About Us       Contact

ಉಳ್ಳಾಲ ಫೆ.02, 2018: ದೇವರು ಇಹಲೋಕಕ್ಕೆ ಮನುಷ್ಯ ಜೀವಿಯನ್ನು ಕಲಿಸಿದ್ದು ದೇವರಿಗೆ ಭಯಪಟ್ಟು ಜೀವಿಸಲು ಹೊರತು ದೇವರನ್ನು ಧಿಕ್ಕರಿಸಲ್ಲ ಎಂದು ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಹೇಳಿದರು. ಅವರು ಉಳ್ಳಾಲದ ಮಂಚಿಲ ಮಸ್ಜಿದುಲ್ ಜಾಮಿಅ ಅಲ್ ಮುನವ್ವರ್ ಮಸೀದಿ ವತಿಯಿಂದ ವಾರ್ಷಿಕ ಸ್ವಲಾತ್ ಮಜ್ಲಿಸ್ ನ ನೇತ್ರತ್ವ ವಹಿಸಿ ಮಾತನಾಡಿದರು. ಇವತ್ತಿನ ಕಾಲದಲ್ಲಿ ದುಷ್ಟರ ಸಂಖ್ಯೆ ಹೆಚ್ಚುತ್ತಿದ್ದು ಪೋಷಕರು ತಮ್ಮ ಮಕ್ಕಳ ನ್ನು ಸರಿ ದಾರಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

 

 

ಮಂಚಿಲ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಮಕ್ ಸೂದ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಪಟ್ಲ ಜುಮಾ ಮಸೀದಿ ಖತೀಬ್ ಎಂ.ಸಿ ಮುಹಮ್ಮದ್ ಫೈಝಿ ಮೋಙಂ ಉದ್ಘಾಟಿಸಿದರು. ಎಸ್ ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್, ಅಸ್ಸಯ್ಯಿದ್ ಝಿಯಾದ್ ತಂಙಳ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಅಸ್ಸಯ್ಯಿದ್ ಖುಬೈದ್ ತಂಙಳ್, ಅಳೇಕಲ ಜುಮಾ ಮಸೀದಿ ಖತೀಬ್ ಅಬೂ ಝಿಯಾದ್ ಮದನಿ ಪಟ್ಟಾಂಬಿ, ಎಸ್ ಎಂ ಓ ಉಳ್ಳಾಲ ಅಧ್ಯಕ್ಷ ಪಿ.ಎಸ್ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಅಲ್ ಫಾರೂಕ್ ಜುಮಾ ಮಸೀದಿ ಖತೀಬ್ ಕಲಂದರ್ ಸಖಾಫಿ, ಮಂಬಾವುಲ್ ಉಲೂಂ ಮದ್ರಸ ಮುಅಲ್ಲಿಂ ಅಬ್ದುಲ್ ರಹ್ಮಾನ್ ಮದನಿ, ಹನೀಫ್ ಮೌಲವಿ ಮಂಚಿಲ, ಮಂಚಿಲ ಜುಮಾ ಮಸೀದಿ ಮುಅದ್ಸಿನ್ ಅಬ್ದುಲ್ಲ ಮುಸ್ಲಿಯಾರ್, ಮಂಚಿಲ ಜುಮಾ ಮಸೀದಿ ಕೋಶಾಧಿಕಾರಿ ಅಬ್ದುಲ್ ರಝಾಕ್, ಉದ್ಯಮಿ ಮುಹಮ್ಮದ್ ಇಕ್ಬಾಲ್, ಅಳೇಕಲ ಜುಮಾ ಮಸೀದಿ ಅಧ್ಯಕ್ಷ ಹಾಜಿ ಯು.ಎಸ್ ಹಂಝ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಅಲ್ತಾಫ್ ಕುಂಪಲ, ಮಂಚಿಲ ಜುಮಾ ಮಸೀದಿ ಉಪಾಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್, ಮಾರ್ಗ ತಲೆ ಜುಮಾ ಮಸೀದಿ ಅಧ್ಯಕ್ಷ ಹಾಜಿ ಹನೀಫ್, ತಾಜುಲ್ ಉಲಮಾ ಮದ್ರಸ ಹಳೆಕೋಟೆ ಅಧ್ಯಕ್ಷ ಯೂಸುಫ್, ಎಸ್ ವೈಎಸ್ ಉಳ್ಳಾಲ ಸೆಂಟರ್ ಕೋಶಾಧಿಕಾರಿ ಮುಹಮ್ಮದ್ ಇಸ್ಹಾಕ್ಚ ಪೇಟೆ, ಎಸ್ ವೈಎಸ್ ಮಂಚಿಲ ಶಾಖಾಧ್ಯಕ್ಷ ಕೆ.ಎಂ ಅಶ್ರಫ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಮಂಚಿಲ ಜುಮಾ ಮಸೀದಿ ಪ್ರ.ಕಾರ್ಯದರ್ಶಿ ಅಬ್ದುಲ್ ಹಮೀದ್ ಸ್ವಾಗತಿಸಿದರು. ಮಂಚಿಲ ಜುಮಾ ಮಸೀದಿ ಖತೀಬ್ ಅಬೂ ಅನಸ್ ಎಸ್.ಕೆ ಜಮಾಲುದ್ದೀನ್ ಮುಸ್ಲಿಯಾರ್ ವಂದಿಸಿದರು.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal