About Us       Contact

ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಉಡುಪಿ (ಪಡುಬೆಳ್ಳೆ), ಡಿ.18: ವಿದ್ಯಾಲಯಗಳು ಲೋಕಜ್ಞಾನ ತಿಳಿಸಿದರೆ ಪಾಲಕರು ಜೀವನಜ್ಞಾನ ನೀಡಲು ಪ್ರೇರೆಪಿಸಿದಾಗ ತನ್ನಿಂತಾನೇ ಮಕ್ಕಳ ಬದುಕು ಹಸನಾಗುವುದು. ಅಪರಾಧ, ಭ್ರಷ್ಟಚಾರ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮನೆಯಿಂದಲೇ ಪ್ರೇರಣೆ ದೊರೆತಾಗ ಶಿಕ್ಷಕರು ಅದನ್ನು ಮಕ್ಕಳ ಕಾರ್ಯಗತರಾಗಿಸುವ ಜವಾಬ್ದಾರಿ ನಿರ್ವಹಿಸಿದಾಗ ಮಾತ್ರ ಮಕ್ಕಳು ಆರೋಗ್ಯಕರ ಬದುಕನ್ನು ರೂಪಿಸಲು ಸಾಧ್ಯವಾಗುವುದು. ಮಾತಾಪಿತರು ಮತ್ತು ಗುರು ಗೌರವ ನೀಡುವ ಮಕ್ಕಳು ಸಮಾಜವನ್ನೂ ಗೌರವಿಸಲು ಸಾಧ್ಯವಾಗುವುದು. ಆದುದರಿಂದ ಮೊದಲಾಗಿ ಮನೆಯೇ ಮಕ್ಕಳ ಭವಿಷ್ಯ ರೂಪಿಸುತ್ತದೆ ಎಂದು ಮಂಘಳೂರು ವಿಮಾನ ನಿಲ್ದಣದ ಪೆÇೀಲಿಸು ಸಂಪರ್ಕಾಧಿಕಾರಿ ಗೋಪಾಲಕೃಷ್ಣ ಕುಂದರ್ ಬಜ್ಪೆ ತಿಳಿಸಿದರು.

 

 

 

 

 

 

 

 

 

 

 

 

 

 

/>ಬಿಲ್ಲವರ ಅಸೋಸಿಯೇಶನ್ ಮುಂಬಯಿ ಆಡಳಿತ್ವದ ಶ್ರೀ ಗುರು ನಾರಾಯಣ ಶಿಕ್ಷಣ ಸಮೂಹ ಸಂಸ್ಥೆ ಪಡುಬೆಳ್ಳೆ (ಉಡುಪಿ) ತನ್ನ ಕನ್ನಡ ಮಾಧ್ಯಮ ಪ್ರೌಢಶಾಲೆ, ಆಂಗ್ಲ ಮಾಧ್ಯಮ ಪ್ಲೇಸ್ಕೂಲ್, ನರ್ಸರಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನೊಳಗೊಂಡು ಇಂದಿಲ್ಲಿ ಮಂಗಳವಾರ ಬೆಳಿಗ್ಗೆ ಶ್ರೀ ಗುರು ನಾರಾಯಣ ಶಿಕ್ಷಣ ಸಮೂಹ ಸಂಸ್ಥೆಗಳ ವಾರ್ಷಿಕೋತ್ಸವವನ್ನು ಪಡುಬೆಳ್ಳೆಯಲ್ಲಿನ ವಿದ್ಯಾ ಸಂಕುಲದ ಅಚ್ಚು ನಂದನ ವೇದಿಕೆಯಲ್ಲಿ ಸಂಭ್ರಮಿಸಿದ್ದು, ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿದ್ದು ಗೋಪಾಲಕೃಷ್ಣ ಬಜ್ಪೆ ಮಾತನಾಡಿದರು.

ಮಾತೃ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭವನ್ನು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭಶಂಸನೆಗೈದರು.

ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಯುವಭ್ಯುದಯ ವಿಭಾಗದ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ರೊ| ಕಟಪಾಡಿ ಸುಂದರ್ ಪೂಜಾರಿ, ಶಾಲಾಡಳಿತ ಮಂಡಳಿ ಸದಸ್ಯರಾದ ಎಸ್.ಕೆ ಸಾಲ್ಯಾನ್ ಬೆಳ್ಮಣ್, ರಾಮಚಂದ್ರ ಕಿದಿಯೂರು (ಹರ್ಷ), ಸೂರ್ಯಪ್ರಕಾಶ್ ಕೆ.(ಹರ್ಷ), ರೇವತಿ ಸನಿಲ್, ಗೀತಾ ವಾಗ್ಳೆ, ಜಯಕುಮಾರ್ ಉಡುಪಿ, ಸುಧಾಕರ್ ಪೂಜಾರಿ, ಶಾಲಾ ವಿದ್ಯಾಥಿರ್ü ನಾಯಕರಾದ ಮಾ| ಸಂದೀಪ್ ಶಿವಕುಮಾರ್ ಹಾಗೂ ಮಾ| ಮಂಜು ನಾಯ್ಕ್, ರಕ್ಷಕ-ಶಿಕ್ಷಕ ಸಂಘಗಳ ಮುಖ್ಯಸ್ಥರಾದ ಸುಕನ್ಯ ಜೋಗಿ (ಇಂಗ್ಲೀಷ್ ಮಾಧ್ಯಮ), ಕೃಷ್ಣ ಜೋಗಿ (ಕನ್ನಡ ಮಾಧ್ಯಮ) ವೇದಿಕೆಯಲ್ಲಿ ಆಸೀನರಾ ಗಿದ್ದು ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಶಾಲಾ ಹಸ್ತಪತ್ರಿಕೆ `ವನಸುಮ'ನ್ನು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್‍ನ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಮತ್ತು ಇಂಗ್ಲೀಷ್ ಮಾಧ್ಯಮ ಶಾಲಾ ಹಸ್ತಪತ್ರಿಕೆ `ವಿಷನ್'ನ್ನು ತುಳು ಸಂಘ ಅಂಕ್ಲೇಶ್ವರ ಇದರ ಉಪಾಧ್ಯಕ್ಷ, ಯುವೋದ್ಯಮಿ ಹರೀಶ್ ಪೂಜಾರಿ ಗುಜರಾತ್ ಬಿಡುಗಡೆ ಗೊಳಿಸಿದರು.

 

 

 

 

 

 

 

 

 

 

 

 

 

 

ಅಬ್ದುಲ್ ರಹೀಂ ಉಚ್ಚಿಲ್ ಪ್ರಾಯೋಜಕತ್ವದ ಸರ್ವೋತ್ಕೃಷ್ಟ ವಿದ್ಯಾಥಿರ್üನಿ ವಾರ್ಷಿಕ ಪುರಸ್ಕಾರವನ್ನು ಕು| ಶೃತಿ ಅವರಿಗೆ ಪ್ರದಾನಿಸಿ ಹಾಗೂ ರಾಷ್ಟ್ರೀಯ ಕ್ರೀಡಾಪಟು ಕು| ಎಸ್.ನವಮಿ ಅವರನ್ನು ಅತಿಥಿಗಳು ಸನ್ಮಾನಿಸಿದರು. ಮಾ| ಸಾತ್ವಿಕ್ ಶೆಟ್ಟಿ ಹಾಗೂ ಕೆ.ವರುಣಿ ಹಾಗೂ ಇನ್ನಿತರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿದರು ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಫಲಕಗಳನ್ನು ಪ್ರದಾನಿಸಿದರು ಮತ್ತು ದಾನಿಗಳನ್ನೂ ಗೌರವಿವಿಸಿ ಅಭಿವಂದಿಸಿದರು.

ಪ್ರಭಾಕರ್ ಕೊಂಡಳ್ಳಿ ಪ್ರಧಾನ ಉಪನ್ಯಾಸ ನೀಡಿ ಮಾನವತ್ವದಿಂದ ಮಾಧವತ್ವಕ್ಕೆ ಸಾಗಿದ ಬ್ರಹ್ಮಶ್ರೀ ನಾರಯಣ ಗುರುಗಳ ಜೀವನ ಶೈಲಿಯೇ ಅತ್ಯಾದ್ಭುತವಾದುದು. ಅವರ ತತ್ವಗಳನ್ನು ಆಶಯವಾಗಿಸಿ ಮುನ್ನಡೆಯುವ ಈ ಶಿಕ್ಷಣ ಸಂಸ್ಥೆ ಮಾದರಿಯಾಗಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನೊಳಗೊಂಡ ವಿದ್ಯಾರ್ಥಿ ಜೀವನವೇ ಮಕ್ಕಳ ಪರಿಪೂರ್ಣ ವಿಕಾಸನಕ್ಕೆ ಪೂರಕವಾಗಿದೆ. ಅದರಂತೆ ಬುದ್ಧಿವಂತಿಕೆಯ ಜೊತೆಗೆ ಹೃದಯವಂತಿಕೆಯ ಶಿಕ್ಷಣ ಪ್ರಸಕ್ತ ಬದುಕಿಗೆ ಅತ್ಯವಶ್ಯವಾಗಿದ್ದು, ಶಿಕ್ಷಕರ ಜೊತೆ ಪಾಲಕರೂ ಇದಕ್ಕೆ
ಪ್ರೊತ್ಸಹಿಸಬೇಕು. ಇಂತಹ ಕೂಡುವಿಕೆಯ ಮಕ್ಕಳ ನಡೆನುಡಿಯೇ ಬದುಕಿಗೆ ಪಾಠವಾಗುವುದು ಎಂದÀು ವಿದ್ಯಾಥಿರ್üಗಳು, ಪಾಲಕ, ಶಿಕ್ಷಕರನ್ನುದ್ದೇಶಿಸಿ ಕಿವಿಮಾತುಗಳನ್ನಾಡಿದರು.

ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಗಳನ್ನು ರೂಢಿಸಿದಾಗಲೇ ಮಕ್ಕಳು ಭವಿಷ್ಯತ್ತಿನ ಸದ್ಪ್ರಜೆಗಳಾಗಲು ಸಾಧ್ಯ. ಪಾಲಕರು ಮತ್ತು ಶಿಕ್ಷಕರಿಬ್ಬರೂ ಸಮಾನವಾಗಿ ಎಲ್ಲಾ ಮಕ್ಕಳನ್ನೂ ತಮ್ಮ ಮಕ್ಕಳೆಂದು ಪ್ರೀತಿವಾತ್ಸಲ್ಯದಿಂದ ಬೆಳೆಸಿದಾಗ ಮಕ್ಕಳೂ ವಾತ್ಸಲ್ಯಭರಿತರಾಗಿ ಬೆಳೆಯುತ್ತಾರೆ. ವಾರ್ಷಿಕೋತ್ಸವಗಳು ಶಿಕ್ಷಕರು ಮತ್ತು ವಿದ್ಯಾಥಿರ್üಗಳ ಸಹಬಾಳ್ವೆಯ ಸಂಗಮವಾಗಿದ್ದು, ಪ್ರತಿಭೆಗಳನ್ನೂ ಪ್ರದರ್ಶಿಸುವ ಸುಸಂದರ್ಭವಾಗಿದೆ. ನಮ್ಮ ಯಾವುದೇ ಸೇವೆಯನ್ನು ಭಗವಂತನಿಗೆ ಮೆಚ್ಚುವಂತಾದಾಗಲೇ ನಮ್ಮ ಜೀವನವೂ ಫಲಪ್ರದವಾಗುವುದು. ಆದುದರಿಂದ ಬದುಕನ್ನು ಪ್ರಮಾಣಿಕವಾಗಿಸಿರಿ ಎಂದು ಅಧ್ಯಕ್ಷತೆ ವಹಿಸಿ ಚಂದ್ರಶೇಖರ ಪೂಜಾರಿ ಮಾತನಾಡಿದರು.

 

 

 

 

 

 

 

 

 

 

 

 

 

ಆರಂಭದಲ್ಲಿ ಪಡುಬೆಳ್ಳೆ ಅಲ್ಲಿನ ಪ್ರತಿಷ್ಠಿತ ಉದ್ಯಮಿ ರಾಮಚಂದ್ರ ನಾಯಕ್ ಶಾಲಾ ಧ್ವಜಾರೋಹಣ ನೆರವೇರಿಸಲಿದ್ದು, ಹೋಲಿಕ್ರಾಸ್ ಇಗರ್ಜಿ ಪಾಂಬೂರು ಇದರ ಧರ್ಮಗುರು ರೆ| ಫಾ| ಪಾವ್ಲ್ ರೇಗೊ ಶುಭಶಂಸನೆ ಗೈದರು.

ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನಾಡಿದರು. ಶಾಲಾ ಆಡಳಿತಾಧಿಕಾರಿ ಜಿನರಾಜ್ ಸಿ.ಸಾಲಿಯಾನ್ ಸ್ವಾಗತಿಸಿದರು. ಬಿಲ್ಲವರ ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಹಾಗೂ ಶಾಲಾ ಆಡಳಿತ ಮಂಡಳಿ ಸಂಚಾಲಕ ಧನಂಜಯ ಶಾಂತಿ ಪ್ರಸ್ತಾವಿಕ ನುಡಿಗಳನ್ನಾಡಿದರು. ವೀಣಾ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ವಿವಿದ್ಯಾರ್ಥಿಗಳು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಮುಖ್ಯ ಅಧ್ಯಾಪಕಿ ಉಷಾ ಎಸ್.ವಾರ್ಷಿಕ ಚಟುವಟಿಕೆಗಳ ವರದಿ ಭಿತ್ತರಿಸಿದರು. ಕೆ.ಗೀತಾ ಸಂದೇಶಗಳನ್ನು ವಾಚಿಸಿದರು. ಸುರೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶಿವಾಜಿ ಸುವರ್ಣ ಬೆಳ್ಳೆ ವಂದನಾರ್ಪಣೆಗೈದರು.

 

 

 

 

 

 

 

 

ಶಿಕ್ಷಕ-ಶಿಕ್ಷಕೇತರ ವೃಂದ, ವಿದ್ಯಾಥಿರ್üಗಳು, ನೂರಾರು ವಿದ್ಯಾಭಿಮಾನಿಗಳು ಉಪಸ್ಥಿತರಿದ್ದು, ಕಿರಿಯ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾಥಿರ್üಗಳು ಮತ್ತು ಮಕ್ಕಳ ಪಾಲಕರು ನೃತ್ಯ ವೈವಿಧ್ಯ, ನೃತ್ಯರೂಪಕ, ಯೋಗ, ಪ್ರಹಸನ, ಯಕ್ಷಗಾನ ಇತ್ಯಾದಿಗಳ ಮೇಳೈಕೆಯೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಸಂಗೀತ ವಸಂತ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.

 

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal