About Us       Contact


(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಜೂ.22: ದೈನಂದಿನ ಬದುಕಿನಲ್ಲಿ ಯೋಗಾಭ್ಯಾಸ ರೂಢಿಸಿಕೊಳ್ಳುವುದರಿಂದ ಆರೋಗ್ಯಭಾಗ್ಯ ಫಲಿಸುವುದು. ಇದು ಕ್ಷೇಮದಾಯಕ ದೀರ್ಘಾಷ್ಯದ ಬದುಕಿಗೆ ವರದಾನವೂ ಹೌದು. ಆದುದರಿಂದ ಇದನ್ನು ಪ್ರತಿಯೊಬ್ಬರೂ ದೈನಿಕವಾಗಿ ಆಯುರಾರೋಗ್ಯಕ್ಕೆ ಯೋಗವನ್ನು ಭಾಗ್ಯದಾಯಕವಾಗಿಸಿ ಕೊಳ್ಳಬೇಕು. ಯೋಗವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸದೃಢವಾಗಿರಿಸುತ್ತದೆ. ಯೋಗಾಭ್ಯಾಸಕ್ಕೆ ಸಮಯ ಮತ್ತು ಸ್ಥಳಾವಕಾಶದ ಅಡಚನೆ ಅನ್ನುವುದಿಲ್ಲ. ಈಲಿಯೂ ಯಾವ ಸಮಯಕ್ಕೂ ಇದನ್ನು ಮಾಡಬಹುದು. ಆಯ್ದ ವ್ಯಕ್ತಿಗಳೇ ಯೋಗಾಭ್ಯಾಸ ಮಾಡಬೇಕು ಅಥವಾ ಜಾತಿ-ಮತದ ನಿರ್ಬಂಧವಿಲ್ಲ. ಶರೀರ ಸದೃಢವಾಗಿದ್ದರೇ ನಾವು ಯಾವುದೇ ಕಾರ್ಯಗಳನ್ನು ಮಾಡಲು ಸಶಕ್ತರಾಗುತ್ತೇವೆ ಎಂದು ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ತಿಳಿಸಿದರು.

ಕಳೆದ ಶುಕ್ರವಾರ ಉಪನಗರ ಅಂಧೇರಿ ಪೂರ್ವದ ಮರೋಲ್ ಅಲ್ಲಿನ ಭರತ್‍ವನ್‍ನಲ್ಲಿ ವಿಶ್ವ ಯೋಗಾ ದಿನಾಚರಣೆಯ ಶುಭಾವಸರದಲ್ಲಿ ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷತೆ ಆಯೋಜಿಸಲಾಗಿದ್ದ ವಕ್ಷಾರೋಪಣ ಕಾರ್ಯಕ್ರಮವನ್ನುದ್ದೇಶಿಸಿ ಡಾ| ಶೆಟ್ಟಿ ಮಾತನಾಡಿದರು.

ದಿನನಿತ್ಯ ಯೋಗ ಮಾಡುವುದರಿಂದ ಮನೋಲ್ಲಾಸದ ವೃದ್ಧಿಸುತ್ತದೆ ಹಾಗೂ ಬದುಕು ಶೈಲಿಯೂ ಬದಲಾಗುತ್ತದೆ. ಯೋಗವೂ ಶರೀರವನ್ನೂ ಸಮತೋಲನದಲ್ಲಿರಿಸಿ ಗುಣವಾಚಕ ಹಾಗೂ ಪ್ರಾಕೃತಿಕ ಅಸ್ವಾದ ನೀಡಬಲ್ಲದು. ಬಂಟರ ಸಂಘದ ಪ್ರತಿಯೊಂದು ಪ್ರಾದೇಶಿಕ ಸಮಿತಿಗಳೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜ ಮತ್ತು ಪ್ರಾಕೃತಿಕ ಹಿತಕ್ಕೆ ಪೂರಕವಾಗಬೇಕು ಎಂದು ಚಂದ್ರಹಾಸ ಶೆಟ್ಟಿ ಅಧ್ಯಕ್ಷೀಯ ಭಾಷಣದಲ್ಲಿ ಕರೆಯಿತ್ತರು.

ಕಾರ್ಯಕ್ರಮದಲ್ಲಿ ಬಂಟರ ಸಂಘದ ಜೊತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ ಶೆಟ್ಟಿ ಐಕಳ, ಪ್ರಾದೇಶಿಕ ವಲಯಗಳ ಸಮನ್ವಯಕ ಸಂಘದ ಡಾ| ಪ್ರಭಾಕರ್ ಶೆಟ್ಟಿ ಬೋಳ, ಪ್ರಾದೇಶಿಕ ಸಮಿತಿಯ ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ, ಕೋಶಾಧಿಕಾರಿ ಕರುಣಾಕರ್ ವಿ.ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂಡಾ, ಡಿ.ಕೆ ಶೆಟ್ಟಿ, ಸುಜಾತಾ ಗುಣಪಾಲ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಮೊನಾಲಿ ಭಟ್ಟಾಚಾರ್ಯ ಮತ್ತು ಪ್ರತಿಮಾ ಶೆಟ್ಟಿ ಯೋಗ ಅಭ್ಯಾಸವನ್ನಿತ್ತು ಆರೋಗ್ಯಕ್ಕೆ ಯೋಗ ಸರ್ವೋತ್ತಮ ಅನ್ನುವುದನ್ನು ಮನವರಿಸಿದರು.ಪ್ರಾದೇಶಿಕ ಸಮಿತಿಯ ಜತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರು ಕಾರ್ಯಕ್ರಮ ನಿರೂಪಿಸಿದರು. ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್.ಜಿ ಶೆಟ್ಟಿ ಉಪಕಾರ ಸ್ಮರಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal