About Us       Contact

 

(ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಂಬಯಿ, ನ.16: ನೀನೋ ನಾನೋ ನಾಟಕ ಹಾಗೂ ಆಧ್ಯಾತ್ಮಿಕ ಗುಣ ಹೊಂದಿರುವ ನಾಟಕ ಗೊಂಬೆ. ನನಗೆ ಖುಷಿ ಕೊಟ್ಟ ನಾಟಕಗಳು. ಈ ಕೃತಿಯ ಎಲ್ಲಾ ನಾಟಕಗಳು ರಂಗದಲ್ಲಿ ಮೂಡಿ ಬಂದು ಮೆಚ್ಚುಗೆಗೆ ಪಾತ್ರವಾಗಲಿ ಎಂದು ನಾಡಿನ ಹಿರಿಯ ಸಾಹಿತಿ, ಸಂಶೋಧಕ, ಬಿಎಸ್‍ಕೆಬಿಎ ಸಂಸ್ಥೆಯ ಮುಖವಾಣಿ `ಗೋಕುಲವಾಣಿ' ಮಾಸಿಕದ ಗೌರವ ಸಂಪಾದಕ ಡಾ| ವ್ಯಾಸರಾಯ ನಿಂಜೂರು ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದ ವೆಂಕಟೇಶ್ ನಿವಾಸದಲ್ಲಿನ ಕನ್ನಡ ಸಂಘ ಮುಂಬಯಿ ಇದರ ಕಛೇರಿಯಲ್ಲಿ ಆಯೋಜಿಸಿದ್ದ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದು ಲೇಖಕಿ, ಸೃಜನಾ ಗೌರವ ಕೋಶಾಧಿಕಾರಿ ಡಾ| ದಾಕ್ಷಾಯಣಿ ಯಡಹಳ್ಳಿ ರಚಿತ `ನೀನೋ ನಾನೊ' ನಾಟಕ ಕೃತಿ ಬಿಡುಗಡೆ ಗೊಳಿಸಿ ಡಾ| ನಿಂಜೂರು ಮಾತನಾಡಿದರು.

ಕರ್ನಾಟಕ ಸಂಘ ಮುಂಬಯಿ ಇದರ ಮಾಜಿ ಉಪಾಧ್ಯಕ್ಷ, ಪ್ರಶಸ್ತಿ ಪುರಸ್ಕೃತ ರಂಗತಜ್ಞ ಡಾ| ಭರತ್‍ಕುಮಾರ್ ಪೆÇಲಿಪು ಇವರು ಸೃಜನಾ ಪರಿವಾರದ ಲೇಖಕಿಯರಿಂದ ರಚಿತ ಒಂದು ಭಾವಯಾನ `ನಮ್ಮ ಕವಿತೆ' ಕೃತಿ ಬಿಡುಗಡೆ ಗೊಳಿಸಿದರು. ಲೇಖಕಿ ಸುಜಾತ ಯು.ಶೆಟ್ಟಿ ಮತ್ತು ಶಿಕ್ಷಕ ಹಾಗೂ ಲೇಖಕ ಅಮರೀಶ್ ಪಾಟೀಲ್ ಕ್ರಾವಾಗಿ ಕೃತಿಗಳನ್ನು ಪರಿಚಯಿಸಿದರು.

ಡಾ| ಭರತ್‍ಕುಮಾರ್ ಮಾತನಾಡಿ ಸೃಜನ ಬಳಗದ್ದು ಒಳ್ಳೆಯ ಬೆಳವಣಿಗೆ ನವ್ಯ ಕವಿತೆಯಲ್ಲಿ ಸಿಂಹನ ಕ್ಷಿಷ್ಣತೆ. ನವ್ಯ ಕವಿತೆ ಬರೆಯಲು ಒಂದು ದೃಷ್ಟಿಯಿಂದ ಸುಲಭ, ಇನ್ನೊಂದು ದೃಷ್ಟಿಯಿಂದ ಕಷ್ಟ. ಓದಿದಷ್ಟು ನಮ್ಮ ಅರಿವು ಹೆಚ್ಚುತ್ತದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಪಾಂಥೀಯ ನೆಲೆಗಳಲ್ಲಿ ಇರುವುದು ವಿಶಾದನೀಯ. ಲೇಖಕನಾದವ ಯಾವುದು ಸತ್ಯ ಇದೆಯೋ ಅದನ್ನು ಎತ್ತಿ ಹಿಡಿಯಬೇಕು. ಸಾಹಿತ್ಯದ ಮೂಲಕ ಮೌಲ್ಯ ಎತ್ತಿಹಿಡಿಯಬೇಕು. ಕನ್ನಡಕ್ಕೆ ನಮ್ಮ ವಿಶಿಷ್ಠ ಕೊಡುಗೆ ಆಗಬೇಕು. ಬೌತಿಕ ಮಾನಸಿಕವಾಗಿ ಬೆಳೆದಂತೆ ಕೃತಿ ರಚಿಸಲು ತೊಡಗಬೇಕು. ಮಾನವೀಯ ನೆಲೆಯಲ್ಲಿ ಸಾಹಿತ್ಯ ಸೃಷ್ಟಿಸಬೇಕು ಎಂದರು.

 ಸೃಜನಶೀಲರಾದ ಸೃಜನ ಬಳಗ ಹಾಕಿ ಕೊಟ್ಟ ದಾರಿಯಲ್ಲಿ ನಾವೂ ನಡೆಯಬೇಕು. ಈ ಕೃತಿಯ ಹಿಂದಿನ ಶ್ರಮವನ್ನು ಗಮನಿಸಬೇಕು ಎಂದು ಅಮರೀಶ್ ಪಾಟೀಲ್ ಮಾತನಾಡಿ ನಮ್ಮ ಕವಿತೆ ಕೃತಿ ಬಗ್ಗೆ ತಿಳಿಸಿದರು.

ನಾಲ್ಕು ನಾಟಕಗಳ ಸಂಕಲನ ಹಾಗೂ ಆಡು ಭಾಷೆಯ ಸೊಗಸು, ವೈವಿಧ್ಯ ದೃಶ್ಯ ನಿರ್ಮಿತ, ಪಾತ್ರ, ಚಿತ್ರಣದಿಂದ ಕೂಡಿದ ಇಲ್ಲಿನ ನಾಟಕ ಓದುಗರನ್ನು ಆಕರ್ಷಿಸುತ್ತದೆ. ಇಲ್ಲಿನ ನಾಟಕಗಳಲ್ಲಿ ಮಾನವೀಯತೆಯ ಪಾತ್ರಗಳು ಮನಮುಟ್ಟುವಂತೆ ಮಾಡುತ್ತವೆ ಸುಜತಾ ಶೆಟ್ಟಿ ಮಾತನಾಡಿ ನಿನೋ ನಾನೊ ಕೃತಿ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ `ಸೃಜನಾ' ಸಂಸ್ಥೆಯು ನಾಡಿನ ಹಿರಿಯ ಸಾಹಿತಿ, ಸೃಜನಾ ರೂವಾರಿ, ಡಾ| ಸುನೀತಾ ಎಂ.ಶೆಟ್ಟಿ, ಸಹ ಸಂಚಾಲಕಿ ಡಾ| ಜಿ.ಪಿ ಕುಸುಮಾ, ಗೌರವ ಜೊತೆ ಕಾರ್ಯದರ್ಶಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಜತೆ ಗೌರವ ಕೋಶಾಧಿಕಾರಿ ಅನಿತಾ ಪಿ.ಪೂಜಾರಿ ತಾಕೋಡೆ, ಸದಸ್ಯೆಯರಾದ ಡಾ| ಗಿರಿಜಾ ಶಾಸ್ತ್ರೀ, ಮೀನಾ ಕಾಳಾವರ, ಪದ್ಮಜಾ ಮನ್ನೂರು, ಹೇಮಾ ಸದಾನಂದ ಅಮೀನ್, ಸುರೇಖಾ ಹೆಚ್.ದೇವಾಡಿಗ, ಅಕ್ಷತಾ ದೇಶಪಾಂಡೆ, ಸವಿತಾ ಎಸ್.ಶೆಟ್ಟಿ, ಲೇಖಕರಾದ ಡಾ| ಕರುಣಾಕರ ಎನ್.ಶೆಟ್ಟಿ, ಡಾ| ಕೆ.ರಘುನಾಥ್, ಮೋಹನ್ ಮಾರ್ನಾಡ್, ಸಾ.ದಯಾ ಮತ್ತಿತರರು ಉಪಸ್ಥಿತರಿದ್ದರು.

ಸುಶೀಲಾ ದೇವಾಡಿಗ ಪ್ರಾರ್ಥನೆಯನ್ನಾಡಿದರು. ಸಂಚಾಲಕಿ ಶಾರದಾ ಅಂಬೆಸಂಗೆ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ವಾಣಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕೃತಜ್ಞತೆ ಸಮರ್ಪಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal