About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಡಿ.08: ಎಚ್.ಬಿ.ಎಲ್ ರಾವ್ ಅವರ ಕನ್ನಡ ಸಾಹಿತ್ಯ ಸೇವೆ ನಿಜವಾಗಿ ಅತ್ಯಾದ್ಭುತವೂ ಮತ್ತು ಶ್ಲಾಘನೀಯವಾದುದು. ಸಾಹಿತ್ಯ ರಚನೆ ಕಾರ್ಯ ಒಳನಾಡಿಗಿಂತ ಹೊರನಾಡಿನಲ್ಲಿ ಹೆಚ್ಚಾಗುತ್ತಿದ್ದು, ಅದರಲ್ಲೂ ಮುಂಬಯಿಯಲ್ಲಿ ವರ್ಷಾವಧಿ ಹೆಚ್ಚುವರಿಯಾಗಿ ಕೃತಿಗಳ ಲೋಕಾರ್ಪಣೆ ಆಗುತ್ತಿವುದು ಹೆಮ್ಮೆಯ ಸಂಗತಿ. ಮುಂಬಯಿ ಕನ್ನಡ ಸಾಹಿತ್ಯ ಚಟುವಟಿಕೆಗಳು ತುಂಬಾ ಕ್ರಿಯಾಶೀಲವಾಗಿ ಸಾಗುವಂತೆ ಮಾಡುತ್ತಿರುವ ತುಳು ಕನ್ನಡಿಗರ ಕಾರ್ಯ ಉಲ್ಲೇಖನೀಯ. ಯಕ್ಷಗಾನ, ತುಳುಭಾಷೆ ಕನ್ನಡ ಸಾಹಿತ್ಯಕ್ಕೆ ತನ್ನ ಶಕ್ತಿ ಮಿರಿ ದುಡಿದ ಚೇತನ ಎಚ್.ಬಿ.ಎಲ್ ಅವರದ್ದು ಎಂದು ಮಹಾರಾಷ್ಟ್ರ ಸರಕಾರದ (ಎನ್‍ಐಎ) ವಿಶೇಷ ವ್ಯಾಜ್ಯದಾರ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಲಹಾಗಾರ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹದಲ್ಲಿ ಸಾಹಿತ್ಯ ಬಳಗ ಮುಂಬಯಿ ತನ್ನ ರಜತೋತ್ಸವ ಸಮಾರೋಪ ಸಮಾರಂಭದಲ್ಲಿನ ಸಾಧಕರಿಗೆ ನಮನ ಕೃತಿಗಳ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಕಾಶ್ ಶೆಟ್ಟಿ ಮಾತನಾಡಿದರು.

 

 

 

 

 

 

 

 

 

 

 

 

 

 

 

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ಮೈಸೂರು ಅಸೋಸಿಯೇಶನ್ ಮುಂಬಯಿ ಸಹಯೋಗದ ಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಅತಿಥಿü ಅಭ್ಯಾಗತರಾಗಿ ಹಿರಿಯ ಸಾಹಿತಿ ಡಾ| ನಾ.ಮೊಗಸಾಲೆ, ವಿದ್ವಾಂಸ ಕೆ.ಎಲ್ ಕುಂಡತ್ತಾಯ, ಕರ್ನಾಟಕ ಸಂಘ ಮುಂಬಯಿ ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ, ಬಾಂಬೇ ಬಂಟ್ಸ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಶ್ಯಾಮ ಎನ್.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಾರಾಯಣ ಬಲ್ಲಾಳ ಉಡುಪಿ ರಚಿತ ಜಾನಪದ ವಿದ್ವಾಂಸ ಕೆ.ಎಲ್ ಕುಂಡತ್ತಾಯ ಸಾಧಕ ಕೃತಿಯನ್ನು ಪ್ರಕಾಶ್ ಎಲ್.ಶೆಟ್ಟಿ, ಶ್ರೀಮತಿ ಅಶ್ವಿನಿ ರಾಜನ್ ರಚಿತ ಮಾರ್ವಿ ಕಲಾ ಪರಂಪರೆ ಸಾಧಕ ಕೃತಿಯನ್ನು ಸಾಹಿತಿ ಡಾ| ವ್ಯಾಸರಾಯ ನಿಂಜೂರು, ಸದಾನಂದ ನಾರಾವಿ ರಚಿತ ರಾಷ್ಟ್ರೀಯ ಸ್ವಯಂಸೇವಾ ಸಂಘದ ಕಾರ್ಯಕರ್ತ ಗುರುಪುರ ಜಿ.ಟಿ ಗೋಪಾಲ ಭಟ್ ಸಾಧಕ ಕೃತಿಯನ್ನು ನಿತ್ಯಾನಂದ ಡಿ.ಕೋಟ್ಯಾನ್, ಅನುರಾಧ ರಾಮಚಂದ್ರ ರಾವ್ ರಚಿತ ಪಂಚವಾದ್ಯ ಪ್ರವೀಣ ದಿ| ಬಾಲಪ್ಪ ಗುರಿಕಾರ ಸೀತಾರಾಮ ರಾವ್ ಸಾಧಕ ಕೃತಿಯನ್ನು ಸಂಗೀತ ವಿದ್ವಾನ ಟಿ.ಎನ್ ಅಶೋಕ, ಅನುರಾಧ ವಿದ್ಯಾಧರ ರಚಿತ ಧೃತಿಗೆಡದ ಸಮಾಜಸೇವಕ ಪ್ರೊ| ಪಿ. ಸೋಮಶೇಖರ ರಾವ್ ಸಾಧಕ ಕೃತಿಯನ್ನು ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಎಚ್.ಬಿ.ಎಲ್.ರಾವ್ ರಚಿತ 1ನೇ ಕೃತಿ ವಾಸುದೇವ ರಾವ್ ಕಾಣೆಮಾರ್ ಅವರ ಸಾಹಿತ್ಯ ಕೃಷಿ ಸಾಧಕ ಕೃತಿಯನ್ನು ಡಾ| ಸುರೇಶ್ ಎಸ್.ರಾವ್ ಕಟೀಲು, 2ನೇ ಕೃತಿ ಅನಾವರಣ ಸತ್ಯಾನ್ವೇಷಣೆ ಕೃತಿಯನ್ನು ಯು.ವೆಂಕಟ್ರಾಜ್, ಗೋಪಾಲ ತ್ರಾಸಿ ರಚಿತ ಮೊಗವೀರ ಪತ್ರಿಕೆಯ ಸಮರ್ಥ ಸಂಪಾದಕ ಅಶೋಕ್ ಎಸ್.ಸುವರ್ಣ ಸಾಧಕ ಕೃತಿಯನ್ನು ಮೊಗವೀರ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸದಾನಂದ ಎ.ಕೋಟ್ಯಾನ್, ಡಾ| ಕರುಣಾಕರ ಶೆಟ್ಟಿ ರಚಿತ ಭಾವಜೀವಿ ರಾಮ ಮೋಹನ ಶೆಟ್ಟಿ ಬಳ್ಕುಂಜೆ ಸಾಧಕ ಕೃತಿಯನ್ನು ಉದ್ಯಮಿ ಶ್ಯಾಮ ಎನ್.ಶೆಟ್ಟಿ, ಚಿತ್ರಾಪು ಕೆ.ಎಂ.ಕೋಟ್ಯಾನ್ ರಚಿತ ಶತಮಾನ ಕಂಡ ವಿದ್ಯಾದಾಯಿನಿ ಸಭಾ ಸಾಧಕ ಕೃತಿಯನ್ನು ಕೆ.ಎಲ್ ಕುಂಡತ್ತಾಯ, ವಿದ್ವಾನ್ ಎಂ.ಕೆ ರಾಮಶೇಷನ್ ರಚಿತ ಮುದ್ದಣ ಸೇವಾ ನಿರತ ನಂದಳಿಕೆ ಬಾಲಚಂದ್ರ ರಾವ್ ಸಾಧಕ ಕೃತಿಯನ್ನು ಸಾಹಿತಿ ಡಾ| ಕೆ.ಗೋವಿಂದ ಭಟ್, ಡಾ| ಈಶ್ವರ ಅಲೆವೂರು ರಚಿತ ಮುಂಬಯಿ ಕನ್ನಡ ಸಂಘದ ಬೆನ್ನಲೆಬು ಗುರುರಾಜ ಸರ್ವೊತ್ತಮ ನಾಯಕ್ ಸಾಧಕ ಕೃತಿಯನ್ನು ಡಾ| ಎಸ್.ಕೆ ಭವಾನಿ ಹೀಗೆ ಸಾಹಿತ್ಯ ಬಳಗ ಪ್ರಕಾಶಿತ ಒಟ್ಟು ಹನ್ನೆರಡು ಕೃತಿಗಳನ್ನು ಅತಿಥಿಗಳು ಏಕಕಾಲಕ್ಕೆ ಬಿಡುಗಡೆ ಗೊಳಿಸಿದರು.
ನಾಟ್ಯ ವಿದುಷಿ ಸಹನಾ ಭಾರದ್ವಾಜ್ ಸ್ವಾಗತಂ ಕೃಷ್ಣ ನೃತ್ಯರೂಪಕದೊಂದಿಗೆ ಸಮಾರಂಭ ಆದಿಗೊಂಡಿತು. ಪದ್ಮಾವತಿ ಯು.ಭಟ್ ಬಳಗವು ಜನಪದ ಕಾರ್ಯಕ್ರಮವನ್ನು ಹಾಗೂ ಡಾ| ಎ.ವಿ ರಾವ್ ಪ್ರಾಯೋಜಕತ್ವದ ಡಾ| ಎ.ವಿ ರಾವ್ ಪ್ರಾಯೋಜಕತ್ವದಲ್ಲಿ ನಾಟ್ಯ ವಿದುಷಿ ಮೈತ್ರೀ ರಾವ್ ಬೆಂಗಳೂರು ತಂಡವು ಭರತನಾಟ್ಯ ಪ್ರದರ್ಶಿಸಿತು.

ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಋಗ್ವೇದ ಘನಪಾಠಿ ದುರ್ಗಾಪ್ರಸಾದ್ ಭಟ್ ಮೂಕಾಂಬಿಕೆ ಭಟ್, ಬಳಗದ ಉಪಾಧ್ಯಕ್ಷ ಡಾ| ಕರುಣಾಕರ ಎನ್.ಶೆಟ್ಟಿ, ಜೊತೆ ಕಾರ್ಯದರ್ಶಿ ಜಿ.ಎಸ್ ನಾಯಕ್, ವೈ.ವಿ ಮಧುಸೂದನ ರಾವ್, ರಾಜು ಶ್ರೀಯಾನ್, ಎ.ಆರ್ ನಾರಾಯಣ ರಾವ್ ಉಪಸ್ಥಿತರಿದ್ದು, ಸಾಹಿತ್ಯ ಬಳಗ ಮುಂಬಯಿ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಸ್ವಾಗತಿಸಿ ಪ್ರಸ್ತಾವನೆಗೈದರು. ಬಳಗದ ಕೋಶಾಧಿಕಾರಿ ಸಾ.ದಯಾ (ದಯಾನಂದ ಸಾಲ್ಯಾನ್) ಮತ್ತು ಅನುರಾಧ ರಾವ್ ಕಾರ್ಯಕ್ರಮ ನಿರೂಪಿಸಿದರು. ಬಳಗದ ಗೌ| ಕಾರ್ಯದರ್ಶಿ ಎಸ್.ಕೆ.ಸುಂದರ್ ಉಪಕಾರ ಸ್ಮರಿಸಿದರು.

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal