About Us       Contact

 ಮಾಂಡ್ ಸೊಭಾಣ್ ಪ್ರಾಯೋಜಿತ ತಿಂಗಳ ವೇದಿಕೆ ಕಾರ್ಯಕ್ರಮದ 210 ಸರಣಿಯಲ್ಲಿ ಕಲಾಕುಲ್ ರೆಪರ್ಟರಿಯಿಂದ `ಶ್...ಹಿಶಾರೊ’ ಎಂಬ ನಾಟಕ ಶಕ್ತಿನಗರದ ಕಲಾಂಗಣದಲ್ಲಿ 02-06-19 ರಂದು ನಡೆಯಿತು.

ಕೊಂಕಣಿಯ ಹಿರಿಯ ಸಾಹಿತಿ ಎಡಿ ನೆಟ್ಟೊ ಇವರು ಗಂಟೆ ಬಾರಿಸಿ ತಿಂಗಳ ವೇದಿಕೆಗೆ ಚಾಲನೆ ನೀಡಿದರು. ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ಹೂಗುಚ್ಛ ನೀಡಿ ಅವರನ್ನು ಗೌರವಿಸಿದರು. ಗುರಿಕಾರ ಎರಿಕ್ ಒಝೇರಿಯೊ ಉಪಸ್ಥಿತರಿದ್ದರು.
ನಂತರ ವಿಕಾಸ್ ಲಸ್ರಾದೊ ಇವರು ಇಂಗ್ಲೀಷ್ ಮೂಲದಿಂದ ಭಾವಾಂತರಿಸಿ, ನಿರ್ದೇಶಿಸಿದ `ಶ್... ಹಿಶಾರೊ’ ಥ್ರಿಲ್ಲರ್ ಮಾದರಿಯ ನಾಟಕ ಪ್ರಸ್ತುತವಾಯಿತು. ಸಂಗೀತ ಜ್ಯಾಕ್ಸನ್ ಕಲಾಕುಲ್ ಹಾಗೂ ರಂಗ ಸಜ್ಜಿಕೆಯನ್ನು ಮನೀಶ್ ಕಲಾಕುಲ್ ನಿರ್ವಹಿಸಿದ್ದರು. ಯುವ ಕಲಾವಿದರುಗಳಾದ ಶ್ರವಣ್ ಬಾಳಿಗಾ, ಸುಶ್ಮಿತಾ ತಾವ್ರೊ, ಆಮ್ರಿನ್ ಡಿಸೋಜ, ರೆನೊಲ್ಡ್ ಲೋಬೊ, ಸವಿತಾ ಸಲ್ಡಾನ್ಹಾ, ಡೊನ್ನಾ, ಫ್ಲಾವಿಯಾ ಮಸ್ಕರೇನ್ಹಸ್, ಮನೀಶ್ ಪಿಂಟೊ, ಆಶ್ಲಿನ್ ಡಿಸಿಲ್ವಾ ಹಾಗೂ ರಾಹುಲ್ ಪಿಂಟೊ ನಟಿಸಿದರು.
ನಂತರ ಈ ಪ್ರಯೋಗದ ಬಗ್ಗೆ ಪ್ರೇಕ್ಷಕರೊಡನೆ ಸಂವಾದ ನಡೆಯಿತು.
-

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal