About Us       Contact


ಮುಂಬಯಿ (ಕುಕ್ಕಾಜೆ), ಫೆ.25: ಫ್ಯೂಚರ್ ಕ್ರಿಯೇಟರ್ಸ್ ಚಾರೀಟೇಬಲ್ ಟ್ರಸ್ಟ್ ಅಸೋಸಿಯೇಶನ್ (ರಿ.), ಶೈನ್ ಗೈಸ್ ಕುಕ್ಕಾಜೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಸಂಸ್ಥೆಗಳ ಸಹಯೋಗ ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವವನ್ನು ಕಳೆದ ಆದಿತ್ಯವಾರ (ಫೆ.23) ಬಂಟ್ವಾಳ ತಾಲೂಕು ಇಲ್ಲಿನ ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಸಲ್ಪಟ್ಟಿತು.

ಗಫ್ಫಾರ್ ಸಾಗರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರವನ್ನು ಎಂ.ಎಸ್ ಮೊಹಮ್ಮದ್ ಗೌರವ ಉಪಸ್ಥಿತಿಯಲ್ಲಿ, ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಉಸ್ತಾದರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ರೆ ಫಾ |ಹೆನ್ರಿ ಡಿಸೋಜ, ಕುಕ್ಕಾಜೆ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ.ಎ.ಆರ್, ಮಂಚಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹನ್ ದಾಸ್, ಅಶ್ರಫ್ ಕಲ್ಕಟ್ಟ, ಅಬ್ದುಲ್ ಕರೀಂ, ಕೆ.ಎಂ. ಶರೀಫ್, ಹಸೈನಾರ್, ಆಶಿಕ್ ಕುಕ್ಕಾಜೆ, ರಫೀಕ್, ಕೆ.ನಝೀರ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಇದರ ಕಾರ್ಯನಿರ್ವಾಹಕರು ಉಪಸ್ಥಿತರಿದ್ದು ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹಾಜಬ್ಬ ಹರೇಕಳ ಇವÀರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಜಬ್ಬ `ನನಗೆ ರಕ್ತದಾನ ಮಾಡಲು ಅತಿಯಾದ ಆಶೆವಿದೆ. ಆದರೆ ನನ್ನ ದೇಹಕ್ಕೆ ಆ ಸಾಮರ್ಥ್ಯವಿಲ್ಲ. ಆದ್ದರಿಂದ ಯುವ ಜನತೆಯು ಆದಷ್ಟು ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನವು ಮಹಾದಾನವಾಗಿದೆ' ಎನ್ನುತ್ತಾ ರಕ್ತದಾನ ಮಾಡುವ ಯುವ ಸಮೂಹಕ್ಕೆ ರಕ್ತದಾನ ಮಾಡಲು ಪ್ರೇರೆಪಿಸಿದರು.
ಈ ಸಂದರ್ಭದಲ್ಲಿ ವೇಷ ಧರಿಸಿ ಹಣ ಸಂಗ್ರಹಿಸಿ ಬಡ ರೋಗಿಗಳಿಗೆ ನೆರವಾದ ವಿಕ್ಕಿ ಶೆಟ್ಟಿ ಬೆದ್ರ ಅವರನ್ನೂ ನ್ನು ಸನ್ಮಾನಿಸಲಾಯಿತು. ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 100 ಮಂದಿ ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ, ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಹಾಗೂ ಕಾರ್ಯಕ್ರಮದ ಯಶಸ್ವಿಯಾಗಿ ಹಗಳಿರುಲು ದುಡಿದ ಸರ್ವರಿಗೂ ಬ್ಲಡ್ ಹೆಲ್ಪ್ ಲೈನ್ ಮತ್ತು ಶೈನ್ ಗೈಸ್ ಕೃತಜ್ಞತೆ ತಿಳಿಸಿದ್ದಾರೆ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal