About Us       Contact

(ಚಿತ್ರ / ವರದಿ : ರೊನಿಡಾ, ಮುಂಬಯಿ)

ಮುಂಬಯಿ, ಜೂ.23, 2018 : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿಯು ಇಂದಿಲ್ಲಿ ನಿರಂತರ 24 ತಾಸುಗಳ ಭಜನಾ ಕಾರ್ಯಕ್ರಮವನ್ನು ಸಾಂತಕ್ರೂಜ್ ಪೂರ್ವದ ಅಸೋಸಿಯೇಶನ್ ಭವನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸನ್ನಿಧಿಯಲ್ಲಿ ನಡೆಸಿತು.

ಇಂದಿಲ್ಲಿ ಶನಿವಾರ ಮುಂಜಾನೆ ಸುರ್ಯೋದಯದ 6.07ರ ವೇಳೆಗೆ ಏಕಾಹ ಭಜನಾ ಕಾರ್ಯಕ್ರಮಕ್ಕೆ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಉದ್ಯಮಿಗಳಾದ ಮಾಧವ ಎನ್.ಪೂಜಾರಿ, ಕೆ.ಎಂ ಸುವರ್ಣ, ನವೀನ್ ಕುಮಾರ್ ಸುವರ್ಣ ಉಪಸ್ಥಿತರಿದ್ದು, ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿದರು. ಶ್ರೀ ರವೀಂದ್ರ ಎ.ಶಾಂತಿ ಪೌರೋಹಿತ್ಯದಲ್ಲಿ ಮಹಾಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು.

ಎಸೋಸಿಯೇಶನಿನ ಗುರುನಾರಾಯಣ ಭಜನಾ ಮಂಡಳಿ ಕೇಂದ್ರ ಕಾರ್ಯಾಲಯ, ಕೇಂದ್ರ ಕಾರ್ಯಾಲಯದ ಮಹಿಳಾ ವಿಭಾಗ, 22 ಸ್ಥಳೀಯ ಕಚೇರಿಗಳ ಭಜನಾ ಮಂಡಳಿಗಳು ಹಾಗೂ ಮುಂಬಯಿ ಮಹಾ ನಗರದ ಪ್ರಸಿದ್ದ ಭಜನಾ ಮಂಡಳಿಗಳಾದ ಶ್ರೀ ಲಕ್ಷ್ಮಿನಾರಾಯಣ ಭಜನಾ ಮಂಡಳಿ ಮೀರಾರೋಡ್, ಶ್ರೀ ದತ್ತಾತ್ರೇಯ ದುರ್ಗಾಂಬಿಕ ಭಜನಾ ಮಂಡಳಿ ಅಸಲ್ಫಾ, ಶ್ರೀ ಗೀತಾಂಬಿಕ ಭಜನಾ ಮಂಡಳಿ ಘಾಟ್‍ಕೋಪರ್, ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜೆರಿಮೆರಿ, ಶ್ರೀ ಕೃಷ್ಣ ನಿತ್ಯಾನಂದ ಭಜನಾ ಮಂಡಳಿ ಭಾಂಡುಪ್, ಶ್ರೀ ಜಗದಂಬಾ ಕಾಲಭೈರವ ಭಜನಾ ಮಂಡಳಿ ಜೋಗೇಶ್ವರಿ, ಶ್ರೀ ಗೋಕುಲ ಸಯನ್ ಭಜನಾ ಮಂಡಳಿ, ಶ್ರೀ ವಿದ್ಯಾದಾಯಿನಿ ಸಭಾ ಭಜನಾ ಮಂಡಳಿ ಫೆÇೀರ್ಟ್, ಶ್ರೀ ನಿತ್ಯಾನಂದ ಭಜನಾ ಮಂಡಳಿ ಸಹಕಾರ್‍ವಾಡಿ, ಶ್ರೀ ಕುಂದಾಪುರ ಬಿಲ್ಲವ ಸಂಘ ಮುಂಬಯಿ ಭಜನಾ ಮಂಡಳಿ, ಶ್ರೀ ಸೀತಾರಾಮ ಭಜನಾ ಮಂಡಳಿ ಕಮಾನಿ, ಶ್ರೀ ರಾಮಕೃಷ್ಣ ಭಜನಾ ಮಂಡಳಿ ಕೊಂಡಿವೀಟಾ, ಶ್ರೀ ಮಹಾಕಾಳಿ ಭಜನಾ ಮಂಡಳಿ ಸಾಂತಕ್ರೂಜ್, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅದಾರ್ ವಿಲೆಪಾರ್ಲೆ, ಶ್ರೀ ಮಣಿಕಂಠ ಭಜನಾ ಮಂಡಳಿ ಸಾಕಿನಾಕ ಮುಂತಾದ 37 ಮಂಡಳಿಗಳುÀ ಭಜನೆಗೈದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಅಸೋಸಿಯೇಶನ್‍ನ ಸಂಚಾಲಕತ್ವದ ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ಚಂದ್ರಶೇಖರ ಎಸ್.ಪೂಜಾರಿ, ನ್ಯಾ| ಎಸ್.ಬಿ ಅಮೀನ್, ಮಾಜಿ ನಿರ್ದೇಶಕ ಎನ್.ಎಂ ಲಕ್ಷ್ಮೀ ಕೋಟ್ಯಾನ್, ಧಾರ್ಮಿಕ ಉಪ ಸಮಿತಿ ಕಾರ್ಯಾಧ್ಯಕ್ಷ ಮೋಹನದಾಸ್ ಜಿ.ಪೂಜಾರಿ, ಶ್ರೀನಿವಾಸ ಎಸ್.ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು. ಆದಿತ್ಯವಾರ ಮುಂಜಾನೆ ಬೆಳಗುಕಾಲಕ್ಕೆ ಮಂಗಳೋತ್ಸ ವದೊಂದಿಗೆ ಈ ಏಕಾಹ ಭಜನಾ ಸಮಾಪ್ತಿ ಕಾಣಲಿದೆ ಎಂದು ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿ ಗೌರವ ಕಾರ್ಯದರ್ಶಿ ರವೀಂದ್ರ ಎ.ಅಮೀನ್ ತಿಳಿಸಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal