About Us       Contact


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಆ.15: ಭಾರತೀಯ ರಾಷ್ಟ್ರೀಯ ಧ್ವಜವು ಭಾರತದ ಕೇಸರಿ, ಬಿಳಿ ಮತ್ತು ಭಾರತದ ಹಸಿರು ಬಣ್ಣದ ಸಮತಲವಾದ ತ್ರಿವರ್ಣವಾಗಿದ್ದು, ಸಂವಿಧಾನ ಸಭೆಯಲ್ಲಿ ಅಂಗೀಕೃತ ತಿರಂಗಾ ಧ್ವಜ ಭಾರತೀಯರಿಗೆ ಪಾವಿತ್ರ ್ಯತೆಯದ್ದಾಗಿದೆ. ಆದುದರಿಂದ ಧ್ವಜಾರೋಹಣ ಭಾರತೀಯರ ಹೆಮ್ಮೆಯಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಧ್ವಜವು ಇಲ್ಲಿನ ಸರ್ವ ಧರ್ಮೀಯರ ಧೈರ್ಯ ಮತ್ತು ತ್ಯಾಗ, ಶಾಂತಿ ಮತ್ತು ಸತ್ಯ ಮತ್ತು ನಂಬಿಕೆಯ ಸ್ವಾತಂತ್ರ್ಯದ ಧ್ಯೋತಾವಾಗಿದೆ. ಇಂತಹ ರಾಷ್ಟ್ರದಲ್ಲಿ ಮನುಕುಲದ ಸಮಬಾಳು, ಸಮಪಾಲು ಜೀವನವೇ ನಿಜಾರ್ಥದ ಸ್ವಾತಂತ್ರ್ಯ. ಸರ್ವ ಸಮಾಜದ ಒಗ್ಗಟ್ಟಿನ ಸಂಕೇತವೇ ನಿಜಾರ್ಥದ ಸ್ವಾತಂತ್ರ್ಯವಾಗಿದೆ ಎಂದು ಕನ್ನಡ ಸಂಘ ಸಾಂತಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್ ನುಡಿದರು.

ಇಂದಿಲ್ಲಿ ಗುರುವಾರ ಬೆಳಿಗ್ಗೆ ತನ್ನ ವಕೋಲಾ ಅಲ್ಲಿನ ಸಂಘದ ಸ್ವಕಚೇರಿಯಲ್ಲಿ ರಾಷ್ಟ್ರದ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮೋಲ್ಲಾಸದಿಂದ ಆಚರಿಸಿದ್ದು ಧ್ವಜಾರೋಹಣಗೈದು ಬಳಿಕ ಸಭಾಧ್ಯಕ್ಷತೆ ವಹಿಸಿ ಎಲ್.ವಿ ಅವಿೂನ್ ಮಾತನಾಡಿ ಪೂರ್ವಜರ ಹೋರಾಟ, ತ್ಯಾಗ ಬಲಿದಾನವನ್ನು ನಾವು ಸ್ಮರಿಸಲೇಬೇಕು. ಇವರೆಲ್ಲರ ತ್ಯಾಗದ ಸಂಪೂರ್ಣ ಜೀವನ ಹೋರಾಟದ ಫಲವಾದ ಸ್ವತಂತ್ರ್ಯ ಭಾರತವು ಸ್ವ-ಆಳ್ವಿಕೆಯ ದೇಶವಲ್ಲ. ಇದೊಂದು ಸಾರ್ವಭೌಮ ರಾಷ್ಟ್ರವಾಗಿದೆ. ಭಾರತವು ಬ್ರಿಟೀಷರ ಆಳ್ವಿಕೆಯಿಂದ ಮುಕ್ತರಾದಂತೆ ಕಟ್ಟುಕಟ್ಟಲೆ, ಜಾತೀವಾದಗಳಿಂದಲೂ ಮುಕ್ತರಾದಾಗ ಮಾತ್ರ ನಿಜಾರ್ಥದ ಸ್ವಾತಂತ್ರ್ಯ ಫಲಿಸುವುದು. ಸದ್ಯ ಈ ದೇಶವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಸಮರ್ಥ ಪ್ರಧಾನಿ ನಮ್ಮಲ್ಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಶುಭಾವಸರದಲ್ಲಿ ಸಂಘದ ಗೌ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್, ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ, ಸಲಹಾಗಾರರಾದ ಎನ್.ಎಂ ಸನೀಲ್, ಶಿವರಾಮ ಎಂ.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಮಾ ಎಂ.ಪೂಜಾರಿ, ವಿಜಯ ಕುಮಾರ್ ಕೆ.ಕೋಟ್ಯಾನ್, ಲಿಂಗಪ್ಪ ಬಿ.ಅವಿೂನ್, ಜಿ.ಆರ್ ಬಂಗೇರ ಸೇರಿದಂತೆ ಸಂಘದ ಸದಸ್ಯರನೇಕರು, ರಾಜಶೇಖರ್ ಅಂಚನ್,ಮಹಾಬಲ ಪೂಜಾರಿ, ಶೋಭಾ ಶೆಟ್ಟಿ, ಯಾದವ ಶೆಟ್ಟಿ, ಭವ್ಯ ವೈ.ಶೆಟ್ಟಿ, ಚಂದಯ್ಯ ಪೂಜಾರಿ, ಜೋತ್ಸಾ ್ನ ಶೆಟ್ಟಿ ಹಾಗೂ ಪರಿಸರದ ಇನ್ನಿತರ ರಾಷ್ಟ್ರಪ್ರೇಮಿಗಳು ಉಪಸ್ಥಿತರಿದ್ದರು.

ರಾಷ್ಟ್ರಗೀತೆಯೊಂದಿಗೆ ರಾಷ್ಟ್ರ ಸಂಭ್ರಮ ಆದಿಗೊಂಡಿತು. ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ವಂದಿಸಿದರು.

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal