Print

 (ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.04: ಮುಂಬಯಿ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬರುದೆಂದರೆ ದೊಡ್ದ ಮಾತು. ನಮಗೆ ಬಾರದಿದ್ದರೂ ಬೇಸರವಿಲ್ಲ. ಆದರೆ ನನ್ನ ಮಿತ್ರರೋರ್ವರಿಗೆ ಬಂದಿರುವುದು ಸಂತೋಷವಾಗಿದೆ. ಕಲೆ ಪ್ರದರ್ಶನಕ್ಕೆ ಪ್ರಶಂಸೆ, ಪ್ರಶಸ್ತಿ ಮುಖ್ಯವಲ್ಲ, ಕಲಾವಿದನ ಸಂತುಷ್ಟತನವೇ ಪ್ರಧಾನವಾದದು. ಬರೇ ಮಾರಾಟಕ್ಕಾಗಿ ಚಿತ್ರಕಲಾವಿದನಾಗುವುದು ಸರಿಯಲ್ಲ. ಕಲಾವೃತ್ತಿ, ಪ್ರವೃತ್ತಿಯಿಂದ ಪರರ ಜೀವನಕ್ಕೆ ಆದರ್ಶರಾಗಬೇಕು. ಆ ಮೂಲಕ ಕಲಾ ಉಳಿವಿಗೆ ಕಲಾವಿದನು ಶ್ರಮಿಸಬೇಕು. ಕಲಾವಿದನಿಂದ ಸೃಜನಶೀಲಾ ಕಲೆ ತೃಪ್ತಿದಾಯಕವಾಗಿದೆ. ಕಲಾವಿದನು ಬಣ್ಣ ನಿರ್ಮಾಣ ಮಾಡಿ ಕಲಾ ಪ್ರದರ್ಶನ ಮಾಡಿದಾಗಲೇ ಅಂತಹ ಕಲೆ ಜೀವನದಲ್ಲಿ ಶಾಸ್ವತವಾಗಿ ಉಳಿಯುತ್ತದೆ. ಕಲಾಧರ್ಮ ಉಳಿಸುವಿಕೆಯೇ ಕಲಾವಿದನ ಧರ್ಮವಾದಾಗಲೇ ಕಲೆಯಲ್ಲಿ ಸಮಾಜ ಪರಿವರ್ತನೆ ಸಾಧ್ಯವಾಗುವುದು ಎಂದು ಚಿತ್ರಕಲಾ ಪುರಸ್ಕೃತ, ಅಂತರಾಷ್ಟ್ರೀಯ ಪ್ರಸಿದ್ಧಿಯ ಹಿರಿಯ ಕಲಾವಿದ ದೇವದಾಸ ಶೆಟ್ಟಿ ತಿಳಿಸಿದರು.

ಶನಿವಾರ ಸಾಂತಾಕ್ರೂಜ್ ಪೂರ್ವದ ವಿದ್ಯಾನಗರಿ ಅಲ್ಲಿನ ಡಬ್ಲ್ಯೂಆರ್‍ಐಸಿ ಸಭಾಗೃಹದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡದ ವಿಭಾಗ ಆಯೋಜಿಸಿದ್ದ ಕೃತಿಗಳ ಬಿಡುಗಡೆ, ಚಿತ್ರಕಲಾ ಪ್ರದರ್ಶನ, ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ದೇವದಾಸ ಶೆಟ್ಟಿ ಮಾತನಾಡಿದರು.

ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಪ್ರಜಾವಾಣಿ ದೈನಿಕ ಮೈಸೂರು ಆವೃತ್ತಿಯ ಉಪ ಸಂಪಾದಕ ಗಣೇಶ್ ಅಮೀನಗಡ ಅವರ `ವನ್ಯ ವರ್ಣ' (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಚಿತ್ರ ಕಲಾವಿದ, ಮುಂಬಯಿ ಕನ್ನಡಿಗ, ಜಯಂತ ಮುನ್ನೊಳ್ಳಿ ಕಲಾ ಬದುಕಿನ ನೋಟ) ಕೃತಿಯನ್ನು ದೇವದಾಸ ಶೆಟ್ಟಿ ಮತ್ತು ಸಹನಾ ಕಾಂತಬೈಲು ಇವರ `ಆನೆ ಸಾಕಲು ಹೊರಟವಳು' ಕೃತಿಯನ್ನು ಜಯಂತ ಮುನ್ನೊಳ್ಳಿ ಬಿಡುಗಡೆ ಗೊಳಿಸಿದರು.

 

 

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಮತ್ತು ಕನ್ನಡ ವಿಭಾಗದ ಸಹ ಸಂಶೋಧಕಿ ಡಾ| ಉಮಾ ರಾವ್ ಕ್ರಮವಾಗಿ ಕೃತಿ ಪರಿಚಯಗೈದರು. ಇದೇ ಸಂದರ್ಭದಲ್ಲಿ ಎಂ.ಫಿಲ್ ಪದವೀಧರ ಸುಶೀಲಾ ಎಸ್.ದೇವಾಡಿಗ ಮತ್ತು ಸಂತೋಷ್ ಮೊಗಾವೀರ ಅವರಿಗೆ ಸನದು ಪ್ರದಾನಿಸಿ ಅಭಿನಂದಿಸಲಾಯಿತು.

ನಾನು ಶೈಕ್ಷಣಿಕ ಚೌಕಟ್ಟಿಗೆ ಒಳಪಟ್ಟವನಲ್ಲ. ಆದರೆ ಎಲ್ಲಾ ಪತ್ರಕರ್ತರಲ್ಲಿ ಬಹುತರಹ ವಿಚಾರಗಳು ಹೊಳೆದಂತೆ ನನ್ನಲ್ಲೂ ಹೊಳೆದು ವನ್ಯಜೀವಿ ಚಿತ್ರ ಕಲಾವಿದನೋರ್ವರ ಕೃತಿ ರಚಿಸಿದೆ. ಇಂದು ಪತ್ರಿಕೆಗಳಲ್ಲಿ ಸಾಹಿತಿಕ ವಿಷಯಗಳಿಗೆ ಜಾಗ ಕಡಿಮೆ ಆಗುತ್ತಿದ್ದರೂ ಹೊರನಾಡಿನ ಮುಂಬಯಿನಲ್ಲಿ ಕನ್ನಡದ ಕೈಕಂರ್ಯಗಳು ಶ್ರೀಮಂತಿಕೆಯಿಂದ ನಡೆಯುತ್ತಿರುವುದೇ ನಮ್ಮ ಅಭಿಮಾನ. ಮುಂಬಯಿವಾಸಿ ಕನ್ನಡಿಗರು ತಾವೂ ಬೆಳೆದು ಮತ್ತೊಬ್ಬರನ್ನೂ ಬೆಳೆಸುವ ಗುಣವುಳ್ಳವರು. ಆದುದರಿಂದ ಇಲ್ಲಿ ಕಲೆ, ಸಾಹಿತ್ಯದ ಬೆಳವಣಿಗೆಗೆ ಅವಕಾಶಗಳಿವೆ. ತಪ್ಪುಗಳ ಹುಡುಕಾಟ ಪತ್ರಕರ್ತರ ಅಭ್ಯಾಸಬಲವಾಗಿದ್ದರೂ ಸಾಂದರ್ಭಿಕವಾಗಿ ಹೊಂದಾಣಿಕಾ ಮನೋಭಾವ ಅಗತ್ಯವಾಗಿರಬೇಕು ಎಂದು ಗಣೇಶ್ ಅಮೀನಗಡ ತಿಳಿಸಿದರು.

ಜಯಂತ ಮುನ್ನೊಳ್ಳಿ ಮಾತನಾಡಿ ಪ್ರಾಥಮಿಕ ಶಾಲಾ ಚಿತ್ರಕಲಾ ಶಿಕ್ಷಕರ ಪ್ರೇರಣೆಯೇ ನನ್ನ ಚಿತ್ರಕಲಾಸಕ್ತಿಗೆ ಪ್ರೇರಣೆಯಾಗಿದೆ. ಕಲಾಪ್ರೇಮಿಗಳ ಸಹಕಾರ ಈ ಮಟ್ಟದ ಸಾಧನೆಗೆ ಕಾರಣವಾಗಿದೆ. ಪ್ರಾಣಿಗಳ ಮೇಲಿನ ದಯೆ, ಪ್ರೀತಿ ಕಲಾವರಣ ಗೊಳಿಸಿ ಕಲಾವಿದನಾದೆ. ಪ್ರತಿಭಾನ್ವಿತರಿಗೆ ಅನುಕೂಲಕರವಾದ ಅವಕಾಶಗಳು ಪೆÇ್ರೀತ್ಸಾಹದಾಯಕವಾಗಿದೆ. ಆದುದರಿಂದ ಕಲಾವಿದರು ಅವಕಾಶಗಳ ಸದುಪಯೋಗ ಪಡೆದು ಸಾಧನಶೀಲರಾಗಬೇಕು ಎಂದರು.
ಸಹನಾ ಕಾಂತಬೈಲು ಮಾತನಾಡಿ ನನ್ನ ಮೊದಲ ಕೃತಿಯೇ ಮುಂಬಯಿ ಕನ್ನಡ ವಿಭಾಗದಲ್ಲಿ ಬಿಡುಗಡೆ ಆಗುವುದು ನನ್ನ ಬಾಗ್ಯವೇ ಸರಿ. ಡಾ| ಜಿ.ಎನ್ ಉಪಾಧ್ಯ ಅವರ ಒತ್ತಾಸೆ ಇರದಿದ್ದಾರೆ ಈ ಕೃತಿ ಬೆಳಕು ಕಾಣುತ್ತಿರಲಿಲ್ಲ. ದುಖ ದುಗುಡಗಳಿಂದ ಮುಕ್ತರಾಗಲು ಬರವಣಿಗೆ ಅಭ್ಯಾಸ ಪ್ರೇರಕ ಶಕ್ತಿಯಾಗಿದೆ ಅನ್ನುತ್ತಾ ಕೃತಿ ಪ್ರಕಾಶನಕ್ಕೆ ಪ್ರೇರಕರಾದ ಬಗ್ಗೆ ತಿಳಿಸಿದರು.

ಸುಶೀಲಾ ದೇವಾಡಿಗ ಮಾತನಾಡಿ ಕರ್ನಾಟಕ ಸಂಘ ಮುಂಬಯಿ ಇದರ ಕನ್ನಡದ ಕೈಂಕರ್ಯಕ್ಕೆ ರಾಷ್ಟ್ರ ಮಾನ್ಯತೆ ದೊರೆತಿದೆ. ಆ ನಿಟ್ಟಿನಲ್ಲಿ ಡಾ| ಜಿ.ಎನ್ ಉಪಾಧ್ಯ ಅವರ ಪ್ರೇರಣೆಯೊಂದಿಗೆ ಈ ಬಗ್ಗೆ ಕೃತಿಯಾಗಿಸುವ ಭಾಗ್ಯ ನನಗೆ ದೊರಕಿ ಎಂ.ಫಿಲ್ ಪದವೀಧರೆಯಾಗುವಂತಾಯಿತು ಎಂದರು.

ಏಕದಿನದ ಪಂದ್ಯಾಟದ ಆಸಕ್ತಿ ಕಳೆಯುತ್ತಿದ್ದಂತೆಯೇ ಟ್ವೆಂಟಿಟ್ವೆಂಟಿಯ ಕುತೂಹಲ ಹೆಚ್ಚುತ್ತಿರುವಂತೆ ಇದೀಗ 2020 ವರುಷಾರಂಭದಲ್ಲಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತಷ್ಟು ಉತ್ಸುಕತೆಯಿಂದ ಕಾರ್ಯಕ್ರಮಗಳೊಂದಿಗೆ ಸಿದ್ಧವಾಗಿದೆ. ನಮ್ಮದು ಒಂತರಹ ಸಮ್ಮಿಶ್ರ ಸರಕಾರದ ಕಾರ್ಯಕ್ರಮ ಇದ್ದಂತೆ. ಇಂದು ಎರಡು ಎಂ.ಫಿಲ್ ಪದವಿ ಪ್ರದಾನ ಮತ್ತು ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮಗಳು. ಸಾಹಿತ್ಯದ ಮೂಲಕವೂ ಜಗತ್ತಿನ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಬಹುದು ಮತ್ತು ಜಗತ್ತನ್ನು ಸಾಹಿತ್ಯದ ಮೂಲಕ ತಿಳಿಯಬಹುದು ಅನ್ನುವುದನ್ನು ತೋರ್ಪಡಿಸಿದ್ದೇವೆ. ಈ ವಿಭಾಗ ಕೇವಲ ಸಾಹಿತಿಗರನ್ನು ಮಾತ್ರವಲ್ಲ ಎಲ್ಲರನ್ನೂ ತ್ಸಹಿಸುವ ಕೇಂದ್ರವಾಗಿದೆ. ಆದುದರಿಂದ ಕನ್ನಡವನ್ನೇ ಕಾರಣವಾಗಿಸಿ ಇಲ್ಲಿ ಎಲ್ಲರೂ ಸೇರುವುದೇ ಯೋಗಯೋಗವಾಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಜಿ.ಎನ್ ಉಪಾಧ್ಯ ನುಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ ರತ್ನಾಕರ್ ಆರ್.ಶೆಟ್ಟಿ, ಮಹೇಶ್ವರ್ ಕಾಂತಬೈಲು, ಪ್ರತಿಷ್ಠಿತ ಚಿತ್ರಕಲಾವಿದ ಜಯ್ ಸಿ.ಸಾಲ್ಯಾನ್, ಸಣ್ಣಯ್ಯ ದೇವಾಡಿಗ, ಡಾ| ಸತೀಶ್ ಮುನ್ನೊಳ್ಳಿ, ಡಾ| ಸಂಗೀತಾ ಮುನ್ನೊಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕೃತಿಕರ್ತರನ್ನು ಹಾಗೂ ಎಂ.ಫಿಲ್ ಪದವೀಧರರನ್ನು ಅಭಿನಂದಿಸಿದರು.

ಕಲಾ ಭಾಗವತ್, ಪಾರ್ವತಿ ಪೂಜಾರಿ, ಶಶಿಕಲಾ ಹೆಗಡೆ ಪ್ರಾರ್ಥನೆಯನ್ನಾಡಿದರು. ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸುಶೀಲಾ ದೇವಾಡಿಗ ಧನ್ಯವದಿಸಿದರು.