About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.01: ಕೊಂಕಣಿ ಭಾಷೆಯನ್ನು ಪ್ರೋತ್ಸಹಿಸುವ ನಿಟ್ಟಿನಲ್ಲಿ ಭಾವೀ ಜನಾಂಗದಲ್ಲಿ ಸದಾ ಜಾಗೃತಿ ಮೂಡಿಸುವಲ್ಲಿ ಸೇವಾನಿರತ ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್‍ನ ಮಾತೃಭಾಷಾ ನಿಲುವಿನ ಧೋರಣೆ ಪ್ರಶಂಸನೀಯ. ಮಾತೃಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೊರನಾಡಲ್ಲಿನ ಮಕ್ಕಳಲ್ಲಿ ಕೊಂಕಣಿ ಭಾಷೆಯೊಂದಿಗೆ ಸ್ವಸಂಸ್ಕೃತಿ ಪಾಲನೆಗೆ ಈ ಸಂಸ್ಥೆ ಮಾದರಿ ಆಗಿದೆ. ನಮ್ಮಲ್ಲಿನ ಯುವ ಜನತೆ ಸುಶಿಕ್ಷಿತರಾಗಿ ಉದ್ಯಮಶೀಲರಾಗುವ ಕನಸು ಕಾಣಬೇಕು. ಆವಾಗಲೇ ರಾಷ್ಟ್ರದ ಆರ್ಥಿಕ ಬೆಳವಣಿಗೆ ಸಾಧ್ಯವಾಗಿ ಭವ್ಯ ರಾಷ್ಟ್ರ ನಿರ್ಮಾಣ ಸಾಧ್ಯವಾಗುವುದು ಎಂದು ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಸಿಸಿಸಿಐ) ಸಂಸ್ಥೆಯ ಸ್ಥಾಪಕ ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್ ತಿಳಿಸಿದರು.

ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್ ಇಂದಿಲ್ಲಿ ಭಾನುವಾರ ಸಂಜೆ ಕುರ್ಲಾ ಪಶ್ಚಿಮದಲ್ಲಿನ ಸೈಂಟ್ ಜೂಡ್'ಸ್ ಚರ್ಚ್‍ನ ಮೈದಾನದಲ್ಲಿ ತನ್ನ ರಜತೋತ್ಸವ ಆಚರಣಾ ನಿಮಿತ್ತ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಆಯೋಜಿಸಿದ್ದು, ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಮಥಾಯಸ್ ಮಾತನಾಡಿದರು.

 

 

 

 

ಇನ್ಫೆಂಟ್ ಜೀಸಸ್ ಚರ್ಚ್ ಪಂತ್‍ನಗರ್ ಇದರ ಮುಖ್ಯ ಧರ್ಮಗುರು ರೆ| ಫಾ| ನೆಲ್ಸನ್ ಸಲ್ಡಾನ್ಹಾ ಅನುಗ್ರಹಿಸಿ ರಜತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿದರು. ಮೊಡೇಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯು.ಡಿಸೋಜಾ ಅಧ್ಯಕ್ಷತೆಯಲ್ಲಿ ನೆರವೇರಿದ ಸಭಾ ಕಾರ್ಯಕ್ರಮದಲ್ಲಿ ಸಿಸಿಸಿಐ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ, ಮಾಜಿ ಕಾರ್ಯಾಧ್ಯಕ್ಷ ಹೆನ್ರಿ ಲೊಬೋ, ಮೊಡೇಲ್ ಬ್ಯಾಂಕ್‍ನ ನಿರ್ದೇಶಕರುಗಳಾದ ವಿನ್ಸೆಂಟ್ ಮಥಾಯಸ್, ಅಬ್ರಹಾಂ ಕ್ಲೇಮೆಂಟ್ ಲೊಬೋ, ನ್ಯಾಯವಾದಿ ಪಿಯುಸ್ ವಾಸ್, ಬೆನೆಡಿಕ್ಟಾ ರೆಬೆಲ್ಲೋ, ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೇನ್ಸ್ ಕುವೆಲ್ಲೋ, ರಂಗನಟ, ನಾಟಕಕಾರ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ರಾಷ್ಟ್ರಪತಿ ಪ್ರಶಸ್ತಿ ವಿಜೇತೆ ಶಿಕ್ಷಕಿ ಜೀನ್ ಮೋಸೆಸ್ ಗೋಮ್ಸ್, ಸಮಾಜ ಸೇವಕ ರಿಚಾರ್ಡ್ ಡೆಸಾ, ಉದ್ಯಮಿಗಳಾದ ರೋಶನ್ ಥೋಮಸ್, ಪ್ರೇಮ್ ಪಾವ್ಲ್ ವಾಜ್ ಅತಿಥಿü ಅಭ್ಯಾಗತರಾಗಿದ್ದು ಕಲಾವಿದರನ್ನು ಸನ್ಮಾನಿಸಿ ಶುಭಾರೈಸಿದರು.

ಕಾರ್ಯಕ್ರಮದಲ್ಲಿ ದಯಾ ವಿಶೇಷ ಶಾಲೆ ಬೆಳ್ತಂಗಡಿ ಇದರ ನಿರ್ದೇಶಕ ರೆ| ಫಾ| ವಿನೋದ್ ಮಸ್ಕರೇನ್ಹಾಸ್, ರೆ| ಫಾ| ನೆಲ್ಸನ್ ಸಲ್ಡನ್ಹಾ, ರೆ| ಫಾ| ಲಿಯೋ ಲೋಬೊ, ಭಗಿನಿಯರಾದ ಸಿ| ವೆರೋನಿಕಾ ಮಿನೇಜಸ್, ಸಿ| ಫ್ಲೋರಿನ್ ಡಿಸೋಜಾ, ಸುಸನ್ಹಾ ಎಲ್.ಕುವೆಲ್ಲೋ ಮತ್ತಿತರ ಗಣ್ಯರು ಹಾಜರಿದ್ದರು.

 ಇಂತಹ ಸಂಸ್ಥೆಗಳ ಸೇವೆಯಿಂದಲೇ ಮಾತೃಭಾಷೆಗಳು ಜೀವಂತವಾಗಿ ಉಳಿದಿವೆ. ಆದುದರಿಂದಲ್ಲಿ ಕೊಂಕಣಿ ಭಾಷಿಗರಲ್ಲಿ ತಮ್ಮ ಕಲೆ, ಸಂಸ್ಕೃತಿ, ಸಾಹಿತ್ಯ ಸಂಭ್ರಮ ಮನೆಮನಗಳಲ್ಲಿ ನೆಲೆಯಾಗಿದೆ. ಇತ್ತೀಚಿನ ದಿನಗಳಿಂದ ಹಣಕಾಸು ವ್ಯವಸ್ಥೆಯಲ್ಲಿ ಏರುಪೇರುಗಳಾಗಿದ್ದು ಇದು ಜಾಗತಿಕವಾಗಿ ಉದ್ಭವಿಸಿದ ಸಮಸ್ಯೆ. ಬರೀ ನಮ್ಮ ರಾಷ್ಟ್ರದ ಪರಿಸ್ಥಿತಿಯಲ್ಲ. ಆದ್ದರಿಂದ ನಾವೆಲ್ಲರೂ ಆಥಿರ್üಕ ಸ್ಥಿತಿಗತಿಯನ್ನು ಮನದಟ್ಟು ಮಾಡಿಕೊಳ್ಳುವ ಅಗತ್ಯವಿದೆ. ನಮ್ಮ ಮೋಡೆಲ್ ಬ್ಯಾಂಕ್ ನಿಮ್ಮೆಲ್ಲರ ಸೇವೆಯಲ್ಲಿದ್ದು ನಿಮ್ಮ ಹಣಕಾಸು ಭದ್ರತೆಗೆ ಭರವಸೆ ತುಂಬಲಿದೆ ಎಂದು ಅಲ್ಬರ್ಟ್ ಡಿಸೋಜಾ ನುಡಿದರು.

ಅಸೋಸಿಯೇಶನ್‍ನ ಅಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಸ್ವಾಗತಿಸಿದರು. ಸಿರಿಲ್ ಕಾಸ್ತೇಲಿನೋ ಅತಿಥಿಗಳನ್ನು ಪರಿಚಯಿಸಿದರು. ಲಿಲ್ಲಿ ಫೆರ್ನಾಂಡಿಸ್, ಐಡಾ ರೋಡ್ರಿಗಸ್, ಮೆರ್ಸಿನ್ ಮಿರಾಂದ, ಫ್ಲೋರಾ ಡಿಸೋಜಾ ಕಲ್ಮಾಡಿ, ಸೆವ್ರಿನ್ ಡಿಸೋಜಾ, ಜುಲಿಯಾನ ಮಸ್ಕರೇನ್ಹಾಸ್, ವಿಕ್ಟರ್ ಪಿರೇರಾ, ಮಾ| ಲೆನನ್ ಫೆರ್ನಾಂಡಿಸ್, ಜೋನ್ ರೊಡ್ರಿಗಸ್ ಅತಿಥಿüಗಳಿಗೆ ಪುಷ್ಪಗುಪ್ಛಗಳನ್ನಿತ್ತು ಗೌರವಿಸಿದರು. ಮಾ| ಲೆವಿನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ವಾಲ್ಟರ್ ಡಿಸೋಜಾ ಕಲ್ಮಾಡಿ ವಂದಿಸಿದರು.

ಮನೋರಂಜನೆ ಕಾರ್ಯಕ್ರಮವಾಗಿಸಿ ಕೊಂಕಣಿ ಹಾಸ್ಯರಾಜ ಕುವಾರ ಪ್ರಸಿದ್ಧ ಪ್ರದೀಪ್ ಬರ್ಬೋಜಾ ಪಾಲಡ್ಕ ರಚಿತ `ವೆಚೊಗೀ ರಾಂವ್ಚೊ?' (ಹೋಗುವರೇ... ನಿಲ್ಲುವವರು...) ಕೊಂಕಣಿ ಹಾಸ್ಯಮಯ ನಾಟಕವನ್ನು ಸಾಂಗೊನ್ ಮುಗ್ದಾನಾ ಕಲಾವಿದರ ಬಳಗ ಪ್ರದರ್ಶಿಸಿತು. ಪ್ರದೀಪ್ ಬರ್ಬೋಜಾ ಪಾಲಡ್ಕ, ಗೋಡ್ವಿನ್ ಕಾಸ್ತೆಲಿನೋ ಅತ್ತೂರು, ರೊಯ್‍ಸ್ಟೊನ್ ಡಿಸೋಜಾ ಬಳ್ಕುಂಜೆ, ಪಾವ್ಲ್ ಡಿಸೋಜಾ ಪಾಲಡ್ಕ, ವೆರ್ನನ್ ಡಿಸೋಜಾ, ಲವೀನಾ ಫೆರ್ನಾಂಡಿಸ್ ಪಾಂಗ್ಳಾ, ಹೆಲ್ವಿನ್ ಬರ್ಬೋಜಾ ಕುಳೂರು, ವೆನಿಶಿಯಾ ರೋಡ್ರಿಗಸ್ ಅಲಂಗಾರ್, ನಾಣು ಮರೋಲ್ (ತೊಟ್ಟಾಂ), ಫ್ರಾಂಕಿತ್ ಮಸ್ಕರೇನ್ಹಾಸ್, ಡೈನಿ ಡಿಸೋಜಾ ಪಾಂಬೂರ್ ಮತ್ತು ಮೆಲ್ವಿನ್ ಡಿಅಲ್ಮೇಡಾ ವಾಲೆನ್ಸಿಯಾ ಪಾತ್ರಧಾರಿಗಳಾಗಿ ನಾಟಕ ಪ್ರದರ್ಶಿಸಿದರು.

 

 

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal