About Us       Contact

 

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.02: ವರುಣನ ರೌದ್ರಾವತರಕ್ಕೆ ಪ್ರಾಕೃತಿಕವಾಗಿ ಸೃಷ್ಠಿಯಾದ ವಾತಾವರಣಕ್ಕೆ ಮಣಿದು ಕಳೆದ ನವೆಂಬರ್ 8-10ರ ಮೂರುದಿನಗಳ ಬೊಂಬಾಯಿಡ್ ತುಳುನಾಡ್ ವಿಶ್ವ ಮಟ್ಟದ ತುಳು ಸಮ್ಮೇಳನವನ್ನು 2020ರ ಜನವರಿ 18-19ರ (ಶನಿವಾರ-ಆದಿತ್ಯವಾರ) ದ್ವಿದಿನಗಳಲ್ಲಿ ಕಾ0ದಿವಿಲಿ ಪಶ್ಚಿಮದ ಸಪ್ತಾಹ ಕ್ರೀಡಾಂಗಣ ದಲ್ಲಿ ಮತ್ತೆ ಅದೇ ಸಂಭ್ರಮದಲ್ಲಿ ನಡೆಸಲಾಗುವುದು ಎಂದು ಸಮ್ಮೇಳನದ ರೂವಾರಿ, ಕಲಾ ಜಗತ್ತು (ರಿ.) ಮುಂಬಯಿ ಸಂಸ್ಥೆಯ ಅಧ್ಯಕ್ಷ ಡಾ| ತೋನ್ಸೆ ವಿಜಯ ಕುಮಾರ್ ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಸೋಮವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯ ಕುಮಾರ್ ಶೆಟ್ಟಿ ಅನಿವಾರ್ಯವಾಗಿ ಮುಂದುವರಿಸಲಾಗಿದ್ದ ಬೊಂಬಾಯಿಡ್ ತುಳುನಾಡ್ ಸಮ್ಮೇಳನವನ್ನು ಎರಡು ದಿನಗಳಿಗೆ ಸೀಮಿತಗೊಳಿಸಿ 2020ರ ಜನವರಿ 18-19ರಂದು ನಿಯೋಜಿತ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದು ಎಂದು ಸಮ್ಮೇಳನದ ಮಾಹಿತಿಯನ್ನಿತ್ತರು.

ಇದೇ ಶುಭಾವಸರದಲ್ಲಿ ಜನವರಿಯ ಸಮ್ಮೇಳನಕ್ಕೆ ಶ್ರೀ ಪೇಜಾವರ ಮಠದ ಶಿಲಾಮಯ ಮಂದಿರದ ಶ್ರೀಕೃಷ್ಣನ ಸನ್ನಿಧಿಯಲ್ಲಿ ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕ ವಿದ್ವಾನ್ ಹರಿ ಭಟ್ ಪುತ್ತಿಗೆ ದೀಪಹಚ್ಚಿ ಪೂಜೆಯೊಂದಿಗೆ ಮುಹೂರ್ತ ನೆರವೇರಿಸಿದರು ಹಾಗೂ ಸಕಲ ವಿಘ್ನಮುಕ್ತವಾಗಿ ಈ ಸಮ್ಮೇಳನ ಯಶಸ್ಸುಕಂಡು ಜಾಗತಿಕವಾಗಿ ಸ್ಮರಿಸುವ ವಿಶ್ವತುಳುಸಮ್ಮೇಳನವಾಗಿ ಮೆರೆಯುವಂತಾಗಿ ಎಂದು ಅನುಗ್ರಹಿಸಿದರು.

ಕಲಾ ಜಗತ್ತು ಇದರ ಕಾರ್ಯಾಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ, ಗೌ| ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಜೊತೆ ಕಾರ್ಯದರ್ಶಿ ಲತೇಶ್ ಪೂಜಾರಿ, ಕೋಶಾಧಿಕಾರಿ ಜಗದೀಶ್ ರಾವ್, ಜೊತೆ ಕೋಶಾಧಿಕಾರಿಗಳಾದ ಪೃಥಿü್ವರಾಜ್ ಮುಂಡ್ಕೂರು, ಅಶೋಕ್ ಶೆಟ್ಟಿ ಪಣಗಲ್, ಬೊಂಬಾಯಿಡ್ ತುಳುನಾಡು ವಿಶ್ವ ತುಳುಹಬ್ಬ ಸಮಿತಿ ಸಂಚಾಲಕ ಶ್ಯಾಮ ಎನ್.ಶೆಟ್ಟಿ, ಕಾರ್ಯದರ್ಶಿಗಳಾದ ಪ್ರೇಮನಾಥ ಶೆಟ್ಟಿ ಕೊಂಡಳ್ಳಿ, ಪ್ರೇಮನಾಥ ಕೋಟ್ಯಾನ್, ರಜಿತ್ ಸುವರ್ಣ, ಸಾಹಿತ್ಯ ಸಮಿತಿಯ ಲತಾ ಸಂತೋಷ್ ಶೆಟ್ಟಿ, ಜಯಕರ ಡಿ.ಪೂಜಾರಿ ಮತ್ತಿತರರು ಉಪಸ್ಥಿತರಿದ್ದು ಗಾಯತ್ರಿ ಪರಿವಾರ ದಹಿಸರ್ ಬಳಗವು ಕುಮಾರಿ ಶೆಟ್ಟಿ ಮುಂದಾಳುತ್ವದಲ್ಲಿ ದೀಪಯಜ್ಞ ವಿಶೇಷ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿ ಸಮ್ಮೇಳನದ ಸಫಲತೆ ಹೊಂದಲಿ ಎಂದು ಹಾರೈಸಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal