About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಉಡುಪಿ, ಅ.06: ಉಡುಪಿ, ಅ.06: ಶಿವಗಿರಿಯಲ್ಲಿ ಶ್ರೀನಾರಾಯಣ ಗುರುಗಳ ಶಿಷ್ಯತ್ವ ಕೇವಲ ಬಿಲ್ಲವರಿಗೆ ಮಾತ್ರ ಸೀಮಿತವಾಗಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಗೌಡ ಸಾರಸ್ವತ ಬ್ರಾಹ್ಮಣ. ಬಿಲ್ಲವ ಮೊಗವೀರ ಸಮಾಜದಿಂದ ಶಿಷ್ಯತ್ವವನ್ನು ಸ್ವೀಕರಿಸಿ ಶಿವಗಿರಿಯ ಪಟ್ಟವೇರಿದವರಿದ್ದಾರೆ. ಒಂದೇ ಜಾತಿ ಒಂದೇಮತ ಒಬ್ಬನೇ ದೇವರೆನ್ನುವ ತತ್ವಕ್ಕೆ ಸರಿಯಾಗಿ ಅವರು ಜ್ವಲಂತ ನಿದರ್ಶನವಾಗಿದ್ದವರು. ಇಂತಹ ಸಂತರೋರ್ವರಿಗೆ ಸಮರ್ಪಿಸಿದ ಈ ಗುರು ಮಂದಿರ ಭಕ್ತರ ಪುಣ್ಯಭೂಮಿಯಾಗಲಿ ಎಂದು ಕೇರಳ ವರ್ಕಳ ಇಲ್ಲಿನ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.

ಇಂದಿಲ್ಲಿ ಭಾನುವಾರ ಬೆಳಿಗ್ಗೆ ಉಡುಪಿ ಸಂತೆಕಟ್ಟೆ ಇಲ್ಲಿನ ನಯಂಪಳ್ಳಿಯಲ್ಲಿ ಬಿಲ್ಲವರ ಸೇವಾ ಸಂಘ (ರಿ.) ಸಂತೆಕಟ್ಟೆ ನಿರ್ಮಿಸಲುದ್ದೇಶಿತ ಸಂಘದ ನಿವೇಶನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ನೆರೆದ ಸದ್ಭಕ್ತರನ್ನು ಹರಸಿ ಸತ್ಯಾನಂದಶ್ರೀ ತಿಳಿಸಿದರು.

ಬಿಲ್ಲವರ ಸೇವಾ ಸಂಘ ಸಂತೆಕಟ್ಟೆ ಅಧ್ಯಕ್ಷ ಜೇಸಿ ಶೇಖರ್ ಗುಜ್ಜರಬೆಟ್ಟು ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್ ಅತಿಥಿ ಅಭ್ಯಾಗತರಾಗಿದ್ದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಸರಕಾರದ ಬಂದರು, ಮೀನುಗಾರಿಕೆ, ಮುಜರಾಯಿ ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ನಿಧಿ ಕುಂಭಕ್ಕೆ ಚಾಲನೆಯನ್ನಿತ್ತು ಶುಭಾರೈಸಿದರು. ಪದಾಧಿಕಾರಿಗಳು ಸಚಿವ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಶಾಸಕ ರಘುಪತಿ ಮಾತನಾಡಿ ಕುಮಾರಸ್ವಾಮಿ ಸರಕಾರ್ ಇಲ್ಲಿನ ಸಮುದಾಯ ಭವನಕ್ಕೆ ಒಂದು ಕೋಟಿ ರೂಪಾಯಿ ಶಿಫಾರಸ್ಸು ಮಾಡಿತ್ತೆಂದು ಕೇಳಿ ತಿಳಿದಿದ್ದೇನೆ. ಹಾಗಿದ್ದರೆ ನಮ್ಮ ಸರಕಾರದಿಂದಲೂ ಅನುದಾನಕ್ಕಾಗಿ ಪ್ರಯತ್ನಿಸುವೆ. ಜೊತೆಗೆ ಶಾಸಕ ಅನುದಾನದಿಂದಲೂ ಈ ವರ್ಷ 5 ಲಕ್ಷ ಬರುವ ವರ್ಷದ ಅನುದಾನದಿಂದ 5 ಲಕ್ಷ ನೆರವು ಒದಗಿಸಲು ಬದ್ಧನಿದ್ದೇನೆ ಎಂದರು.

ಜಯ ಸುವರ್ಣ ಮಾತನಾಡಿ ಈ ಲೋಕದಲ್ಲಿ ಧರ್ಮಗ್ಲಾನಿಯಾದಾಗಲೆಲ್ಲ ನಾನು ಜನಿಸುತ್ತೇನೆ ಎಂದು ಹೇಳಿದ ಭಗವಂತ ರಾಮ-ಕೃಷ್ಣ ವರಾಹ-ಮತ್ಸ್ಯ-ಕೂರ್ನೂವತಾರಗಳ ಮೂಲಕ ನಾನು ಸಕಲ ಜೀವಿಗಳಿಗೂ ಅಪ್ಯಾಯಮಾನನಾದವನೆಂದು ಸಾಕ್ಷಾತ್ಕರಿಸಿದ. ಹೀಗೆಯೇ ಶ್ರೀ ನಾರಾಯಣಗುರುಗಳು ಜಾತಿ ಮತಿಗಳನ್ನು ಪರಿಗಣಿಸದೆ ಸಕಲಜೀವಿಗಳಿಗೂ ತಾನು ಅಸ್ತನೆಂದು ಲೋಕೋದ್ಧಾರದ ಕಾರ್ಯಗಳ ಮೂಲಕ ಜಾಗತಿಕ ಸಂತನಾಗಿ ಬಾಳಿದವರು. ಅವರ ಹೆಸರಿನ ಮಂದಿರ ಸ್ತುತ್ಯರ್ಹ ಕೆಲಸವಾಗಿದೆ ಎಂದರು.

ಗೌರವ್ವನಿತ ಅತಿಥಿಗಳಾಗಿ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಉಡುಪಿ ಮಾಜಿ ಶಾಸಕ ಯು.ಆರ್ ಸಭಾಪತಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮೂಲ್ಕಿ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್, ಉಡುಪಿ ಜಿಲ್ಲಾ ಪಂಚಾಯತ್‍ನ ಸದಸ್ಯ ಜನಾರ್ದನ ತೋನ್ಸೆ, ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಇದರ ಅಧ್ಯಕ್ಷ ಬಿ.ಎನ್ ಶಂಕರ್ ಪೂಜಾರಿ, ವಕೀಲ ನ್ಯಾ| ಸಂಕಪ್ಪ ಎ., ವೀರಮಾರುತಿ ಭಜನಾ ಮಂದಿರ ಗರಡಿಮಜಲು ಮಾಜಿ ಅಧ್ಯಕ್ಷ ದೇವದಾಸ್ ಸುವರ್ಣ, ಉದ್ಯಮಿಗಳಾದ ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ಚಲನಚಿತ್ರ ನಟ ಹಾಗೂ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ, ವಿಶ್ವನಾಥ ಎ.ಸನಿಲ್ ಕೆಮ್ಮಣ್ಣು, ಹೇಮರಾಜ್ ಡಿ.ಅಮೀನ್ ಸಂತೆಕಟ್ಟೆ, ವಿಶೇಷ ಆಹ್ವಾನಿತರಾಗಿ ಉಡುಪಿ ಜಿಲ್ಲಾ ಪಂಚಾಯತ್‍ನ ಸದಸ್ಯೆ ಗೀತಾಂಜಲಿ ಸುವರ್ಣ, ಬಡಾನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ, ಬಿಲ್ಲವ ಪರಿಷತ್ ಕಟಪಾಡಿ ಅಧ್ಯಕ್ಷ ನವೀನ್ ಅಮೀನ್, ಬಿಲ್ಲವರ ಯುವ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಪ್ರವೀಣ್ ಎಂ.ಪೂಜಾರಿ, ನಾರಾಯಣಗುರು ಅರ್ಬನ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಹರೀಶ್ಚಂದ್ರ ಅಮೀನ್, ಉಡುಪಿ ತಾಲೂಕು ಪಂಚಾಯತ್ ಸದಸ್ಯ ದಿನಕರ್ ಹೇರೂರು, ಬಿಲ್ಲವ ಸಂಘ ಮೂಡುಕುದ್ರು ಮಾಜಿ ಅಧ್ಯಕ್ಷ ದಿನೇಶ್ ಜತ್ತನ್, ಬಿಲ್ಲವ ಸಂಘ ಉಪ್ಪೂರು ಗೌರವಾಧ್ಯಕ್ಷ ಸಂತೋಷ್ ಕೋಟ್ಯಾನ್, ದಸ್ತಾವೇಜು ಬರಹಗಾರ ಜಯಂತ್ ಎ.ಅಮೀನ್, ಉದ್ಯಮಿಗಳಾದ ಸೂರ್ಯಪ್ರಕಾಶ್, ಸದಾಶಿವ ಸುವರ್ಣ ಬಡಾನಿಡಿಯೂರು, ದೇವು ಪೂಜಾರಿ ಮಣಿಪಾಲ, ಲಕ್ಷ್ಮಣ್ ಬಿ. ಅಮೀನ್, ಸಂಜೀವ ಪೂಜಾರಿ ತೋನ್ಸೆ ಮುಂಬಯಿ, ಹರೀಶ್ಚಂದ್ರ ಕೂಳೂರು (ನಯಂಪಳ್ಳಿ), ಎಂ. ಜಯಶೇಖರ್ ಶಿವಗಿರಿ (ಸಂತೆಕಟ್ಟೆ), ಕೃಷ್ಣಪ್ಪ ಪೂಜಾರಿ ಜಾತಬೆಟ್ಟು, ಸುಧಾಕರ್ ಅಮೀನ್ ಪಾಂಗಳ, ದಿನಕರ ಪೂಜಾರಿ ನಯಂಪಳ್ಳಿ, ರವೀಂದ್ರ ಪೂಜಾರಿ ಉಪ್ಪೂರು, ದಿವಾಕರ್ ಸನಿಲ್ ಉಡುಪಿ, ಸುರೇಶ್ ಜತ್ತನ್ ಬಡಾನಿಡಿಯೂರು, ಸುರೇಶ್ ಸುವರ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿಲ್ಲವರ ಸೇವಾ ಸಂಘ ಸಂತೆಕಟ್ಟೆ ಇದರ ಗೌರವಾಧ್ಯಕ್ಷ ಭಾಸ್ಕರ ಜತ್ತನ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಕೆಮ್ಮಣ್ಣು, ಕೋಶಾಧಿಕಾರಿ ಉಮೇಶ್ ಪೂಜಾರಿ, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಟಿ.ರಾಮ ಪೂಜಾರಿ, ಗೌರವಾಧ್ಯಕ್ಷ ಶ್ಯಾಮ್ ಕೆ.ಪೂಜಾರಿ, ಕಾರ್ಯದರ್ಶಿ ಶೇಖರ್ ಬಿ.ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಕೆ., ಮಹಿಳಾಧ್ಯಕ್ಷೆ ಗೀತಾ ನಿರಂಜನ್, ಗೌರವಾಧ್ಯಕ್ಷೆ ಕುಸುಮ ಪೂಜಾರ್ತಿ, ಕಾರ್ಯದರ್ಶಿಉಷಾ ವಸಂತ್ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದರು. ಪುರೋಹಿತ ಕೇಶವ ಶಾಂತಿ ಬನ್ನಂಜೆ ಪೂಜಾಧಿಗಳನ್ನು ನೆರವೇರಿಸಿ ಹರಸಿದರು. ಶಕುಂತಳಾ ಶೇಖರ್ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಮಹಿಳಾ ಬಳಗ ಪ್ರಾರ್ಥನೆಯನ್ನಾಡಿತು. ನಿತ್ಯಾನಂದ ಡಿ.ಕೋಟ್ಯಾನ್ ಮುಂಬಯಿ ಸ್ವಾಗತಿಸಿದರು. ಅಡ್ವೆ ರವೀಂದ್ರ ಪೂಜಾರಿ ಪ್ರಸ್ತಾವಿಕ ನುಡಿಗಳನ್ನಾಡಿದರು.ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಶೇಖರ್ ಬೈಕಾಡಿ ಮತ್ತು ತೇಜಸ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಕೆಮ್ಮಣ್ಣು ವಂದನಾರ್ಪಣೆಗೈದರು.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal