About Us       Contact

ಉಜಿರೆ: ಹಿಂದೆ ನಮಗೆ ಆರ್ಥಿಕ ಬಡತನವಿದ್ದರೂ , ಸಾಂಸ್ಕøತಿಕವಾಗಿ ಶ್ರೀಮಂತರಾಗಿದ್ದೆವು. ಆದರೆ ಈಗ ಆರ್ಥಿಕವಾಗಿ ಶ್ರೀಮಂತರಾಗಿದ್ದೇವೆ.ಸಾಂಸ್ಕøತಿಕವಾಗಿಬಡವರಾಗಿದ್ದೇವೆಎಂದು ಹಾಸ್ಯ ಸಾಹಿತಿಎಚ್.ದುಂಡಿರಾಜ್ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶಾಂತಿವನಟ್ರಸ್ಟ್‍ನಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಆಶ್ರಯದಲ್ಲಿ “ಜ್ಞಾನ ಗಂಗೆ ಮತ್ತುಜ್ಞಾನತುಂಗೆ” ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ವಿಜೇತರಿಗೆ ಪುರಸ್ಕಾರ ನೀಡುವ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.

ಸಹಜವಾಗಿ ಬರೆದರೆಕಾವ್ಯಮಯವಾಗುತ್ತದೆ.ಒತ್ತಾಯಕ್ಕೆ ಬರೆದರೆಕಾವ್ಯ ಮಾಯವಾಗುತ್ತದೆ! ಪ್ರಾಥಮಿಕ ಶಾಲಾ ಹಂತದಲ್ಲೇಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.ಓದುವ, ಬರೆಯುವ ಆಸಕ್ತಿ ಹೊಂದಿರಬೇಕು.ಪ್ರಾಸ, ರಾಗ, ತಾಳ, ಲಯದ ಬಗ್ಯೆ ತಿಳುವಳಿಕೆ ಇದ್ದರೆ ಸುಲಭದಲ್ಲಿ ಕವನಗಳನ್ನು, ಚುಟುಕಗಳನ್ನು ರಚಿಸಬಹುದು. ಅಂಕಗಳಿಕೆ, ಉದ್ಯೋಗಕ್ಕಾಗಿ ಮಕ್ಕಳ ಮೇಲೆ ಒತ್ತಡ ಹಾಕಬಾರದು.ಪಠ್ಯದಜೊತೆಗೆ ಪಠ್ಯೇತರಚಟುವಟಿಕೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಿಗೂ ಶಿಕ್ಷಕರು ಮತ್ತುರಕ್ಷಕರು ಪ್ರೋತ್ಸಾಹ ನೀಡಬೇಕು.ನೈತಿಕ ಮೌಲ್ಯಾಧಾರಿತ ಪುಸ್ತಕಗಳ ವಿತರಣೆ ಮೂಲಕ ಹೆಗ್ಗಡೆಯವರು ಶಿಕ್ಷಣದ ಮೂಲಕ ಸಭ್ಯ, ಸುಸಂಸ್ಕøತ ನಾಗರಿಕರನ್ನುರೂಪಿಸುತ್ತಿದ್ದಾರೆ.ಸರ್ಕಾರ ಮಾಡಬೇಕಾದಕಾರ್ಯವನ್ನು ಹೆಗ್ಗಡೆಯವರು ಮಾಡುತ್ತಿರವುವುದು ಶ್ಲಾಘನೀಯಎಂದುಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಸಿ ಹಂಚಿದರೆ ವನಮಹೋತ್ಸವ. ಖುಷಿ ಹಂಚಿದರೆಜೀವನ ಮಹೋತ್ಸ.ಆದುದರಿಂದ ಕಲೆ, ಸಂಸ್ಕøತಿ ಮೂಲಕ ಖುಷಿ ಹಂಚೋಣ.ಶಾಂತಿ, ನೆಮ್ಮದಿಯಜೀವನ ನಡೆಸೋಣಎಂದುಅವರು ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಿಕ್ಷಣದ ಮೂಲಕ ಜ್ಞಾನ ವೃದ್ಧಿಸಿಕೊಂಡು ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯವೇದೇಶದ ಭಾಗ್ಯವಾಗಿದೆ.ಕೆಟ್ಟ ಗುಣಗಳನ್ನು ತ್ಯಜಿಸಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮಾನವರಾಗಬೇಕು. ವಿಶ್ವಮಾನವರಾಗಬೇಕು.ಶಿಕ್ಷಣದ ಜೊತೆಗೆ ಬದುಕಿನ ಪಾಠವನ್ನೂಕಲಿಯಬೇಕುಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.

ಶ್ರದ್ಧಾಅಮಿತ್, ಭಾರತಿದುಂಡಿರಾಜ್, ಮತ್ತುಶಾಂತಿವನಟ್ರಸ್ಟ್‍ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಉಡುಪಿ ಜಿಲ್ಲಾದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಮತ್ತುಚಂದ್ರಶೇಖರ ಕೆದಿಲಾಯ ಉಪಸ್ಥಿತರಿದ್ದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕಶಶಿಕಾಂತ ಜೈನ್ ಸ್ವಾಗತಿಸಿದರು.ಉಡುಪಿ ಜಿಲ್ಲಾ ಸಂಘಟಕ ಅಶೋಕ ಸಿ.ಪೂಜಾರಿಧನ್ಯವಾದವಿತ್ತರು.ಬಂಟ್ವಾಳದ ಸದಾಶಿವ ನಾಯಕ್‍ಕಾರ್ಯಕ್ರಮ ನಿರ್ವಹಿಸಿದರು.
ಮುಖ್ಯಾಂಶಗಳು:

ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು:
• ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯನ್ನು ಮುಂದಿನ ವರ್ಷ ಚಿಕ್ಕಮಗಳೂರು ಮತ್ತುಉತ್ತರಕನ್ನಡಜಿಲ್ಲೆಯ ಶಾಲೆಗಳಿಗೆ ವಿಸ್ತರಣೆ.
• ದಾನವ ಗುಣಗಳನ್ನು ದೂರಮಾಡಿಮಾನವರಾಗಬೇಕು, ವಿಶ್ವಮಾನವರಾಗಬಕು.
• ಶಿಕ್ಷಣದ ಮೂಲಕ ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.
• ಮಕ್ಕಳಿಗೆ ಬುದ್ದಿ ಹೇಳುವಾಗ “ಬುದ್ದಿವಂತಿಕೆ”ಯಿಂದ ಹೇಳಬೇಕು.
• ವಿದ್ಯಾರ್ಥಿಗಳ ಭವಿಷ್ಯವೇದೇಶದ ಭಾಗ್ಯ.
• ಶಿಕ್ಷಣದ ಜೊತೆಗೆ ಬದುಕಿನ ಪಾಠವನ್ನೂಕಲಿಯಬೇಕು. ಹತ್ತು ಜಿಲ್ಲೆಗಳಲ್ಲಿ 4,189 ಶಿಕ್ಷಕರಿಗೆ ಯೋಗ ಮತ್ತು ನೈತಿಕ ಶಿಕ್ಷಣ ತರಬೇತಿ ನೀಡಲಾಗಿದೆ. 20,15,000 ಪುಸ್ತಕಗಳನ್ನು ವಿತರಿಸಲಾಗಿದೆ: ಐ. ಶಶಿಕಾಂತ ಜೈನ್, ಯೋಗ ನಿರ್ದೇಶಕ

 ಎಚ್.ದುಂಡಿರಾಜ್ ಹೇಳಿದರು:
• ಸಹಜವಾಗಿ ಬರೆದರೆಕಾವ್ಯಮಯ, ಒತ್ತಡಕ್ಕೆ ಬರೆದರೆಕಾವ್ಯ ಮಾಯ!
• ಕೃತಿ ಪ್ರಕಟಿಸುವುದು ಹೆರಿಗೆಯ ಹಾಗೆ, ಬರೆಯುವುದು ಬಾಣಂತಿತನ!
• ಬಾಲ್ಯದಲ್ಲಿಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು.
• ಸಸಿ ಹಂಚಿದರೆ ವನಮಹೋತ್ಸವ, ಖುಷಿ ಹಂಚಿದರೆಜೀವನ ಮಹೋತ್ಸವ
• ನಾಯಿ ಸಾಕಿದರು ಕಳ್ಳರು ಬಾರದಂತೆ, ಬೆಕ್ಕು ಸಾಕಿದರು ಇಲಿಗಳು ಬಾರದಂತೆ, ನುಸಿ ಸಾಕಿದರು ಅತಿಥಿಗಳು ಬಾರದಂತೆ!

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal