About Us       Contact

 

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ : ಇಂದು ಎರಡು ಕೃತಿಗಳ ಮೂಲಕ ಒಂದೊಂದು ವಿಷಯಗಳು ಲೋಕಾರ್ಪಣೆ ಗೊಂಡಿವೆ. ಸಂಬಂಧಗಳನ್ನು ಇಟ್ಟುಕೊಳ್ಳಬೇಕಾದರೆ ದೊಡ್ಡ ಮನಸ್ಸು ಬೇಕು. ಮುಂಬಯಿ ತುಳು ಸಾಹಿತ್ಯ ಕಂಡ ಒಂದು ವಿರಾಟ್ ರೂಪ ಸಿಮಂತೂರು ಅವರದ್ದು. ಇಂದು ನಮಗೆ ವಿಚಾರದ ಕೊರತೆ ಇದೆ. ಬದುಕು ಕಟ್ಟುವ ನಾವೂ ಇಂತಹ ಕೃತಿಗಳಿಂದ ವಿಚಾರಗಳನ್ನು ಓದಿ ಮನನ ಮಾಡಬೇಕು ಎಂದು ಕಲಾ ಜಗತ್ತು (ರಿ.) ಮುಂಬಯಿ ಸಂಸ್ಥೆಯ ಅಧ್ಯಕ್ಷ ಡಾ| ತೋನ್ಸೆ ವಿಜಯ ಕುಮಾರ್ ಶೆಟ್ಟಿ ತಿಳಿಸಿದರು.

ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸಭಾಗೃಹದ ಲ್ಲಿ ಪೂಜಾ ಪ್ರಕಾಶನ ಮುಂಬಯಿ ಪ್ರಕಾಶಿತ ಪ್ರಶಸ್ತಿ ಪುರಸ್ಕೃತ ಕವಿ ಶಿಮಂತೂರು ಚಂದ್ರಹಾಸ ಸುವರ್ಣ ರಚಿತ ವೈಚಾರಿಕ ಲೇಖನಗಳ ಸಂಕಲನ `ಹಿಲಾಲು' ಹಾಗೂ ಪ್ರಶಸ್ತಿ ವಿಜೇತ ಕವಯತ್ರಿ, ಲೇಖಕಿ ಶಾರದಾ ಆನಂದ್ ಅಂಚನ್ ರಚಿತ ವೈದ್ಯಕೀಯ ಲೇಖನಗಳ ಸಂಕಲನ `ಆರೋಗ್ಯ-ಆಯುಷ್ಯ' ಕೃತಿಗಳ ಬಿಡುಗಡೆ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ಸಭಾಧ್ಯಕ್ಷತೆ ವಹಿಸಿ ವಿಜಯ ಕುಮಾರ್ ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ಮುಖ್ಯ ಅತಿಥಿüಯಾಗಿದ್ದರು. ಅತಿಥಿ ಅಭ್ಯಾಗತರಾಗಿದ್ದ ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ಯಾರು ಅವರು `ಹಿಲಾಲು' ಕೃತಿ ಮತ್ತು `ಆರೋಗ್ಯ-ಆಯುಷ್ಯ' ಕೃತಿಯನ್ನು ಏಕಕಾಲಕ್ಕೆ ಬಿಡುಗಡೆ ಗೊಳಿಸಿದರು. ಮೊಗವೀರ ಮಾಸಿಕದ ಸಂಪಾದಕ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಪುಸ್ತಕಗಳನ್ನು ಪರಿಚಯಿಸಿದರು.

ತುಳು ನಾಡಿಗೆ, ಸಂಸ್ಕೃತಿಗೆ ಆಚಾರ ವಿಚಾರಗಳಿಗೆ ಸಂಬಂದಿಸಿದ ವಿಷಯಗಳನ್ನು ಅನುಭವಿಸಿ ಬರೆದಂತಹ ಕೃತಿಗಳು ಇಂದು ಬಿಡುಗಡೆಗೊಂಡವುಗಳು. ಆದ್ದರಿಂದಲೇ ಇವು ಅತ್ಯುತ್ತಮ ಕೃತಿಗಳಾಗಿ ಮೂಡಿಬಂದಿದೆ ಎಂದು ಸುರೇಂದ್ರಕುಮಾರ್ ತಿಳಿಸಿದರು.

ರಮೇಶ್ ಶೆಟ್ಟಿ ಶಿಮಂತೂರು ಹಾಗೂ ಶಾರದಾ ಅಂಚನ್ ಈಗಾಗಲೇ ಸಾರಸ್ವತ ಲೋಕಕ್ಕೆ ವೈವಿಧ್ಯ ಪೂರ್ಣವಾದ ಕೃತಿಗಳನ್ನು ನೀಡಿದ್ದಾರೆ. ಸುಮಾರು ಹದಿನೇಳು ಕೃತಿಗಳನ್ನು ನೀಡಿರುವ ಶಿಮಂತೂರು ನನ್ನಂತಹವರಿಗೆ ಗುರು ಸ್ಥಾನದಲ್ಲಿರುವವರು. ಇಬ್ಬರಿಗೂ ಶುಭವನ್ನು ಕೋರುತ್ತಾ ಇವರ ಕೃತಿಗಳು ಇನ್ನಷ್ಟು ಸಹೃದಯವನ್ನು ತಟ್ಟಲಿ ಎಂದು ನನ್ನ ಆಶಯ ಮಾತನಾಡಿ ಎಂದರು.

ಅಶೋಕ ಸುವರ್ಣ ಮಾತನಾಡಿ ಊರಿನ ಕಟ್ಟು ಕಟ್ಟಲೆಗಳಲ್ಲಿ ಬರುವ ಹಿಲಾಲು ಪವಿತ್ರವಾದ ಒಂದು ಧಾರ್ಮಿಕ ಕ್ರಿಯೆ. ಅದನ್ನು ದಾಖಲಿಸುವ ಕೆಲಸ ಶಿಮಂತೂರು ಈ ಕೃತಿಯಲ್ಲಿ ಮಾಡಿದ್ದಾರೆ. ತುಳುನಾಡಿನ ಬಗ್ಗೆ ಅಧ್ಯಯನ ಮಾಡುವವರಿಗೆ ಒಂದು ಆಕಾರ ಗ್ರಂಥವಾಗಬಲ್ಲ ಈ ಕೃತಿ ಶಿಮಂತೂರು ಅವರ ಇತರ ಕೃತಿಗಳಿಗಿಂತ ಬಹಳ ಮಹತ್ವದ ಕೃತಿ ಎಂದು ಶಿಮಂತೂರು ಅವರ ಹಿಲಾಲು ಕೃತಿ ಪರಿಚಯಿಸಿದರು.ಹಾಗೂ ಮನುಷ್ಯನಿಗೆ ಸಂಬಂಧಪಟ್ಟ ಸೂಕ್ಷ್ಮದಿಂದ ಅತಿ ಮಹಾರೋಗಗಳವರೆಗೆ ಸುಮಾರು 27 ರೋಗಗಳ ಬಗ್ಗೆ ಅವುಗಳ ಕಾರಣ, ಅದಕ್ಕೆ ಪರಿಹಾರ ಇತ್ಯಾದಿಯಾಗಿ ವಿವರವಾದ ಅಧ್ಯಯನ ಪೂರ್ಣ ಲೇಖನಗಳನ್ನು ನೀಡಿದ್ದಾರೆ ಎಂದು ಎರಡೂ ಕೃತಿಗಳು ಇಂದಿನ ಜನರಿಗೆ ಅನಿವಾರ್ಯವಾಗಿ ಬೇಕಾಗಿರುವಂತಹ ಕೃತಿಗಳಾಗಿವೆ ಎಂದರು.

ಪೂಜಾ ಪ್ರಕಾಶನದ ಪ್ರಕಾಶಕ, ಕೃತಿಕಾರ ಚಂದ್ರಹಾಸ ಸುವರ್ಣ ಮತ್ತು ಕೃತಿಕರ್ತೆ ಶಾರದಾ ಅಂಚನ್ ಸಾಂದರ್ಭಿಕವಾಗಿ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿ ತಮ್ಮ ಕೃತಿಗಳು ಹೊರ ಬರಲು ಕಾರಣರಾದ ಎಲ್ಲರಿಗೂ ಕೃತಜತೆ ನೀಡಿದರು.

 

ಅಭಿನಯ ಸಾಮ್ರಾಜ್ಯ (ರಿ.) ಮುಂಬಯಿ ಮತ್ತು ಪೇಜಾವರ ಮಠ ಮುಂಬಯಿ ಶಾಖೆ ಸಹಯೋಗÀÀದಲ್ಲಿ ಜರುಗಿಸಲ್ಪಟ್ಟ ಕಾರ್ಯಕ್ರಮದಲ್ಲಿ ಹಲವಾರು ಲೇಖಕರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದು ಕೃತಿಕಾರರನ್ನು ಅಭಿನಂದಿಸಿದರು. ಶಾರದಾ ಎ.ಅಂಚನ್ ಪ್ರಾರ್ಥನೆಯನ್ನಾಡಿದರು. ಪೂಜಾ ಪ್ರಕಾಶನದ ಪೂಜಾ ಪ್ರಕಾಶನದ ಸರಸ್ವತಿ ಸಿ.ಸುವರ್ಣ, ಆನಂದ್ ಅಂಚನ್, ಪೂಜಾಶ್ರೀ ಹರ್ಷಿದ್, ಹರ್ಷ ಪಾಲನ್, ಹೇಮಾ ಹರಿದಾಸ್, ಲಲಿತಾ ಕೋಟ್ಯಾನ್, ಅನುರಾಗ್ ಆನಂದ್ ಅಂಚನ್ ಅತಿಥಿüಗಳಿಗೆ ಪುಷ್ಪಗುಪ್ಛವನ್ನಿತ್ತು ಗೌರವಿಸಿದರು. ನವೀನ್ ಕರ್ಕೇರ ಸುಖಾಗಮನ ಬಯಸಿ, ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣರಾಜ್ ಸುವರ್ಣ ಆಭಾರ ಮನ್ನಿಸಿದರು.

 

 

 

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal