Print

 

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಸೆ.09:ಭಾರತದ ಪ್ರತಿಯೊಂದು ಭಾಗ ಹಾಗೂ ಮನೆಗಳಲ್ಲಿ ಗಣೇಶ ದೇವರ ಆರಾಧನೆ ನಡೆಯುತ್ತದೆ. ವಿಘ್ನ ವಿನಾಶಕನಾಗಿರುವ ಗಣೇಶ ದೇವರನ್ನು ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿ ಪೂಜಿಸಲಾಗುತ್ತದೆ. ಆ ಪೈಕಿ ಮಹಾನಗರದಲ್ಲೇ ಪ್ರಸಿದ್ಧಿಯ ಬೃಹನ್ಮುಂಬಯಿ ಚೆಂಬೂರು ತಿಲಕನಗರದಲ್ಲಿನ ಸಹ್ಯಾದ್ರಿ ಕ್ರೀಡಾ ಮಂಡಲ (ರಿ.) ಸಾರ್ವಜನಿಕ ಗಣೇಶೋತ್ಸವ ಸಮಿತಿವೊಂದಾಗಿದೆ. ಈ ಮಂಡಳವು ಈ ಬಾರಿ 43ನೇ ವಾರ್ಷಿಕ ಗಣೇಶೋತ್ಸವ ಸಂಭ್ರಮದಲ್ಲಿದೆ. ಛೋಟಾ ರಾಜನ್ ಮಂಡಳಿ ಎಂದೇ ಜನಜನಿತ ಈ ಸಹ್ಯಾದ್ರಿ ಕ್ರೀಡಾ ಮಂಡಲವು ಈ ಹಿಂದೆ ಮೈಸೂರು ಪ್ಯಾಲೇಸ್ ನಿರ್ಮಿಸಿ ಲಕ್ಷಾಂತರ ಭಕ್ತರನ್ನು ಆಕರ್ಷಿಸಿ ಭಾರೀ ಜನಪ್ರಿಯತೆ ಪಡೆದಿತ್ತು. ವರ್ಷಂಪ್ರತಿಯೂ ಹೊಸತನ, ವೈವಿಧ್ಯತೆಗೆ ಹೆಸರಾದ ಈ ಮಂಡಲವು ಈ ಬಾರಿ ಮನಾಕರ್ಷಕ, ಚಿತ್ತಕಾರ್ಷಕ, ಭಕ್ತಿ ಮೈಗೂಡಿಸುವ ಜನಮಾನ್ಯ ಸಂತ ಸ್ವಾಮಿ ಸಮರ್ಥ್ ಅವರ ಸಹ್ಯಾದ್ರಿ ಮಠ (ಭವಿಷ್ಯದಲ್ಲಿ ಸೃಷ್ಠಿಯಾಗಬೇಕಾದ) ಮಂಡಲ ರಚಿಸಿ ಭಕ್ತರನ್ನು ಸೆಳೆಯುತ್ತಿದೆ.

ಅಧ್ಯಕ್ಷ ರಾಹುಲ್ ಗಜಾನನ ವಾಲಂಜ್ ಅವರ ಪರಿಕಲ್ಪನೆಯಂತೆ ಸುಮಾರು 70 ಅಡಿ ಮತ್ತು 110 ಅಡಿ ಉದ್ದಗಲ ವಿಸ್ತೀರ್ಣದ ಪೆಂಡಾಲ್‍ನಲ್ಲಿ ರಾಹುಲ್ ಪರಬ್, ನಿಖಿಲ್ ಮೋರೆ, ಪ್ರಥಮೇಶ್ ದಾಳ್ವಿ ಅವರ ಕಲಾ ನಿರ್ದೇಶನದಲ್ಲಿ ರಚಿಸಲಾದ ಫೈಬರ್‍ನಲ್ಲಿ ನಿರ್ಮಿತ ಮಹಾರಾಷ್ಟ್ರದ ಸೋಲಾಪುರ ಇಲ್ಲಿನ ಅಕ್ಕಲ್‍ಕೋಟ್‍ನ ಸ್ವಾಮಿ ಸಮರ್ಥ್ ಅವರ ಸಹ್ಯಾದ್ರಿ ಮಠದ ಪರಿಕಲ್ಪನೆಯಲ್ಲಿ ಮಂಡಳದ ಪ್ರತಿಕೃತಿ ಸಿದ್ಧಗೊಳಿಸಲಾಗಿದೆ. ಮಂಡಳದ ಒಳಗೆ ಸತ್ಯ ದೇವುಕಾತಿ ಬೀದರ್ ರಚಿಸಿದ ಅತ್ಯಾಕರ್ಷಕ ಚಿತ್ರಗಳುಳ್ಳ ಸ್ವಾಮಿ ಸಮರ್ಥ್ ಅವರ 8 ಅವತಾರಗಳ ಮತ್ತು ಶೇಖರ್ ಸಾಣೆ ರಚಿತ 3 ಅವತಾರಗಳ ಭವ್ಯ, ದಿವ್ಯ ಸಂಕಲ್ಪದ ಮನಾಕರ್ಷಕ, ಭಕ್ತಿಭಾವುಕ ಹುಟ್ಟಿಸುವ ಚಿತ್ರಗಳು ಮಠದೊಳಗಿನ ಆಕರ್ಷಣೆಯಾಗಿದೆ.

ಸ್ಥಾನೀಯ ನಿವಾಸಿ ಛೋಟ ರಾಜನ್ (ನಿಕಾಳ್ಜೆ) ಅವರ ಸಾರಥ್ಯದ ಮಂಡಳಿ ಎಂದೇ ಹೆಸರಾಂತ ಈ ಮಂಡಳ ಕಳೆದ ಸುಮಾರು ನಾಲ್ಕು ದಶಕಗಳಿಂದ ಸೇವಾ ನಿರತವಾಗಿ ಮಹಾಗಣಪತಿ ಪ್ರತಿಷ್ಠಾಪಿಸಿ ಅತೀ ವಿಜೃಂಭನೆಯಿಂದ ಆರಾಧಿಸುತ್ತ್ತಿದೆ. ಈ ಬಾರಿಯೂ ಸುಜತಾ ವಾಲಂಜ್ ಅವರ ಸೇವೆಯಂತೆ ದೈನಂದಿನವಾಗಿ ಗಣಪತಿ ವಸ್ತ್ರಾಲಂಕಾರ ಬದಲಾವಣೆ ನಡೆಸಿ ಶ್ರೀ ಗಣಪನನ್ನು ಆರಾಧಿಸಲಾಗುತ್ತಿದೆ. ಪುರೋಹಿತ ರಾಮಚಂದ್ರ ನಾರಾಯಣ ವಾಟ್‍ವೇ ತಮ್ಮ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಗಣಪತಿಯನ್ನು ಪ್ರತಿಷ್ಠಾಪಿಸಿದ್ದು, ಈ ಸಂದರ್ಭದಲ್ಲಿ ಮಂಡಳದ ಅಧ್ಯಕ್ಷ ರಾಹುಲ್ ಗಜಾನನ ವಾಲಂಜ್, ಉಪಾಧ್ಯಕ್ಷ ಜಯ ಎ.ಶೆಟ್ಟಿ, ಕಾರ್ಯದರ್ಶಿ ಅಶೋಕ್ ಸಾತರ್ಡೇಕರ್, ಕೋಶಾಧಿಕಾರಿ ರಾಜೇಂದ್ರ ಮೋಹಿತೆ ಉಪಸ್ಥಿತರಿದ್ದರು. ಹನ್ನೊಂದು ದಿನಗಳಲ್ಲಿ ವಿವಿಧ ಸೇವೆಯೊಂದಿಗೆ ಪೂಜಿಸಲ್ಪಡುವ ಇಲ್ಲಿನ ಗಣಪತಿ ವೀಕ್ಷಣೆಗೆ ರಾಷ್ಟ್ರೀಯ, ರಾಜ್ಯದ ರಾಜಕೀಯ ಧುರೀಣರು, ಬಾಲಿವುಡ್ ತಾರಾಗಣ, ವಿವಿಧ ಕ್ಷೇತ್ರಗಳ ದಿಗ್ಗಜರು ಆಗಮಿಸಿ ಆನೆ ತಲೆಯನ್ನು ಹೊಂದಿರುವ ದೇವರನ್ನು ವಕ್ರತುಂಡನೆಂದು ಕರೆಯುವ ಬಾಗಿದ ಸೊಂಡಿಲ ದೇವರು ಲಂಭೋಧರನನಲ್ಲಿ ತಮ್ಮ ಬೇಡಿಕೆಗಳನ್ನು ವ್ಯಕ್ತಪಡಿಸಿ ಪ್ರಾಥಿರ್üಸುತ್ತಾರೆ. ಸದಾ ತಮ್ಮನ್ನೆಲ್ಲರನ್ನೂ ಮಂಗಳವನ್ನು ಹರಸುತ್ತಾ ಇಲ್ಲಿನ ಮಂಗಳಮೂರ್ತಿಯನ್ನು ಧನಾತ್ಮಕತೆ ಮತ್ತು ಅದೃಷ್ಟಕ್ಕಾಗಿ ಪೂಜಿಸುತ್ತಾರೆ.

 

ಇದೇ ಸೆ.12ನೇ ಗುರುವಾರÀ ಅನಂತ ಚತುರ್ಧಶಿ ದಿನ ಶಸ್ತ್ರಾಸ್ತ್ರವಾಗಿ ಈ ವಾರ್ಷಿಕ ಪೂಜಿತ ಏಕಾದಂತ ಮಹಾಗಣಪತಿ ವಿಸರ್ಜನೆ ನಡೆಸಲಾಗುವುದು. ಭಕ್ತಸಮೂಹದ ಭವ್ಯ ಮೆರವಣಿಗೆಯಲ್ಲಿ ಯಾವುದೇ ಬಣ್ಣಗಳ, ಪಟಾಕಿ, ಡಿಜೆ ಅಬ್ಬರ ಬಳಸದೆ ಬರೇ ಸಂಪ್ರದಾಯಿಕ ಡೋಲು, ಥಾಶೆ ಶಬ್ದಗಳ ನೀನಾದದಲ್ಲಿ ಶ್ರದ್ಧಾಭಕ್ತಿಯಿಂದ ಗಣಪತಿ ಜಲಸ್ತಂಭನ ನಡೆಸಲಾಗುವುದು. ಆ ಪ್ರಯುಕ್ತ ತುಳುಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ನಿರ್ಮಿತ ಸ್ವಾಮಿ ಸಮರ್ಥ್ ಮಠಕ್ಕೆ ಚಿತ್ತೈಸಿ ಶ್ರೀ ವಿಘ್ನವಿನಾಯಕನ ಅನುಗ್ರಹಕ್ಕೆ ಪಾತ್ರರಾಗುವಂತೆ ಜಯ ಎ.ಶೆಟ್ಟಿ ತಿಳಿಸಿದ್ದಾರೆ.