About Us       Contact

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.03: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಕಾಂದಿವಿಲಿ ಅಕುರ್ಲಿ ರೋಡ್ ಅಲ್ಲಿನ ಸ್ಥಳಾಂತರಿತ ಶಾಖೆಯನ್ನು ಇಂದಿಲ್ಲಿ ಗುರುವಾರ ಬೆಳಿಗ್ಗೆ ಕಾಂದಿವಿಲಿ ಪೂರ್ವದ ಸ್ಥಾನೀಯ ಅಶೋಕ್ ನಗರ್ ಇಲ್ಲಿನ ರೂಬಿ ಕ್ರೆಸೆಂಟ್ ಬಿಝಿನೆಸ್ ಬೊವ್ಲೆವರ್ಡ್ ಕಟ್ಟಡದ ತಳ ಮಹಡಿಯಲ್ಲಿ ಶುಭಾರಂಭ ಗೊಳಿಸಲ್ಪಟ್ಟಿತು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಗೌರವಾಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಬಿಡಿಸಿ ಶಾಖೆ ಉದ್ಘಾಟಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ (ಬ್ಯಾಂಕ್‍ನ ಮಾಜಿ ನಿರ್ದೇಶಕ) ದೀಪ ಪ್ರಜ್ವಲಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆಯನ್ನೀಡಿದರು. ಬ್ಯಾಂಕ್‍ನ ನಿರ್ದೇಶಕ ಜ್ಯೋತಿ ಕೆ. ಸುವರ್ಣ ಎಟಿಎಂ ಸೇವೆಯನ್ನೂ, ನಿರ್ದೇಶಕ ಗಂಗಾಧರ್ ಜೆ.ಪೂಜಾರಿ ಸೇಫ್ ಲಾಕರ್ ಸೇವೆಗಳಿಗೆ ಹಾಗೂ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆಯನ್ನೀಡಿ ಶುಭಾರೈಸಿದರು.

ಈ ಶುಭಾವಸರದಲ್ಲಿ ಅಭ್ಯಾಗತರಾಗಿ ಅವೆನ್ಯೂ ಹೊಟೇಲು ಸಮೂಹದ ನಿರ್ದೇಶಕ ಬೋಳ ರಘುರಾಮ ಕೆ.ಶೆಟ್ಟಿ, ಬಂಟ್ಸ್ ನ್ಯಾಯ ಮಂಡಳಿಯ ಸದಸ್ಯ, ಹಿರಿಯ ಹೊಟೇಲು ಉದ್ಯಮಿ ಸಂಜೀವ ಎಂ.ಶೆಟ್ಟಿ, ಶ್ರೀ ಶನಿಮಹಾತ್ಮ ಸೇವಾ ಸಮಿತಿ ಸಮಿತಿ ಖಾರ್ ಇದರ ಗೌ| ಪ್ರ| ಕಾರ್ಯದರ್ಶಿ ಯೊಗೇಶ್ ಕೆ.ಹೆಜ್ಮಾಡಿ, ಶಿವರಾಮ ಶೆಟ್ಟಿ, ಯುವ ಉದ್ಯಮಿ ಸಾಗರ್ ಸಿಂಗ್, ಕಟ್ಟಡದ ಮಾಲೀಕ ಶೈಲೇಶ್ ದಲಾಲ್, ಕಿಶೋರ್ ಸಾವಂತ್, ಸಿ.ಎಸ್ ಪೂಜಾರಿ, ಭಾಸ್ಕರ್ ಬಂಗೇರಾ, ಜಿ.ಬಿ ಅಂಚನ್, ಉಮೇಶ್ ಸುರತ್ಕಲ್, ಕಲಾವಿದ ವಾಸುದೇವ ಮಾರ್ನಾಡ್ ಕೆ. ಪುಟ್ಟಸ್ವಾಮಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ರಿತೇಶ್ ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭೇಚ್ಛ ಕೋರಿದರು.

ಬೊವ್ಲೆವರ್ಡ್ ಕಟ್ಟಡ ಸೊಸೈಟಿ ಕಾರ್ಯದರ್ಶಿ ಎಸ್.ಖಟಾಟೆ ಮಾತನಾಡಿ ಇದೊಂದು ನಿಜಾರ್ಥದ ಗ್ರಾಹಕಸ್ನೇಹಿ ಬ್ಯಾಂಕ್ ಆಗಿದೆ. ಎಲ್ಲಾ ಗ್ರಾಹಕರ ಕಾಳಜಿ ವಹಿಸಿ ತ್ವರಿತ ಸೇವೆ ನೀಡುತ್ತಿರುವುದು ಪ್ರಶಂಸನೀಯ. ಜನರ ಗಳಿಕೆಯ ಹಣಕಾಸು ಭದ್ರತೆಗೆ ಇದೊಂದು ಭರವಸೆಯ ಬ್ಯಾಂಕ್ ಆಗಿದೆ. ಇನ್ನೂ ಹಲವು ಶಾಖೆಗಳು ತೆರೆಯಲ್ಪಟ್ಟು ರಾಷ್ಟ್ರದ ಬಹುದೊಡ್ಡ ಬ್ಯಾಂಕ್ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಚಂದ್ರಶೇಖರ ಪೂಜಾರಿ ಮಾತನಾಡಿ ಬ್ಯಾಂಕ್‍ನ ಸ್ಥಳಾಂತರ ಪ್ರಗತಿಯ ಸಂಕೇತವಾಗಿದೆ. ಗ್ರಾಹಕರ ಉತ್ತಮ ಸೇವೆಯ ಧ್ಯೋತಕವೂ ಹೌದು. ಬ್ಯಾಂಕ್ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿ ಇನ್ನಷ್ಟು ಪ್ರಗತಿ ಕಾಣಲಿ ಎಂದು ಶುಭ ಹಾರೈಸಿದರು.

ಬ್ಯಾಂಕ್‍ನ ನಿರ್ದೇಶಕರಾದ ನ್ಯಾ| ಎಸ್.ಬಿ ಅವಿೂನ್, ಭಾಸ್ಕರ್ ಎಂ.ಸಾಲ್ಯಾನ್, ಪ್ರೇಮನಾಥ್ ಪಿ.ಕೋಟ್ಯಾನ್, ಮೋಹನ್‍ದಾಸ್ ಎ.ಪೂಜಾರಿ, ಎಂ.ಎನ್ ಕರ್ಕೇರ, ಬ್ಯಾಂಕ್‍ನ (ನಿಯೋಜಿತ) ಆಡಳಿತ ನಿರ್ದೇಶಕ ವಿದ್ಯಾನಂದ ಎಸ್.ಕರ್ಕೇರಾ, ಜಂಟಿ ಆಡಳಿತ ನಿರ್ದೇಶಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ದಿನೇಶ್ ಬಿ.ಸಾಲ್ಯಾನ್, ಪ್ರಧಾನ ಪ್ರಬಂಧಕ ವಾಸುದೇವ ಎಂ.ಸಾಲ್ಯಾನ್, ಉಪ ಪ್ರಧಾನ ಪ್ರಬಂಧಕರಾದ ಜನಾರ್ದನ ಎಂ.ಪೂಜಾರಿ, ಸತೀಶ್ ಎಂ.ಬಂಗೇರಾ, ಸಹಾಯಕ ಪ್ರಧಾನ ಪ್ರಬಂಧಕರಾದ ಜಗದೀಶ್ ಎನ್.ಪೂಜಾರಿ, ನಿವೃತ್ತ ಉನ್ನತಾಧಿಕಾರಿ ಶೋಭಾ ದಯಾನಂದ್, ಶಾಖಾ ಪ್ರಬಂಧಕರಾದ ನವೀನ್ ಕರ್ಕೇರ (ಅಂಧೇರಿ ಪೂರ್ವ), ಪ್ರೇಮಾನಂದ್ ಪೂಜಾರಿ (ಸಯಾನ್-ಧಾರಾವಿ), ವಸಂತ್ ಸಾಲ್ಯಾನ್ (ಮಲಾಡ್ ಪಶ್ಚಿಮ), ಪ್ರವೀಣ್ ಅವಿೂನ್ (ಮಲಾಡ್-ಕೋಕಣಿಪಾಡ), ಅಭಿವೃದ್ಧಿ ಇಲಾಖಾ ಅಧಿಕಾರಿಗಳಾದ ಸುನೀಲ್ ಎ.ಗುಜರನ್, ವಿಜಯ್ ಪಾಲನ್, ದೀಪಕ್ ಪ್ರಭು ಸೇರಿದಂತೆ ಬ್ಯಾಂಕ್‍ನ ಷೇರುದಾರರು, ನೂರಾರು ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಶಾಖೆಯ ಸರ್ವೋನ್ನತಿಗೆ ಯಶ ಕೋರಿದರು. ಬ್ಯಾಂಕ್‍ನ ನಿರ್ದೇಶಕರು ಶಾಖೆಯ ಅಧಿಕಾರಿಗಳು, ನೌಕರವೃಂದಕ್ಕೆ ಪುಪ್ಚಗುಪ್ಚಗಳನ್ನಿತ್ತು ಗೌರವಿಸಿದರು.

 

 

 

 

ಉಳ್ಳೂರು ಶೇಖರ್ ಶಾಂತಿ ಮತ್ತು ಧನಂಜಯ್ ಎಸ್.ಶಾಂತಿ ಉಳ್ಳೂರು ಅವರು ವಾಸ್ತುಹೋಮ, ವಾಸ್ತುಬಲಿ, ವಾಸ್ತುಪೂಜೆ, ಗಣಹೋಮ, ಲಕ್ಷ್ಮೀಸತ್ಯನಾರಾಯಣ ಪೂಜೆ, ದ್ವಾರಪೂಜೆ ನೆರವೇರಿಸಿ ಹರಸಿದರು. ಶ್ವೇತಾ ಉಲ್ಲಾಸ್ ಪೂಜಾರಿ ದಂಪತಿ ಹಾಗೂ ನಾರಾಯಣ ಸನಿಲ್ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು.

ಬ್ಯಾಂಕ್ ಅಧಿಕಾರಿ ಶೃತಿ ಅಂಕಿತ್ ಅಂಚನ್ ಅತಿಥಿüಗಳನ್ನು ಪರಿಚಯಿಸಿದರು. ಭಾರತ್ ಬ್ಯಾಂಕ್ ಸ್ಟಾಫ್ ವೆಲ್ಫೇರ್ ಕ್ಲಬ್‍ನ ಕಾರ್ಯದರ್ಶಿ ಮೋಕ್ಷ ಕುಂದರ್ ಮತ್ತು ದೀಪಾಲಿ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್‍ನ ಅಕುರ್ಲಿ ರೋಡ್ ಶಾಖೆಯ ಮುಖ್ಯಸ್ಥ ನಾರಾಯಣ ಎ.ಸನಿಲ್ ಸ್ವಾಗತಿಸಿದರು. ಶಾಖೆಯ ಸಹಾಯಕ ಮುಖ್ಯಸ್ಥೆ ಶಾರದಾ ಬೋಂಟ್ರಾ ಕೃತಜ್ಞತೆ ಸಮರ್ಪಿಸಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal