About Us       Contact

ಮುಂಬಯಿ, ಅ.20: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಆಡಳಿತ್ವದ ಉಡುಪಿ ಪಡುಬೆಳ್ಳೆಯಲ್ಲಿನ ಶ್ರೀ ಗುರು ನಾರಾಯಣ ಶಿಕ್ಷಣ ಸಮೂಹ ಸಂಸ್ಥೆಗಳ (ಕನ್ನಡ ಮಾಧ್ಯಮ ಪ್ರೌಢಶಾಲೆ, ಆಂಗ್ಲ ಮಾಧ್ಯಮ ಪ್ಲೇಸ್ಕೂಲ್, ನರ್ಸರಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ) ವಾರ್ಷಿಕೋತ್ಸವ ಇದೇ ಡಿ.18ರ ಮಂಗಳವಾರ ನೆರವೇರಲಿದೆ ಎಂದು ಬಿಲ್ಲವರ ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಹಾಗೂ ಶಾಲಾ ಆಡಳಿತ ಮಂಡಳಿ ಸಂಚಾಲಕ ಧನಂಜಯ ಶಾಂತಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 9.00 ಗಂಟೆಗೆ ಪಡುಬೆಳ್ಳೆ ಅಲ್ಲಿನ ಪ್ರತಿಷ್ಠಿತ ಉದ್ಯಮಿ ರಾಮಚಂದ್ರ ನಾಯಕ್ ಶಾಲಾ ಧ್ವಜಾರೋಹಣ ನೆರವೇರಿಸಲಿದ್ದು, ಶಾಂತಿಪುರ ಪಾಂಬೂರು ಇಲ್ಲಿನ ಹೋಲಿಕ್ರಾಸ್ ಇಗರ್ಜಿಯ ಧರ್ಮಗುರು ರೆ| ಫಾ| ಪಾವ್ಲ್ ರೇಗೊ ಶುಭಶಂಸನೆ ಗೈಯುವರು.

 

 

 

 

 

 

ಪೂರ್ವಾಹ್ನ 10.30 ಗಂಟೆಗೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್‍ನ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಪ್ರಧಾನ ಉಪನ್ಯಾಸ ನೀಡುವರು. ಅತಿಥಿü ಅಭ್ಯಾಗತರುಗಳಾಗಿ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ನಿರ್ದೇಶಕ ದಾಮೋದರ ಸಿ.ಕುಂದರ್, ಗುಜರಾತ್‍ನ ಉದ್ಯಮಿ ಹರೀಶ್ ಪೂಜಾರಿ, ಭವಾನಿ ಫೌಂಡೇಶನ್ ನವಿಮುಂಬಯಿ ಇದರ ವಿಶ್ವಸ್ಥ ಸದಸ್ಯ ಗೋಪಾಲಕೃಷ್ಣ ಕುಂದರ್ ಬಜ್ಪೆ ಆಗಮಿಸುವರು.

ಸಮಾರಂಭದಲ್ಲಿ ವಿದ್ಯಾಲಯದ ಹಸ್ತಪತ್ರಿಕೆ `ವನಸುಮ' ಮತ್ತು `ವಿಷನ್' ಬಿಡುಗಡೆ ಗೊಳಿಸಲಾಗುವುದು. ಹಾಗೂ ರಾಷ್ಟ್ರ ಮತ್ತು ರಾಜ್ಯಮಟ್ಟದ ಕ್ರೀಡಾಪಟುಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ದಾನಿಗಳನ್ನು ಗೌರವಿಸಲಾಗುವುದು. ವಾರ್ಷಿಕೋತ್ಸವದ ಅಂಗವಾಗಿ ಕಿರಿಯ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳು ಮತ್ತು ಮಕ್ಕಳ ಪಾಲಕರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಶಾಲಾ ಆಡಳಿತಾಧಿಕಾರಿ ಜಿನರಾಜ್ ಸಿ.ಸಾಲಿಯಾನ್ ತಿಳಿಸಿದ್ದಾರೆ.

ವಿದ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಾರ್ಷಿಕೋತ್ಸವ ಯಶಸ್ವಿ ಗೊಳಿಸುವಂತೆ ಮುಖ್ಯೋಪಾ ಧ್ಯಾಯಿನಿ ಉಷಾ ಎಸ್., ವಿದ್ಯಾರ್ಥಿನಾಯಕರಾದ ಮಾ| ಸಂದೀಪ್ ಹಾಗೂ ಮಾ| ಮಂಜು ನಾಯ್ಕ್, ರಕ್ಷಕ-ಶಿಕ್ಷಕ ಸಂಘಗಳ ಮುಖ್ಯಸ್ಥರಾದ ಸುಕನ್ಯ ಜೋಗಿ, ಕೃಷ್ಣ ಜೋಗಿ, ಶಿಕ್ಷಕ-ಶಿಕ್ಷಕೇತರ ವೃಂದವು ಈ ಮೂಲಕ ವಿನಂತಿಸಿದ್ದಾರೆ.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal