About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.30: ಒಬ್ಬ ಮೇರು ನಟನಾದ ಮೋಹನ್ ಅವರಿಗೆ ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ ಪ್ರಾಪ್ತಿಸಿದ್ದು ಕರ್ನಾಟಕ ಸಂಘಕ್ಕೆ ಅಪಾರ ಅಭಿಮಾನವೆಣಿಸುತ್ತಿದೆ. ಇದು ಅರ್ಹ ಕಲಾವಿದನಿಗೆ ಸಂದ ಗೌರವವಾಗಿದೆ. ಕಲಾವಿದರು ಸಮಾಜದ ಜವಾಬ್ದಾರಿ ಅರಿತು ವರ್ತಿಸಬೇಕು. ಕರ್ನಾಟಕ ಸಂಘದ ಕಲಾಭಾರತಿ ಸಾಕ್ಷಚಿತ್ರ ಎಂದು ಕರ್ನಾಟಕ ಸಂಘ ಮುಂಬಯಿ ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ಅಭಿಪ್ರಾಯ ಪಟ್ಟರು.

ಇಂದಿಲ್ಲಿ ಶನಿವಾರ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಸಂಸ್ಥೆ ಕರ್ನಾಟಕ ಸಂಘ ಮುಂಬಯಿ ಜೊತೆಗೂಡಿ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಡಾ| ಭವಾನಿ ಮಾತನಾಡಿರು.

ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಕರ್ನಾಟಕ ನಾಟಕ ಅಕಾಡಮಿ ಪೂರ್ವಾಧ್ಯಕ್ಷ, ಹಿರಿಯ ರಂಗತಜ್ಞ ಜೆ.ಲೋಕೇಶ್, ಗೌರವ ಅತಿಥಿಗಳಾಗಿ ಬೋಂಬೆ ಬಂಟ್ಸ್ ಎಸೋಸಿಯೇಶನ್ ಹಾಗೂ ಜವಾಬ್ ಸಂಸ್ಥೆಗಳ ಮಾಜಿ ಅಧ್ಯಕ್ಷ ಎನ್.ಸಿ ಶೆಟ್ಟಿ, ಚಲನಚಿತ್ರ ನಿರ್ಮಾಪಕ ಮಹೇಶ್ ತಲಕಾಡ್, ನೀನಾಸಂ ಸಂಸ್ಥೆಯ ರಂಗ ನಿರ್ದೇಶಕ ಎಂ.ಗಣೇಶ್, ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಉಪಸ್ಥಿತರಿದ್ದು, ಮುಂಬಯಿಯ ಹೆಸರಾಂತ ರಂಗನಟ ಮೋಹನ್ ಮಾರ್ನಾಡ್ ಅವರಿಗೆ (ಪತ್ನಿ ಸೀಮಾ ಮೋಹನ್, ಸುಪುತ್ರಿ ಕು| ಮಾನವಿ ಮೋಹನ್ ಒಳಗೊಂಡು) ರೂಪಾಯಿ 25,000/- ನಗದು, ಪ್ರಶಸ್ತಿಪತ್ರ, ಪದಕ, ಸ್ಮರಣಿಕೆಯೊಂದಿಗೆ `ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ-2018' ಪ್ರದಾನಿಸಿ ಅಭಿನಂದಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

ಅಂತೆಯೇ ಕಲಾ ಭಾರತಿ ಕಲಾವಿದರು, ಬಾಲಿವುಡ್‍ನ ಹೆಸರಾಂತ ಗಾಯಕ ವಿಜಯ ಪ್ರಕಾಶ್ ಮತ್ತು ಮಹತಿ ವಿಜಯ್ ಮತ್ತು, ಮಾರ್ನಾಡ್ ಯುವಕ ಮಂಡಲದ ಅಡ್ಕರೆ ಸುರೇಶ್ ಪೂಜಾರಿ ಮತ್ತು ರಮೇಶ್ ಶೆಟ್ಟಿ, ಶಾಲಾ ಕಾಲೇಜು ಗೆಳೆಯರು, ಕಲಾ ಭಾರತಿ ಕಲಾವಿzರೂ ಮೋಹನ್ ಮಾರ್ನಾಡ್ ಅವರನ್ನು ಗೌರವಿಸಿದರು. ಇದೇ ಶುಭಾವಸರದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕಾರ್ಯಕಾರಿ ಸಮಿತಿ ಸದಸ್ಯೆ, ಪ್ರಶಸ್ತಿ ಪುರಸ್ಕೃತ ಲೇಖಕಿ, ಕವಯತ್ರಿ ಅನಿತಾ ಪಿ.ಪೂಜಾರಿ ತಾಕೋಡೆ ರಚಿತ ಐದನೆಯ ಕೃತಿ ಮೋಹನ್ ಮಾರ್ನಾಡ್ ಅವರ ಜೀವನ ಕಥನ `ಮೋಹನ ತರಂಗ' ಕೃತಿಯನ್ನು ರಂಗತಜ್ಞ ಡಾ| ಬಿ.ಆರ್ ಮಂಜುನಾಥ್ ಬಿಡುಗಡೆ ಗೊಳಿಸಿದರು. ರಂಗ ಕಲಾವಿದ ಅವಿನಾಶ್ ಕಾಮತ್ ಕೃತಿ ಪರಿಚಯಿಸಿ ಈ ಕೃತಿಯು ಮೋಹನ್ ಅವರ ಅಂತರಂಗದ ಪರಿಚಯ ಅನಾವರಣ ಮಾಡುತ್ತಿದೆ ಎಂದರು.

ಮೋಹನ್ ರಂಗಭೂಮಿಯ ಯಶಸ್ಸಿನ ಕನಸ್ಸನ್ನು ಕಂಡಿದ್ದಾರೆ ಮತ್ತು ನಿಷ್ಠೆಯೊಂದಿಗೆ ಅದನ್ನು ನನಸಾಗಿಸಿದ್ದಾರೆ. ಕರ್ನಾಟಕದ ಕಲಾವಿದರ ಪರವಾಗಿ ಅವರನ್ನು ಅಭಿನಂದಿಸುವೆ ಎಂದು ಜೆ. ಲೊಕೇಶ್ ತಿಳಿಸಿದರು.

ಡಾ| ಮಂಜುನಾಥ ಮಾತನಾಡಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಅನ್ಯೋನತೆಗೆ ಈ ಕಾರ್ಯಕ್ರಮ ಎಂದರು.

ರಂಗನಟ ಕಂಡವ ಮಹಾನ್ ಕಲಾವಿದ ಮೋಹನ್ ಮಾರ್ನಾಡ್. ಇಂತಹ ಸಿದ್ಧಿ ಸಾಧನೆಗಳನ್ನು ಗುರುತಿಸಿ ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ ಪ್ರಾಪ್ತಿಸಿ ಅಭಿನಂದಿಸಿದ್ದು ನಮ್ಮೆಲ್ಲರ ಅಭಿಮಾನದ ಸಂಗತಿ ಎಂದು ಎನ್.ಸಿ ಶೆಟ್ಟಿ ನುಡಿದರು.

ಡಾ| ಉಪಾಧ್ಯ ಮಾತನಾಡಿ ನಟನೆ ಮತ್ತು ಕೃತಿಗಳ ಮೂಲಕ ನಮ್ಮನ್ನು ಮೋಡಿ ಮಾಡಿದ ಮೋಹನ್ ಓರ್ವ ಅತ್ಯಾದ್ಭುತ ಕಲಾವಿದ. ಸೊಗಸಾದ ಮೋಹನ ತರಂಗ ಕೃತಿಯೂ ಅಭಿಮಾನದ ರಚನೆಯಾಗಿದೆ. ಮೋಹನ್ ಅವರಿಗೆ ಎಲ್ಲಾ ಬಗೆಯ ಯಶಸ್ಸು ದೊರೆಯಲಿ ಎಂದರು.

ಟೆಲಿವಿಷನ್ ಪ್ರಾರಂಭದ ಬಳಿಕ ನಾವು ದೂರವಾದೆವು. ಆದರೆ ಇನ್ನು ಮುಂದಾದರೂ ದೊಡ್ಡ ಚಿತ್ರದಲ್ಲಿ ನಾವು ಜೊತೆಯಾಗಿ ಅಭಿನಯಿಸುವ ಎಂದು ಮಹೇಶ್ ಆಶಯ ವ್ಯಕ್ತಪಡಿಸಿದರು.

ಕೃತಿಕರ್ತೆ ಅನಿತಾ ಪೂಜಾರಿ ಮಾತನಾಡಿ ಈ ವರೆಗಿನ ಎಲ್ಲಾ ಕೃತಿಗಳ ಪೈಕಿ ಇದು ನನಗೆ ಅತ್ಯಂತ ಖುಷಿ ಕೊಟ್ಟ ಕೃತಿ. ಈ ಕೃತಿಗೆ ಸಹಕರಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು.

ನನ್ನ ಪಾಲಿಗೆ ತ್ರಿಪಟ್ಟು ಭಾಗ್ಯ. ಎಲ್ಲರ ಪ್ರೀತಿಯನ್ನು ಸಂಪಾದಿಸಿದ್ದೇನೆ. ನನಗೆ ಕೃತಿಯ ಮೂಲಕ ಚಿರಂಜೀವತ್ವ ನೀಡಿದವರು ಡಾ| ಉಪಾಧ್ಯ. ಜಿರೋದಿಂದ ನನ್ನ ಹೀರೋ ಮಾಡಿದ್ದು ಬರಹ. ಆದ್ದರಿಂದ ಕೃತಿಯನ್ನು ಓದಬೇಕು. ಹೆತ್ತಂಬೆಗಿಂತ ಈ ಮರಾಠಿ ಮಣ್ಣನ್ನು ಪ್ರೀತಿಸುತ್ತೇನೆ ಎಂದು ಮೋಹನ್ ಮಾರ್ನಾಡ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ| ಭರತ್‍ಕುಮಾರ್ ಪೆÇಲಿಪು ನಿರ್ದೇಶನದಲ್ಲಿ ನಿರ್ಮಿತ ಮೋಹನ್ ಮಾರ್ನಾಡ್ ಜೀವನ ನಡೆಯ ಸಾಕ್ಷ ್ಯಚಿತ್ರ ಪ್ರದರ್ಶಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೋಹನ ಸಹೋದರ ಮತ್ತು ಬಳಗಅವರಿಂದ ತಾಳಮದ್ದಳೆ ಪ್ರಸ್ತುತ ಪಡಿಸಿತು.

ಕಾರ್ಯಕ್ರಮದಲ್ಲಿ ವೈ.ಎಲ್ ಶೆಟ್ಟಿ, ಭವಾನಿ ವೈ.ಶೆಟ್ಟಿ, ಸುರೇಂದ್ರ ಮಾರ್ನಾಡ್, ಮಾರ್ನಾಡ್ ಪರಿವಾರ ಉಪಸ್ಥಿತರಿದ್ದರು. ಮಾ| ಸುವಿಧ್ ಸೂರಿ ಮಾರ್ನಾಡ್ ಪ್ರಾರ್ಥನೆಯನ್ನಾಡಿದರು. ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷ ಡಾ| ಭರತ್‍ಕುಮಾರ್ ಪೊಲಿಪು ಅತಿಥಿಗಳನ್ನು ಪರಿಚಯಿಸಿದರು. ರಾಜೀವ ನಾಯ್ಕ್ ಅಭಿನಂದನಾ ಭಾಷಣಗೈದರು. ಶ್ಯಾಮಲಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ನಳಿನಿ ಪ್ರಸಾದ್ ಕೃತಜ್ಞತೆ ಸಮರ್ಪಿದರು.

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal