About Us       Contact

 

(ವರದಿ / ಚಿತ್ರ: ರೋನ್ಸ್ ಬಂಟ್ವಾಳ್)


ಮುಂಬಯಿ, ಅ.06: ಬಿಲ್ಲವರು ಶ್ರೀರಾಮನ ನುಡಿಗಳನ್ನು ನಡೆಯಾಗಿಸಿ ಬದುಕು ರೂಪಿಸುವಲ್ಲಿ ಯಶ ಕಂಡಿರುವರು. ಸಮಾಜದಲ್ಲಿನ ಸಾಮಾನ್ಯ ಜನತೆಯ ಶಿಕ್ಷಣ ಮೌಲ್ಯ, ಬದುಕು ಭಾವನೆಗಳನ್ನು ಅರ್ಥೈಸಿ ಸಾಕ್ಷರತೆಗೆ ಮಹತ್ವ ನೀಡುವ ಕಾಯಕದಲ್ಲಿ ಬಿಲ್ಲವರ ಅಸೋಸಿಯೇಶನ್ ತೊಡಗಿಸಿರುವುದು ಸ್ತುತ್ಯರ್ಹ. ಬಿಲ್ಲವರು ಸಾಮರಸ್ಯದ ಪ್ರತೀಕರೇ ಸರಿ ಎಂದು ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ, ದ.ಕ ಜಿಲ್ಲಾ ಸಂಸದ ನಳಿನ್‍ಕುಮಾರ್ ಕಟೀಲು ತಿಳಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಡುಪಿ ಪಡುಬೆಳ್ಳೆ ಇಲ್ಲಿನ ಶ್ರೀ ಗುರು ನಾರಾಯಣ ವಿದ್ಯಾ ಸಂಕುಲದ ಅಚ್ಚು ನಂದನ ವೇದಿಕೆಯಲ್ಲಿ ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಆಯೋಜಿಸಿದ್ದ ಸನ್ಮಾನ, ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅಸೋಸಿಯೇಶನ್‍ನ ಮುಖವಾಣಿ ಅಕ್ಷಯ ಮಾಸಿಕದ ಹುಟ್ಟುಹಬ್ಬ-2019 ವಿಶೇಷಾಂಕ ಬಿಡುಗಡೆ ಗೊಳಿಸಿ ನಳಿನ್‍ಕುಮಾರ್ ಮಾತನಾಡಿ ಬಿಲ್ಲವರ ಅಸೋಸಿಯೇಶನ್ ಸಾವಿರ ಕೋಟಿಗಳ ವ್ಯವಹಾರ ನಡೆಸಿ ಹುಟ್ಟೂರಿಗೆ ವ್ಯಯಿಸಿ ಋಣ ಪೂರೈಸುತ್ತಿದೆ. ಅದೂ ಸಾಮಾನ್ಯ ಜನರಿಗೆ ಸುಶಿಕ್ಷಿತರನ್ನಾಗಿಸುವ ಕಾಯಕದಲ್ಲಿ ತೊಡಗಿಸಿ ತನ್ನ ಸೇವಾಮನೋಭಾವ ಮೆರೆದಿದೆ. ನಾರಾಯಣಗುರುಗ ಳೂ ಮೂರು ಕ್ರಾಂತಿಗಳನ್ನು ಮಾಡಿ ಸಮಾಜ ಸುಧಾರಣೆ ಮಾಡಿದ್ದು ಅದನ್ನೇ ಜೀವನ ತತ್ವವಾಗಿ ಈ ಅಸೋಸಿಯೇಶನ್ ಮುನ್ನಡೆಯುತ್ತಿರುವುದು ಪ್ರಶಂಸನೀಯ. ಅಸ್ಪ್ರಶ್ಯತೆ ನಿರ್ಮೂಲನ, ಶಿಕ್ಷಣದ ಮೂಲಕ ಸಮಾಜದ ಪರಿವರ್ತನೆ ಮೂಲಕ ನಾರಾಯಣಗುರು ವಿಶ್ವಮಾನ್ಯ ಕ್ರಾಂತಿಕಾರಿ ಸಂತರಾಗಿದ್ದಾರೆ. ಶಿಕ್ಷಣಕ್ಕೆ ಆದ್ಯತೆ ನೀಡಿದ ಶ್ರೇಷ್ಠ ಸಂತರಲ್ಲಿ ಸರ್ವಶ್ರೇಷ್ಠ ಸಂತರೇ ನಾರಾಯಣ ಗುರು ಆಗಿದ್ದು ಸಮಾಜ ಪರಿವರ್ತನೆಗೆ ಶಿಕ್ಷಣವೇ ಶಕ್ತಿಯಾಗಿದೆ. ಅದರಂತೆಯೇ ಬಿಲ್ಲವರ ಅಸೋಸಿಯೇಶನ್ ಸಂಘಟನೆಯ ಮೂಲಕ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಮುನ್ನಡೆಯುತ್ತಿರುವುದು ಅಭಿಮಾನ ತರುತ್ತಿದೆ ಎಂದರು.

 

ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭ ವನ್ನು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ದೀಪ ಪ್ರಜ್ವಲಿಸಿ, ಹಿಂಗಾರ ಅರಳಿಸಿ ಕಳಸೆಯಲ್ಲಿರಿಸಿ ಸಮಾರಂಭ ಉದ್ಘಾಟಿಸಿದರು. ಈ ಶುಭಾವಸರದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಉಪಸ್ಥಿತರಿದ್ದು ಕರ್ನಾಟಕ ರಾಜ್ಯದ ಮುಜರಾಯಿ, ವಿೂನುಗಾರಿಕೆ, ಜಲ ಸಂಪನ್ಮೂಲ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಲೀಲಾವತಿ ಜಯ ಸುವರ್ಣಅವರು ದಿ.ವಸಂತ್ ವಿ.ಸಾಲ್ಯಾನ್ ಪಾಕಶಾಲೆಯನ್ನು ಉದ್ಘಾಟಿಸಿದರು.

ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮೂಲ್ಕಿ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್, ಬಿಲ್ಲವರ ಪರಿಷತ್ತು ಉಡುಪಿ ಅಧ್ಯಕ್ಷ ನವೀನ್ ಅವಿೂನ್ ಶಂಕರಪುರ, ನಾರಾಯಣಗುರು ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಹರಿಶ್ಚಂದ್ರ ಅವಿೂನ್, ಉದ್ಯಮಿ ಗೋವಿಂದ ಪೂಜಾರಿ ಬೆಂಗಳೂರು, ಬಿಲ್ಲವ ಸಮಾಜ ಸೇವಾ ಸಂಘ ಬೆಳ್ಳೆ ಗೌರವಾಧ್ಯಕ್ಷ ಶಿವಾಜಿ ಎಸ್.ಸುವರ್ಣ, ಬೆಳ್ಮಣ್ ಬಿಲ್ಲವ ಸೇವಾ ಸಂಘ ಗೌರವಾಧ್ಯಕ್ಷ ಎಸ್.ಕೆ ಸಾಲ್ಯಾನ್, ಬಿಲ್ಲವ ಸೇವಾ ಸಂಘ ಬನ್ನಂಜೆ ಉಡುಪಿ ಅಧ್ಯಕ್ಷ ನರಸಿಂಹ ಸುವರ್ಣ, ನಾರಾಯಣ ಗುರು ಭಜನಾ ಮಂದಿರ ಕುರ್ಕಾಲು ಅಧ್ಯಕ್ಷ ಹರಿಶ್ಚಂದ್ರ ಪೂಜಾರಿ, ಬಿಲ್ಲವರ ಸಮಾಜ ಸೇವಾ ಸಂಘ ಮುಳೂರು ಅಧ್ಯಕ್ಷ ಸುಭಾಶ್ಚಂದ್ರ ಕರ್ಕೇರ, ನಾರಾಯಣಗುರು ಧರ್ಮ ಪರಿಪಾಲನಾ ಸಂಘ ಮಣಿಪುರ ಅಧ್ಯಕ್ಷ ಜಯಶೇಖರ ಪಾಲನ್, ಬಿಲ್ಲವ ಸಂಘ ಇನ್ನಂಜೆ ಅಧ್ಯಕ್ಷ ರಮಾನಂದ ಕಲ್ಲುಗುಡ್ಡೆ, ಬಿಲ್ಲವ ಸಂಘ ಶಿರ್ವ ಅಧ್ಯಕ್ಷ ಸುಧಾಕರ ಪೂಜಾರಿ, ಸತ್ಯಜಿತ್ ಸುರತ್ಕಲ್, ಗೀತಾಂಜಲಿ ಸುವರ್ಣ ಗೌರವ ಅತಿಥಿಗಳಾಗಿದ್ದು ನಳಿನ್‍ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ವೈಶಿಷ್ಟ್ಯಪೂರ್ಣವಾಗಿ ಸನ್ಮಾನಿಸಿ ಅಭಿನಂದಿಸಿದರು ಹಾಗೂ ವಾರ್ಷಿಕ ಪ್ರತಿಭಾ ಪುರಸ್ಕಾರ ವಿತರಿಸಿ ಮಕ್ಕಳಿಗೆ ಶುಭಕೋರಿದರು.

ಬನ್ನಂಜೆ ಬಿಲ್ಲವರ ಸಂಘವು ಕೊಡಮಾಡಿದ ಈ ಜಾಗದಲ್ಲಿ ಶಿಕ್ಷಣಕ್ಕೆ ಮಹತ್ವವನ್ನಿತ್ತು ಮಣಿಪಾಲ್ ಮಾದರಿಯಂತೆ ಶಿಕ್ಷಣಾಭಿಯಾನ ಕೈಗೊಳ್ಳುವ ಸಂಘದ ಭಾವನೆಯಂತೆ ಬಿಲ್ಲವರ ಅಸೋಸಿಯೇಶನ ಆ ಆಶಯ ಪರಿಪೂರ್ಣಗೊಳಿಸುವರೇ ಸನ್ನದ್ಧವಾಗಿದೆ. ನಮ್ಮ ದೂರದೃಷ್ಠಿತ್ವದ ಮಹಾವಿದ್ಯಾಲಯ, ಇಂಜಿನೀಯರಿಂಗ್ ಕಾಲೇಜು ಕನಸು ಕೂಡಾ ಈಡೇರಿಸುವ ಆಶಯ ಹೊಂದಿದ್ದೇವೆ. ಅಸೋಸಿಯೇಶನ್‍ನ ಸ್ಥಾಪಕ ಎಂ.ಅಪ್ಪಣ್ಣ, ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನ, ಸಹಯೋಗವು ನಮ್ಮ ಸಮಾಜಕ್ಕೆ ಗಜಬಲವಾಗಿ ಪರಿಣಮಿಸಿದ್ದು ಆದುದರಿಂದಲೇ ಇಷ್ಟೊಂದು ಸಾಧನೆಸಿದ್ಧಿಗೆ ಪ್ರೇರಣೆಯಾಯಿ ತು. ಭಾರತ್ ಬ್ಯಾಂಕ್ ಕೂಡಾ ಈ ಮಟ್ಟಕ್ಕೆ ಬೆಳೆದು ನಿಂತಿತು. ಇವೆಲ್ಲಕ್ಕೂ ಮಿಗಿಲಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ, ಜೀವನ ತತ್ವಗಳು ನಮ್ಮೆಲ್ಲರ ಶ್ರೇಯೋಭಿವೃದ್ಧಿಗೆ ಪೂರಕವಾಗಿದೆ ಎಂದು ಜಯ ಸುವರ್ಣ ತಿಳಿಸಿದರು.

ಕೋಟ ಶ್ರೀನಿವಾಸ್ ಮಾತನಾಡಿ ಸಮುದಾಯದ ಸಂಘಟನೆಗೆ ಅಧಿಕ ಶ್ರಮ ಅಗತ್ಯವಾಗಿದೆ. ಉನ್ನತ ಶಿಕ್ಷಣಕ್ಕೆ ಒತ್ತು ನೀಡಿದಾಗಲೇ ಸಮಾಜವು ಶಕ್ತಿದಾಯಕ ಆಗಬಲ್ಲದು ಆದುದರಿಂದ ಬದಲಾವಣೆಯ ಕಾಲಘಟ್ಟದಲ್ಲಿ ಸರ್ವರೂ ವಿದ್ಯಾವಂತರಾಗಿ ಸಮಾಜವನ್ನೂ ಮನ್ನಡೆಸುವ ಜೊತೆಗೆ ರಾಷ್ಟ್ರದ ಭದ್ರತೆ, ಬೆಳವಣಿಗೆಗೆ ಕಟಿಬದ್ಧರಾಗಬೇಕು ಎಂದರು.

ನಾವು ಬರೇ ಬಿಲ್ಲವ ಸಮಾಜದ ಅಭಯವನ್ನೇ ಆಶಿಸದೆ ನಾರಾಯಣಗುರುಗಳ ತತ್ವಕ್ಕೆ ಬದ್ಧರಾಗಿ ಅಖಂಡ ಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದೇವೆ. ವಿದ್ಯಾರ್ಜನೆಯಿಂದ ಬಲಯುತರಾಗಿ ಅನ್ನುವಂತೆ ಎಲ್ಲರಲ್ಲೂ ಅಕ್ಷರಸ್ಥತೆ ರೂಢಿಸುವ ಪ್ರಯತ್ನದಲ್ಲಿದ್ದೇವೆ. ಈ ವಿದ್ಯಾಲಯದಲ್ಲೂ ಮತ್ತಷ್ಟು ಉನ್ನತ ಶಿಕ್ಷಣಕ್ಕೆ ಅವಕಾಶಗಳನ್ನು ಕಲ್ಪಿಸಿ ಸಾಕ್ಷರತೆಗೆ ಪೆÇ್ರೀತ್ಸಹಿಸುವ ಶ್ರಮವಹಿಸುವೆವು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಚಂದ್ರಶೇಖರ್ ಪೂಜಾರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಹರೀಶ್ ಜಿ.ಅವಿೂನ್, ದಯಾನಂದ್ ಆರ್.ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಜೊತೆ ಕೋಶಾಧಿಕಾರಿಗ ಳಾದ ಸದಾಶಿವ ಎ.ಕರ್ಕೇರ, ಮೋಹನ್ ಡಿ.ಪೂಜಾರಿ, ಜಯ ಎಸ್.ಸುವರ್ಣ, ಮಹಿಳಾ ವಿಭಾಗದ ಗೌ| ಪ್ರ| ಕಾರ್ಯದರ್ಶಿ ಸುಮಿತ್ರ ಎಸ್.ಬಂಗೇರ, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್. ಕೋಟ್ಯಾನ್, ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ ಜೆ.ಪೂಜಾರಿ, ಗುರು ನಾರಾಯಣ ವಿದ್ಯಾಲಯದ ಪ್ರಮಲ್ ಕುಮಾರ್ ಮಂಗಳೂರು, ಜ್ಯೋತಿ ಪ್ರಮಲ್, ಜಿನರಾಜ್ ಸಿ.ಸಾಲಿಯಾನ್, ಮುಖ್ಯೋಧ್ಯಾಪಕಿ ಉಷಾ ಸತೀಶ್ ವೇದಿಕೆಯಲ್ಲಿದ್ದು ಪುರಸ್ಕೃತರನ್ನು ಅಭಿನಂದಿ ಸಿದರು. ಅತಿಥಿಗಳೂ ಸಂದರ್ಭೋಚಿತವಾಗಿ ಮಾತನಾಡಿ ಶುಭ ಶಂಸನೆಗೈದರು.

ಕೆ.ಶಂಕರ್ ಸುವರ್ಣ, ಮೋಹನ್ ಜಿ.ಪೂಜಾರಿ, ಹರೀಶ್ ಸಾಲ್ಯಾನ್ ಬಜೆಗೋಳಿ, ಪ್ರಭಾ ಎನ್.ಪಿ ಸುವರ್ಣ ಅಕ್ಷಯದ ಕುಸುಮಾ ಚಂದ್ರ ಅವಿೂನ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಶಾಂತಿ ಸ್ವಾಗತಿಸಿ ಪ್ರಸ್ತಾವನೆಗೈದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನಾಡಿದರು. ಜೇಸಿ ರಾಜೇಂದ್ರ ಭಟ್ ಶಿಕ್ಷಣಾಭಿಯಾಣದ ಬಗ್ಗೆ ಮಾಹಿತಿಯನ್ನಿತ್ತರು. ಅಕ್ಷಯದ ಮುಖ್ಯ ಸಂಪಾದಕ ಡಾ| ಈಶ್ವರ ಅಲೆವೂರು ಅಕ್ಷಯದ ಬಗ್ಗೆ ತಿಳಿಸಿದರು. ವಿದ್ಯಾ ಸಮಿತಿಯ ಕಾರ್ಯಧ್ಯಕ್ಷ ವಿಶ್ವನಾಥ್ ತೋನ್ಸೆ ಪುರಸ್ಕೃತರ ಯಾದಿ ಪ್ರಕಟಿಸಿದರು. ಗೌ| ಜೊತೆ ಕಾರ್ಯದರ್ಶಿ ಧರ್ಮೇಶ್ ಎಸ್.ಸಾಲ್ಯಾನ್ ಅತಿಥಿಗಳನ್ನು ಪರಿಚಯಿಸಿದರು. ಸಂಪಾದಕ ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಗೌ| ಜೊತೆ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್ ಕೃತಜ್ಞತೆ ಸಮರ್ಪಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal