About Us       Contact

ಮುಂಬಯಿ, ಜ.11: ಮಕ್ಕಳು ಕೇವಲ ಅಂಕಗಳಿಸುವ ಯಂತ್ರಗಳಾಗದೇ ಜ್ಞಾನವಂತರಾಗಲು ಉತ್ತಮ ಪುಸ್ತಕಗಳು ಸಹಕಾರಿ ಹೀಗಾಗಿ ಪೋಷಕರು ಮಕ್ಕಳನ್ನು ಪಠ್ಯೇತರ ಪುಸ್ತಕಗಳನ್ನು ಓದಲು ಪ್ರೇರೇಪಿಸಬೇಕು ಜೊತೆಗೆ ಪೋಷಕರೂ ಮಕ್ಕಳೊಡನೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದ ಶ್ರೀ ವೆಂಕಟರಮಣದೇವ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ಕುಂದಾಪುರ ಇದರ ಕಾರ್ಯದರ್ಶಿ ಕೆ.ರಾಧಾಕೃಷ್ಣ ಶೆಣೈ ತಿಳಿಸಿದರು.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ನಾವುಂದ ಅಲ್ಲಿನ ಕಿರಿಮಂಜೇಶ್ವರದಲ್ಲಿ ನರ್ಸರಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಚಾಲಕತ್ವದ ಶುಭದಾ ಶೈಕ್ಷಣಿಕ ಸಂಸ್ಥೆಯು (ಶುಭದಾ ಎಜ್ಯುಕೇಶನಲ್ ಟ್ರಸ್ಟ್ ನಾವುಂದ) ತನ್ನ ರಜತೋತ್ಸವ ಸಂಭ್ರಮವನ್ನು ಕಳೆದ ಶನಿವಾರ ಸಂಭ್ರಮಿಸಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಶಾಲಾ ನೂತನ ಗ್ರಂಥಾಲಯ ಉದ್ಘಾಟಿಸಿ ಮಕ್ಕಳು ಮತ್ತು ಪೆÇೀಷಕರಿಗೆ ಓದಿನ ಮಹತ್ವ ತಿಳಿಸಿ ಶೆಣೈ ಮಾತನಾಡಿದರು.

 

ಮುಂಬಯಿ ಅಲಿನ ಪ್ರಸಿದ್ಧ ವಕೀಲ ನ್ಯಾ| ವಿ.ಟಿ ಗೋಖಲೆ ಅವರು ಶ್ರೀಫಲ ಪುಷ್ಪ ಅರಳಿಸಿ ಸಭಾಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆಯನ್ನು ಪ್ರಶಂಸಿಸಿ, ಬೆಳ್ಳಿಯ ಬೆಳಕಿನ ಮಿಂಚನ್ನು ನಾನಿಲ್ಲಿ ಮಕ್ಕಳ ಕಣ್ಣಿನಲ್ಲಿ ಕಂಡೆ ಎಂಬುದಾಗಿ ಹರ್ಷ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಗಜಪುರ ಆನಗಳ್ಳಿ ಇದರ ಪ್ರಸಿದ್ಧ ಪುರೋಹಿತ ಎ.ಚೆನ್ನಕೇಶವ ಭಟ್ ಆಶೀರ್ವಚನ ನೀಡಿ ಪಾಲಕರು, ಶಿಕ್ಷಕರು ಹಾಗೂ ಮಕ್ಕಳು ನಿರ್ವಹಿಸಲೇಬೇಕಾದ ಜವಾಬ್ದಾರಿಗಳನ್ನು ಮನದಟ್ಟು ಮಾಡಿಸಿದರು.

ಹೆಸರಾಂತ ವಕೀಲರಾದ ನ್ಯಾ| ರವಿಕಿರಣ ಮುರ್ಡೇಶ್ವರ ಅವರು ರಜತ ಮಹೋತ್ಸವದ `ಶುಭಧಾಮ' ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪೋಷಿಸಲು, ಅವರ ಬರವಣಿಗೆಗಳಿಗೆ ಪ್ರೊತ್ಸಾಹ ನೀಡಬೇಕು ಅಲ್ಲದೇ ಮಕ್ಕಳು ಆಲಸಿಗಳಾಗದಂತೆ ಪೆÇೀಷಕರು ಎಚ್ಚರ ವಹಿಸಬೇಕು ಎಂದರು.

ಕುಂದಾಪುರದ ನ್ಯೂ ಮೆಡಿಕಲ್‍ನ ಹೆಸರಾಂತ ವೈದ್ಯ ಡಾ| ರಂಜನ್ ಶೆಟ್ಟಿ ಮಾತನಾಡಿ, ಗ್ರಾಮಿಣ ಪ್ರದೇಶದ ಈ ಶಾಲೆಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜನ್ನು ಶಿಕ್ಷಣಪ್ರೇಮಿ ಎನ್.ಕೆ.ಬಿಲ್ಲವ ಸ್ಥಾಪಿಸುವಂತಾಗಲಿ ಎಂದು ಹಾರೈಸಿದರು.

 ಸಂಸ್ಥೆಯ ಅಧ್ಯಕ್ಷ ಡಾ| ಎನ್ ಕೆ ಬಿಲ್ಲವ ಮಾತನಾಡಿ 25 ವರ್ಷಗಳ ಕಾಲ ತನ್ನೊಂದಿಗೆ ಸಹಕರಿಸಿದ ಸಮಾಜದ ಎಲ್ಲಾ ವರ್ಗದವರನ್ನು ನೆನಪಿಸಿಕೊಂಡು ಮುಂಬರುವ ದಿನಗಳಲ್ಲಿಯೂ ಇದೇ ರೀತಿಯ ಪ್ರೀತಿ, ಸಹಕಾರ, ವಿಶ್ವಾಸವನ್ನು ನಿರೀಕ್ಷಿಸುವುದಾಗಿ ಆಶಯ ವ್ಯಕ್ತಪಡಿಸಿದರು.

ಶೈಕ್ಷಣಿಕ ಪ್ರಗತಿ ಸಾಧಿಸಿದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ವಿಜೇತ ಪಾಲಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. 2018-19ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಗೌರವಕ್ಕೆ ಭಾಜನಳಾದ 10ನೇ ತರಗತಿಯ ಕು| ನಿಕಿಶಾ ಅವರಿಗೆ ಪ್ರಶಸ್ತಿಪತ್ರ ಪ್ರದಾನಿಸಿ ಅಭಿನದಿಸಲಾಯಿತು.

ವೇದಿಕೆಯಲ್ಲಿ ಪಂಡಿತ್ ನವೀನ್‍ಚಂದ್ರ ಆರ್.ಸನಿಲ್, ಧರ್ಮೇಶ್ ಸಾಲಿಯಾನ್, ಚಂದ್ರಶೇಖರ ಶೆಟ್ಟಿ, ತೇಜ ಪೂಜಾರಿ, ಕೃಷ್ಣ ಅಡಿಗ, ಋತಿಕ್ ಮುರ್ಡೇಶ್ವರ, ಶಾಲಾ ಸಮಿತಿ ವಿಶ್ವಸ್ಥ ಸದಸ್ಯರಾದ ತೇಜಪ್ಪ ಶೆಟ್ಟಿ, ಮಂಜು ಪೂಜಾರಿ, ನಿರ್ದೇಶಕ ಪುಂಡಲೀಕ ನಾಯಕ್, ಸಂಚಾಲಕರಾದ ಶಂಕರ ಪೂಜಾರಿ, ರಾಜಾರಾಮ್ ಭಟ್, ಕೆ. ಗೀತಾದೇವಿ, ಸಲಹಾ ಸಮಿತಿ ಸದಸ್ಯರುಗಳಾದ ರಾಜೀವ್ ಶೆಟ್ಟಿ, ಶೇಖರ ಎಂ.ಪೂಜಾರಿ, ಉದಯ ಪೂಜಾರಿ, ಸತೀಶ್ ಪೂಜಾರಿ, ರಾಜೇಶ್ ಪೂಜಾರಿ, ಬಿ.ಹಂಝಾ, ಜಗದೀಶ್ ಪೂಜಾರಿ, ಆಶಾ ಶ್ರೀನಿವಾಸ ಕಾರಂತ್, ಶುಭಾ ಪೂಜಾರಿ ಹಾಗೂ ಹಾಗೂ ಮಾ| ಎಸ್. ಪ್ರಶುಮ್ ಉಪಸ್ಥಿತರಿದ್ದರು.

ಶಾಲಾ ಸ್ಥಾಪಕ ಅಧ್ಯಕ್ಷ ಡಾ| ಎನ್.ಕೆ ಬಿಲ್ಲವ ಹಾಗೂ ಶುಭದಾ ಬಿಲ್ಲವ ಇವರ ನೇತೃತ್ವದಲ್ಲಿ ಶ್ರೀ ಬ್ರಹ್ಮಬೈದರ್ಕಳ ಗರಡಿ, ಶ್ರೀ ಮಹಾಗಣಪತಿ ಹಾಗೂ ಶ್ರೀ ಯಕ್ಷೇಶ್ವರಿಯ ಪೂಜೆಯೊಂದಿಗೆ ಸಂಪನ್ನಗೊಂಡಿತು. ಪೂರ್ಣಕುಂಭ ಹಾಗೂ ವಾದ್ಯ ಸಂಗೀತದೊಂದಿಗೆ ಪುರಮೆರವಣಿಗೆ ಮೂಲಕ ಅತಿಥಿಗಳನ್ನು ಶಾಲೆಗೆ ಬರಮಾಡಲಾಯಿತು.

ಶಿಕ್ಷಕಿ ಕು| ವಿದ್ಯಾ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ರವಿದಾಸ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿಯರಾದ ಆಯಿಶಾ, ಪಲ್ಲವಿ ಆಚಾರ್ಯ, ರಮ್ಯಾ ಕ್ರಮವಾಗಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೋಸಮ್ಮ ವಂದನಾರ್ಪಣೆ ಗೈದರು.

ಸತೀಶ್ ಮಧ್ಯಸ್ಥ ಇವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಮತ್ತು `ವೀರವೃಷಸೇನ' ಯಕ್ಷಗಾನ ಪ್ರದರ್ಶಿಸಿದ್ದು ವೈವಿಧ್ಯಮಯ ಕಾರ್ಯಕ್ರಮಗಳು ಜನಮನ ಸೂರೆಗೊಳಿಸಿತು.

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal