About Us       Contact

 


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಎ.10: ಕಾಸರಗೋಡುವಿನ ಹೊಸಂಗಡಿ ಮಳ್ ಹರ್ ಇಸ್ಲಾಮಿಕ್ ಸಂಸ್ಥೆಯ ಇದರ ಮುಂಬಯಿ ಘಟಕ ವತಿಯಿಂದ 4ನೇ ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಮುಂಬಯಿಯ ದಾದರ್ ಪೂರ್ವದ ಲತ್ವೀಫಿಯ ಸುನ್ನೀ ಮಸ್ಜಿದ್‍ನಲ್ಲಿ ಇತ್ತೀಚೆಗೆ ನಡೆಯಿತು.

ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ ನೇತೃತ್ವ ವಹಿಸಿ ಮಾತನಾಡಿ, ಕಾಸರಗೋಡುನಲ್ಲಿ ಕಾರ್ಯಾಚರಿಸುತ್ತಿರುವ ಮಳ್‍ಹರ್ ವಿದ್ಯಾ ಸಂಸ್ಥೆ ಇಂದು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗಲು ಇತರ ರಾಜ್ಯ ಮತ್ತು ವಿದೇಶಿಯರ ಸಹಕಾರದಿಂದಾಗಿದೆ. ವಿಶೇಷವಾಗಿ ಮುಂಬಯಿಲ್ಲಿ ನೂತನ ಶಾಖೆ ಪ್ರಾರಂಭಿಸಿ ಸಂಸ್ಥೆಗೆ ಪ್ರಚಾರದ ಜೋತೆಗೆ ಸಹಕಾರವನ್ನು ನೀಡಿದ್ದಿರಿ ಮುಂಬಯಿ ಘಟಕಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.

 

 

 

 

 

 

 

 

 

 

 

 

 

 

ಕಾರ್ಯರಮದಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ ಮತ್ತು ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ ಮುಂಬಯಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಡಾ| ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಮುಖ್ಯ ಪ್ರಭಾಷಣಗೈದರು. ಮಾಸ್ಟರ್ ಶಿಹಾನ್ ಉಳ್ಳಾಲ, ಹಿಲಾಲ್ ಬಶೀರ್, ಹಸನ್ ಮುಸ್ಲಿಯಾರ್ ಮುಂಬ್ರ, ಮುಂಬಯಿ ಘಟಕಾಧ್ಯಕ್ಷ ಸತ್ತಾರ್ ಬದ್ರಿಯ, ಉಪಾಧ್ಯಕ್ಷ ಮುಸ್ತಫಾ ಕುರ್ಳ, ಕಾರ್ಯದರ್ಶಿ ಮುಝ್ಮಿಲ್, ಕೋಶಾಧಿಕಾರಿ ಅಶ್ರಫ್ ಬೊಳ್ಮಾರ್, ಸದಸ್ಯರಾದ ಇಲ್ಯಾಸ್ ತೌಡುಗೋಳಿ, ಅಝೀಝ್ ಕಿನ್ಯ ಮತ್ತಿತರರು ಭಾಗವಹಿಸಿದ್ದರು.

ಸ್ಥಳೀಯ ಖತೀಬ್ ಇಸ್ಮಾಯಿಲ್ ಅಂಜಾದಿ ಸ್ವಾಗತಿಸಿದರು. ಮುಂಬಯಿ ಘಟಕ ಮ್ಯಾನೇಜರ್ ಸಿದ್ದೀಕ್ ಮುಸ್ಲಿಯರ್ ಮೌಲಾನ ವಂದಿಸಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal