About Us       Contact

 

ಮುಂಬಯಿ, ಸೆ.14: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಲುಂಡ್ ಸ್ಥಳೀಯ ಕಚೇರಿಯು ಇಂದಿಲ್ಲಿ ಶನಿವಾರ ಅಪರಾಹ್ನ ಮುಲುಂಡ್ ಪೂರ್ವದ ನೀಲಂ ನಗರದಲ್ಲಿನ ಶ್ರೀ ವರ್ಧನ್ ಸಭಾಗೃಹದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಸಂಭ್ರಮಿಸಿತು. ಮುಲುಂಡ್ ವಿಧಾನಸಭಾ ಕ್ಷೇತ್ರದ ಶಾಸಕ, ಬಿಜೆಪಿ ಧುರೀಣ ಸರ್ದರ್ ತಾರಾ ಸಿಂಗ್ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆಯನ್ನಿತ್ತರು.

ಜಯಂತ್ಯೋತ್ಸವ ಪ್ರಯುಕ್ತ ಮಧ್ಯಾಹ್ನ ಬ್ರಹ್ಮಶ್ರೀ ನಾರಾಯಣ ಗುರುಪೂಜೆ ನಡೆಸಿದ್ದು ನಂತರ ಶ್ರೀರಾಧಾಕೃಷ್ಣ ಶ್ರೀ ಶನೀಶ್ವರ ಮಂದಿರ ಡೊಂಬಿವಲಿ ಭಕ್ತಾವೃಂದವು ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಮಹಾಪೂಜೆ ನೆರವೇರಿಸಿದರು. ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯೊಂದಿಗೆ ಗುರು ಜಯಂತ್ಯೋತ್ಸವ ಸಮಾಪನ ಕಂಡಿತು. ಪ್ರಕಾಶ್ ಭಟ್ ತಮ್ಮ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ಮಂಗಳಾರತಿಗೈದು ಪ್ರಸಾದ ವಿತರಿಸಿ ಶುಭಾರೈಸಿದರು. ಮುಲುಂಡ್ ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ಕೆ.ಸುರೇಶ್ ಕುಮಾರ್ ಮತ್ತು ರತ್ನಾ ಸುರೇಶ್ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಈ ಶುಭಾವಸರದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ನಿರ್ದೇಶಕ ನ್ಯಾ| ರಾಜಾ ವಿ.ಸಾಲ್ಯಾನ್, ಬ್ಯಾಂಕ್‍ನ ಪ್ರಧಾನ ಪ್ರಬಂಧಕರಾದ ವಿದ್ಯಾನಂದ ಎಸ್.ಕರ್ಕೇರಾ, ದಿನೇಶ್ ಬಿ.ಸಾಲ್ಯಾನ್, ನಿತ್ಯಾನಂದ ಎಸ್.ಕಿರೋಡಿಯನ್, ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ್ ಜಿ.ಸುವರ್ಣ, ಸತೀಶ್ ಎಂ.ಬಂಗೇರಾ, ಪ್ರಭಾಕರ ಜಿ.ಪೂಜಾರಿ, ಮುಲುಂಡ್ ಸ್ಥಳೀಯ ಕಚೇರಿ ಕೇಂದ್ರ ಕಚೇರಿ ಪ್ರತಿನಿಧಿ ಶಕುಂತಳಾ ಕೆ.ಕೋಟ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಪದಾಧಿಕಾರಿಗಳು ಗೌರವಿಸಿದರು.

ಮುಲುಂಡ್ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಕೆ.ಪಿ ಸಂಜೀವ, ಉಪಾಧ್ಯಕ್ಷರುಗಳಾದ ರವಿ ಕೋಟ್ಯಾನ್ ಮತ್ತು ಶಂಕರ ಅವಿೂನ್, ಗೌ| ಕಾರ್ಯದರ್ಶಿ ಸತೀಶ್ ಎಂ.ಪೂಜಾರಿ, ಗೌ| ಕೋಶಾಧಿಕಾರಿ ಶಂಕರ ಜೆ.ಪೂಜಾರಿ, ಜೊತೆ ಕೋಶಾಧಿಕಾರಿ ಶ್ರೀಧರ ಪೂಜಾರಿ ಹಾಲಿ-ಮಾಜಿ ಪದಾಧಿಕಾರಿಗಳು ಸೇರಿದಂತೆ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಮುಖ್ಯಸ್ಥರು, ಸದಸ್ಯರನೇಕರು ಉಪಸ್ಥಿತರಿದ್ದರು.

ಕಲಾ ಸೌರಭ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ಕೆ.ಸುರೇಶ್ ಕುಮಾರ್ ಸುಖಾಗಮನ ಬಯಸಿದರು. ಸತೀಶ್ ಎಂ.ಪೂಜಾರಿ ಧನ್ಯವದಿಸಿದರು.

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal