Print

`ಮಲಾೈಕಾ' ಅಪ್ಲೈಯನ್ಸಸ್ ಲಿಮಿಟೆಡ್ ಸಂಸ್ಥೆಯ ಸ್ವಂತತಯಾರಿಕಾ 
`ಯಶೋಮಾ' ಬ್ಯಾಂಡ್ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.04, 2017: ಗೃಹಪಯೋಗಿ ವಸ್ತುಗಳ ಮಾರಾಟ ಹಾಗೂ ವಿತರಣೆಗೆ ಮನೆಮಾತಾಗಿರುವ ಹೆಸರಾಂತ ಮಲಾೈಕಾ ಅಪ್ಲೈಯನ್ಸಸ್ ಲಿಮಿಟೆಡ್ ಸಂಸ್ಥೆಯು ತನ್ನ ಸ್ವಂತಿಕೆಯ ಉತ್ಪನ್ನವಾಗಿಸಿ`ಯಶೋಮಾ' ಬ್ರ್ಯಾಂಡ್ ಮುಖೇನ ಯಶೋಮಾ ಮಿಕ್ಸರ್ ಗ್ರೈಂಡರ್, ಇಂಡಕ್ಶನ್ ಕುಕರ್, ಎಲ್‍ಇಡಿ, ಸ್ಮಾರ್ಟ್ ಟಿವಿ, ಅಲ್ಟ್ರಾ ಹೆಚ್‍ಡಿ ಟಿವಿ, 4ಕೆ ರಾರ್ವ್ ಟಿವಿ, ಎಲ್‍ಇಡಿ ಟಿವಿ (ಲೆಡ್), 2ಕೆ ಲೆಡ್ ಟಿವಿ, ಆರೋಗ್ಯದಾಯಕ ಸೇವನೆಗಾಗಿನ ಆರ್‍ಓ ಶುದ್ಧೀಕರಣ ನೀರಿನ ಯಂತ್ರ (ವಾಟರ್ ಪ್ಯೂರಿಪಯರ್), ಇನ್ನಿತರ ಗೃಹಪಯೋಗಿ ವಸ್ತುಗಳನ್ನು ಇಂದಿಲ್ಲಿ ರಾತ್ರಿ ವಿೂರಾರೋಡ್ ಪೂರ್ವದ ಜಿಸಿಸಿ ಕ್ಲಬ್ ಸಭಾಗೃಹದಲ್ಲಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಿತು.

 

 

 

 

ಮಲಾೈಕಾ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ  ಗಿಲ್ಬರ್ಟ್ ಬ್ಯಾಪ್ಠಿಸ್ಟ್ ಸಾರ್ಥ್ಯದಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಮಲಾೈಕಾ ಸಂಸ್ಥೆಯ ನಿರ್ದೇಶಕಿ ಮಾರ್ಸೆಲಿನ್ ಜಿ.ಬ್ಯಾಪ್ಠಿಸ್ಟ್, ಸತೀಶ್ ಮೊಲಾಜಿ, ಪುರಂದರ ಶೆಟ್ಟಿ, ರಾಜೀವ್ ವರ್ಮಾ ಮತ್ತಿತರÀ ಗಣ್ಯರು ಉಪಸ್ಥಿತರಿದ್ದು ಮೊತ್ತಮೊದಲ `ಯಶೋಮಾ' ಬ್ರ್ಯಾಂಡ್‍ನ ಎಲ್‍ಇಡಿ ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಶುಭೇಚ್ಛ ಹಾರೈಸಿದರು.

ಮಲಾೈಕಾ ಸಂಸ್ಥೆಯ ಸಿಎಂಡಿ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ಮಾತನಾಡಿ ಮಲಾೈಕಾ ಸಂಸ್ಥೆಯು ಒಂದು ಸಣ್ಣ ಪ್ರಮಾಣದ ಸಂಸ್ಥೆಯಾಗಿ ಹುಟ್ಟಿ ಇದೀಗ ಸ್ವಂತಿಕೆಯ ಉತ್ಪನ್ನ ತಯಾರಿಕೆಗಳೊಂದಿಗೆ ಗ್ರಾಹರ ಸದಾಶಯಗಳೊಂದಿಗೆ ದೊಡ್ಡ ಸಂಸ್ಥೆಯಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಗೆ ನನ್ನ ಪತ್ನಿ ಮತ್ತು ಮಕ್ಕಳ ಸಹಕಾರ, ಮಲಾೈಕಾ ಪರಿವಾರದ ಸಿಬ್ಬಂದಿಗಳ ಶ್ರಮ, ಕಾರ್ಯನಿರ್ವಾಹಣೆ ಅನನ್ಯವಾದುದು. ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಹಲವು ದಶಕಗಳ ಅನುಭವ ಇರುವ ನಮ್ಮ ಸಂಸ್ಥೆಯು ಆತ್ಯಾಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಸ್ವಂತಿಕೆಯ ಎಲ್‍ಇಡಿ ಇತ್ಯಾದಿಗಳನ್ನು ಉತ್ಪಾದಿಸುವಲ್ಲಿ ಯಶಕಂಡಿದೆ. ಮಾರುಕಟ್ಟೆಯಲ್ಲಿ ದೊರೆಯುವಂತಹ ಮಿಕ್ಸರ್ ಗ್ರೈಂಡರ್ ಕ್ಕಿಂತ ಆಧುನಿಕ ಪ್ರಮಾಣದ ವಾಲ್ಟ್ಸ್ ಅಲಾವಡಿ ಮಿಕ್ಸರ್ ಗ್ರೈಂಡರ್ ಸಿದ್ಧಪಡಿಸಿದೆ. ದೀರ್ಘಾವಧಿ ಬಳಕೆಗೆ ಯೋಗ್ಯವಾದ ಇದನ್ನು ಬಡವರಿಂದ ಶ್ರೀಮಂತರೂ ಉಪಯೋಗಿಸಿ ಭರವಸೆಗೆ ಮೂಡಿಸಲಿದೆ. ನಮ್ಮ ಸಾಧನೆಗೆ ಪೂರಕವಾಗಿರುವ ಸಂಸ್ಥೆಯ ಎಲ್ಲಾ ಹಿತೈಷಿಗಳು, ಷೇರುದಾರರು, ಗ್ರಾಹಕರಿಗೆ, ವಿತರಕರಿಗೆ, ಉತ್ಪಾದನ ಹಾಗೂ ಮಾರುಕಟ್ಟೆಯ ಸರ್ವರಿಗೂ ಮಲಾೈಕಾ ಸಮೂಹವು ಕೃತಜ್ಞತೆ ಸಲ್ಲಿಸುತ್ತಿದೆ ಎಂದರು.

 

 

 

 

ಈ ಶುಭಾವಸರದಲ್ಲಿ ಮಲಾೈಕಾ ಸಂಸ್ಥೆಯ ಉನ್ನತಾಧಿಕಾರಿಗಳಾದ ಎಲ್ಸಿ ಜೆ.ರೋಡ್ರಿಗಸ್, ಮನೋಹರ್ ಆರ್.ಶೆಟ್ಟಿ, ತೇಜಾ ರವೀಂದ್ರ ಶೆಟ್ಟಿ, ಸಂತೋಷ್ ತಿಂಗಳಾಯ, ಸುಶಾಂತ್ ಎಸ್.ಸಬತ್, ಲೋಯಲ್ ಬ್ಯಾಪ್ಠಿಸ್ಟ್, ಚಂದ್ರಶೇಖರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. 

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲಾೈಕಾ ಜಿ.ಬ್ಯಾಪ್ಠಿಸ್ಟ್ ಸ್ವಾಗತಿಸಿದರು. ಆಲ್ಬನ್ ನೊರೋನ್ಹಾ ಮತ್ತು ಜಯಂತ್ ಸಹು ಅವರು ಎಲ್‍ಇಡಿ ಮತ್ತಿತರ ಉತ್ಪನ್ನಗಳ ಮಾಹಿತಿ ನೀಡಿದರು. ಕಿಂಗ್ ಎಡ್ವರ್ಡ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮಲಾೈಕಾ ಸಂಸ್ಥೆಯು ಸ್ವಂತಿಕೆಯ `ಯಸೋಮಾ' ಬ್ರಾಂಡ್‍ನ  ಮತ್ತು ಮಿಕ್ಸರ್ ಗ್ರೈಂಡರ್ ಉತ್ಪಾದಿಸಿ ಗ್ರಾಹಕರಿಗೆ ಒದಗಿಸುತ್ತಿದೆ. ಎಲ್ಲಾ ಬ್ರಾಂಡ್‍ಗಳ ಗೃಹಪಯೋಗಿ, ಇನ್ನಿತರ ಎಲ್ಲಾ ವಸ್ತುಗಳ ಖರೀದಿಯಲ್ಲೂ ಆತ್ಯಾಕರ್ಷಕ ಹಾಗೂ ರಿಯಾಯಿತಿ ದರಗಳ ಲಾಭಾಂಶ ನೀಡುತ್ತಿದೆ. ಮುಂಬಯಿ ನಗರದಾದ್ಯಂತ ಅನೇಕ ಶಾಖೆಗಳ ಮುಖೇನ ವ್ಯವಹಾರಿಸುತ್ತಿರುವ ಮಲಾೈಕಾ ಸಮೂಹ ಸಂಸ್ಥೆಯ ಉತ್ಪಾಧಿತ ಗೃಹಪಯೋಗಿ ಸಾಮಾಗ್ರಿಗಳನ್ನು ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ, ತವರೂರ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ತೊಕ್ಕುಟ್ಟು, ಬಿ.ಸಿ.ರೋಡ್, ವಿಟ್ಲ, ಪುತ್ತೂರು ಇಲ್ಲಿನ ಶಾಖೆಗಳಲ್ಲಿ ವಿತರಿಸುತ್ತಿದೆ. ಅಂತೆಯೇ ಮಲಾೈಕಾ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಯ್ಟಿ ಲಿಮಿಟೆಡ್ ಮೂಲಕ ತನ್ನ ಗ್ರಾಹಕರಿಗೆ ಅನುಕೂಲಕರ ಸೇವೆ, ಸೊಸೈಟಿ ವ್ಯವಹಾರದೊಂದಿಗೆ ಗೃಹಪಯೋಗಿವಸ್ತುಗಳನ್ನೂ ಖರೀದಿಸುವ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಮಲಾೈಕಾ ಸಂಸ್ಥೆಯ ನಿರ್ದೇಶಕಿ ಮಾರ್ಸೆಲಿನ್ ಜಿ.ಬ್ಯಾಪ್ಠಿಸ್ಟ್ ಈ ಮೂಲಕ ತಿಳಿಸಿದ್ದಾರೆ.