About Us       Contact

ನರಿಂಗಾನ: 2019 ಫೆಬ್ರವರಿ 1 ರಿಂದ 3 ರ ತನಕ ನಡೆಯಲಿರುವ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ರಜತ ಮಹೋತ್ಸವದ ಸಿದ್ದತೆ, ಪ್ರಚಾರ ಹಾಗೂ ಯೊಜನಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಸಮ್ಮೇಳನ ಸಂಘಟನಾ ಸಮಿತಿ ರಚನಾ ಸಭೆಯು ಅಲ್ ಮದೀನ ಕ್ಯಾಂಪಸಿನ ಮಸ್ಜಿದ್ ನಲ್ಲಿ ಬಹಳ ವಿಜೃಂಭಣೆಯಿಂದ ನಿನ್ನೆ ಜರುಗಿತು. ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಯ್ಯಿದ್ ಇಸ್ಮಾಯಿಲ್ ಅಲ್ ಹಾದೀ ತಂಙಳ್ ಉಜಿರೆ ದುಆ ಮೂಲಕ ಚಾಲನೆಗೈದರು. ದ.ಕ.ಉಸ್ತುವಾರಿ ಸಚಿವ ಜನಾಬ್ ಯು.ಟಿ.ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಬೆಳ್ಳಿಹಬ್ಬದ ಸೇವಾ ಯೋಜನೆಗಳಾದ 25 ಜೋಡಿ ಸಾಮೂಹಿಕ ವಿವಾಹ, 25 ಬಾವಿ ನಿರ್ಮಾಣ ಸಹಿತ 25 ಸೇವಾ ಯೋಜನೆಗಳನ್ನು ವಿವರಿಸಿದರು. ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಬಿ.ಎಸ್.ಅಬ್ದುಲ್ಲ ಕುಂಞÂ ಫೈಝಿ, ಮುಹಮ್ಮದಲಿ ಸಖಾಫಿ ಸುರಿಬೈಲ್, ಎಸ್.ಪಿ. ಹಂಝ ಸಖಾಫಿ, ಸುಲೈಮಾನ್ ಕರಿವಳ್ಳೂರು ಶುಭ ಹಾರೈಸಿದರು.

ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಇವರ ನೇತೃತ್ವದ, ಸಾದಾತುಗಳು, ವಿದ್ವಾಂಸರನ್ನೊಳಗೊಂಡ ಸಿಲ್ವರ್ ಜುಬಿಲಿ ನಿರ್ದೇಶಕ ಮಂಡಳಿಯನ್ನು ರಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಹಾಜಿ ಮುಮ್ತಝಲಿ ಕೃóಷ್ಣಾಪುರ, ಕನ್ವೀನರ್ ಆಗಿ ಎಂಎಸ್‍ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಫೈನಾನ್ಸ್ ಸೆಕ್ರೆಟರಿಯಾಗಿ ಅಬ್ದುರ್ರಹ್ಮಾನ್ ಕಣಚೂರು ಹಾಗೂ ವರ್ಕಿಂಗ್ ಕನ್ವೀನರ್ ಆಗಿ ಉಮರ್ ಸಖಾಫಿ ಕೊಡಗು ಇವರನ್ನು ಆರಿಸಲಾಯಿತು. ಉಳಿದಂತೆ; ಸಾಮೂಹಿಕ ವಿವಾಹ ಸಮಿತಿ, ಪ್ರಚಾರ ಸಮಿತಿ, ಫೈನಾನ್ಸ್ ಸಹಿತ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಮುಖ್ಯ ಅತಿಥಿಗಳಾಗಿ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಶರೀಫ್ ಸಖಾಫಿ ದಾರುಲ್ ಇರ್ಶಾದ್, ಇಸ್ಮಾಯಿಲ್ ಮೀನಂಕೋಢಿ, ಎಸ್.ಕೆ.ಖಾದರ್ ಹಾಜಿ, ಹಾಜಿ ಎನ್.ಎಸ್.ಕರೀಂ, ಹಾಜಿ ಅಬ್ದುಲ್ಲ ಮೋರ್ಲ, ಹಾಜಿ ಅಲಿಕುಂಞÂ ಪಾರೆ, ಯೂಸುಫ್ ಹಾಜಿ ಕೊಣಾಜೆ, ಎಂ.ಪಿ.ಅಶ್ರಫ್ ಸಅದಿ ಮಲ್ಲೂರು, ಮೂಸ ಸಖಾಫಿ ಕಳತ್ತೂರು, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಉಸ್ಮಾನ್ ಸಅದಿ ಪಟ್ಟೋರಿ, ಅಬ್ದುರ್ರಹ್ಮಾನ್ ಮೊಗರ್ಪಣೆ, ಸಿದ್ದೀಖ್ ಸಖಾಫಿ ಮೂಳೂರು, ಏಶಿಯನ್ ಬಾವ ಹಾಜಿ, ಶೌಕತ್ ಹಾಜಿ, ಇಬ್ರಾಹೀಂ ಬಾವ ಹಾಜಿ ಪಡಿಕ್ಕಲ್, ಫಾರೂಖ್ ಹಾಜಿ ಮಲಾಝ್, ಮೊಯ್ದಿನ್ ಹಾಜಿ ಮಲಾಝ್, ಯು.ಎಸ್.ಅಬೂಬಕರ್ ಹಾಜಿ, ಮೊಯ್ದಿನ್ ಕುಟ್ಟಿ ಹಾಜಿ ಕೊಳಕೇರಿ, ಅಬೂಬಕರ್ ಕಡಂಬು, ಕೆ.ಎಂ.ಕೆ. ಮಂಜನಾಡಿ, ಮುಹಮ್ಮದ್ ಹಾಜಿ ಬಾಳೆಪುಣಿ, ಮಹ್ಮೂದ್ ಹಾಜಿ ಕಂಡಿಕ, ಬಶೀರ್ ಹಾಜಿ ಮುಡಿಪು, ಉಮರ್ ಸಖಾಫಿ ಮಿತ್ತೂರು ಮಸ್ಕತ್, ಡಿ.ಪಿ. ಯೂಸುಫ್ ಸಖಾಫಿ ಬೈತಾರ್, , ಇಕ್ಬಾಲ್ ಮದನಿ ತಾಯಿಫ್, ಅಬ್ದುಲ್ ಹಮೀದ್ ಜಿದ್ದ, ಶರೀಫ್ ಸಅದಿ ಮೂಡಬಿದ್ರೆ, ಮನ್ಸೂರ್ ಹಿಮಮಿ, ಬಶೀರ್ ಕಲ್ಕಟ್ಟ, ಆರಿಫ್ ಕಲ್ಕಟ್ಟ, ಅಬ್ದುರ್ರಹ್ಮಾನ್ ಲತೀಫಿ ಮುಂತಾದವರು ಉಪಸ್ಥಿತರಿದ್ದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal