Print

ಉಳ್ಳಾಲ ದೇರಳಕಟ್ಟೆ ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್(ರಿ) ಇದರ ವತಿಯಿಂದ ದೇರಳಕಟ್ಟೆಯ ಚಲ್ಲಿಯಡ್ಕದಲ್ಲಿ ನಿರ್ಮಿಸಿದ ತಾಜುಲ್ ಉಲಮಾ ಮಸ್ಜಿದ್ ಕಟ್ಟಡವನ್ನು ದ.ಕ ಜಿಲ್ಲಾ ಸಂಯುಕ್ತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಕೊರತ್ ಶನಿವಾರ ಉದ್ಘಾಟಿಸಿದರು.


ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಮಂಜನಾಡಿ ಅಲ್-ಮದೀನಾ ವಿದ್ಯಾಸಂಸ್ಥೆಯ ಶಿಲ್ಫಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್, ಮಾಣಿ ದಾರುಲ್ ಇರ್ಷಾದ್ ವಿದ್ಯಾಸಂಸ್ಥೆಯ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್, ಅಲ್-ಅನ್ಸಾರ್ ವಾರ ಪತ್ರಿಕೆಯ ನಿರ್ದೇಶಕ ಹಾಜಿ ಇಬ್ರಾಹೀಂ ಬಾವ ಮಂಗಳೂರು, ಎಸ್‍ವೈಎಸ್ ಮುಖಂಡ ಅಲವಿ ತಂಙಳ್ ಕಿನ್ಯ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್‍ನ ಕುಬೈಬ್ ತಂಙಳ್, ಸುನ್ನೀ ವಾಣಿ ವಾರ ಪತ್ರಿಕೆಯ ಸಂಪಾದಕ ಮುಹೀಯದ್ದೀನ್ ಸಖಾಫಿ ತೋಕೆ, ಮೊೈಲಾಂಜಿ ಮಾಸಿಕದ ಸಂಪಾದಕ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಬದ್ಯಾರ್ ಜುಮಾ ಮಸೀದಿ ಖತೀಬ್ ಇಸ್ಮಾಯಿಲ್ ಸಅದಿ ಉರುಮಣೆ, ಭಾರತಿಯ ಕೃಷಿಕ ಸಮಾಜದ ಅಧ್ಯಕ್ಷ ಎ.ಎ ಹೈದರ್ ಪಾರ್ತಿಪಾಡಿ, ಕೊಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಡಿ.ಎಂ ಮೊಹಮ್ಮದ್, ದೇರಳಕಟ್ಟೆ ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್(ರಿ) ಗೌರವಾಧ್ಯಕ್ಷ ಎಚ್.ಎಚ್ ಹಾಜಿ ಕುಂಞ ಅಹ್ಮದ್ ದೇರಳಕಟ್ಟೆ, ಅಧ್ಯಕ್ಷ ಅಹ್ಮದ್ ಬಾವ ಏಷ್ಯನ್ ಹಾಜಿ ದೇರಳಕಟ್ಟೆ,ಕೋಶಾಧಿಕಾರಿ ಹಾಜಿ ಬಶೀರ್, ಟ್ರಸ್ಟಿಗಳಾದ ಅಬ್ದುಲ್ ಕಬೀರ್ ಹಾಜಿ.ಡಿ, ಶಫೀಕ್ ಎಚ್.ಎಚ್, ಯೂಸುಫ್ ರಝ್ವಿ ದೇರಳಕಟ್ಟೆ, ಉದ್ಯಮಿಗಳಾದ ಇಸ್ಮಾಯಿಲ್ ಝಕರಿಯ್ಯಾ ಬಾರ್ಕೋ, ಸಿದ್ದೀಕ್ ಹಾಜಿ ಮಂಗಳೂರು, ಕೆ.ಎಂ ಶರೀಫ್ ದೇರಳಕಟ್ಟೆ, ಅಬ್ಬಾಸ್ ಹಾಜಿ, ಅಲ್-ಮದೀನಾ ವಿದ್ಯಾಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ, ದ.ಕ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷ ಎನ್.ಎಸ್ ಕರೀಂ, ಮಸೀದಿ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು. ಕಾರ್ಯದರ್ಶಿ ಇಸ್ಹಾಕ್ ಝುಹುರಿ ಸ್ವಾಗತಿಸಿದರು. ಟ್ರಸ್ಟಿ ಶೌಕತ್ ಹಾಜಿ ದೇರಳಕಟ್ಟೆ ವಂದಿಸಿದರು.