About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ನ.30: ವಿದ್ಯಾರ್ಥಿದೆಸೆಯ ಗಳಿಕೆಯ ವಿದ್ವತ್ತು ಮಕ್ಕಳ ಭವಿಷ್ಯದ ತಾಕತ್ತು ಆಗಿದೆ. ಆದ್ದರಿಂದ ಮಕ್ಕಳು ತಮ್ಮ ಅಭ್ಯಾಸ ಜೀವನವನ್ನು ದೂರದೃಷ್ಠಿತ್ವದೊಂದಿಗೆ ಜಾಗತಿಕವಾಗಿ ಬೆಳೆಸಿಕೊಳ್ಳಬೇಕು. ರಾಷ್ಟ್ರದ ಭಾವೀ ಪ್ರಜೆಗಳಾದ ಮಕ್ಕಳ ತಮ್ಮ ಉತ್ತಮ ಭವಿಷ್ಯ ರೂಪಿಸಲು ಉತ್ತೇಜಿಸುವ ಇಂತಹ ಕಾರ್ಯಕ್ರಮಗಳ ಫಲಾನುಭವ ಪಡೆದಾಗ ವಿದ್ಯಾರ್ಥಿವೇತನದಂತಹ ಸೇವಾ ಕಾರ್ಯಕ್ರಮಗಳು ಫಲದಾಯಕವಾಗುವುದು. ಆದುದರಿಂದಲೇ ಮಕ್ಕಳ ಭವಿಷ್ಯದ ಪ್ರೇರಪಣೆಯೇ ವಿದ್ಯಾರ್ಥಿ ವೇತನವಾಗಿದೆ ಎಂದು ಬೋಂಬೇ ಕಾಲೇಜ್ ಆಫ್ ಫಾರ್ಮಸಿ ಇದರ ಪ್ರಾಂಶುಪಾಲ ಇವನ್ಸ್ ಕುಟಿನ್ಹೋ ನುಡಿದರು.

ಇಂದಿಲ್ಲಿ ಶನಿವಾರ ಸಂಜೆ ಮಾಹಿಮ್ ಪಶ್ಚಿಮದಲ್ಲಿನ ಕ್ಸೇವಿಯರ್ ಇನ್‍ಸ್ಟಿಟ್ಯೂಟ್ ಆಫ್ ಇಂಜಿನೀಯರಿಂಗ್ ಕಾಲೇಜ್ ಸಭಾಗೃಹದಲ್ಲಿ ಮೊಡೇಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ ಷೇರುದಾರ ಸದಸ್ಯರ ಮಕ್ಕಳಿಗೆ ವಾರ್ಷಿಕವಾಗಿ ವಿತರಿಸುವ ಈ ಬಾರಿಯ 2019ನೇ ವಾರ್ಷಿಕ ವಿದ್ಯಾರ್ಥಿವೇತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಇವನ್ಸ್ ಕುಟಿನ್ಹೋ ಮಾತನಾಡಿದರು.

 

 

 

 

 

 

 

 

 

 

 

 

 

 

 

 

ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿಸೋಜಾ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿಸಿಲ್ವಾ ಅತಿಥಿಯಾಗಿದ್ದು, ಆಯ್ದ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣಪತ್ರ, ಪುಷ್ಫವನ್ನಿತ್ತು ಮಕ್ಕಳಿಗೆ ಅತಿಥಿವರ್ಯರು ಶುಭ ಹಾರೈಸಿದರು.

ಮುಂಬಯಿಯಲ್ಲಿ ಮಂಗಳೂರು ಜನತೆಯ ಸೇವೆ ಅನುಪಮವಾದುದು. ನಮ್ಮ ಪೂರ್ವಜರು ಭವಿಷ್ಯತ್ತಿನ ಪೀಳಿಗೆ ಯ ಬದುಕನ್ನು ಮನವರಿಸಿ ಹಲವಾರು ಸಂಸ್ಥೆಗಳನ್ನು ರೂಪಿಸಿದ್ದಾರೆ. ಆದರ ಫಲವೇ ಈ ಕಾರ್ಯಕ್ರಮವಾಗಿದೆ. ನಮ್ಮ ಭಾವೀ ಪೀಳಿಗೆ ಇದರ ಲಾಭ ಪಡೆದು ತಾವೂ ಕೂಡಾ ಮುಂದಿನ ಪ್ರಜೆಗಳಿಗೆ ಆಸ್ತಿತ್ವ ರೂಪಿಸಬೇಕು ಎಂದು ಜೋನ್ ಡಿಸಿಲ್ವಾ ಮಕ್ಕಳನ್ನು ಹಾಗೂ ಪಾಲಕರನ್ನು ಸಲಹಿಸಿದರು.

ವಿದ್ಯೆಗೆ ಅರಿವಿನ ಬಂಡವಾಳವಾಗಿಸಬೇಕು. ಸ್ತಿರಾಸ್ಥಿ, ಚಿನ್ನಾಭರಣ, ಹಣ ಇತ್ಯಾದಿಗಳನ್ನು ವಿನಿಯೋಗಿಸಿದರೆ ಅದು ತಾತ್ಕಲಿಕ ವಿನಿಯೋಗವಾಗಬಲ್ಲದು. ಆದರೆ ಜ್ಞಾನದಲ್ಲಿ ವಿನಿಯೋಗಿಸದಿದ್ದರೆ ಬದುಕು ಕಟ್ಟಲು ಸಾಧ್ಯವಾಗುವುದು. ವಿದ್ಯಾಂತರಾದಾಗಲೇ ಒಳ್ಳೆಯ ಸಂಪಾದನೆಯ ಕೆಲಸ ಗಳಿಸಲು ಸಾಧ್ಯ. ನಮ್ಮ ಕಾಲದ ಮೆಟ್ರಿಕ್ ಶಿಕ್ಷಣ ಈಗಿನ ಪದವೀಧರ ವಿದ್ಯೆಗೆ ಸಮಾನ. ಆದರೂ ಅಂದು ನಾವು ಪರಿಶ್ರಮಿತರಾಗಿ ಅಭ್ಯಾಶಿಸಿದ ಫಲವಾಗಿ ಇಂದು ಈ ಮಟ್ಟ ಏರುವಂತಾಗಿದೆ. ವಿದ್ಯಾರ್ಥಿ ಜೀವನವನ್ನು ಅರಿವಿನಿಂದ ತುಂಬಿಸಿ ಪರಿಶ್ರಮದಿಂದ ಮುನ್ನಡೆಯಿರಿ ಜೊತೆಗೆ ಮಾನವೀಯತಾ ಮೌಲ್ಯಗಳನ್ನು ರೂಢಿಸಿ ಕೌಶಲ್ಯತಾ ಸಾಧನೆಯೊಂದಿಗೆ ಬದುಕು ರೂಪಿಸಿ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಆಲ್ಬರ್ಟ್ ಡಿಸೋಜಾ ಕರೆಯಿತ್ತರು.

ಬ್ಯಾಂಕ್‍ನ ನಿರ್ದೇಶಕ ತೋಮಸ್ ಡಿ.ಲೋಬೊ ಮಾತನಾಡಿ ಯಶಸ್ವಿಗೆ ಸಾಧನೆಯೊಂದಿಗೆ ಮಾಪನವಾಗಿದೆ. ಬಾಲ್ಯದಲ್ಲೇ ಭವ್ಯ ಧ್ಯೇಯವನ್ನೀರಿಸಿ ಸುಶಿಕ್ಷಿತರಾಗಿ ಬಾಳಿನ ಬುನಾದಿ ಕಟ್ಟಿಕೊಂಡಾಗ ಜೀವನ ನೆಮ್ಮದಿದಾಯಕ ಆಗುವುದು. ಯಾವನು ಜಾಗತಿಕವಾಗಿ ತಿಳಿಯಲಾರನೋ ಅವನು ಬದುಕು ಕಟ್ಟುವಲ್ಲಿ ವಿಫಲನಾಗುವನು. ಆದುದರಿಂದ ಮಕ್ಕಳು ಕಾಲಾಹರಣ ಮಾಡದೆ ಸುಶಿಕ್ಷಿತರಾಗಿ ನಾಳಿನ ಬದುಕನ್ನು ಇಂದೇ ಭದ್ರವಾಗಿಸಬೇಕು ಎಂದರು.

ಬ್ಯಾಂಕ್‍ನ ನಿರ್ದೇಶಕರುಗಳಾದ ವಿನ್ಸೆಂಟ್ ಮಥಾಯಸ್, ನ್ಯಾಯವಾದಿ ಪಿಯುಸ್ ವಾಸ್, ಬೆನೆಡಿಕ್ಟಾ ರೆಬೆಲ್ಲೋ, ಜೆರಾಲ್ಡ್ ಕರ್ಡೋಜಾ, ಸಂಜಯ್ ಶಿಂಧೆ, ಆ್ಯನ್ಸಿ ಡಿಸೋಜಾ, ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್.ಡಿಸೋಜಾ ವೇದಿಕೆಯಲ್ಲಿ ಆಸೀನರಾಗಿದ್ದರು. ಆಲ್ಬನ್ ಫೆರ್ನಾಂಡಿಸ್ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದು, ವಿಲಿಯಂ ಎಲ್.ಡಿಸೋಜಾ ಪ್ರಸ್ತಾವನೆಗೈದರು. ಬ್ಯಾಂಕ್‍ನ ಪ್ರಬಂಧಕ ಎಡ್ವರ್ಡ್ ರಾಸ್ಕಿನ್ಹಾ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಆ್ಯಂಡ್ರಿಯಾ ಫೆರ್ನಾಂಡಿಸ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು ಉಪ ಪ್ರಧಾನ ಪ್ರಬಂಧಕ ಝೆನೊನ್ ಡಿಕ್ರೂಜ್ ವಂದಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal