Print

 

ಮುಂಬಯಿ, ಎ.19: ವ್ಯವಹಾರ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದರೂ ಕೂಡ ಪ್ರತಿ ಬಾರಿ ಭಾರತ ರಾಷ್ಟ್ರದ ತನ್ನ ತವರೂರಿನಲ್ಲಿ ನಡೆಯುವ ಎಲ್ಲಾ ಮತದಾನಕ್ಕೂ ತವರೂರು ಉಡುಪಿ ಜಿಲ್ಲೆಯ ಕುಂದಾಪುರ ವಕ್ವಾಡಿ ಇಲ್ಲಿಗೆ ಆಗಮಿಸಿ ಮತದಾನ ಮಾಡಿ ರಾಷ್ಟ್ರಪ್ರೇಮ ಮೆರೆಯುವ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ.

ಯಾವುದೇ ಮತದಾನಕ್ಕೂ ತಪ್ಪದೆ ಹುಟ್ಟೂರಿಗೆ ಬಂದು ಮತದಾನ ಮಾಡಿಕೊಳುವ ಇವರು ರಾಷ್ಟ್ರದ ಆಧುನಿಕ ಜನತೆಗೆ ಮಾದರಿ ಆಗಿದ್ದಾರೆ. ಮತದಾನದ ದಿನ ಹೇಗಾದರೂ ಮಾಡಿ ಊರಿಗೆ ಆಗಮಿಸುವ ಅನಿವಾಸಿ ಭಾರತೀಯ ಉದ್ಯಮಿ (ಎನ್‍ಆರ್‍ಐ) ಪೈಕಿ ಪ್ರವೀಣ್ ಕುಮಾರ್ ಶೆಟ್ಟಿ ಕೂಡ ಒಬ್ಬರು. ಈ ಬಾರಿ ಮಹಾ ಚುನಾವಣೆ ನಡೆಯುತ್ತಿದ್ದು ಇವರು ಈ ಬಾರಿಯೂ ಹುಟ್ಟೂರು ವಕ್ವಾಡಿಗೆ ಆಗಮಿಸಿ ಇಲ್ಲಿನ ಶಾಲೆಯಲ್ಲಿ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು.

ಬಳಿಕ ಕನ್ನಡಿಗ ವರ್ಲ್ಡ್‍ನ ಯೋಗೀಶ್ ಕುಂಭಾಶಿ ಅವರೊಂದಿಗೆ ಮಾತನಾಡಿದ ಪ್ರವೀಣ್ ಶೆಟ್ಟಿ ವಕ್ವಾಡಿ, ದುಬಾಯಿನಿಂದ ನೂರಾರು ಕನ್ನಡಿಗರು ಮತದಾನಕ್ಕಾಗಿ ಆಗಮಿಸಿದ್ದೇವೆ. ಮತದಾನದ ಹಿಂದಿನ ದಿನ ವಿಮಾನದಲ್ಲಿ ಬರುವಾಗಲೂ ಕೂಡ ಉಡುಪಿ ಕ್ಷೇತ್ರದ 26 ಮಂದಿಯಿದ್ದು ಇಡೀ ವಿಮಾನದಲ್ಲಿ ಮೋದಿ ಜೈಕಾರವಿತ್ತು. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ನಮ್ಮೆಲ್ಲರ ಹೆಮ್ಮ, ಕರಾವಳಿಯಲ್ಲೂ ಮೋದಿಯವರ ಹವಾ ಜಾಸ್ಥಿಯಾಗಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ದುಬೈನಲ್ಲಿ ನಮ್ಮೆಲ್ಲರಿಗೆ ಗೌರವ ಹೆಚ್ಚಿದೆ ಎಂದು ಓರ್ವ ಎನ್‍ಆರ್‍ಐ ಆಗಿ ಎದೆ ತಟ್ಟಿಕೊಂಡು ಹೇಳುವೆ. ದೇಶದಲ್ಲಿ ಈ ಬಾರಿ ಮುನ್ನೂರಕ್ಕೂ ಅಧಿಕ ಸೀಟು ಬಿಜೆಪಿ ಪಡೆದು ಹೆಮ್ಮೆಯ ಮೋದಿಜಿ ಮತ್ತೆ ಪ್ರಧಾನಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲೆಡೆ ಮತದಾನ ಹೆಚ್ಚಿದೆ. ಬೇರೆಬೇರೆ ಕಡೆಗಳಲ್ಲಿ ಉದ್ಯೋಗ ನಿಮಿತ್ತ ನೆಲಸಿದವರೂ ಊರಿಗೆ ಬಂದಿದ್ದು ಎಲ್ಲರೂ ಮತದಾನ ಮಾಡುತ್ತಿರುವುದು ಅಭಿವ್ರದ್ಧಿ ಸಾಧ್ಯ ಎಂಬುದು ತೋರಿಸಿಕೊಟ್ಟಿದ್ದಾರೆ. ಸ್ವಯಂಪ್ರೇರಿತ ಮತದಾನದ ಆಸೆ ಜನರಲ್ಲಿದೆ ಎಂದು ಪ್ರವೀಣ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.