About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಆ.15: ವ್ಯಕ್ತಿಯು ಉನ್ನತ ಶಿಕ್ಷಣವನ್ನು ಹೊಂದಿದ್ದರೆ, ಆ ವ್ಯಕ್ತಿ ಖಂಡಿತವಾಗಿಯೂ ಜೀವನದಲ್ಲಿ ಶೀಘ್ರವಾಗಿ ಯಶಸ್ಸನ್ನು ಪಡೆಯುತ್ತಾನೆ. ಅಂತಹ ವ್ಯಕ್ತಿಗೆ ಸಂಘಸಂಸ್ಥೆಗಳು, ಸರ್ಕಾರವೂ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತದೆ. ನಿಜವಾದ ವಿದ್ಯಾವಂತ ಸಾಧನಶೀಕ ವ್ಯಕ್ತಿಯಾಗಬಲ್ಲನು. ಆಹಿಂಸೆಯ ಸಹಾಯದಿಂದ ಭಾರತವನ್ನು ಸ್ವಾತಂತ್ರ್ಯ ರಾಷ್ಟ್ರವನ್ನಾಗಿಸಲಾಗಿದೆ. ಇಂತಹ ಧರ್ಮದಲ್ಲೇ ನಾವೂ ಮುನ್ನಡೆಯಬೇಕು. ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಯಾಸಪಟ್ಟ ಪ್ರಸಿದ್ಧ ದೇಶಭಕ್ತರನ್ನು ನೆನಪಿಸಿ ಅವರ ಆದರ್ಶಗಳನ್ನೂ ರೂಢಿಸಿಕೊಂಡು ಪ್ರಪಂಚದ ಅತ್ಯುತ್ತಮ ರಾಷ್ಟ್ರವಾಗಿಸಲು ಶ್ರಮಿಸೋಣ ಎಂದು ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ತಿಳಿಸಿದರು.

ಕುರ್ಲಾದಲ್ಲಿನ ಗುಲ್‍ರಾಜ್ ಟವರ್‍ನಲ್ಲಿನ ಗಾಣಿಗ ಸಮಾಜ ಮುಂಬಯಿ ಕಛೇರಿಯಲ್ಲಿ ಇಂದಿಲ್ಲಿ ಪೂರ್ವಾಹ್ನ ರಾಷ್ಟ್ರದ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮಿಸಿದ್ದು, ರಾಷ್ಟ್ರ ಧ್ವಜಾರೋಹಣಗೈದು ಸಭಾಧ್ಯಕ್ಷತೆ ವಹಿಸಿ ರಾಮಚಂದ್ರ ಗಾಣಿಗ ಮಾತನಾಡಿದರು.

ಸಂಸ್ಥೆಯ ಗೌರವಾಧ್ಯಕ್ಷ ಜಗನ್ನಾಥ ಎಂ.ಗಾಣಿಗ, ಉಪಾಧ್ಯಕ್ಷ ಬಿ.ವಿ ರಾವ್ ಮತ್ತು ಭಾಸ್ಕರ ಎಂ.ಗಾಣಿಗ, ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ, ಗೌ| ಕೋಶಾಧಿಕಾರಿ ಜಯಂತ ಪದ್ಮನಾಭ ಗಾಣಿಗ, ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ ವಿಜಯೇಂದ್ರ ಗಾಣಿಗ, ಮಹಿಳಾ ವಿಭಾಗಧ್ಯಕ್ಷೆ ತಾರಾ ಎನ್.ಭಟ್ಕಳ್, ಯುವ ವಿಭಾಗಧ್ಯಕ್ಷ ಗಣೀಶ್ ಆರ್.ಕುತ್ಪಾಡಿ, ಹಿರಿಯ ಮುಂದಾಳು ಯು.ಬಾಲಕೃಷ್ಣ ಕಟಪಾಡಿ, ಯುವೋದ್ಯಮಿ ರತ್ನಾಕರ್ ಶೆಟ್ಟಿ ಥಾಣೆ ವೇದಿಕೆಯಲ್ಲಿದ್ದು ಸಮಾಜದ ಬಾಂಧವರ ಮಕ್ಕಳಿಗೆ ಸಂಸ್ಥೆಯ ವಿದ್ಯೋದಯ ಸಮಿತಿ ಕೊಡಮಾಡುವ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದರು. ಇದೇ ಶುಭಾವಸರದಲ್ಲಿ ರಾಮಚಂದ್ರ ಎಂ.ಗಾಣಿಗ ಕೊಡಮಾಡಿದ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಸಂಸ್ಥೆಯ ಕಚೇರಿಯಲ್ಲಿ ಅನಾವರಣ ಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಜೊತೆ ಕಾರ್ಯದರ್ಶಿ ಜಗದೀಶ್ ಗಾಣಿಗ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸದಾನಂದ ಕಲ್ಯಾಣ್ಪುರ, ರಾಜೇಶ್ ಕುತ್ಪಾಡಿ, ಸೀತಾರಾಮ್ ಎಂ.ಆರ್, ಕೆ.ಶಾಂತಾರಾಮ ಮೂರ್ತಿ, ಆರತಿ ಸತೀಶ್ ಗಾಣಿಗ, ವೀಣಾ ದಿನೇಶ್ ಗಾಣಿಗ, ಆಶಾ ಹರೀಶ್ ತೋನ್ಸೆ, ದಿನೇಶ್ ರಾವ್ ಟಿ.ಎಸ್, ವಿನಾಯಕ ಭಟ್ಕಳ, ದಿನೇಶ್ ಗಾಣಿಗ ಭಯಂದರ್, ಗಂಗಾಧರ ಎನ್.ಗಾಣಿಗ, ಶಾಂತರಾಮ ಮೂರ್ತಿ, ಜಯಂತ್ ಗಾಣಿಗ, ಮೋಹನ್ ರಾವ್, ಸುಗುಣ ರಾಮಚಂದ್ರ ಗಾಣಿಗ ಕಚೇರಿ ಉಸ್ತುವರಿ ಪದ್ಮನಾಭ ಎನ್.ಗಾಣಿಗ ಮತ್ತಿತರರು ಹಾಜರಿದ್ದರು.

ಭಾರತ ರಾಷ್ಟ್ರದ ಧ್ವಜವು ವಿಶ್ವದಲ್ಲೇ ಶಾಂತಿ ಸಾರುವ, ಏಕತೆಯ, ಒಂದು ದೇಶ-ಒಂದು ನಿಶಾನಿ ಸಾರುವ ಧ್ವಜವಾಗಿದೆ. ಇಂತಹ ರಾಷ್ಟ್ರದಲ್ಲಿ ಬಾಳಿಬೆಳಗುವ ಇಲ್ಲಿನ ಪ್ರತೀಯೋರ್ವ ನಾಗರೀಕರು ರಾಷ್ಟ್ರಕ್ಕಾಗಿ ತಮ್ಮ ಸಮಯವನ್ನು ನೀಡಬೇಕು ಎಂದು ಉಪಾಧ್ಯಕ್ಷ ಬಿ.ವಿ ರಾವ್ ಅಭಿಪ್ರಾಯ ಪಟ್ಟರು.

ಬಾಲಕೃಷ್ಣ ಕಟಪಾಡಿ ಮಾತನಾಡಿ ಭವ್ಯ ಭಾರತದ ಕನಸುಕಂಡ ಪೂರ್ವಜರ ಶ್ರಮ, ದೂರದೃಷ್ಠಿಯ ಫಲವೇ ಸ್ವತಂತ್ರ್ಯ ಭಾರತವಾಗಿದೆ. ಸದಾ ನಮ್ಮ ರಕ್ಷಣೆಯಲ್ಲಿರುವ ಯೋಧರ ಮತ್ತು ಅವರ ಪರಿವಾರದ ಕಾಳಜಿಯೂ ನಮ್ಮೆಲ್ಲರ ಧರ್ಮವಾಗಿದೆ. ಇದನ್ನು ಯುವ ಪೀಳಿಗೆ ಅರ್ಥೈಸಿ ಬಾಳುವಂತಾಗಬೇಕು ಎಂದರು.

ವಿಜಯೇಂದ್ರ ಗಾಣಿಗ ಮಾತನಾಡಿ ಶಿಕ್ಷಣದ ಉದ್ದೇಶ ಅಂಕಗಳು, ಉತ್ತಮ ಪ್ರಮಾಣಪತ್ರ, ಪ್ರಶಸ್ತಿಗಳಿಗೆ ಮಾನದಂಡವಾಗಿಸದೆ ಓರ್ವ ಪ್ರಾಮಾಣಿಕ ಮತ್ತು ಬುದ್ಧಿವಂತ ನಾಗರೀಕರಾಗಿ ಬದುಕು ಕಟ್ಟಿಕೊಳ್ಳುವ ವರವಾಗಿಸÀಬೇಕು. ಸೂಕ್ತ ತರಬೇತಿ, ಉನ್ನತ ಶಿಕ್ಷಣ, ಸಾಮಾನ್ಯ ಜ್ಞಾನ, ಕೌಶಲ್ಯ ಮತ್ತು ಪ್ರಮಾಣೀಕರಣದ ಅಗತ್ಯಕ್ಕಾಗಿ ಸಮುದಾಯದಲ್ಲಿನ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಮಕ್ಕಳು ಸುಶಿಕ್ಷಿತರಾದರೆ ಇಡೀ ಸಮುದಾಯ, ಸಮಾಜವೇ ಸಧೃಡಗೊಳ್ಳುವುದು ಎಂದ ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಲಕೃಷ್ಣ ತೋನ್ಸೆ ಪುರಸ್ಕೃತ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಆದಿತ್ಯ ದಿನೇಶ್ ರಾವ್, ನಿತೇಶ್ ಬಿ.ರಾವ್, ಸ್ಮೀತಾ ಗೋಪಾಲ ಗಾಣಿಗ ಇವರು ರಾಷ್ಟ್ರಭಕ್ತಿ, ಗೌರವದ ಬಗ್ಗೆ ಭಾಷಣಗೈದರು. ಬಿ.ವಿ ರಾವ್ ಪ್ರಸ್ತ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ಆರ್.ಗಾಣಿಗ ಸ್ವಾಗತಿಸಿ ಕೃತಜ್ಞತೆ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal