About Us       Contact

 

(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಆ.15:ತುಳು ಸಂಘ (ರಿ.) ಬರೋಡ ಇದರ ಮಕ್ಕಳೇ ಒಗ್ಗೂಡಿ (ಚಿಣ್ಣರು) ಇಂದಿಲ್ಲಿ ಗುರುವಾರ ಗುಜರಾತ್ ರಾಜ್ಯದ ಬರೋಡ ಇಲ್ಲಿನ ತುಳು ಚಾವಡಿ ಸಭಾಗೃಹದಲ್ಲಿ ರಾಷ್ಟ್ರಹಬ್ಬ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮೋಲ್ಲಾಸದಿಂದ ಸಂಭ್ರಮಿಸಿದರು.

ಭಾರತದ ಭವಿಷ್ಯತ್ತಿನ ಪ್ರಜೆಗಳಾದ ಮಕ್ಕಳೇ ಮಕ್ಕಳಿಗಾಗಿ ಸಂಭ್ರಮಿಸಿದ ವೈಶಿಷ್ಟ್ಯಮಯ ಕಾರ್ಯಕ್ರಮದ ಅಧ್ಯಕ್ಷತೆ ತುಳು ಸಂಘ ಬರೋಡ ಇದರ ಮಕ್ಕಳ ವಿಭಾಗದ ಕಾರ್ಯಧ್ಯಕ್ಷೆ ಕು| ಸೃಷ್ಟಿ ಎಸ್.ಶೆಟ್ಟಿ ವಹಿಸಿದ್ದು, ನಗರದ ಪ್ರತಿಭಾನ್ವಿತೆ ಕು| ಅಪೂರ್ವ ಶೆಟ್ಟಿ ಮುಖ್ಯ ಅತಿಥಿಯಾಗಿದ್ದು ದೀಪ್ರ ಪ್ರಜ್ವಲಿಸಿ ಸಂಭ್ರಮಕ್ಕೆ ಚಾಲನೆ ನೀಡಿ ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಮಕ್ಕಳು ತೊಡಗಿಸಿ ಕೊಳ್ಳುವಂತೆ ತಿಳಿಸಿ ಶುಭಾರೈಸಿದರು.

ಕಾರ್ಯಕ್ರಮದಲ್ಲಿ ತುಳು ಸಂಘ ಬರೋಡ ಇದರ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಡಾ| ಶರ್ಮಿಳಾ ಜೈನ್, ಮಂಜುಳಾ ಗೌಡ, ಮದನ್‍ಕುಮಾರ್ ಮೂಡಿಗೆರೆ ಸೇರಿದಂತೆ ನೂರಾರು ಮಕ್ಕಳು ಉಪಸ್ಥಿತರಿದ್ದು, ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದರು.

ಕೋಶಾಧಿಕಾರಿ ಕು| ಮಿಲಿ ಗೌಡ ವೇದಿಕೆಯಲ್ಲಿದ್ದು ಕು| ಇಷಾನಿ ಶೆಟ್ಟಿ ವೇದಿಕೆಯಲ್ಲಿದ್ದು ಕು| ಇಷಾನಿ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕು| ಆದಿತ್ಯ ಜೈನ್ ವಂದಿಸಿದರು. ಚಿಣ್ಣರು ವೈವಿಧ್ಯಮ ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

 

 

 

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal