About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಆ.09: ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆ ಸಹಕಾರಿ ಕ್ಷೇತ್ರದ ಸೇವೆಗಾಗಿ ವಾರ್ಷಿಕವಾಗಿ ಪ್ರದಾನಿಸುವ `ಸಹಕಾರಿ ಬ್ಯಾಂಕ್ ಪುರಸ್ಕಾರ' ಪ್ರದಾನ ಸಮಾರಂಭ ಇಂದಿಲ್ಲಿ ಶುಕ್ರವಾರ ರಾತ್ರಿ ದಾದರ್ ಪಶ್ಚಿಮದ ಪ್ರಭಾದೇವಿಯಲ್ಲಿನ ವೊವ್‍ಜ್ ಬಾಕ್ವೆಟ್ ಸಭಾಗೃಹದಲ್ಲಿ ಆಯೋಜಿಸಿತ್ತು. ಸಮಾರಂಭದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲ್ಪಟ್ಟಿದ್ದು 2018-2019ನೇ ಕ್ಯಾಲೆಂಡರ್ ಸಾಲಿನ ರೂಪಾಯಿ 2,000 ಕೋಟಿ ಅಧಿಕ ಠೇವಣಿ ವ್ಯವಹಾರ ವಿಭಾಗದ ಪ್ರಥಮ ಸ್ಥಾನಕ್ಕೆ ಭಾಜನವಾದ ತುಳು-ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಸಂಸ್ಥೆಗೆ `ಸರ್ವೋತ್ಕೃಷ್ಟ ಬ್ಯಾಂಕ್' ಪುರಸ್ಕಾರ ಪ್ರದಾನಿಸಿ ಗೌರವಿಸಿತು.

ಬ್ಯಾಂಕ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಕಾಶಿನಾಥ್ ಮೋರೆ, ಉಪಾಧ್ಯಕ್ಷ ವಿಠಲ ಚಿವಿಲ್ಕರ್, ಸಂಚಾಲಕ ಸಿ.ಬಿ.ಅಡ್ಸೂಲ್ ಮತ್ತು ಮುಖ್ಯ ಸಿಇಒ ಸೋನಾಲಿ ಕದಂ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು, ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಕಾರ್ಯಧ್ಯಕ್ಷ ಜಯ ಸಿ.ಸುವರ್ಣ, ಉಪಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್, ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಅವರಿಗೆ ಪ್ರಶಸ್ತಿ ಫಲಕ, ಪ್ರಶಸ್ತಿಪತ್ರ ಹಾಗೂ ಪುಷ್ಫಗುಪ್ಚವನ್ನಿತ್ತು ಅಭಿನಂದಿಸಿದರು.

ಗ್ರಾಹಕರ ತ್ವರಿತ ಮತ್ತು ಶೀಘ್ರಗತಿಯ ಗುಣಮಟ್ಟದ ಸೇವಾವೈಖರಿ, ಹಣಕಾಸು ವ್ಯವಸ್ಥೆ ಸುಧಾರಣೆ ಹಾಗೂ ವಿವಿಧ ಸೌಲಭ್ಯಗಳ ಯೋಜನೆಳೊಂದಿಗೆ ಗ್ರಾಹಕರ ವಿಶ್ವಾಸ ಮೂಡಿಸಿ ಅಸಾಧರಣಾ ಕಾರ್ಯನಿರ್ವಹಿಸಿ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತರ ಸೇವೆಗೈದ ಭಾರತ್ ಬ್ಯಾಂಕ್‍ನ ಅಸೋಯೇಶನ್‍ನ 41ನೇ ವಾರ್ಷಿಕ ಮಹಾಸಭೆ ಮತ್ತು ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಹಸ್ತಾಂತರಿಸಲಾಯಿತು.

ಬ್ಯಾಂಕ್ಸ್ ಅಸೋಸಿಯೇಶನ್‍ನ ಉಪಾಧ್ಯಕ್ಷ ವಿಠಲ ಚಿವಿಲ್ಕರ್, ಸಂಚಾಲಕರುಗಳಾದ ದತ್ತರಾಮ್ ಚಾಳ್ಕೆ, ದಿನಕರ್ ಖಾಂಡ್ಸಾಳೆ, ಕಿಶೋರ್ ರಂಗ್ಣೇಕರ್, ಪುರುಷೋತ್ತಮ ಮಾನೆ, ನಾಗೇಶ್ ಪೋವ್ಕಾರ್, ಗುಲಾಬ್ ರಾವ್ ಜಗತತ್, ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ಗಂಗಾಧರ್ ಜೆ.ಪೂಜಾರಿ, ಜ್ಯೋತಿ ಕೆ.ಸುವರ್ಣ, ಪ್ರೇಮನಾಥ್ ಪಿ.ಕೋಟ್ಯಾನ್, ಬ್ಯಾಂಕ್‍ನ ಪ್ರಧಾನ ಪ್ರಬಂಧಕರಾದ ವಿದ್ಯಾನಂದ ಎಸ್.ಕರ್ಕೇರಾ, ದಿನೇಶ್ ಬಿ.ಸಾಲ್ಯಾನ್, ಉಪಸ್ಥಿತರಿದ್ದು ಜಯ ಸುವರ್ಣ ಅವರಿಗೆ ಶುಭಾರೈಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal