About Us       Contact

ಡಿ. 26, 2017: ಸುರತ್ಕಲ್, ಮುಹಿಯುದ್ದೀನ್ ಜುಮಾ ಮಸೀದಿ, ಈದ್ಗಾ ಜುಮಾ ಮಸೀದಿ ಮತ್ತು ಗೌಸಯಾ ಕಾಂಪ್ಲೆಕ್ಸ್ ಇದರ ಅಡಳಿತಕ್ಕೆ ಒಳಪಟ್ಟ ತಡಂಬೈಲಿನ ನೂರಲ್ ಹುದಾ ಮದ್ರಸ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮೀಲಾದ್ ಸಂದೇಶ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಭಾನುವಾರ 24-ಡಿಸೆಂಬರ್-2017 ನಡೆಯಿತು. ಮೊಹಮ್ಮದ್ ಇಮ್ತಿಯಾಝ್ ಪ್ರೀತಿಯ ತಾಯಿ ವಿಷಯದಲ್ಲಿ ಮತ್ತು ಅಬ್ದುಲ್ ಜಲೀಲ್ ಸಖಾಫಿ ಪ್ರೀತಿಯ ಪ್ರವಾದಿ ಎಂಬ ವಿಷಯದ ಕುರಿತು ಮಾತನಾಡಿದರು.

 

 

ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಇಸ್ಮಾಯಿಲ್ ಸ ಅದಿ ದುಅ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಹಿಯುದ್ದೀನ್ ಜುಮಾ ಮಸೀದಿ ಸಮಿತಿ ಹಾಗೂ ನೂರಲ್ ಹುದಾ ಮದ್ರಸ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪಿ.ಎ ಮೊಹಮ್ಮದಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ ವಿಶೇಷ ಮಾಡಿದ ಮಸೀದಿ ಸಿಬ್ಬಂದಿ ಸೇರಿದಂತೆ ಹಲವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಸುರತ್ಕಲ್, ಪ್ರ.ಕಾರ್ಯದರ್ಶಿ ಐ.ಎಚ್ ಮೊದ್ದೀನಬ್ಬ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮುಹಮ್ಮದ್ ಅಲ್ತಾಫ್, ಈದ್ಗಾ ಮಸೀದಿ ಖತೀಬ್ ಪಿ.ಎಸ್ ಮುಹಮ್ಮದ್ ಕಾಮಿಲ್ ಸಖಾಫಿ, ನೂರುಲ್ ಹುದಾ ಮದ್ರಸ ಮುಹಲ್ಲಿಂ ಎಂ.ಕೆ ಅಬ್ದುಲ್ ಅಝೀಝ್ ಮುಸ್ಲಿಯಾರ್, ಇಡ್ಯಾ ಖಿಲಿ ರಿಯಾ ಮಸೀದಿ ಖತೀಬ್ ಹನೀಫ್ ದಾರಿಮಿ, ಖಿಲಿ ರಿಯಾ ಯಂಗ್ ಮೆನ್ಸ್ ಆಸೋಷಯೆಶನ್ ಅಧ್ಯಕ್ಷ ಮುಹಮ್ಮದ್ ರಫೀಕ್, ತಡಂಬೈಲ್ ನೂರುಲ್ ಹುದಾ ಮದ್ರಸ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಹೈಬ್, ಕಾರ್ಯದರ್ಶಿ ಅಲ್ತಾಫ್, ಮದರಸ ಅಡಳಿತ ಸಮಿತಿ ಸದಸ್ಯ ಮೊಹಮ್ಮದ್ ತಡಂಬೈಲ್ ಮುಂತಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಹಳೆ ವಿದ್ಯಾರ್ಥಿ ಮೊಹಮ್ಮದ್ ಸಿರಾಜ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸಫಿಲ್ ಫಯಾಝ್ ಕಾರ್ಯಕ್ರಮ ನಿರೂಪಿಸಿದರು.

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal