About Us       Contact


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಅ.02: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗ ವಾರ್ಷಿಕವಾ ಗಿ ಆಚರಿಸುವಂತೆ 2019ನೇ ವರ್ಷದ ಲಲಿತ ಸಹಸ್ರ, ಕುಂಕುಮಾರ್ಚನೆ, ಗಾರ್ಧ, ದಾಂಡಿಯಾ ರಾಸ್ ಕಾರ್ಯಕ್ರಮ ಇಂದಿಲ್ಲಿ ಬುಧವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿನ ನಾರಾಯಣ ಗುರು ಮಂದಿರದಲ್ಲಿ ಕೋಟಿಚೆನ್ನಯರ ಸನ್ನಿಧಿಯಲ್ಲಿ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಪದ್ಧತಿಯನುಸಾರ ನೆರವೇರಿಸಿತು.

 

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಮಾರ್ಗದರ್ಶನ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ಸಾರಥ್ಯದಲ್ಲಿ ನಡೆಸಲ್ಪಟ್ಟ ತ್ರಿವಳಿ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನ ಪಂಚಕುಟೀರ (ಸುವರ್ಣ ಮಂದಿರ) ಪೋವಾಯಿ ಇದರ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ದೀಪ ಬೆಳಗಿಸಿ ಉದ್ಘಾಟಿಸಿದರು.

ಅತಿಥಿüಗಳಾಗಿ ದೇವೇಂದ್ರ ವಿ.ಬಂಗೇರಾ, ಮೋಹನ್‍ದಾಸ್ ಹೆಜ್ಮಾಡಿ, ಜಯಲಕ್ಷ್ಮೀ ಚಂದ್ರಶೇಖರ್ ಪೂಜಾರಿ, ಶ್ರೀಮಂತಿ ಎಸ್.ಪೂಜಾರಿ, ಮೋಹಿನಿ ವಿ.ಆರ್‍ಕೋಟ್ಯಾನ್, ಸುಧಾ ಎಲ್ವಿ ಅವಿೂನ್, ಯಶೋಧ ಎನ್.ಟಿ ಪೂಜಾರಿ, ಅಸೋಸಿಯೇಶನ್‍ನ ಉಪಾಧ್ಯಕ್ಷ ಹರೀಶ್ ಜಿ.ಅವಿೂನ್, ಗೌ| ಪ್ರ| ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ರಾಹುಲ್ ಜೆ.ಸುವರ್ಣ ಮತ್ತಿತರ ಗಣ್ಯರು ವಿಶೇಷವಾಗಿ ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆಯರಾದ ಪ್ರಭಾ ಕೆ.ಬಂಗೇರ ಮತ್ತು ಗಿರಿಜಾ ಚಂದ್ರಶೇಖರ್, ಜೊತೆ ಕಾರ್ಯದರ್ಶಿ ಕುಸುಮಾ ಚಂದ್ರ ಅವಿೂನ್, ಕಾರ್ಯಕಾರಿ ಸಮಿತಿ ಸದಸ್ಯೆಯರು, ಮಹಿಳಾ ವಿಶೇಷ ಆಮಂತ್ರಿತ ಸದಸ್ಯೆಯರು ಸೇರಿದಂತೆ ಅನೇಕರು ಹಾಜರಿದ್ದು ರಾಘವ ಅವಿೂನ್, ಯೋಗೇಶ್ ನಾಥ್ ಮತ್ತು ಶ್ಯಾಮ್ ಅವಿೂನ್ ಭಜನೆಯೊಂದಿಗೆ ಲಲಿತ ಸಹಸ್ರನಾಮ ಕುಂಕುಮಾರ್ಚನೆ ಶಾಸ್ತ್ರೋಕ್ತವಾಗಿ ನಡೆಸಿದರು.

ಅಸೋಸಿಯೇಶನ್‍ನ ಕಾರ್ಯಕಾರಿ ಸಮಿತಿ ಸದಸ್ಯರು, ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಸದಸ್ಯರು, ಮಹಿಳಾ ಸದಸ್ಯೆಯರು ಹಾಜರಿದ್ದು ಮಹಾ ಆರತಿ, ಪ್ರಸಾದ ವಿತರಣೆ ಬಳಿಕ ನಡೆಸಲಾದ ಗಾರ್ಭ, ದಾಂಡಿಯಾ ನೃತ್ಯಾವಳಿಯಲ್ಲೂ ಪಾಲ್ಗೊಂಡ ದಸರೋತ್ಸವಕೆ ಮೆರುಗು ನೀಡಿದರು. ಮಹಿಳಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ಸ್ವಾಗತಿಸಿದರು. ಶ್ರೀ ಸುವರ್ಣ ಬಾಬಾ ಅವರನ್ನು ಚಂದ್ರಶೇಖರ ಎಸ್.ಪೂಜಾರಿ ಸಂಪ್ರಾದಾಯಿಕವಾಗಿ ಸನ್ಮಾನಿಸಿದರು. ಮಹಿಳಾ ಜೊತೆ ಕಾರ್ಯದರ್ಶಿ ಜಯಂತಿ ಎಸ್.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal