About Us       Contact

 

ಮಾಂಡ್ ಸೊಭಾಣ್‌ನ ತಿಂಗಳ ವೇದಿಕೆ ಸರಣಿಯ 205ನೇ ಕಾರ್ಯಕ್ರಮವಾಗಿ ಸಂಗೀತ ಸುನಾಮಿ-2 ರಸಮಂಜರಿ ಜನವರಿ 06 ರಂದು ಭಾನುವಾರ, ಕಲಾಂಗಣದ ಬಯಲು ರಂಗ ಮಂದಿರದಲ್ಲಿ ನಡೆಯಿತು.

ಇತ್ತೀಚೆಗೆ ನಿಧನರಾದ, ಕುವೈಟಿನಲ್ಲಿ ಕೊಂಕಣಿ ಸುಗಂಧ ಪಸರಿಸಲು ಶ್ರಮಿಸಿದ್ದ ಹಾಗೂ ಸಾಮಾಜಿಕ ಮುಂದಾಳು ಪಾಸ್ಕಲ್ ಪಿಂಟೊ ಇವರಿಗೆ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಜೊಸೆಫ್ ಮತಾಯಸ್, ವಾಲ್ಟರ್ ನಂದಳಿಕೆ, ಎರಿಕ್ ಒಝೇರಿಯೊ, ಲುವಿ ಪಿಂಟೊ, ಸ್ಟ್ಯಾನಿ ಆಲ್ವಾರಿಸ್ ಹಾಗೂ ಕಿಶೋರ್ ಫೆರ್ನಾಂಡಿಸ್ ಕೊಂಕಣಿಗರ ಪರವಾಗಿ ಶೃದ್ಧಾಂಜಲಿ ಅರ್ಪಿಸಿದರು.

ಅನಿವಾಸಿ ಉದ್ಯಮಿ, ಗಾಯಕ ಹಾಗೂ ಕಲಾಪೋಷಕ ಜೊಸೆಫ್ ಮತಾಯಸ್ ದುಬಾಯಿ ಇವರು ಕಂಚಿನ ಗಂಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಗಾಯಕ ರೊನಿ ಕ್ರಾಸ್ತಾ ಮತ್ತು ತಂಡದಿಂದ ರಸಮಂಜರಿ ಸಾದರವಾಯಿತು. ಎರಿಕ್ ಒಝೇರಿಯೊ, ಬಬಿತಾ, ಜೋಶಾಲ್, ರೀನಾ, ಆಲ್ವಿನ್, ಆಂಜೆಲಿನ್, ವೆಲಿಟಾ, ಸ್ಟೀವನ್, ಶಿಲ್ಪಾ, ಶರಣ್, ಲೋನಾ, ಲೆಸ್ಲಿ ಹಾಗೂ ಬಾಲಗಾಯಕಿ ರಿಶಲ್ ಮೆಲ್ಬಾ ಮಧುರ ಗೀತೆಗಳನ್ನು ಹಾಡಿ ಮನರಂಜಿಸಿದರು.
ರಾಜೇಶ್, ರಾಜೇಂದ್ರ ಮೊಯ್ಲಿ, ಸಂಜಯ್ ರೊಡ್ರಿಗಸ್, ಜೆರೊಮ್ ಹಾಗೂ ರೂಬನ್ ಸಂಗೀತದಲ್ಲಿ ಸಹಕರಿಸಿದರು. ದೋಸ್ತಿ ಕಲಾಕಾರ್ ಫೆರ್ಮಾಯಿ ಇವರ ಹಾಸ್ಯ ಹಾಗೂ ಹೆನ್ಸಿಲ್ ಫೆರ್ಮಾಯಿ ಹಾಗೂ ತಂಡದ ನೃತ್ಯಗಳು ಮನರಂಜಿಸಿದವು. ರೋಶನ್ ಕ್ರಾಸ್ತಾ, ಆವಿಲ್ ನೈನಾಡ್ ಹಾಗೂ ಸಿಲ್ವೆಸ್ಟರ್ ಫೆರ್ಮಾಯಿ ಕಾರ್ಯಕ್ರಮ ನಿರೂಪಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal