About Us       Contact

 

ಮುಂಬಯಿ (ಉಳ್ಳಾಲ),ಜೂ.15:ಕಲ್ಕಟ್ಟ ಇಲ್ಯಾಸ್ ಜುಮುಅ ಮಸೀದಿಯ ಖಾಝಿಯಾಗಿ ದಕ್ಷಿಣ ಕನ್ನಡ ಜಿಲ್ಲೆ ಸಹಿತ ನೂರಾರು ಮೊಹಲ್ಲಾಗಳ ಖಾಝಿಯಾಗಿರುವ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರನ್ನು ಖಾಝಿ ಸ್ವೀಕಾರ ಸಮಾರಂಭ ಕಲ್ಕಟ್ಟ ಮಸೀದಿ ವಠಾರದಲ್ಲಿ ನಡೆಯಿತು.

ಇಲ್ಯಾಸ್ ಜುಮಾ ಮಸೀದಿಯ ಖತೀಬ್ ಹಂಝ ಮದನಿ ಮಿತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಮಸ್ತ ಮುಶಾವರ ಉಪಾಧ್ಯಕ್ಷ ಉಸ್ತಾದುಲ್ ಅಸಾತೀದ್ ತಾಜುಶ್ಶರೀಅ ಎಮ್ ಅಲಿ ಕುಂಞೆ ಉಸ್ತಾದ್ ಖಾಝಿ ಸ್ವೀಕಾರ ಸಮಾರಂಭದ ಉಧ್ಘಾಟನೆ ಹಾಗೂ ಖಾಝಿ ಸಮರ್ಪಣೆಯನ್ನು ನೆರವೇರಿಸಿದರು

ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ಸಂಸ್ಥೆಯ ಮ್ಯಾನೇಜರ್ ಮುಹಮ್ಮದಾಲಿ ಸಖಾಫಿ ಸಂದೇಶ ಭಾಷಣ ಮಾಡಿದರು.ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ, ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿ ಅಧ್ಯಕ್ಷ ಪಿ.ಐ ಮನ್ಸೂರು ರಕ್ಷಿದಿ ,ಕೆ.ಎಚ್ ಇಸ್ಮಾಯಿಲ್ ಸಅದಿ ಕಿನ್ಯ, ಅಬ್ದುಲ್ ಮಜೀದ್ ಹಾಜಿ ಉಚ್ಚಿಲ. ಅಲ್ ಮದೀನ ಮುಹಮ್ಮದ್ ಕುಂಞ ಅಂಜದಿ. ಶರೀಫ್ ಸಅದಿ ಕಿನ್ಯ. ಹಸ್ಸನ್ ಸಅದಿ ಅಸೈ. ಅಬ್ದುರ್ರಝಾಖ್ ಸಅದಿ ವಿಟ್ಲ.ಇಸ್ಹಾಖ್ ಸಅದಿ ಸೆರ್ಕಳ.ಇಲ್ಯಾಲ್ ಜುಮಾ ಮಸೀದಿಯ ಉಪಾಕ್ಷರಾದ ಎ.ಎಮ್ ಕುಂಞ ಬಾವ ಹಾಜಿ. ಕಂಡಿಕ್ಕ ಮಹ್ಮೂದ್ ಹಾಜಿ. ಕೋಶಾಧಿಕಾರಿ ಪೊಡಿಯಬ್ಬ ಹಾಜಿ. ರಿಫಾಯಿಯ ಮದರಸ ಉಸ್ತುವಾರಿ ಅಶ್ರಫ್ ಕಟ್ಟೆ.ಇಬ್ರಾಹಿಮ್ ಮದನಿ. ಕೆ.ಎಮ್ ಮೋನು. ಸಿದ್ದೀಖ್ ಮುಸ್ಲಿಯಾರ್ ಬಹರೈನ್. ಸಿದ್ದೀಖ್ ಸಖಾಫಿ ಬಶೀರ್ ಉರುಮಣೆ.ಕೆ ಐ.ಅಬ್ದರ್ರಝಾಕ್ ಉಪಸ್ಥಿತರಿದರು. ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿದರು. ಕಾರ್ಯದರ್ಶಿ ಟಿ.ಎಚ್ ಹಸೈನಾರ್ ವಂದಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal