About Us       Contact

 

(ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಂಬಯಿ, ಜ.07: ಪರಶುರಾಮನ ಸೃಷ್ಠಿಯ ತುಳುನಾಡು ಸಾಮರಸ್ಯದ ಗೂಡು ಅಂದೆಣಿಸಿ ಜಾಗತಿಕವಾಗಿ ಹೆಸರು ಮಾಡಿದ ಮಾಧುರ್ಯತಾ ಮತ್ತು ಮರ್ಯಾದಸ್ಥ ನಾಡು. ಇಂತಹ ತುಳುನಾಡಿನಲ್ಲಿ ಹಲವಾರು ಜನಾಂಗದ ಜನತೆ ವಾಸವಾಗಿದ್ದರೂ ಮಾತೃಭಾಷೆಕ್ಕಿಂತಲೂ ತುಳುಭಾಷೆಯನ್ನೇ ಪ್ರಧಾನವಾಗಿಸಿ ಸೌಹಾರ್ದತಾ ಭಾವದಿಂದ ಬದುಕುತ್ತಿದ್ದಾರೆ. ಬಹುಜನಾಂಗಿಯರ ಈ ತುಳುಭಾಷೆಗೆ ಮೊದಲಾಗಿ ರಾಜ್ಯ ಬಳಿಕ ರಾಷ್ಟ್ರ ಮನ್ನಣೆ ಅತ್ಯವಶ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಕರ್ಮಭೂಮಿ ಗುಜರಾತ್‍ನಲ್ಲಿ ತುಳು ಭಾಷಾಭಿಯಾನ ನಡೆಸಿ ಭಾಷಾ ಉಳುವಿಗಾಗಿ ಸುಮಾರು ಒಂದು ಕೋಟಿ ವೆಚ್ಚ ಮಾಡಲಾಗುವುದು ಎಂದು ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಗುರುವಾಯನಕೆರೆ ತಿಳಿಸಿದರು.

ಬರೋಡಾ ಅಲ್ಲಿನ ಗುಜರಾತ್ ರಿಫೈನರಿ ಕಮ್ಯುನಿಟಿ ಸಭಾಗೃಹದಲ್ಲಿ ಕಳೆದ ರವಿವಾರ ತುಳು ಸಂಘ ಬರೋಡಾ ಸಭ್ರಮಿಸಿದ ತುಳು ಸಂಘದ 31ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಸಂಘದ ಮತ್ತು ಶಶಿ ಶೆಟ್ಟಿ ಅಭಿಮಾನಿ ಬಳಗದ ಪರವಾಗಿ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಗೆ ಒಂದು ಲಕ್ಷ ಮೊತ್ತವನ್ನು ಪ್ರದಾನಿಸಿ ಶಶಿಧರ ಶೆಟ್ಟಿ ಮಾತನಾಡಿದರು. ಗುಜರಾತ್‍ನ ಹಿರಿಯ ಉದ್ಯಮಿ, ಸಂಘಟಕ, ಸಮಾಜ ಸೇವಕ ಜಯರಾಮ ಶೆಟ್ಟಿ ಸುರತ್ಕಲ್ ದೀಪಹಚ್ಚಿ ಸಮಾರಂಭ ಉದ್ಘಾಟಿಸಿದರು.

ಸಮಾರಂಭದಲ್ಲಿ ಅತಿಥಿs ಅಭ್ಯಾಗತರಾಗಿ ತುಳು ಸಂಘ ಅಹ್ಮದಾಬಾದ್ ಗೌರವಾಧ್ಯಕ್ಷ ಮೋಹನ್ ಸಿ.ಪೂಜಾರಿ, ತುಳುನಾಡ ಐಸಿರಿ ವಾಪಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಅಂಕ್ಲೇಶ್ವರ ಅಧ್ಯಕ್ಷ ಶಂಕರ್ ಕೆ.ಶೆಟ್ಟಿ, ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ದಿನೇಶ್ ಶೆಟ್ಟಿ, ಗೌರವಾನ್ವಿತ ಅತಿಥಿಗಳಾಗಿ ಸೂರತ್‍ನ ಉದ್ಯಮಿ, ಸಮಾಜ ಕಾರ್ಯಕರ್ತ ರಾಧಾಕೃಷ್ಣ ಶೆಟ್ಟಿ, ತುಳು ಸಂಘ ಅಂಕಲೇಶ್ವರ ಗೌರವಾಧ್ಯಕ್ಷ ರವಿನಾಥ್ ವಿ.ಶೆಟ್ಟಿ, ತುಳು ಸಂಘ ಅಹ್ಮದಾಬಾದ್ ಅಧ್ಯಕ್ಷ ಅಪ್ಪು ಎಲ್.ಶೆಟ್ಟಿ, ಪಟ್ಲ ಫೌಂಡೇಶನ್ ಗುಜರಾತ್ ಘಟಕದ ಅಧ್ಯಕ್ಷ ಅಜಿತ್ ಎಸ್.ಶೆಟ್ಟಿ, ತುಳು ಸಂಘ, ಬಂಟರ ಸಂಘ ಅಹ್ಮದಾಬಾದ್ ಅಧ್ಯಕ್ಷ ನಿತೇಶ್ ಶೆಟ್ಟಿ, ಬಿಲ್ಲವ ಸಂಘ ಗುಜರಾತ್ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಜಯರಾಮ ಶೆಟ್ಟಿ ಇವರಿಗೆ ಅಭಿನಂದನಾ ಗೌರವದೊಂದಿಗೆ `ತುಳುರತ್ನ' ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಸುಮಾರು ಮೂರು ದಶಕಗಳ ಹಿಂದೆ ಸಮಾನ ಮನಸ್ಕರಾದ ತುಳುವರಾದ ನಾವು ಬರೋಡಾದಲ್ಲಿ ತುಳು ಸಂಘ ಅಸ್ತಿತ್ವಕ್ಕೆ ತರುವಾಗಲೇ ನಮ್ಮ ಮಾತೃಭಾಷಾ ವಿಸ್ತರಣೆ ಜೊತೆ ಸ್ವಸಂಸ್ಕೃತಿಯ ಉಳಿವನ್ನು ಬಯಸಿದ್ದೇವು. ಅಂದಿನ ನಮ್ಮ ಚಿಂತನೆಯನ್ನು ಇಂದಿನ ಯುವ ಪೀಳಿಗೆ ಮನವರಿಸಿ ಮುನ್ನಡೆಸುತ್ತಿದ್ದಾರೆ. ನಮ್ಮ ಯೋಚನೆಗಳನ್ನು ಪರಿಪೂರ್ಣ ಗೊಳಿಸುವಲ್ಲಿ ಪರಶುರಾಮನ ಅವತಾರ ಎಂಬಂತೆ ಶಶಿಧರ ಶೆಟ್ಟಿ ಅವರ ಸಾರಥ್ಯ ಲಭಿಸಿದ್ದು ತುಳುವರ ಭಾಗ್ಯವೇ ಸರಿ ಎಂದು ಗೌರವಕ್ಕೆ ಉತ್ತರಿಸಿ ಜಯರಾಮ ಶೆಟ್ಟಿ ತಿಳಿಸಿದರು.

ಅತಿಥಿಗಳು ಸಾಂದರ್ಭಿಕವಾಗಿ ಮಾತನಾಡಿ ತುಳು ಸಂಘದ ಕಾರ್ಯವೈಖರಿಯನ್ನು ಪ್ರಶಂಸಿಸಿ ತುಳುರತ್ನ ಪರಸ್ಕೃತ ಜಯರಾಮ ಶೆಟ್ಟಿ ಅವರ ಅನುಪಮ ಸೇವೆ ಸ್ಮರಿಸಿ ಅಭಿನಂದಿಸಿ ಶತಾಯುಷ್ಯ ಹಾರೈಸಿದರು. ತುಳು ಸಂಘ ಬರೋಡಾ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಪುರಸ್ಕೃತರನ್ನು ಪರಿಚಯಿಸಿದ್ದು, ಜಿನರಾಜ್ ಪೂಜಾರಿ ಸನ್ಮಾನಪತ್ರ ವಾಚಿಸಿದರು.

ಸಂಘದ ಪುಟಾಣಿಗಳು ಪ್ರಾರ್ಥನೆಯನ್ನಾಡಿದರು. ಕೋಶಾಧಿಕಾರಿ ವಾಸು ಪೂಜಾರಿ, ಮಹಿಳಾಧ್ಯಕ್ಷೆ ಡಾ| ಶರ್ಮಿಳಾ ಎಂ.ಜೈನ್, ಮಹಿಳಾ ಕಾರ್ಯದರ್ಶಿ ಮಂಜುಳಾ ಬಿ.ಗೌಡ ಸೇರಿದಂತೆ ಇತರ ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾಧ್ಯಕ್ಷೆ ಡಾ| ಶರ್ಮಿಳಾ ಎಂ.ಜೈನ್ ವಂದನಾರ್ಪಣೆಗೈದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ತುಳು ಸಂಘದ ಸದಸ್ಯೆಯರು, ಮಕ್ಕಳು ವೈವಿಧ್ಯಮಯ ನೃತ್ಯಾವಳಿ, ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ `ಬೇಡರ ಕಣ್ಣಪ್ಪ' ಯಕ್ಷಗಾನ ಪ್ರದರ್ಶಿಸಿದರು.

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal