About Us       Contact

 

 (ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

 ಮುಂಬಯಿ, ನ.೦೩: ಮುಂಬಯಿನಲ್ಲಿ ಮರಾಠಿ ಕನ್ನಡಿಗರ ಬಾಂಧವ್ಯ ಭವ್ಯವಾಗಿದ್ದು ಇದು ಸಾಮರಸ್ಯತ್ವ ತೋರುತ್ತದೆ. ಕನ್ನಡಿಗರು ಅನ್ಯ ಭಾಷೆಗಳನ್ನು ಪ್ರೀತಿಸಿ, ಪರಭಾಷೆಗಳನ್ನು ಸುಲಭವಾಗಿ ತಿಳಿದು ವ್ಯವಹಾರಿಸಬಲ್ಲ ಭಾಷಾಪ್ರೇಮಿಗಳು. ಆದುದರಿಂದಲೇ ಭಾಷೆ, ಸಂಸ್ಕತಿ, ವಿಚಾರಧಾರೆಗಳ ಸ್ವೀಕೃತೆಗೆ ಕನ್ನಡಿಗರೇ ಮೊದಲಿಗರು. ಅದರಲ್ಲೂ ಮುಂಬಯಿವಾಸಿ ಕನ್ನಡಿಗರು ಗಂಟೆಯ ನಿಮಿಷವೊಂದರ ಸಮಯಪ್ರಜ್ಞೆಯ ಲೆಕ್ಕಾಚಾರವುಳ್ಳವರಾಗಿ ದ್ದೂ ಕನ್ನಡದ ಭಾಷೆ ಬೆಳೆಸಿ ಸಂಸ್ಕತಿ ಪೋಷಿಸುವ ಶ್ರಮ ಸ್ತುತ್ಯಾರ್ಹ ಎಂದು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಐ.ಪಾಟೀಲ್ ನುಡಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಹೊರನಾಡ ಸಂಸ್ಥೆ ಕರ್ನಾಟಕ ಸಂಘ ಮುಂಬಯಿ ವಾರ್ಷಿಕವಾಗಿ ಕೊಡಮಾಡುವ `ಡಾ| ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ-೨೦೧೭'ಯನ್ನು ಇಂದಿಲ್ಲಿ ಭಾನುವಾರ ಸಂಜೆ ಮಾಟುಂಗಾದ ಲ್ಲಿನ ಮೈಸೂರು ಅಸೋಸಿಯೇಶನ್‌ನ ಸಭಾಂಗಣದಲ್ಲಿ ಪ್ರದಾನಿಸಿದ್ದು ಪ್ರಶಸ್ತಿ ಪ್ರಾಯೋಜಕಿ ಡಾ| ಸುನೀತಾ ಶೆಟ್ಟಿ ಅವರನ್ನೊಳಗೊಂಡು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಕಲಾಜಗತ್ತು ಸಂಸ್ಥೆಯ ಅಧ್ಯಕ್ಷ, ರಾಷ್ಟಿನ ನಾಟಕಕಾರ ಮಾನ್ಯತೆಯ ರಂಗತಜ್ಞ ಡಾ| ವಿಜಯಕುಮಾರ್ ಶೆಟ್ಟಿ ತೋನ್ಸೆ ಇವರಿಗೆ ಗೌರವಧನ ರೂಪಾಯಿ೧೫,೦೦೦/- ನಗದು, ಪ್ರಶಸ್ತಿಪತ್ರ, ಫಲಪುಷ್ಫ, ಫಲಕವನ್ನೀಡಿ ಶಾಲು ಹೊದಿಸಿ ಪ್ರಶಸ್ತಿ ಪ್ರದಾನಿಸಿ ಗೌರವಿಸಿ ಶಂಕರಗೌಡ ಮಾತನಾಡಿದರು.

 

ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ ಮನೋಹರ ಎಂ.ಕೋರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಂಟರ ಸಂಘ ಮುಂಬಯಿ ಇದರ ಟ್ರಸ್ಟೀ ಹಾಗೂ ಅವೆನ್ಯೂ ಹೊಟೇಲು ಸಮೂಹದ ನಿರ್ದೇಶಕ ಬೋಳ ರಘುರಾಮ ಕೆ.ಶೆಟ್ಟಿ (ಬೆಳಗಾಂ), ಮೊಗವೀರ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಕಾರ್ಯಧ್ಯಕ್ಷ ಸದಾನಂದ ಎ.ಕೋಟ್ಯಾನ್, ನಾಡಿನ ಹಿರಿಯ ಸಾಹಿತಿ ಪ್ರಾಚಾರ್ಯ ಡಾ| ವಿಶ್ವನಾಥ ಕಾರ್ನಾಡ್, ಅತಿಥಿü ಅಭ್ಯಾಗತರಾಗಿ ವೇದಿಕೆಯನ್ನು ಅಲಂಕರಿಸಿದ್ದರು.

ಕನ್ನಡದ ಸಂಸ್ಕತಿಯನ್ನು ಉಳಿಸುವಂತಹ ಕಾರ್ಯ ಮಾಡುತ್ತೀರಿ. ಸೇವಾ ಮೂಲಕ ಪ್ರಶಸ್ತಿಕ್ಕಿಂತಲೂ ಮಿಗಿಲಾಗಿ ಭಾಷಾ ರಕ್ಷಣೆ ಮಾಡಬೇಕೆಂಬ ಹಂಬಲ, ಮನೋಭಾವನೆ, ಸ್ವಂತವಾಗಿ ಕಲಿತು, ಸಾಹಿತಿಗಳಾಗಿ, ಆದರ ಮೇಲೆ ಪುಸ್ತಕಗಳನ್ನು ಬರೆದು, ಅದ್ಭುತ ವಿಚಾರಧಾರಣೆಗಳನ್ನು ಇಟ್ಟುಕೊಂಡು ಬದುಕಿನೊಂದಿಗೆ ಭಾಷೆ ಬೆಳೆಸುತ್ತಾ ಇದ್ದೀರಿ ನಿಮಗೆ ಶತಕೋಟಿ ನಮನಗಳು. ಇಂದು ಕರ್ನಾಟಕದ ಸಂಸ್ಕತಿಯ0ತಹ ಸಂಸ್ಕತಿ ದೇಶದಲ್ಲಿ ಬೇರೆಲ್ಲೂ ಇಲ್ಲ. ಇಡೀ ರಾಷ್ಟçದಲ್ಲಿ ಕರ್ನಾಟಕಕ್ಕಿಂತ ಸುಂದರ ರಾಜ್ಯವೂ ಬೇರೆಯಿಲ್ಲ. ಹಾಗೆಯೇ ನಮ್ಮ ಸಂಸ್ಕತಿ ಕೂಡ ಮಿಗಿಲಾದದ್ದು, ಎಲ್ಲಾ ತರಹದ ಪುಷ್ಪ, ಹಣ್ಣುಹಂಪಲು, ಚ್ಹಾ, ಕಾಫಿ, ಹತ್ತಿ ಹೀಗೇ ಎಲ್ಲಾ ವಸ್ತುಗಳೂ ಬೆಳೆಯುವಂತಹ ಸಮೃದ್ಧಿಗೆ ಮೀಗಿಲಾದ ರಾಜ್ಯವೇ ನಮ್ಮ ಕರ್ನಾಟಕ. ಇಂತಹ ರಾಜ್ಯದ ಸಂಸ್ಕತಿಯನ್ನು ಮುಂಬಯಿಯಲ್ಲಿ ಬೆಳೆಸುವಂತದು ತುಂಬಾ ಅಭಿನಂದನೀಯ ಎಂದೂ ಮುಂಬಯಿ ಕನ್ನಡಿಗರನ್ನು ಶಂಕರ ಪಾಟೀಲ್ ಪ್ರಶಂಸಿಸಿದರು.

ಸ0ಘದ ಮಾಜಿ ಉಪಾಧ್ಯಕ್ಷ ಡಾ| ಭರತ್‌ಕುಮಾರ್ ಪೊಲಿಪು ಅಭಿನಂದನಾ ಭಾಷಣಗೈದು ರಂಗಭೂಮಿಯ ಚರಿತ್ರೆಯಲ್ಲಿ ಪ್ರಧಾನವಾಗಿ ದಾಖಲಾಗುವ ಹೆಸರು ಅಂದರೆ ವಿಜಯಕುಮಾರ್ ಶೆಟ್ಟಿ. ರಂಗಭೂಮಿಗೆ ಇವರೋರ್ವ ಹೊಸತನದ ಸ್ಪರ್ಶ ನೀಡಿದ ಅಪ್ರತಿಮ ಕಲಾವಿದ. ನಾಟಕಗಳಿಗೆ ತಾಜಾತನ ನೀಡಿದ ನಾಟಕಕಾರನೂ ಹೌದು. ಯಕ್ಷಗಾನ ಮತ್ತು ನಾಟಕರಂಗದ ಅವಿನಾಭಾವ ಸಂಬ0ಧ ಬೆರೆಸಿ ಬೆಳೆಸಿದ ಶ್ರೇಷ್ಠ ಕಲಾವಿದ. ಕಲಾಕ್ಷೇತರದಲ್ಲಿ ಅಭಿನಯದ ಕಾರ್ಖಾನೆ (ಫ್ಯಾಕ್ಟರಿ) ಮಾಲೀಕರಿದ್ದಂತೆ ಈ ಪುರಸ್ಕಾರಕ್ಕೆ ಭಾಜನರಾಗಿ ಪ್ರಶಸ್ತಿಯ ಪ್ರತಿಷ್ಠಿಯನ್ನು ಹೆಚ್ಚಿಸಿದ್ದಾರೆ ಎಂದು ಪುರಸ್ಕತರನ್ನು ಅಭಿನಂದಿಸಿದರು.

ಸುನೀತಾ ಶೆಟ್ಟಿ ಅವರು ಮುಂಬಯಿ ಸಾಹಿತ್ಯ ಲೋಕದ ಹಿರಿಯಕ್ಕ ಎಂದೇ ಜನಜನಿತರು. ಅವರ ನಾಮದಲ್ಲಿ ಪ್ರಶಸ್ತಿ ಪಡೆದುಕ್ಕೊಳ್ಳುವ ವಿಜಯ ಕುಮಾರ್ ಒಬ್ಬ ಸರ್ವೋತ್ತಮ ನಾಟಕಕಾರ, ಕಲಾವಿದ ಜೊತೆಗೆ ಓರ್ವ ಸಮಯ, ಶಿಸ್ತು ಬದ್ಧ, ಕಲಾಜ್ಞಾನವುಳ್ಳ ಅದ್ಭುತ ಮನಷ್ಯ. ಕಲೆ ಮತ್ತು ಸಾಹಿತ್ಯ ಮನುಷ್ಯನ ಮಧ್ಯೆ ಗೋಡೆಗಳನ್ನು ನಿರ್ಮಿಸುವುದಿಲ್ಲ ಬದಲಿಗೆ ಮೈಮನಸ್ಸಿನ ಗೋಡೆಗಳನ್ನು ನಿರ್ಮಿಸುತ್ತದೆ. ಉತ್ತಮ ಮನುಷ್ಯನನ್ನು ರೂಪಿಸಲು ಕಾರಣವಾಗುತ್ತದೆ. ಕಳೆದ ೮ ದಶಕಗಳಿಂದ ಮುಂಬಯಿನಲ್ಲಿ ಕನ್ನಡದತೇರನ್ನೆಳೆದು ಸಾಹಿತ್ಯಕ್ಕೆ ನಿರಂತರ ಪ್ರೋತ್ಸಹವನ್ನು ಕರ್ನಾಟಕ ಸಂಘದ ಸೇವೆಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದು ಸದಾನಂದ ಕೋಟ್ಯಾನ್ ತಿಳಿಸಿದರು.

ಕಾರ್ನಾಡ್ ಮಾತನಾಡಿ ಡಾ| ಸುನೀತಾ ಶೆಟ್ಟಿ ಅವರ ಈ ಸಾಹಿತ್ಯ ಪ್ರಶಸ್ತಿಯೂ ಬರೀ ಸಾಹಿತ್ಯಕ್ಕೆ ಮಾತ್ರ ಮೀಸಲಿರಲಿ. ನಾಟಕವು ಒಂದು ಸಾಹಿತ್ಯವೇ. ನಾಟಕ ಸಾಹಿತ್ಯಕ್ಕಿಂತ ಬೇರೆ ಅಲ್ಲ. ನಾಟಕದಲ್ಲಿ ನಾವೂ ಸಾಹಿತ್ಯವನ್ನು ನೋಡಬಹುದು. ವಿಜಯಕುಮಾರ್ ಅವರ ನಾಟಕಗಳು ತುಂಬಾ ಸಾಹಿತ್ಯ ಸಂಸ್ಜತಿವುಳ್ಳವು. ಸಾಹಿತ್ಯ, ನಾಟಕ, ಕಲೆ ಇದರಿಂದ ನಮ್ಮ ಸಂಸ್ಕತಿಯ ಅಭಿವೃದ್ಧಿ ಸಾಧ್ಯ. ಸಾಹಿತ್ಯ, ಮನುಷ್ಯ, ಚರಿತ್ರೆ ಇದೆಲ್ಲಾ ಒಂದೇ. ಮನುಷ್ಯ ಸಾಹಿತ್ಯವನ್ನು ರಚಿಸುತ್ತಾನೆ. ಸಾಹಿತ್ಯ ಮನುಷ್ಯನು ರಚಿಸುತ್ತಾನೆ. ಅದಕ್ಕಾಗಿ ಸಾಹಿತ್ಯ ಮತ್ತು ಮನುಷ್ಯ ಸಂಬ0ಧ ಹತ್ತಿರವಾದುದು ಎಂದರು.

ಇಂದು ಯಾರ ಹೆಸರಿಲ್ಲಿ ಪ್ರಶಸ್ತಿ ದೊರೆತಿದೆಯೋ, ಡಾ| ಸುನೀತಾ ಶೆಟ್ಟಿ ಅವರಿಗೆ ಮೊದಲು ಗುರುವಂದನೆ ಮಾಡುತ್ತೇನೆ. ಅವರಿಗೆ ಹೊಗಳುವ ಮನಸ್ಸು ತುಂಬಾ ಇವೆ. ಯಾಕೆಂದರೆ ಅವರು ಅಂತಹ ಕೆಲಸಗಳನ್ನು ಮಾಡಿದ್ದಾರೆ. ಅವರು ನನ್ನ ತಾಯಿಯ ವಯಸ್ಸಿನವರು ಈ ಪ್ರಶಸ್ತಿ ನನ್ನ ತಾಯಿಯ ಪ್ರಶಸ್ತಿ ಎಂದು ಸ್ವೀಕರಿಸುತ್ತೇನೆ. ನನಗೆ ಪ್ರಶಸ್ತಿ ಕೊಡುವ ಸಂಸ್ಥೆಯು ನನಗೆ ತುಂಬಾ ಹತ್ತಿರವಾದುದು. ಇದು ಪ್ರೀತಿಯಿಂದ ಕೊಟ್ಟ ಸನ್ಮಾನವಾಗಿದೆ. ಇದು ನನ್ನ ಭಾಗ್ಯ. ಇದೆ ದೊಡ್ಡ ಪ್ರಶಸ್ತಿ. ಈ ಪ್ರಶಸ್ತಿ ಕೊಟ್ಟವರ ಮನಸ್ಸು ದೊಡ್ಡ ಮನಸ್ಸು. ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಪ್ರಶಸ್ತಿಗೆ ಉತ್ತರಿಸಿ ವಿಜಯಕುಮಾರ್ ಶೆಟ್ಟಿ ನುಡಿದರು.

ಕಳೆದ ಎಂಟವರೆ ದಶಕಗಳಿಂದ ಕರ್ನಾಟಕ ಸಂಘ ಮುಂಬಯಿಯಲ್ಲಿ ಕನ್ನಡ ನಾಡು, ನುಡಿ ಸೇವೆಗೈಯುತ್ತಿದೆ. ಇದೀಗ ಸಂಘದ ಕಟ್ಟಡದ ಕೆಲಸ ತುಂಬಾ ಬರದಿಂದ ಸಾಗಿತ್ತಿದ್ದಂತೆ. ಕರ್ನಾಟಕ ಸಂಘ ಕನ್ನಡಿಗರಿಗೆ ಒಂದು ಮನೆ ಇದ್ದಂತೆ. ಈ ಹೊಸ ಮನೆ ಬಹುತೇಕ ಬೇಗ ಪ್ರಾರಂಭವಾಗುವುದು ಎಲ್ಲರ ಆಸೆ. ವಿಜಯ ಕುಮಾರ್ ಮುಂಬಯಿಗರ ಕಲಾರತ್ನ, ಅಪೂರ್ವ ಸಾಧಕ. ದೊಡ್ಡ ಸಂಘಟಕ. ಅವರ ಸೇವೆ ಮುಂಬಯಿ ರಂಗಭೂಮಿಗೆ ಹಾಗೂ ಚನಲಚಿತ್ರಗೂ ಪರಿಚಿತ ಹಾಗೂ ಯಶಸ್ವಿಗರು. ಅವರಿಗೂ ನಮ್ಮ ಅಭಿನಂದನೆ. ಅವರ ಮುಂದಿನ ಯೋಜನೆಗೆ ನಮ್ಮ ಶುಭಾ ಹಾರೈಕೆಗಳು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಮನೋಹರ ಕೋರಿ ತಿಳಿಸಿದರು.

ಸಂಘದ ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ, ಗೌರವ ಕೋಶಾಧಿಕಾರಿ ದಿನೇಶ್ ಎ.ಕಾಮತ್, ಮೋಹನ್ ಮಾರ್ನಾಡ್, ಯು.ಧನಂಜಯ ಕುಮಾರ್, ಹರೀಶ್ ಕೆ.ಹೆಜ್ಮಾಡಿ, ನ್ಯಾ| ವಸಂತ ಕಲಕೋಟಿ, ಪ್ರೇಮನಾಥ್ ಮುಂಡ್ಕೂರು, ಬಿ.ಜಿ ನಾಯಕ್ ಕಮಲಾಕ್ಷ ಸರಾಫ್, ಡಾ| ಈಶ್ವರ ಅಲೆವೂರು, ಜಿ.ಎನ್ ನಾಯಕ್, ಸುರೇಂದ್ರ ಮಾರ್ನಾಡ್, ಡಾ| ಜಿ.ಪಿಕುಸುಮ, ಶ್ರೀನಿವಾಸ ಜೋಕಟ್ಟೆ, ಆನಿತಾ ಪೂಜಾರಿ ತಾಕೊಡೆ, ನಾರಾಯಣ ಶೆಟ್ಟಿ, ಕರುಣಾಕರ ಪುತ್ರನ್, ಯಶೋಧಾ ಶೆಟ್ಟಿ, ಅಶೋಕ ಎಸ್.ಸುವರ್ಣ, ಸುಂದರ ಕೋಟ್ಯಾನ್, ನಾರಾಯಣ ರಾವ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಪುರಸ್ಕತರಿಗೆ ಶುಭಾರೈಸಿದರು.

ಸುಶೀಲಾ ಎಸ್.ದೇವಾಡಿಗ ನಾಡಗೀತೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಮಾಲತಿ ಚಂದ್ರಕಾ0ತ ಅತಿಥಿಗಳನ್ನು ಪರಿಚಯಿಸಿದರು. ರಾಜೀವ ಎನ್.ನಾಯಕ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಸ್ವಾಗತಿಸಿ, ಪ್ರಸ್ತಾವನೆಗೈದು ಕೃತಜ್ಞತೆ ಸಮರ್ಪಿದರು.

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal