರದ ಕಲ್ಯಾಣ, ಶಾಂತಿ ಸೌಹಾರ್ದತೆ, ಸಮಗ್ರತೆ, ಸರ್ವೋನ್ನತಿಗಾಗಿಯೂ ನಮ್ಮ ಆಶಯವಾಗಿದೆ ಎಂದು ಡಾ| ಆರ್.ಕೆ ಶೆಟ್ಟಿ ತಿಳಿಸಿದರು.

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal